ನಂಜನಗೂಡು: ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ 2026ನೇ ಸಾಲಿನ ಚಿಕ್ಕಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ನಡೆದಿವೆ. ಜಾತ್ರೆಯ ಅಂಗವಾಗಿ ನವೆಂಬರ್ 22ರಿಂದ 27ರವರೆಗೆ ವಿವಿಧ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ನವೆಂಬರ್ 22ರ ಭಾನುವಾರ ಸಂಜೆ 7 ಗಂಟೆಗೆ ಶ್ರೀಕಂಠಮುಡಿ ಉತ್ಸವ ನಡೆಯಲಿದೆ. ನವೆಂಬರ್ 25ರ ಬುಧವಾರ ಬೆಳಗ್ಗೆ 9.20ರಿಂದ 10 ಗಂಟೆಯೊಳಗೆ ಜಾತ್ರೆಯ ಪ್ರಮುಖ ಆಕರ್ಷಣೆಯಾದ ಶ್ರೀ ಮನ್ಮಹಾರಥಾರೋಹಣ ನೆರವೇರಲಿದೆ.
ನವೆಂಬರ್ 27ರ ಶುಕ್ರವಾರ ಸಂಜೆ 7 ಗಂಟೆಗೆ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ಜರುಗಲಿದೆ.
ಚಿಕ್ಕಜಾತ್ರಾ ಮಹೋತ್ಸವಕ್ಕೆ ಭಕ್ತರು ಕುಟುಂಬ ಸಮೇತರಾಗಿ, ಸ್ನೇಹಿತರು ಹಾಗೂ ಬಂಧು ಬಳಗದವರೊಂದಿಗೆ ಆಗಮಿಸಿ ಶ್ರೀ ಸ್ವಾಮಿಯವರ ಸೇವೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.
ಇದೇ ವೇಳೆ ದೇವಾಲಯದ ವತಿಯಿಂದ ಪ್ರತಿದಿನ ನಡೆಯುತ್ತಿರುವ ಅನ್ನದಾಸೋಹಕ್ಕೆ ಭಕ್ತರು ದವಸ-ಧಾನ್ಯ, ಅಗತ್ಯ ಪದಾರ್ಥಗಳು ಹಾಗೂ ನಗದು ಕಾಣಿಕೆಯನ್ನು ಸೇವಾರ್ಥವಾಗಿ ನೀಡುವಂತೆ ಕೋರಲಾಗಿದೆ. ಭಕ್ತರು ನೀಡುವ ಕಾಣಿಕೆಗಳನ್ನು ದೇವಾಲಯದ ವತಿಯಿಂದ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Nanjangud Srikanteshwara Temple Chikka Jathra Mahotsava 2026: Maharathotsava on November 25, Teppotsava on November 27
NANJANGUD: Preparations are underway for the 2026 Chikka Jathra Mahotsava at the famous Srikanteshwara Swamy Temple in Nanjangud, popularly known as Dakshina Kashi.
As part of the annual religious festival, three major events have been scheduled at the temple.
The Srikantamudi Utsava will be held on Sunday, November 22, at 7 pm.
The Sri Manmaharatharohana (Chariot Festival) will take place on Wednesday, November 25, between 9.20 am and 10 am.
The celebrations will conclude with the Teppotsava (Float Festival) in the Kapila River on Friday, November 27, at 7 pm.
The temple authorities have invited devotees to participate in the festivities along with their family members, friends and relatives and seek the blessings of Lord Srikanteshwara.
Appeal for Annadasoha Contributions
The temple authorities have also appealed to devotees to contribute food grains, essential provisions and cash donations towards the daily Annadasoha (free food distribution) programme conducted by the temple.
Contributions from devotees will be gratefully accepted by the temple administration.
Large numbers of devotees are expected to visit Nanjangud and participate in the religious celebrations.
