ಮೈಸೂರು ದಸರಾ ವಸ್ತುಪ್ರದರ್ಶನದ ಮುಂಭಾಗ ಡಾ. ರಾಜ್‌ಕುಮಾರ್ ಪುತ್ಥಳಿ ಪುನರ್‌ಸ್ಥಾಪನೆ; ಗಣ್ಯರಿಗೆ ಸದ್ಭಾವನಾ ಪ್ರಶಸ್ತಿ ಪ್ರದಾನ

ಮೈಸೂರು: ಮೈಸೂರು ದಸರಾ ವಸ್ತುಪ್ರದರ್ಶನದ ಮುಂಭಾಗದಲ್ಲಿ ಕರ್ನಾಟಕ ರತ್ನ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಪುತ್ಥಳಿಯನ್ನು ಪುನರ್‌ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರತ್ನ ಡಾ. ರಾಜ್‌ಕುಮಾರ್ ಸದ್ಭಾವನಾ ಪ್ರಶಸ್ತಿ ಪ್ರದಾನ ಹಾಗೂ ಸಿಹಿ ವಿತರಣೆ ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘ ಹಾಗೂ ಮೈಸೂರು ಯೋಗ ಅಸೋಸಿಯೇಷನ್‌ನ ಸದಸ್ಯರು ಪಾಲ್ಗೊಂಡಿದ್ದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ರವಿಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಮೈಸೂರಿನ ಪ್ರಖ್ಯಾತ ಯೋಗ ಗುರು ತಿರುಮಲೆ ಯೋಗ ಪ್ರಕಾಶ್, ಖ್ಯಾತ ಹಿನ್ನೆಲೆ ಗಾಯಕ ಜಯರಾಮ್ ಹಾಗೂ ಕನ್ನಡ ಚಳವಳಿಯ ಹೋರಾಟಗಾರ ಮಹದೇವ್ ಅವರಿಗೆ ಕರ್ನಾಟಕ ರತ್ನ ಡಾ. ರಾಜ್‌ಕುಮಾರ್ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಸಂತೋಷ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ. ರಾಜ್‌ಕುಮಾರ್ ಅವರ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳ ಕುರಿತ ಆದರ್ಶಗಳನ್ನು ಸ್ಮರಿಸುವ ಉದ್ದೇಶದಿಂದ ಕಾರ್ಯಕ್ರಮದಲ್ಲಿ ಗಣ್ಯರನ್ನು ಗೌರವಿಸಿ ಸಿಹಿ ವಿತರಿಸಲಾಯಿತು.

Mysuru: The statue of Karnataka Ratna and legendary Kannada actor Dr. Rajkumar was reinstalled in front of the Mysuru Dasara Exhibition Grounds. On the occasion, the Karnataka Rakshana Vedike organised the Dr. Rajkumar Sadbhavana Award presentation ceremony and sweet distribution programme.

Members of the Dr. Rajkumar Fans Association and the Mysuru Yoga Association participated in the event. Ravi Kumar, former president of the Mysuru District Journalists Association, attended the programme as the chief guest.

Renowned Mysuru yoga guru Tirumale Yoga Prakash, popular playback singer Jayaram, and Kannada movement activist Mahadevu were honoured with the Karnataka Ratna Dr. Rajkumar Sadbhavana Awards in recognition of their contributions.

The programme was organised under the leadership of Santosh, president of the Karnataka Rakshana Vedike.

The event paid tribute to Dr. Rajkumar’s legacy and his contributions to Kannada language, culture and values. The programme concluded with the distribution of sweets to mark the occasion.

Leave a Reply