ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU), ಮೈಸೂರಿನ ಮ್ಯಾನೇಜ್ಮೆಂಟ್ ಅಧ್ಯಯನ ಮತ್ತು ಸಂಶೋಧನಾ ವಿಭಾಗವು “ಸಮಕಾಲೀನ ನಿರ್ವಹಣೆಯಲ್ಲಿನ ಸಮಸ್ಯೆಗಳು: ನಾವೀನ್ಯತೆ, ಸುಸ್ಥಿರತೆ ಮತ್ತು ಡಿಜಿಟಲ್ ರೂಪಾಂತರ” ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು (NCIM 2027) ಆಯೋಜಿಸಿದೆ.

ಈ ಸಮ್ಮೇಳನಕ್ಕೆ ICSSR-SRC, ಹೈದರಾಬಾದ್ ಪ್ರಾಯೋಜಕತ್ವ ನೀಡಿದೆ.

ದಿನಾಂಕ ಮತ್ತು ಸ್ಥಳ: 2027ರ ಜನವರಿ 29 ಮತ್ತು 30 (ಶುಕ್ರವಾರ ಮತ್ತು ಶನಿವಾರ), ಸ್ಥಳ: KSOU ಆವರಣ, ಮುಕ್ತಗಂಗೋತ್ರಿ, ಮೈಸೂರು.

ಘನ ಉಪಸ್ಥಿತಿ: ಸಮ್ಮೇಳನದಲ್ಲಿ ಪ್ರಮುಖರಾದ ಐಐಎಂ ಕಲ್ಕತ್ತಾದ ನಿರ್ದೇಶಕರಾದ ಪ್ರೊ. ಆಲೋಕ್ ಕುಮಾರ್ ರೈ, ಆರ್.ವಿ. ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ರಾಮ್ ಕುಮಾರ್ ಕಾಕನಿ, ಎಕ್ಸೆಲ್ ಸಾಫ್ಟ್ ಟೆಕ್ನಾಲಜೀಸ್ ನ ಸಿಎಂಡಿ ಶ್ರೀ ಸುಧನ್ವ ಧನಂಜಯ ಮತ್ತು ಪ್ರೆಜೆಂಟಿಮ್ ಸಂಸ್ಥಾಪಕರಾದ ಶ್ರೀ ಪ್ರದೀಪ್ ಯುವರಾಜ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.

ಸಮ್ಮೇಳನದ ಪ್ರಮುಖ ವಿಭಾಗಗಳು:

  1. ನಾವೀನ್ಯತೆ: ಉದ್ಯಮಶೀಲತೆ, ಸ್ಟಾರ್ಟಪ್, ಮಾರ್ಕೆಟಿಂಗ್, ಹಣಕಾಸು
  2. ಸುಸ್ಥಿರತೆ: ಹಸಿರು ಪೂರೈಕೆ ಸರಪಳಿ, ಸುಸ್ಥಿರ ಹಣಕಾಸು, ಪರಿಸರ
  3. ಡಿಜಿಟಲ್ ರೂಪಾಂತರ: ಕೃತಕ ಬುದ್ಧಿಮತ್ತೆ, ಬಿಸಿನೆಸ್ ಅನಾಲಿಟಿಕ್ಸ್, ಡಿಜಿಟಲ್ ಮಾರ್ಕೆಟಿಂಗ್

ಮೂಲ ಸಂಶೋಧನಾ ಪ್ರಬಂಧಗಳು, ಪ್ರಾಯೋಗಿಕ ಅಧ್ಯಯನಗಳು ಮತ್ತು ಕೇಸ್ ಸ್ಟಡಿಗಳನ್ನು ಆಹ್ವಾನಿಸಲಾಗಿದೆ. ಅತ್ಯುತ್ತಮ ಪ್ರಬಂಧಗಳಿಗೆ ಬಹುಮಾನ ನೀಡಲಾಗುವುದು.

ಮುಖ್ಯ ದಿನಾಂಕಗಳು:

  • ಸಾರಾಂಶ (Abstract) ಸಲ್ಲಿಕೆಗೆ ಕೊನೆಯ ದಿನಾಂಕ: 25 ನವೆಂಬರ್ 2026
  • ಪೂರ್ಣ ಪ್ರಬಂಧ ಸಲ್ಲಿಕೆ: 30 ಡಿಸೆಂಬರ್ 2026
  • ನೋಂದಣಿ ಕೊನೆಯ ದಿನಾಂಕ: 18 ಜನವರಿ 2027

ಸಾರಾಂಶವು 250-300 ಪದಗಳಲ್ಲಿದ್ದು, ಪೂರ್ಣ ಪ್ರಬಂಧವು 4000-6000 ಪದಗಳಲ್ಲಿ APA ಶೈಲಿಯಲ್ಲಿರಬೇಕು.

ನೋಂದಣಿ ಶುಲ್ಕ: ಅಧ್ಯಾಪಕರಿಗೆ ರೂ. 1500, ಸಂಶೋಧನಾ ವಿದ್ಯಾರ್ಥಿಗಳಿಗೆ ರೂ. 1000, ವಿದ್ಯಾರ್ಥಿಗಳಿಗೆ ರೂ. 500 ಮತ್ತು ಉದ್ಯಮದವರಿಗೆ ರೂ. 2000.

ಪ್ರಬಂಧಗಳನ್ನು ksoumist2026@gmail.com ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ

ಸಂಪರ್ಕಿಸಿ: ಯೋಗೇಶ್ – 7892172782, ತಾಹೇರಾ – 9880832022

ನೋಂದಣಿ ಲಿಂಕ್: https://forms.gle/kfwoEsMBK1CpJfbX9

ಡಾ. ಎಚ್. ರಾಜೇಶ್ವರಿ
ಚೇರ್ ಪರ್ಸನ್ ಮತ್ತು ಸಂಘಟನಾ ಕಾರ್ಯದರ್ಶಿ, ಮ್ಯಾನೇಜ್ಮೆಂಟ್ ವಿಭಾಗ, KSOU, ಮೈಸೂರು

Leave a Reply