ಆಗಸ್ಟ್ 17: ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ಇಂದು ನಾಗರ ಪಂಚಮಿಯನ್ನು, ವಿವಿಧ ಅರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಪವಿತ್ರ ಸಂದರ್ಭದಲ್ಲಿ ಪ್ರಾಣ ಪ್ರತಿಷ್ಠಾಪಿತ ನಾಗನ ದರ್ಶನ ಪಡೆಯಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು.
ಈ ಆಚರಣೆಯ ಭಾಗವಾಗಿ ನಾಗನಿಗೆ ‘ನಾಗ ಅಭಿಷೇಕ’, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಕ್ತರಿಗೆ ನಾಗರ ಪಂಚಮಿಗೆ ಸಂಬಂಧಿಸಿದ ವಿವಿಧ ಅರ್ಪಣೆ ಮತ್ತು ಸೇವೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆಗಸ್ಟ್ 15 ರಿಂದ 17 ರವರೆಗೆ ಸದ್ಗುರು ಸನ್ನಿಧಿಯಲ್ಲಿ ನಡೆದ ಮೂರು ದಿನಗಳ ‘ಜಾತ್ರೆ’ಯ ಭಾಗವಾಗಿ ಈ ಸಂಭ್ರಮದ ಆಚರಣೆಗಳು ಜರುಗಿದವು.
ಭಕ್ತರು ‘ಅನನ್ಯ ಬೆಣ್ಣೆ ಸೇವೆ’ ಹಾಗೂ ‘ಅನನ್ಯ ಸರ್ಪ ಸೇವೆ’ಯಂತಹ ಹಲವಾರು ಪವಿತ್ರ ಅರ್ಪಣೆಗಳಿಗೆ ಸಾಕ್ಷಿಯಾದರು. ಅಲ್ಲದೆ, ನಾಗದೋಷ ನಿವಾರಣೆಗೆ ನೆರವಾಗುವ ‘ನಾಗದೋಷ ನಿವಾರಣ ಕ್ರಿಯೆ’ಯಲ್ಲೂ ಅನೇಕ ಭಕ್ತರು ಭಾಗವಹಿಸಿದ್ದರು. ಈ ಸೇವೆಯಲ್ಲಿ ಭಾಗವಹಿಸಿದವರಿಗೆ ಪವಿತ್ರ ‘ನಾಗ ಸೂತ್ರ’ವನ್ನು ನೀಡಲಾಯಿತು. ಇದರೊಂದಿಗೆ ಭಕ್ತಿ ಮತ್ತು ಗ್ರಹಣಶೀಲತೆಯನ್ನು ಹೆಚ್ಚಿಸಲು ಯೋಗೇಶ್ವರ ಲಿಂಗಕ್ಕೆ ‘ಕ್ಷೀರ ಸೇವೆ’ಯನ್ನೂ ಸಮರ್ಪಿಸಲಾಯಿತು.
ನಾಗನ ಮಹತ್ವದ ಕುರಿತು ಮಾತನಾಡಿದ ಸದ್ಗುರುಗಳು, “ಎಲ್ಲಾ ಮಿತಿಗಳನ್ನು ಮೀರಿ ಬೆಳೆಯಬೇಕೆಂಬ ಸಹಜ ಹಂಬಲ ಪ್ರತಿಯೊಬ್ಬ ಮನುಷ್ಯನಲ್ಲೂ ಇರುತ್ತದೆ. ಬದುಕನ್ನು ವಿಶಾಲವಾದ ಆಯಾಮದಲ್ಲಿ ಗ್ರಹಿಸಲು ಒಂದು ಪ್ರವೇಶ ದ್ವಾರದಂತೆ ಸೃಷ್ಟಿಸಲಾದ ಜೀವಂತ ದೈವವೇ ನಾಗ,” ಎಂದು ತಿಳಿಸಿದ್ದಾರೆ.
ಸಂಜೆ 6:15 ಕ್ಕೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ‘ಸೌಂಡ್ಸ್ ಆಫ್ ಈಶ’ದಿಂದ ಸಂಗೀತ ಸಮರ್ಪಣೆ ಹಾಗೂ ನಾಗರ ಪಂಚಮಿಯ ವಿಶೇಷ ಪೂಜಾವಿಧಿಗಳು ನಡೆದವು. ಕೊನೆಯಲ್ಲಿ, ಯೋಗ ವಿಜ್ಞಾನವನ್ನು ಬಿಂಬಿಸುವ ಅದ್ಭುತ ಪ್ರದರ್ಶನವಾದ ಆದಿಯೋಗಿ ದಿವ್ಯ ದರ್ಶನದೊಂದಿಗೆ ಸಂಭ್ರಮಾಚರಣೆಯು ಮುಕ್ತಾಯಗೊಂಡಿತು.
ಯೋಗ ಪರಂಪರೆಯಲ್ಲಿ ಶಕ್ತಿಯುತ ಜೀವಿಗಳು ಎಂದು ಪರಿಗಣಿಸಲಾಗುವ ನಾಗನನ್ನು ಗೌರವಿಸಲು ಸಾಂಪ್ರದಾಯಿಕವಾಗಿ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಸದ್ಗುರು ಸನ್ನಿಧಿಯಲ್ಲಿ ನಡೆದ ಈ ಕಾರ್ಯಕ್ರಮವು ಭಕ್ತರಿಗೆ ಪೂಜೆ, ಸೇವೆ ಹಾಗೂ ಸಾಂಸ್ಕೃತಿಕ ಆಚರಣೆಗಳ ಮೂಲಕ ಈ ಆಧ್ಯಾತ್ಮಿಕ ಮಹತ್ವದೊಂದಿಗೆ ಒಂದಾಗುವ ಉತ್ತಮ ಅವಕಾಶವನ್ನು ಒದಗಿಸಿತು.
ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ನಡೆದ ಈ ಆಚರಣೆಗಳು ಭಕ್ತರಿಗೆ ಖುದ್ದಾಗಿ ಅರ್ಪಣೆಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ಜಾತ್ರೆಯ ವೈವಿಧ್ಯಮಯ ವಾತಾವರಣವನ್ನು ಅನುಭವಿಸುವ ಅವಕಾಶವನ್ನು ನೀಡಿತು. ಕಾರ್ಯಕ್ರಮಕ್ಕೆ ಖುದ್ದಾಗಿ ಬರಲಾಗದ ಭಕ್ತರಿಗಾಗಿ ಈ ಇಡೀ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗಿದ್ದು, ಜನರು ಆನ್‌ಲೈನ್ ಮೂಲಕ ಈ ಸಂಭ್ರಮದ ಭಾಗವಾಗಲು ಸಾಧ್ಯವಾಯಿತು.
Naga Panchami Celebrated at Sadhguru Sannidhi Bengaluru with Traditional Rituals and Offerings
Bengaluru, August 17: Naga Panchami was celebrated at Sadhguru Sannidhi Bengaluru today with traditional rituals, offerings and cultural performances, drawing devotees and visitors to the consecrated Naga Shrine to mark the auspicious occasion.
The celebrations featured Naga Abhisheka, a traditional offering to Naga, along with cultural performances and opportunities for devotees to participate in a range of rituals and offerings associated with Naga Panchami. The celebrations were part of a three-day jaatre held at Sadhguru Sannidhi from August 15 to 17.
Devotees witnessed various sacred rituals such as Ananya Benne Seva, Ananya Sarpa Seva. Many also participated in the Naga Dosha Nivarana Kriya, a process aimed at helping alleviate Naga Dosha. As part of the offering, participants received a consecrated Naga Sutra to wear. Offerings also included Ksheera Seva at the Yogeshwar Linga, a traditional milk offering made to enhance devotion and receptivity.
Speaking about the significance of Naga, Sadhguru says, “There is an innate longing within human beings to go beyond all limitations. Naga is a living deity created as an access point to Perceive Life on a larger scale.”
The evening segment of the celebration, which began at 6:15 PM, featured musical offerings by Sounds of Isha, Isha’s homegrown music ensemble, along with the Naga Panchami rituals. The evening concluded with Adiyogi Divya Darshanam, a visually delightful light and sound projection, depicting the origins of Adiyogi and the science of Yoga.
Naga Panchami is traditionally observed to honor Nagas, who in the yogic tradition are regarded as powerful beings and custodians of deeper energies. The event at Sadhguru Sannidhi offered devotees the opportunity to connect with this spiritual significance through ritual, offering, and cultural expression.
The celebrations at Sadhguru Sannidhi Bengaluru offered devotees and visitors an opportunity to participate in the festival through both in-person rituals and offerings, while experiencing the vibrant atmosphere of the jaatre. For those unable to attend in person, the event was livestreamed globally, allowing people from around the world to be part of the celebrations online.
NagaPanchami #NagaPanchami2026 #SadhguruSannidhi #SadhguruSannidhiBengaluru #Bengaluru #NagaAbhishekam #NagaPanchamiCelebrations #NagaDoshaNivarana #NagaSutra #AnanyaSarpaSeva #AnanyaBenneSeva #KsheeraSeva #YogeshwarLinga #Adiyogi #AdiyogiDivyaDarshanam #SoundsOfIsha #IshaFoundation #Jaatre #SanatanaDharma #YogicTradition #Spirituality #Devotion #IndianCulture #FestivalsOfIndia #Naga #Sadhguru
