Grand Gajapayana Flagged Off for Mysuru DasaraMysuru,

ಮೈಸೂರು, ಆಗಸ್ಟ್ 26: ಮೈಸೂರು ದಸರಾ-2026ರ ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ವೀರನಹೊಸಹಳ್ಳಿ ಬಳಿ ಅದ್ದೂರಿಯಾಗಿ ಚಾಲನೆ ನೀಡಿದರು.

ಮೊದಲ ಹಂತದಲ್ಲಿ 9 ಆನೆಗಳಾದ ಮಹೇಂದ್ರ, ಶ್ರೀಕಂಠ, ಲಕ್ಷ್ಮೀ, ಏಕಲವ್ಯ, ಧನಂಜಯ, ಗೋಪಿ, ಕಾವೇರಿ, ಪ್ರಶಾಂತ ಹಾಗೂ ಶ್ರೀರಾಮ ಆನೆಗಳು ಮೈಸೂರು ದಸರಾಗೆ ಆಗಮಿಸಿದವು.

ಕಳೆದ ಕೆಲವು ವರ್ಷಗಳಿಂದ ಅಂಬಾರಿ ಹೊತ್ತು ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡು, ಇದೀಗ ನಿವೃತ್ತಿಯಾಗಿರುವ ಅಭಿಮನ್ಯು ಆನೆಗೆ ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಸತಿ ವಿಹಾರಧಾಮಗಳ ಅಧ್ಯಕ್ಷರು ಹಾಗೂ ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಕುಮಾರ್ ಸಿ., ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಗೌಡ, ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್, ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Grand Gajapayana Flagged Off for Mysuru DasaraMysuru,

August 26: District In-charge Minister Dr. Yathindra Siddaramaiah ceremonially flagged off the Gajapayana, the traditional elephant march for Mysuru Dasara 2026, at Veeranahosahalli in a grand ceremony.In the first batch, nine elephants — Mahendra, Srikanta, Lakshmi, Ekalavya, Dhananjaya, Gopi, Kaveri, Prashantha and Srirama — began their journey to Mysuru for the Dasara festivities.The occasion also saw a ceremonial farewell to Abhimanyu, the veteran elephant who had carried the golden howdah during the Dasara procession for several years and has now retired from service.The programme was attended by Anil Kumar C., MLA of H.D. Kote Assembly constituency; G.D. Harish Gowda, MLA of Hunsur; D. Ravishankar, MLA of K.R. Nagar; C.N. Manjegowda, MLC; Regional Commissioner Nitesh Patil; IGP, Southern Range, Boralingaiah; Deputy Commissioner G. Lakshmikanth Reddy; Zilla Panchayat Chief Executive Officer S. Yukesh Kumar, along with other officials from various departments.

    Leave a Reply