Dasara Jamboo Savari 2026: Applications Invited from Folk Art Troupes
7
ಮೈಸೂರು, ಸೆಪ್ಟೆಂಬರ್ 1: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ರ ಅಂಗವಾಗಿ ಅಕ್ಟೋಬರ್ 21ರಂದು ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಜಾನಪದ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಲಾತಂಡಗಳು ಸೆಪ್ಟೆಂಬರ್ 16, 2026ರೊಳಗೆ ಅರ್ಜಿ ಸಲ್ಲಿಸಬೇಕು.
ಅರ್ಜಿಯೊಂದಿಗೆ ತಂಡದ ಉತ್ತಮ ಭಾವಚಿತ್ರ, ತಂಡದ ಸದಸ್ಯರ ವಿವರ, ಅಂಚೆ ವಿಳಾಸ ಹಾಗೂ ತಂಡದ ಮುಖ್ಯಸ್ಥರ ಮೊಬೈಲ್/ದೂರವಾಣಿ ಸಂಖ್ಯೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಬೇಕು.
ಅರ್ಜಿಯನ್ನು ಈ ವಿಳಾಸಕ್ಕೆ ಕಳುಹಿಸಬೇಕು:
ಸಮನ್ವಯಾಧಿಕಾರಿಗಳು
ದಸರಾ ಮೆರವಣಿಗೆ ಮತ್ತು ಸ್ತಬ್ಧಚಿತ್ರ ಉಪಸಮಿತಿ ಹಾಗೂ
ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಕರ್ನಾಟಕ ಕಲಾಮಂದಿರ, ವಿನೋಬಾ ರಸ್ತೆ,
ಮೈಸೂರು – 570005.
ಅರ್ಜಿಗಳ ಪೈಕಿ ನುರಿತ ತಜ್ಞರ ಸಮಿತಿಯಿಂದ ಉತ್ತಮ ಪೋಷಾಕು, ಸಾಂಪ್ರದಾಯಿಕ ಹಾಗೂ ವಿಶಿಷ್ಟ ಶೈಲಿ ಮತ್ತು ವಿಭಿನ್ನ ಕಲಾ ಪ್ರಕಾರ ಹೊಂದಿರುವ ಕಲಾತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.
📅 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-09-2026
🐘 ಜಂಬೂಸವಾರಿ: 21-10-2026
ದಸರಾ ಜಂಬೂಸವಾರಿಯಲ್ಲಿ ನಿಮ್ಮ ಕಲಾ ಪ್ರತಿಭೆ ಪ್ರದರ್ಶಿಸಲು ಇದೊಂದು ಅಪೂರ್ವ ಅವಕಾಶ!
Dasara Jamboo Savari 2026: Applications Invited from Folk Art Troupes
Mysuru, September 1: As part of the world-famous Mysuru Dasara Mahotsava–2026, applications have been invited from folk art troupes from all districts of Karnataka to participate in the Jamboo Savari procession scheduled to be held on October 21, 2026.
Interested art troupes must submit their applications on or before September 16, 2026.
The application should include a recent photograph of the troupe, details of all troupe members, postal address, and mobile/telephone number of the troupe leader.
Applications should be submitted to:
The Co-ordination Officer
Dasara Procession & Tableau Sub-Committee and
Assistant Director, Department of Kannada & Culture,
Karnataka Kalamandira, Vinoba Road,
Mysuru – 570005.
Among the applications received, a competent expert committee will select the art troupes based on their attractive costumes, traditional and unique presentation styles, and distinctive art forms.
📅 Last Date to Apply: September 16, 2026
🐘 Jamboo Savari: October 21, 2026
A wonderful opportunity for folk art troupes to showcase their talent on the grand stage of Mysuru Dasara!
