.ಮಹೇಶ್ ನಾಯಕ್

ಮೈಸೂರು: ಶ್ರೀಕೃಷ್ಣನ ಜನ್ಮದಿನವನ್ನು ಭಕ್ತಿಭಾವದಿಂದ ಆಚರಿಸಲು ನಗರದ ಜಯನಗರದಲ್ಲಿರುವ ಇಸ್ಕಾನ್ ಸಜ್ಜಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ-೨೦೨೬ರ ಅಂಗವಾಗಿ ಸೆಪ್ಟೆಂಬರ್ ೩ ಮತ್ತು ೪ರಂದು ಎರಡು ದಿನಗಳ ಕಾಲ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜಯನಗರದ ೧೮ನೇ ಕ್ರಾಸ್‌ನಲ್ಲಿರುವ ಇಸ್ಕಾನ್ ಕೇಂದ್ರದಲ್ಲಿ ಬೆಳಿಗ್ಗೆ ೭.೩೦ರಿಂದಲೇ ಕಾರ್ಯಕ್ರಮಗಳು ಆರಂಭವಾಗಲಿದ್ದು, ಭಕ್ತರಿಗೆ ದಿನವಿಡೀ ಆಧ್ಯಾತ್ಮಿಕ ವಾತಾವರಣದ ಅನುಭವ ದೊರೆಯಲಿದೆ. ಸೆ.೩ರಂದು ರಾತ್ರಿ ೧೦ರವರೆಗೆ ಹಾಗೂ ಸೆ.೪ರಂದು ಮಧ್ಯರಾತ್ರಿ ೧೨ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜನ್ಮಾಷ್ಟಮಿ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಇಸ್ಕಾನ್ ಮೈಸೂರಿನ ಆರಾಧ್ಯ ದೇವರಾದ ಶ್ರೀ ಶ್ರೀ ಕೃಷ್ಣ ಬಲರಾಮರ ವಿಶೇಷ ಅಲಂಕಾರ ಹಾಗೂ ಮಹಾಭಿಷೇಕ ಭಕ್ತರನ್ನು ಸೆಳೆಯಲಿದೆ. ಸೆ.೪ರ ಮಧ್ಯರಾತ್ರಿ ಶ್ರೀಕೃಷ್ಣನ ದಿವ್ಯ ಅವತರಣೆಯ ಶುಭ ಸಂದರ್ಭದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ ಹಾಗೂ ಹರಿನಾಮ ಸಂಕೀರ್ತನ ನಡೆಯಲಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

                       ನಾಮಸ್ಮರಣೆಯಲ್ಲಿ ಭಕ್ತರ ಭಾಗವಹಿಸುವಿಕೆ

ಜನ್ಮಾಷ್ಟಮಿ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಶ್ರೀಕೃಷ್ಣನ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷ ಹರಿನಾಮ ಮಂಟಪದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಶ್ರೀಕೃಷ್ಣನ ಪವಿತ್ರ ನಾಮಸ್ಮರಣೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು.ಎರಡೂ ದಿನ ಬೆಳಿಗ್ಗೆ ೯ರಿಂದ ಸಂಜೆ ೫ರವರೆಗೆ ಸಂಕೀರ್ತನ ಸೇವೆ ನಡೆಯಲಿದ್ದು, ಭಜನೆ, ಕೀರ್ತನೆ ಹಾಗೂ ಸಂಗೀತ ಕಾರ್ಯಕ್ರಮಗಳು ಭಕ್ತರಲ್ಲಿ ಭಕ್ತಿಭಾವ ಮೂಡಿಸಲಿವೆ. ಶ್ರೀಕೃಷ್ಣನ ಜೀವನ, ಭಗವದ್ಗೀತೆಯ ಸಂದೇಶ ಹಾಗೂ ಭಕ್ತಿಯ ಮಹತ್ವದ ಕುರಿತು ಧಾರ್ಮಿಕ ಪ್ರವಚನಗಳನ್ನೂ ಆಯೋಜಿಸಲಾಗಿದೆ.ತುಳಸಿ ಅರ್ಚನೆ, ಪುಷ್ಪಾರ್ಚನೆ ಹಾಗೂ ಮಾಖನ್ ಮಿಶ್ರಿ ಸೇವೆ ಸೇರಿದಂತೆ ವಿವಿಧ ವಿಶೇಷ ಸೇವೆಗಳಲ್ಲಿ ಭಕ್ತರು ನೇರವಾಗಿ ಭಾಗವಹಿಸಲು ಅವಕಾಶವಿದೆ.

                ೫೦ ಸಾವಿರಕ್ಕೂ ಅಧಿಕ ಮಂದಿಗೆ ಪ್ರಸಾದ

ಮೈಸೂರು ಮಾತ್ರವಲ್ಲದೆ ಕರ್ನಾಟಕದ ವಿವಿಧ ಭಾಗಗಳಿಂದ ೫೦ ಸಾವಿರಕ್ಕೂ ಅಧಿಕ ಭಕ್ತರು ಹಾಗೂ ಸಾರ್ವಜನಿಕರು ಜನ್ಮಾಷ್ಟಮಿ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆಗಮಿಸುವ ಭಕ್ತರಿಗೆ ಮಹಾಪ್ರಸಾದ ವಿತರಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ೫೦ ಸಾವಿರಕ್ಕೂ ಅಧಿಕ ಮಂದಿಗೆ ಪ್ರಸಾದ ವಿತರಿಸುವ ಸಿದ್ಧತೆ ಕೈಗೊಳ್ಳಲಾಗಿದೆ.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಹಲವು ಗಣ್ಯರು, ಜನಪ್ರತಿನಿಧಿಗಳು, ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

                      ಮಕ್ಕಳಲ್ಲಿ ಸಂಸ್ಕೃತಿ ಬೆಳೆಸುವ ಪ್ರಯತ್ನ

ಇಸ್ಕಾನ್ ಮೈಸೂರು ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿಯೂ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಇತ್ತೀಚೆಗೆ ಮಕ್ಕಳಿಗಾಗಿ ‘ಹರಿಟೇಜ್ ಫಸ್ಟ್’ ಹೆಸರಿನಲ್ಲಿ ೧೨ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೀತಾ ಶ್ಲೋಕ ಪಠಣ, ವೈದಿಕ ರಸಪ್ರಶ್ನೆ, ರಂಗೋಲಿ, ಬಣ್ಣ ಹಚ್ಚುವಿಕೆ, ಚಿತ್ರಕಲೆ ಹಾಗೂ ಪೌರಾಣಿಕ ವೇಷಭೂಷಣ ಸೇರಿದಂತೆ ಒಟ್ಟು ೧೭ ವಿವಿಧ ಕಾರ್ಯಕ್ರಮಗಳು ನಡೆದಿದ್ದವು. ಸುಮಾರು ೪ ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರು ಹಾಗೂ ಭಾಗವಹಿಸಿದವರಿಗೆ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

                 ಹೊಯ್ಸಳ ಶೈಲಿಯಲ್ಲಿ ಭವ್ಯ ದೇವಾಲಯ

ಇಸ್ಕಾನ್ ಸಂಸ್ಥೆಯು ಜಯನಗರದ ೯ ಎಕರೆ ಪ್ರದೇಶದಲ್ಲಿ ಹೊಯ್ಸಳ ವಾಸ್ತುಶೈಲಿಯಿಂದ ಪ್ರೇರಿತವಾದ ಭವ್ಯ ದೇವಾಲಯ ಹಾಗೂ ಸಾಂಸ್ಕೃತಿಕ ಸಂಕೀರ್ಣವನ್ನು ಅಭಿವೃದ್ಧಿಪಡಿಸುತ್ತಿದೆ. ಭಾರತೀಯ ಆಧ್ಯಾತ್ಮಿಕ ಪರಂಪರೆ, ಭಗವದ್ಗೀತೆಯ ಸಂದೇಶ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಇಲ್ಲಿ ವಿವಿಧ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.ಶ್ರೀಕೃಷ್ಣನ ಜೀವನ ಮತ್ತು ಭಗವದ್ಗೀತೆಯ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವುದರೊಂದಿಗೆ, ಭಕ್ತಿ, ಸಂಸ್ಕೃತಿ ಮತ್ತು ಸೇವೆಯ ಮೂಲಕ ಸಮಾಜದೊಂದಿಗೆ ಬೆಸೆಯುವ ಪ್ರಯತ್ನವಾಗಿ ಈ ಬಾರಿಯ ಜನ್ಮಾಷ್ಟಮಿ ಆಚರಣೆ ರೂಪುಗೊಳ್ಳುತ್ತಿದೆ. ಎರಡು ದಿನಗಳ ಕಾಲ ನಡೆಯಲಿರುವ ಉತ್ಸವವು ಜಯನಗರದಲ್ಲಿ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಸಂಭ್ರಮದ ವಾತಾವರಣ ಸೃಷ್ಟಿಸುವ ನಿರೀಕ್ಷೆಯಿದೆ.

Sri Krishna Janmashtami Celebrations at ISKCON Mysuru on Sept. 3, 4

Over 50,000 devotees expected

Mysuru: ISKCON Mysuru at Jayanagar will celebrate Sri Krishna Janmashtami with special religious and cultural programmes on September 3 and 4.

The programmes will begin at 7.30 a.m. at the ISKCON centre on 18th Cross, Jayanagar. Sri Sri Krishna Balarama will receive special decoration and Maha Abhisheka. On September 4, the midnight birth celebration will feature special puja, Maha Mangalarati and Harinama Sankirtana.

Sankirtana seva, bhajans, kirtans and music programmes will be held from 9 a.m. to 5 p.m. on both days. Devotees can also participate in Tulasi Archana, Pushparchana and Makhan Mishri Seva.

Over 50,000 devotees from Mysuru and various parts of Karnataka are expected to attend. Arrangements have been made to distribute Mahaprasada to the devotees.

ISKCON has also been developing a grand temple and cultural complex on nine acres in Jayanagar, inspired by Hoysala architecture, to promote Indian spiritual heritage and the teachings of the Bhagavad Gita.

ISKCONMysuru #SriKrishnaJanmashtami #Janmashtami2026 #KrishnaJanmashtami #Mysuru #Jayanagar #ISKCON #KrishnaBalarama #HarinamaSankirtana #MahaPrasada #Krishna #JanmashtamiCelebrations #MysuruNews #Karnataka #Spirituality #IndianCulture #BhagavadGita #HoysalaArchitecture

Leave a Reply