ತಿಪಟೂರು: ಮದುವೆ ಸಮಾರಂಭ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ತಿಪಟೂರು–ಅರಸೀಕೆರೆ ರಸ್ತೆಯ ಮಾದಿಹಳ್ಳಿ ಬಳಿಯ ಬಾಲಾಜಿ ಚೌಲ್ಟ್ರಿ ಮುಂಭಾಗ ನಡೆದಿದೆ.

ಗೆದ್ದಲೇಹಳ್ಳಿ ಗ್ರಾಮದ ದಿನೇಶ್ ಅವರ ಚಿಕ್ಕಪ್ಪನ ಮೊಮ್ಮಗ ಸಂಜು (23) ಹಾಗೂ ಬೈರನಾಯಕನಹಳ್ಳಿ ಗ್ರಾಮದ ಆನಂದ್ ಕುಮಾರ್ ಅವರ ಪುತ್ರ ಹರ್ಷ (23) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.

ಹರ್ಷ ಅವರು ಎಂ.ಬಿ.ಎ. ಪದವಿ ಪೂರ್ಣಗೊಳಿಸಿ ಏಷ್ಯನ್ ಕಂಪನಿಯ ಅಕೌಂಟ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇಬ್ಬರೂ ಬಾಲಾಜಿ ಚೌಲ್ಟ್ರಿಯಲ್ಲಿ ನಡೆದ ಬೈರನಾಯಕನಹಳ್ಳಿ ಗ್ರಾಮದ ಆನಂದ್ ಕುಮಾರ್ ಹಾಗೂ ಉಮೇಶ್ ಅವರ ಚಿಕ್ಕಪ್ಪನ ಮಗನ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದರು.

ಈ ಸಂದರ್ಭದಲ್ಲಿ ಚೌಲ್ಟ್ರಿ ಮುಂಭಾಗದ ಯು-ಟರ್ನ್‌ನಲ್ಲಿ ವಾಹನ ತಿರುಗಿಸುತ್ತಿದ್ದಾಗ, ಅರಸೀಕೆರೆ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಇಬ್ಬರೂ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉನ್ನತ ವಿದ್ಯಾಭ್ಯಾಸ ಪಡೆದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಂಡಿದ್ದ ಇಬ್ಬರು ಯುವಕರು ಅಕಾಲಿಕವಾಗಿ ಸಾವನ್ನಪ್ಪಿರುವುದು ಕುಟುಂಬಸ್ಥರು, ಬಂಧುಗಳು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖವನ್ನುಂಟುಮಾಡಿದೆ.

Two Young Men Killed in Horrific Accident While Returning from Wedding

Tiptur: A tragic road accident claimed the lives of two young men near Balaji Choultry at Madihalli on the Tiptur–Arsikere Road.

The deceased have been identified as Sanju (23), grandson of the paternal uncle of Dinesh from Geddelehalli village, and Harsha (23), son of Anand Kumar of Bairanayakanahalli village.

Harsha had completed his MBA and was working in the accounts department of an Asian company.

According to reports, the two young men were returning after attending a wedding ceremony held at Balaji Choultry. The wedding was of the son of the paternal uncle of Anand Kumar and Umesh, both from Bairanayakanahalli village.

While they were taking a U-turn in front of the choultry, a KSRTC bus coming from the Arsikere side reportedly rammed into their vehicle. The impact of the collision was severe, resulting in the deaths of both young men.

The untimely demise of the two youngsters, who had completed their higher education and had bright dreams for the future, has plunged their families, relatives and villagers into deep sorrow.

The tragedy has left the families devastated, while the entire village is mourning the heartbreaking loss of two young lives.

Leave a Reply