Author: mahesh.mys

ಗುರು ವೈಭವೋತ್ಸವ ಫೆ.19 ರಿಂದ

ಮೈಸೂರು, ಫೆ.17: ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನಕ್ಕೆ ಸೇರಿದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠ, ಸುಬ್ಬರಾಯನಕೆರೆ ನಾರಾಯಣಶಾಸ್ತ್ರಿ ರಸ್ತೆ, ಮೈಸೂರಿನಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳವರ ಪಟ್ಟಾಭಿಷೇಕ ಹಾಗೂ ವರ್ಧಂತಿ ಮಹೋತ್ಸವದ ಅಂಗವಾಗಿ “ಗುರು ವೈಭವೋತ್ಸವ 2026” ಫೆಬ್ರವರಿ 19 ರಿಂದ 24 ರವರೆಗೆ ಭಕ್ತಿಭಾವದಿಂದ ನಡೆಯಲಿದೆ.…

ನಂಜೀಪುರದಲ್ಲಿ ಮಲೆ ಮಹದೇಶ್ವರಸ್ವಾಮಿ ರಥೋತ್ಸವ–ಕೊಂಡೋತ್ಸವ

ನಂಜೀಪುರದಲ್ಲಿ ಮಲೆ ಮಹದೇಶ್ವರಸ್ವಾಮಿ ರಥೋತ್ಸವ–ಕೊಂಡೋತ್ಸವ ಸರಗೂರು, ಫೆ.17:ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ನಂಜೀಪುರ ಗ್ರಾಮದಲ್ಲಿ ಮಲೆ ಮಹದೇಶ್ವರಸ್ವಾಮಿ ರಥೋತ್ಸವ ಹಾಗೂ ಕೊಂಡೋತ್ಸವವು ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಬಳಿದು…

ಈಶ ಮಹಾಶಿವರಾತ್ರಿ: ರಾಜನಾಥ್ ಸಿಂಗ್ ಪ್ರಶಂಸೆ

ಕೊಯಂಬತ್ತೂರು, ಫೆ.೧೭: ಸದ್ಗುರುಗಳ ಆಶ್ರಮವು ಮಹಾದೇವನ ಅನುಗ್ರಹಕ್ಕೆ ಪಾತ್ರವಾಗಿದೆ. ಇಲ್ಲಿ ಅನುಭವಿಸುವ ದೈವತ್ವವೇ ಅದನ್ನು ಸ್ಪಷ್ಟಪಡಿಸುತ್ತದೆ,” ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ತಮಿಳುನಾಡಿನ ಈಶ ಫೌಂಢೇಷನ್ ವತಿಯಿಂದ ಈಶ ಯೋಗ ಕೇಂದ್ರದಲ್ಲಿ ಆಯೋಜಿಸಲಾದ ಮಹಾಶಿವರಾತ್ರಿ ಮಹೋತ್ಸವದಲ್ಲಿ ಮುಖ್ಯ…

ಬೀಡಿ, ಗುಟ್ಕಾ ಮತ್ತು ಮದ್ಯಪಾನ ಕಾಲಾನಂತರದಲ್ಲಿ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ!

ಕ್ಯಾನ್ಸರ್ ಯಾವುದೇ ಮುನ್ಸೂಚನೆಯಿಲ್ಲದೆ ಕಾಣಿಸಿಕೊಳ್ಳಬಹುದು. ಅನಿರೀಕ್ಷಿತವಾಗಿ ಮತ್ತು ಯಾವುದೇ ಸ್ಪಷ್ಟ ಕಾರಣವಿಲ್ಲದೆಯೂ ಕಾಣಿಸಿಕೊಳ್ಳಬಹುದು. ಬಹಳಷ್ಟು ಜನರು ಇದು “ಬೇರೆಯವರಿಗೆ” ಬರುವ ಕಾಯಿಲೆ ಎಂದೋ ಅಥವಾ ಕೇವಲ ಅನುವಂಶಿಕ ಕಾರಣಗಳಿಂದ ಬರುತ್ತದೆ ಎಂದೋ ಭಾವಿಸುತ್ತಾರೆ. ಆದರೆ ವಾಸ್ತವವೇ ಬೇರೆ. ಕ್ಯಾನ್ಸರ್ ತನ್ನ ಭೀಕರ…

ಫೆ. 6 ರಿಂದ 8ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ “ಮೈಸೂರು ಸಂತೇ–2026”

ಮೈಸೂರು: ಮೈಸೂರಿನ ಸಾಂಸ್ಕೃತಿಕ ಸೊಬಗು, ಪರಂಪರೆ, ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಪ್ರತಿಬಿಂಬಿಸುವ “ಮೈಸೂರು ಸಂತೇ–2026” ಕಾರ್ಯಕ್ರಮವನ್ನು ಫೆಬ್ರವರಿ 6, 7 ಮತ್ತು 8ರಂದು ಐತಿಹಾಸಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ 11ರಿಂದ ರಾತ್ರಿ…

ಹನುಮಾನ್ ಚಾಲೀಸಾ ಪಾರಾಯಣ ರಥೋತ್ಸವಕ್ಕೆ ಎಲ್. ನಾಗೇಂದ್ರ ಚಾಲನೆ

ಮೈಸೂರು: ಮೈಸೂರಿನ ಅವಧೂತ ದತ್ತಪೀಠದ ವತಿಯಿಂದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಫೆಬ್ರವರಿ 14ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಹನುಮಾನ್ ಚಾಲೀಸಾ ಮಹಾಪಾರಾಯಣ ಮಹಾಯಜ್ಞವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪ್ರಯುಕ್ತ ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ರಥೋತ್ಸವ ಹಾಗೂ ಪ್ರಚಾರ ಅಭಿಯಾನಕ್ಕೆ…

ದೃಢಸಂಕಲ್ಪದ ಪ್ರತಿರೂಪ: ಕ್ರೀಡಾ ಸಾಧಕ ರವಿ ಟಿ. ಎಸ್.

ಮಹೇಶ್ ನಾಯಕ್maheshyoga10@gmail.com.9448980010 ಸತತ ಹತ್ತು ವರ್ಷಗಳಿಂದ ಮೈಸೂರಿನ ಓವಲ್ ಮೈದಾನದಲ್ಲಿ ಯಾವುದೇ ಪ್ರತಿಫಲದ ಆಸೆಯಿಲ್ಲದೆ ಉಚಿತವಾಗಿ ಅಥ್ಲೆಟಿಕ್ಸ್ ತರಬೇತಿ ನೀಡುತ್ತಿರುವ ರವಿ ಟಿ. ಎಸ್. ಅವರು, ಕ್ರೀಡಾ ಕ್ಷೇತ್ರದಲ್ಲಿ ಸೇವೆ, ಶಿಸ್ತು ಮತ್ತು ಸಮರ್ಪಣೆಯ ಪ್ರತೀಕವಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಯುವ ಕ್ರೀಡಾಪಟುಗಳಿಗೆ…

ಯೋಗದ ಕಂಪು ಪಸರಿಸುತ್ತಿರುವ ಮೈಸೂರು ಯೋಗಾಚಾರ್ಯ ಪ್ರಕಾಶ್

ಯೋಗವೆಂದರೆ ಕೇವಲ ದೇಹವನ್ನು ಬಗ್ಗಿಸುವ ಕಸರತ್ತು ಅಲ್ಲ; ಅದು ಜೀವನವನ್ನು ಶಿಸ್ತಿನ ದಾರಿಯಲ್ಲಿ ನಡೆಸುವ ವಿಜ್ಞಾನ. ಈ ಸತ್ಯವನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸುತ್ತಿರುವ ಅಪರೂಪದ ಯೋಗ ಸಾಧಕರಲ್ಲಿ ಮೈಸೂರಿನ ತಿರುಮಲೆ ಯೋಗಾಚಾರ್ಯ ಪ್ರಕಾಶ್ ಅವರು ಪ್ರಮುಖ ಸ್ಥಾನ ಪಡೆದಿದ್ದಾರೆ. ಯೋಗನಗರಿ…

ಕುಸುಮ್-ಸಿ: ಮಂಡ್ಯ ಜಿಲ್ಲೆಯ ಮೊದಲ ಕಾಮಗಾರಿಗೆ ಚಾಲನೆ

ಎನ್. ಕೋಡಹಳ್ಳಿಯ 15 ಎಕರೆಯಲ್ಲಿ 4.572 ಮೆ.ವ್ಯಾ. ಸಾಮರ್ಥ್ಯದ ಸೋಲಾರ್‌ ಘಟಕ ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಅವರಿಂದ ಉದ್ಘಾಟನೆ ಮಂಡ್ಯ, ಜ.22, 2026: ಕೃಷಿ ಫೀಡರ್ ಗಳ ಸೋಲರೈಸೇಷನ್ ಮೂಲಕ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆಯಲ್ಲಿ ಸಮರ್ಪಕ ವಿದ್ಯುತ್‌…

Bharat Connect ಮೂಲಕ ಸರಳೀಕೃತ EV ವಾಲೆಟ್ ರೀಚಾರ್ಜ್ ಮೂಲಕ NBBL ಮೊಬಿಲಿಟಿ ಕ್ಷೇತ್ರಕ್ಕೆ ಶಕ್ತಿ ನೀಡುತ್ತಿದೆ

ಮೈಸೂರು, 23 ಜನವರಿ 2026: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)ಯ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾದ NPCI ಭಾರತ್ ಬಿಲ್‌ಪೇ ಲಿಮಿಟೆಡ್ (NBBL), ಭಾರತ್ ಕನೆಕ್ಟ್‌ನಲ್ಲಿನ ತನ್ನ ‘EV ರೀಚಾರ್ಜ್’ ವರ್ಗದ ಮೂಲಕ ಭಾರತದ ವೇಗವಾಗಿ ಬೆಳೆಯುತ್ತಿರುವ ವಿದ್ಯುತ್…

ರಾಜ್ಯ ಬಾಕ್ಸಿಂಗ್ ಚಾಂಪಿಯನ್‌ಶಿಪ್–2026: ಮೈಸೂರು ವಿಶ್ವವಿದ್ಯಾಲಯದ ಬಾಕ್ಸರ್‌ಗಳಿಗೆ 16 ಪದಕ

ತುಮಕೂರು: ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ (KABA) ಆಯೋಜಿಸಿದ್ದ ಕರ್ನಾಟಕ ರಾಜ್ಯ ಕ್ರೀಡಾಕೂಟದ ಬಾಕ್ಸಿಂಗ್ (ಪುರುಷ ಮತ್ತು ಮಹಿಳಾ) ಚಾಂಪಿಯನ್‌ಶಿಪ್–2026ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಬಾಕ್ಸರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 16 ಪದಕಗಳನ್ನು ಗೆದ್ದಿದ್ದಾರೆ. ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ (KOA) ಹಾಗೂ…

ಆಚರಿಸೋಣ 77ನೇ ಗಣರಾಜ್ಯೋತ್ಸವ!

ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಧಾನಮಂತ್ರಿ ಆಗಬೇಕಾಗಿದ್ದವರು, ಡಾ.ಬಿ.ಆರ್.ಅಂಬೇಡ್ಕರ್,ಸರ್ದಾರ್‌ಪಟೇಲ್, ರಾಜೇಂದ್ರಪ್ರಸಾದ್ ಈ ಮೂವರಲ್ಲೊಬ್ಬರು? ಉತ್ತಮ ಅರ್ಹರೂ ಅನುಭವಿ ಆಡಳಿತಗಾರರೂ ಆಗಿದ್ದ ಇಂಥ ಮಹನೀಯರಿಗೆ ಪ್ರಧಾನಿ ಗದ್ದುಗೆ ಲಭಿಸಲಿಲ್ಲ ಏಕೆ..?! ಅಂದು ಪ್ರಥಮ ಪ್ರಧಾನಿ ಗದ್ದುಗೆ ಏರಲು ಹಾತೊರೆಯುತ್ತಿದ್ದವರು ನೆಹರು ಮತ್ತು ಮಹಮದಲಿ ಜಿನ್ನ.…

ಜನವರಿ 24 ರಂದು ಮೈಸೂರಿನಲ್ಲಿ ಕೃಷ್ಣ ಬಲರಾಮ ರಥಯಾತ್ರೆ

ವರದಿ : ಮಹೇಶ್ ನಾಯಕ್ ಮೈಸೂರು : ಮೈಸೂರಿನ ಇಸ್ಕಾನ್ ಸಂಸ್ಥೆಯ ವತಿಯಿಂದ ಜನವರಿ 24 ರಂದು ಶ್ರೀ ಕೃಷ್ಣ ಬಲರಾಮರ ಭವ್ಯ ರಥಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಇಸ್ಕಾನ್ ಮೈಸೂರು ಉಪಾಧ್ಯಕ್ಷರಾದ ಕಾರಣ್ಯಸಾಗರ್ ದಾಸ ಹಾಗೂ ಸೌಮ್ಯ ರೂಪಕೃಷ್ಣ ದಾಸ ಅವರು…

ಆರೋಗ್ಯದ ಸಮತೋಲನಕ್ಕೆ ಆಯುರ್ವೇದದ ಬಸ್ತಿ ಚಿಕಿತ್ಸೆ

ಆಯುರ್ವೇದದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಅನಾರೋಗ್ಯವನ್ನು ದೂರಮಾಡಲು ಪಂಚಕರ್ಮಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಪಂಚಕರ್ಮವು ದೇಹವನ್ನು ಶುದ್ಧಗೊಳಿಸುವ ಜೊತೆಗೆ ದೋಷಗಳ ಸಮತೋಲನವನ್ನು ಕಾಪಾಡುವ ವಿಶೇಷ ಚಿಕಿತ್ಸೆಯಾಗಿದೆ. ದೇಹದಲ್ಲಿನ ಅನಾರೋಗ್ಯವನ್ನು ನಿವಾರಿಸುವುದಷ್ಟೇ ಅಲ್ಲದೆ, ಆರೋಗ್ಯವಂತರು ತಮ್ಮ ಆರೋಗ್ಯವನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಹ ಪಂಚಕರ್ಮ…

ಚಳಿಗಾಲದ ಆಹಾರದಲ್ಲಿ ಎಳ್ಳು ಸೇರಿಸಿಕೊಳ್ಳಿ: ಆಧುನಿಕ ಕಾಲಕ್ಕೆ ಪುರಾತನ ಪರಿಹಾರ

2 .ಜೀರ್ಣಕ್ರಿಯೆ ನಿಧಾನವಾಗುವುದುತಣ್ಣನೆಯ ಹವಾಮಾನವು ನೈಸರ್ಗಿಕವಾಗಿ ಜೀರ್ಣಾಂಗವ್ಯೂಹವನ್ನು ಸಂಕುಚನಗೊಳಿಸುತ್ತದೆ, ಇದು ಮಲಬದ್ಧತೆ ಅಥವಾ ನಿಧಾನಗತಿಯ ಜೀರ್ಣಕ್ರಿಯೆಗೆ ದಾರಿ ಮಾಡಿಕೊಡುತ್ತದೆ. ಎಳ್ಳಿನಲ್ಲಿರುವ ಹೆಚ್ಚಿನ ನಾರಿನಂಶವು ಜೀರ್ಣಾಂಗ ವ್ಯವಸ್ಥೆಯು ಸರಾಗವಾಗಿ ಕೆಲಸ ಮಾಡಲು ಅಗತ್ಯವಾದ ಮೃದುತ್ವವನ್ನು ನೀಡುತ್ತದೆ. ಇದು ದೇಹದಲ್ಲಿ ವಿಷಕಾರಿ ಅಂಶಗಳು ಸಂಗ್ರಹವಾಗುವುದನ್ನು…