“ಜೆಎಸ್‌ಎಸ್ ಅಂದ್ರೆ….ಜೆಎಸ್‌ಎಸ್. ” ಅದರ ಹೆಸರಿನಲ್ಲೇ ಒಂದು ವಿsಸಿಷ್ಟ ಶಕ್ತಿ. ಸೇವೆಯ ಪರಂಪರೆ ಜ್ಞಾನದ ಬೆಳಕು ಅಡಗಿದೆ. ಭಾರತದ ಭೂಪಟದಲ್ಲಿ ಭವ್ಯವಾದ ಇತಿಹಾಸ ಸೃಷ್ಟಿಸಿದೆ. ಶಿಕ್ಷಣ,ಆರೋಗ್ಯ,ಸಂಸ್ಕೃತಿ ಮತ್ತು ಸಮಾಜ ಸೇವೆಯ ಕ್ಷೇತ್ರಗಳಲ್ಲಿ ತನ್ಬದೇ ಆದ ಅಚ್ಚಳಿಯದ ಛಾಪು ಮೂಡಿಸಿರುವ ಜೆಎಸ್‌ಎಸ್ ಸಂಸ್ಥೆಯ ಭದ್ರ ಬುನಾದಿ ಯ ಹಿಂದೆ ಶ್ರೀ ರಾಜೇಂದ್ರ ಶ್ರೀಗಳವರ ಕಠಿಣ ಪರಿಶ್ರಮ ಮತ್ತು ಅಪಾರ ಕರುಣೆ ಆಡಗಿದೆ.
ನಮ್ಮೆಲ್ಲರ ಆರಾಧ್ಯದೈವ ಪರಮಪೂಜ್ಯ ಜಗದ್ಗುರು ಡಾ.ಶ್ರಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ಗಳವರ ಜಯಂತಿ ಮಹೋತ್ಸವದ ಪವಿತ್ರ ಸಂದರ್ಭ.ಲೋಕ ಬೆಳಗಿದವರು, ಅಸಂಖ್ಯಾತರ ಬಾಳಿಗೆ ಜ್ಞಾನದ ಬೆಳಕಾದವರು ,ತಮ್ಮ ಬದುಕನ್ನೇ ಜನಹಿತಕ್ಕಾಗಿ ಸಮರ್ಪಿಸಿಕೊಂಡ ಡಾ. ರಾಜೇದ್ರ ಶ್ರೀಗಳು.
ಶ್ರೀಗಳವರಿಗೆ ಶರಣು ಎನ್ನುವೆ. ಸುತ್ತೂರು ಶ್ರಿ.ಮಠದ ೨೩ನೇ ಪರಮಪೂಜ್ಯ ಜಗದ್ಗುರು ಡಾ.ಶ್ರಿ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ೧೧೧ನೇ ಜಯಂತಿ ಮಹೋತ್ಸವದ ಸುದಿನ, ಹಬ್ಬದ ಸಂಭ್ರಮ. ಶ್ರಿ ಶಿವರಾತ್ರಿ?ಶ್ವರ ಶಿವಯೋಗಿಗಳವರ ಆಶೀರ್ವಾದ ಅನುಗ್ರಹದಿಂದ ಸುತ್ತೂರಿನ ಮರಮ್ಮಣ್ಣಿ ಮತ್ತು ಮಲ್ಲಿಕಾರ್ಜುನಸ್ವಾಮಿ ದಂಪತಿಗಳ ಪುತ್ರರಾಗಿ ೨೯ನೇ ಆಗಸ್ಟ್ ೧೯೧೬ರಲ್ಲಿ ಜನಹಿತಕ್ಕಾಗಿ ತಮ್ಮನ್ನೆ? ಅರ್ಪಿಸಿಕೊಳ್ಳುವ ಮಹಾತ್ಮರಾಗಿ, ಅವತಾರ ಪುರು?ರಾಗಿ ರಾಜೇಂದ್ರ ಶ್ರೀಗಳವರು ಧರೆಗೆ ಬಂದ ಸುದಿನ. ‘ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು…’ ಎಂಬ ಕವಿವಾಣಿಯಂತೆ ಈ ಧರೆಗೆ ಬಂದು ಹೆಮ್ಮರವಾಗಿ ಸುತ್ತೂರು ಮಠವನ್ನು ಬೆಳೆಸಿದ ಹೆಗ್ಗಳಿಕೆ ಅವರದು. ಶ್ರೀಗಳವರ ಪರಿ ಶ್ರಮದಿಂದಾಗಿ ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠ ಸುತ್ತೂರು ಶ್ರಿ?ಕ್ಷೇತ್ರ ಇಂದು ಜಗತ್ತಿನಲ್ಲೇ ಒಂದು ವಿಶೇ? ಸ್ಥಾನದಲ್ಲಿದೆ.
ಅನ್ನದಾಸೋಹದಿಂದ ಜ್ಞಾನದಾಸೋಹದವರೆಗೆ ಅನ್ನ ದಾಸೋಹದಿಂದ ಆರಂಭಿಸಿ ಹಂತಹಂತವಾಗಿ ಅದು ತನ್ನ ಸೇವಾಕ್ಷೇತ್ರವನ್ನು ಶಿಕ್ಷಣ,ಆರೋಗ್ಯ, ಗ್ರಾಮೀಣಾಭಿವೃದ್ದಿ ಮತ್ತು ಸಾಮಾಜಿಕ ಸೇವೆಯ ವಿಶಾಲ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡು ಇಂದು ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಅಲ್ಲದೆ ಜೆಎಸ್‌ಎಸ್ ಮಹಾ ವಿದ್ಯಾಪೀಠವನ್ನು ಸಂಸ್ಥಾಪಿಸುವ ಮೂಲಕ ಲೋಕ ಕಲ್ಯಾಣಕಾರಿಗಳಾದವರು ಡಾ. ಶ್ರಿ? ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. ಶ್ರಿ?ಗಳೆಂದರೆ ಕಾಯಕ ತಪಸ್ವಿಗಳು, ಲೋಕಕಾರುಣ್ಯವನ್ನು ಹೊರಸೂಸುವ ತೇಜಸ್ವಿ ಕಣ್ಣುಗಳು, ಹುಣ್ಣಿಮೆ ಚಂದ್ರನ ಬೆಳದಿಂಗಳ ಹಾಲಿನಂತೆ ಆಕ?ಕ ಮಂಗಳರೂಪ, ನಿರಂಹಕಾರ ಮತ್ತು ಬಸವಣ್ಣನವರ ತತ್ವಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಅದೇ ಹಾದಿಯಲ್ಲಿ ಶ್ರೀಗಳವರು ಸಾಗಿ, ಇತರರಿಗೂ ಬೆಳಕಾದರು. ಜಾತಿ ಮತ ಭೇದವಿಲ್ಲದೆ ಎಲ್ಲರನ್ನು ಸಮಾನತೆಯಿಂದ ಕಂಡ ಶ್ರಿ?ಗಳು ಜೆಎಸ್‌ಎಸ್ ಸಂಸ್ಥೆಯನ್ನು ಸರ್ವಜನಾಂಗದ ಪ್ರೀತಿಯ ತೋಟವನ್ನಾಗಿ ರೂಪಿಸಿದರು.
ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಶಕ್ತಿಪೂರ್ಣವಾದ ಶ್ರಿ?ಮಠದ ಮೂಲಕ ನೂರಾರು ವಿದ್ಯಾಸಂಸ್ಥೆಗಳಾಗಿ “ವಿಶ್ವಮಾನವ’ರನ್ನು ಸೃಷ್ಟಿಸುವ ತೇಜೋಕೇಂದ್ರಗಳಾಗುತ್ತವೆ” ಎಂದು ರಾ?ಕವಿ ಕುವೆಂಪು ಅವರು ರಾಜೇಂದ್ರ ಶ್ರಿ?ಗಳ ೬೦ನೇ ವ?ದ ಶುಭ ಸಂದರ್ಭದಲ್ಲಿ ತಿಳಿಸಿದ್ದು ಅಕ್ಷರಶಃ ಸತ್ಯವಾಗಿದೆ. ಇದಕ್ಕೆ ಸಾಕ್ಷೀಭೂತವಾಗಿ ಜೆಎಸ್‌ಎಸ್ ಮಹಾವಿದ್ಯಾ ಪೀಠವು ಬೃಹದಾಕಾರವಾಗಿ ಬೆಳೆದು ತನ್ನದೇ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದರ ಮೂಲಕ ಜಾಗತಿಕ ಶಿಕ್ಷಣಕ್ಷೇತ್ರದಲ್ಲಿ ಒಂದು ವಿಶಿ? ಮೈಲಿಗಲ್ಲಾಗಿ ನಿಂತಿದೆ. ಇಂಥ ದೂರದೃಷ್ಟಿಯುಳ್ಳವರಾಗಿದ್ದರು ರಾಜೇಂದ್ರ ಶ್ರೀಗಳು.
ಒಂದು ಪ್ರಸಿದ್ದ ಮಠಾಧಿ ಪತಿಗಳಾಗಿದ್ದರೂ ಅಂದಿನಸಮಯದಲ್ಲಿ ಒಂದು ಹಸಿರು ಬಣ್ಣದ ಅಂಬಾಸಿಡರ್ ಕಾರಿನಲ್ಲಿ ಸಂಚಾರ ಮಾಡುತ್ತಿದ್ದರು . ಹರಿದ ಬಟ್ಟೆಯಿದ್ದರೆ ಅದನ್ನು ಹೊಲಿದುಕೊಂಡು ಧರಿಸಿತ್ತಿದ್ದುದು,ಹಾಸ್ಟಲ್ ವಿರ್ಥಿಗಳ ಹಸಿವು ನೀಗಿಸಲು ತಮ್ಮ ಬಳಿಯಿದ್ದ ಲಿಂಗದ ಕರಡಿಗೆಯನ್ನೇ ಮಾರಾಟ ಮಾಡಿ ದವಸ- ಧಾನ್ಯಗಳನ್ನು ತಂದ ಸಂದರ್ಭಗಳೂ ಅವರ ತ್ಯಾಗ ಮತ್ತು ದಾಸೋಹ ಮನೋಭಾವಕ್ಕೆ ಸಾಕ್ಷಿಯಾಗಿವೆ. ಕ? ಎಂದು ಬ ಯಿಗಳಾಗಿದ್ದರು. ಶ್ರೀಗಳವರ ಜೀವನವೇ ಸರಳತೆ ಮತ್ತು ಅಧ್ಯಾತ್ಮದ ಸುಂದರ ಸಂಗಮವಾಗಿತ್ತು.

“ಇವ ನಮ್ಮವ” ಎಂದ ಶ್ರಿ ಗಳು
ಅಂದಿನ ದಿನಮಾನಗಳಲ್ಲಿ ಮೈಸೂರಿಗೆ ಬಂದು ವ್ಯಾಸಂಗ ಮಾಡುವುದು ಮೈಸೂರಿನ ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳಿಗೆ ತುಂಬಾ ಕ?ಸಾಧ್ಯವಾಗಿತ್ತು. ಇದನ್ನು ಮನಗಂಡಿದ್ದ ಪೂಜ್ಯರು ಬಡವಿದ್ಯಾರ್ಥಿಗಳಿಗೆ ಆಸರೆಯಾಗುವಂತೆ ಮೊದ ಮೊದಲು ವಿದ್ಯಾರ್ಥಿನಿಲಯಗಳನ್ನು ತೆರೆದು, ಅನ್ನದಾಸೋಹದಿಂದ ಜ್ಞಾನದಾಸೋಹದತ್ತ ಗಮನ ಹರಿಸಿ ವಿದ್ಯಾಸಂಸ್ಥೆಗಳನ್ನು ತೆರೆದು ಜಾತಿ, ಮತ, ಪಂಥ, ಧರ್ಮ ಭೇದಭಾವ ಮಾಡದೆ ಎಲ್ಲರ ಬಾಳಿಗೆ ಬೆಳಕಾದರು. ಇದಕ್ಕೆ ಸಾವಿರಾರು ನಿದರ್ಶನಗಳಿವೆ. ಇದಕ್ಕೊಂದು ನಿದರ್ಶನವೆಂದರೆ ಶ್ರೀಗಳವರನ್ನು ಕುರಿತ ‘ಅರ್ಚನ’ ಗ್ರಂಥದಲ್ಲಿ ಕೋ.ಚನ್ನಬಸಪ್ಪವರು ಹೀಗೆ ಉಲ್ಲೇಖಿಸಿದ್ದಾರೆ. ನಮ್ಮೂರಿನ ಒಬ್ಬ ಮುಸ್ಲಿಂ ವಿದ್ಯಾರ್ಥಿಗೆ ಕಾಲೇಜು ವಿದ್ಯಾಭ್ಯಾಸ ಮಾಡಬೇಕೆಂಬ ಹಂಬಲ. ಆದರೆ ಬಳ್ಳಾರಿಯಂಥ ನಗರದಲ್ಲಿದ್ದು ಕಾಲೇಜು ಓದುವ? ತ್ರಾಣ ಅವನಿಗಿರಲಿಲ್ಲ. ಆ ಹುಡುಗನನ್ನು ಸೇರಿಸಿಕೊಳ್ಳುವ ಉಚಿತ ಪ್ರಸಾದನಿಲಯ ಬಳ್ಳಾರಿಯಲ್ಲಿರಲಿಲ್ಲ. ‘ಹೆಂಗ ಮಾಡ್ಲಿ ಸರ್?’ ಎಂದು ದೈನ್ಯದಿಂದ ಕೇಳಿದ ವಿದ್ಯಾರ್ಥಿಗೆ ‘ಮೈಸೂರಿಗೆ ಹೋಗ್ತಿ?ಯಾ?’ ಎಂದು ಕೇಳಿದೆ. ಅಲ್ಲಿ ನನಗೆ ಊಟ, ವಸತಿ ಯಾರು ಕೊಡ್ತಾರ ಸರ್? ಕೇಳಿದ. ‘ಹೋಗೋದಾದ್ರೆ ಹೇಳು. ಸುತ್ತೂರು ಜಗದ್ಗರುಗಳಿಗೆ ಒಂದು ಪತ್ರ ಕೊಡ್ತಿ?ನಿ’ ಅಂತ ಭರವಸೆ ಕೊಟ್ಟೆ. ಆಗ ’ನಮ್ಮ ಜಾತಿಯವರನ್ನು ಸೇರಿಸಿಕೊಳ್ತಾರ ಸರ್?’ಅಂದ. ‘ಸೇರಿಸಿಕೊಳ್ತಾರೆ, ಪತ್ರ ಕೊಡ್ತಿ?ನಿ’ ಎಂದೆ. ಸ್ವಾಮೀಜಿಗಳಿಗೆ ಪತ್ರ ಮುಟ್ಟಿಸಿ, ನಮಸ್ಕಾರ ಮಾಡಿ ದವನಿಗೆ ಊಟ, ವಸತಿ ಏರ್ಪಾಡುಗೊಳಿಸಿದರು. ಆತ ಮುಂದೆ ಒಳ್ಳೆಯ ಬರಹಗಾರನಾದ…ಸದಾ ಹಸನ್ಮುಖಿಯಾಗಿರುತ್ತಿದ್ದ ಶ್ರಿ?ಗಳು ಮನುಕುಲಕ್ಕ? ಅಲ್ಲದೆ ಪ್ರಾಣಿ-ಪಕ್ಷಿಗಳಲ್ಲೂ ದಯೆ, ಕರುಣೆ ಹೊಂದಿದ್ದರು ಎಂಬುದು ಎಲ್ಲರಿಗೂ ತಿಳಿದ ವಿ?ಯವೇ ಆಗಿದೆ.
ನೀರು ಪ್ರಸಾದ ಸಾರ್ಥಕತೆಯ ಜೀವನ ನಡೆಸಿದ ಶ್ರಿ? ಗಳು ಸಂಸ್ಥೆಯ ಕೆಲಸಗಳಿಗೆ ಆಗಾಗ ಬೆಂಗಳೂರಿನ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳನ್ನು ಮಾಡಿಸಿಕೊಂಡು ಬರುತ್ತಿದ್ದರಂತೆ. ಆ ಸಮಯದಲ್ಲಿ ಬೇಲಿ ಮಠದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಶ್ರಿ?ಗಳಿಗೆ ಪ್ರಸಾದ ವ್ಯವಸ್ಥೆ ಆಗದೆ ಇದ್ದರೂ ಅವರ ಜೊತೆಯಲ್ಲಿ ಹೋದವರಿಗೆ ಮಾತ್ರ ಹತ್ತಿರದ ಹೋಟೆಲಿಗೆ ಕಳುಹಿಸಿ ಊಟದ ವ್ಯವಸ್ಥೆ ಮಾಡುತ್ತಿದ್ದರು. ಅವರ ಪ್ರಸಾದದ ಕುರಿತು ಕೇಳಿದಾಗ ‘ಪ್ರಸಾದ ತೆಗೆದುಕೊಂಡಿದ್ದೇನೆ. ನೀರು ಕೂಡಾ ಶಿವನಿತ್ತ ಪ್ರಸಾದವಲ್ಲವೆ?’ ಎಂದು ಮರುಪ್ರಶ್ನಿಸುತ್ತಿದ್ದರು.
ಶಿವ ನಮಗೆ ಇ?ನ್ನಾದರೂ ಕೊಟ್ಟಿದ್ದಾನೆ. ಅದನ್ನು ಜನತೆಗೆ ಅರ್ಪಿಸುವುದರಲ್ಲಿ ಸಾರ್ಥಕತೆಯನ್ನು ಪಡೆಯಬೇಕು’ ಎಂದು ಹೇಳುತ್ತಿದ್ದರು. ಹಿಂದೂ ಧರ್ಮ,ಗ್ರಂಥಗಳಲ್ಲಿ ನೀರನ್ನು ದೇವರ ವರಪ್ರಸಾದವೆಂದು ಪರಿಗಣಿಸುತ್ತಾರೆ .ನೀರನ್ನು.ದೇವರಿಗೆ
ಭಕ್ರಿಯಿಂದ ಅರ್ಪಿಸಿದರೆ ಅದೇ ಪ್ರಸಾದ. ಭಗವದ್ಗೀತೆಯಲ್ಲಿ ಶ್ರೀ ಕೃ?ನು ಪತ್ರೆ, ಪು? ,ಫಲ,ನೀರು ಯಾವುದನ್ನು ಸಮರ್ಪಿಸಿದರು ಸ್ವೀಕರಿಸುತ್ತೇನೆ ಎನ್ನುತ್ತಾನೆ. ನೀರನಲ್ಲಿ ಭಗವಂತನ ಸಾನಿಧ್ಯ ಇದೆ.ಭಗವಂತನು ನೀರಿನ ರೂಪ ನಾನು ಎನ್ನುತ್ತಾನೆ.ನೀರಿನಲ್ಲಿ ಭಗವಂತನ ಶಕ್ತಿ ಇದೆ. ನೀರಿನಲ್ಲಿ ಅಧ್ಯಾತ್ಮಿಕ ಶಕ್ತಿ ಅಡಗಿದೆ ಎನ್ಮ್ನತ್ತದೆ ಪದ್ಮಪುರಾಣ. ಶ್ರೀಗಳವರ “ನೀರು ಪ್ರಸಾದ ” ಎಂಬ ಮಾತು ಅವರ ಸರಳತೆಯ ಜೊತೆಗೆ ಅಳವಾದ ಅಧ್ಯಾತ್ಮಿಕ ಚಿಂತನೆಯನ್ನೂ ಪ್ರತಿಬಿಂಬಿಸುತ್ತದೆ. ಇಚಿಥ ಪೂಜ್ಯರು ಕುರಿತು ಹಿರಿಯ ಕವಿ ಕೆ.ಸಿ.ಶಿವಪ್ಪ ಅವರ ಚೌಪದಿ ಹೀಗಿದೆ. ‘ತುಟಿಯ ತೆರೆದರೆ ಸಂತ ಅದುವೆ ಭಾವತರಂಗ ಅದು ನಿಜದ ಸಿರಿಹೊನಲು, ಅದೆ ಬುದ್ಧಿವಾಣಿ ಸಮತೆ ಸರಳತೆಗದುವೆ ಚೆಲುಚಿತ್ರದಾವರಣ ಆ ಮಾತೆ ನಿಬ್ಬೆರಗು….’
ಬಾಳಿಗೆ ಬೆಳಕಾದರು
ಪರಮಪೂಜ್ಯ ಡಾ.ರಾಜೇಂದ್ರ ಶ್ರಿ?ಗಳವರು ನನ್ನ ಬಾಳಿಗೆ ಬೆಳಕಾದರು. ಪುಟ್ಟನಪುರ ಗ್ರಾಮದಲ್ಲಿ ಹುಟ್ಟಿದ ನಾನು, ಬೆಳೆದದ್ದು ಅಜ್ಜಿಯ ಊರಾದ ಯಳಂದೂರು ತಾಲೂಕಿನ ಕೊಮಾರನಪುರ. ಯಳಂದೂರಿನಲ್ಲಿ ಎಂಟನೇ ತರಗತಿಯವರೆಗೆ ಓದಿ ನಂತರ ಮೈಸೂರಿನ ರಾಮಾನುಜ ರಸ್ತೆಯಲ್ಲಿ ಆಕಾಲದಲ್ಲಿದ್ದ ಪ್ರೌಢಶಾಲೆಯಲ್ಲಿ ಓದಿದೆ. ನಂತರ ಜೆಎಸ್‌ಎಸ್ ವಿಜ್ಞಾನ, ವಾಣಿಜ್ಯ ಮತ್ತು ಕಲಾ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದೆ. ಬಳಿಕ ಪೂಜ್ಯರನ್ನು ಕಂಡಾಗ ನಮ್ಮ ಮನೆಯ ವಿವರ ಕೇಳಿದಾಗ,ನಾನು ಐದು ವ?ದವನಿದ್ದಾಗಲೇ ತಾಯಿಯನ್ನು ಕಳೆದುಕೊಂಡ ಸಂಗತಿಯನ್ನು ಹೇಳಿದಾಗ ಮರುಗಿದ್ದರು. ಆಮೇಲೆ ಈಗಿನ ಪರಮಪೂಜ್ಯ ಜಗದ್ಗರು ಶ್ರಿ? ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳನ್ನು ಕಾಣಲು ಆದೇಶಿಸಿದರು. ಅವರನ್ನು ಭೇಟಿಯಾದ ನಂತರ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಗ್ರಂಥಾಲಯದಲ್ಲಿ ಕರ್ತವ್ಯನಿರ್ವ ಹಿಸಲು ಅನುವು ಮಾಡಿಕೊಟ್ಟರು. ನಂತರ ಕಚೇರಿಗೆ ವರ್ಗಾವಣೆಯಾಯಿತು. ಸಹಾಯಕ ಆಡಳಿತಾ ಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದೆ. ಇದೆಲ್ಲವೂ ಅವರ ಕೃಪೆ. ಅವರ ಸ್ಮರಣೆಯೇ ನಮ್ಮ ಜೀವನದ ಉಸಿರು.
ಶ್ರೀಗಳವರ ಹೃದಯದಲ್ಲಿ ಜಾತಿ -ಮತಗಳ ಗಡಿಗಳಿಗೆ ಯಾವುದೇ ಸ್ಥಾನವಿರಲಿಲ್ಲ. ಪೂಜ್ಯರ ಬದುಕನ್ನು ಅವಲೋಕಿಸಿದಾಗ ಅವರ ಪಾಲಿಗೆ ಧರ್ಮ ವೆಚಿದರೆ ಕೇವಲ ಪೂಜೆ-ಪುರಸ್ಕಾರಗಳಲ್ಲ ; ಮನು?ನ ಸೇವೆಯೇ ಧರ್ಮ ಎಂಬುದು ಸ್ಪ?ವಾಗಿ ಕಂಡುಬರುತ್ತದೆ. ಶ್ರೀಗಳವರ ಜೀವನ ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ- ನಾವು ಗಳಿಸುವುದರಲ್ಲಿ ಜೀವನ ಮಹತ್ವವಿಲ್ಲ; ನಮ್ಮಿಂದ ಎ? ಜನರ ಬದುಕು ಬೆಳಗುತ್ತದೆ ಎಂಬುದರಲ್ಲಿದೆ ಜೀವನದ ಸಾರ್ಥಕತೆ.
ಎಂ.ಜಯಶಂಕರ್
೮೦೭೩೯೧೧೭೨೫
