● ಮೈಸೂರಿನ ಅತಿದೊಡ್ಡ ಯೋಜಿತ ಬಹು-ಬಾಡಿಗೆದಾರರ USGBC LEED ಗೋಲ್ಡ್ ಸರ್ಟಿಫೈಡ್ ಟೆಕ್ನಾಲಜಿ ಪಾರ್ಕ್ ಆದ ಗೋಪಾಲನ್ ಇ-ಪಾರ್ಕ್ ಅನ್ನು ನಗರದ ಮುಂದಿನ ತಂತ್ರಜ್ಞಾನ ಮತ್ತು GCC ಬೆಳವಣಿಗೆಯನ್ನು ಬೆಂಬಲಿಸಲು ಅಭಿವೃದ್ಧಿಪಡಿಸಲಾಗುತ್ತಿದೆ
ಮೈಸೂರು , ಅಕ್ಟೋಬರ್ 7, 2026: ಮೈಸೂರು ಈಗ ತಂತ್ರಜ್ಞಾನ ತಾಣವಾಗಲು ಕಾಯುತ್ತಿಲ್ಲ, ಅಲ್ಲಿ ತಾಂತ್ರಿಕ ಪರಿಸರ ವ್ಯವಸ್ಥೆ, ಪ್ರತಿಭೆ ಮತ್ತು ಸಾಮರ್ಥ್ಯ ಈಗಾಗಲೇ ಇದೆ. ಕರ್ನಾಟಕದ “ಬೆಂಗಳೂರಿನಾಚೆ” ಕಾರ್ಯಸೂಚಿ ವೇಗವನ್ನು ಪಡೆಯುತ್ತಿರುವುದರಿಂದ ಮತ್ತು ಸರ್ಕಾರವು ಬೆಂಗಳೂರಿನಾಚೆಗಿನ ಸ್ಟಾರ್ಟ್-ಅಪ್ಗಳು ಮತ್ತು ವ್ಯವಹಾರಗಳ ಬೆಳವಣಿಗೆಗೆ ಸಕ್ರಿಯವಾಗಿ ಬೆಂಬಲ ನೀಡುತ್ತಿರುವುದರಿಂದ, ಮೈಸೂರು ಜಾಗತಿಕ ಟೆಕ್ ಕಂಪನಿಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (GCC) ಸ್ವಾಗತಿಸಲು ಉತ್ತಮ ಸ್ಥಾನದಲ್ಲಿದೆ. ಮುಂದಿನ ಪೀಳಿಗೆಯ ತಂತ್ರಜ್ಞಾನ ವ್ಯವಹಾರಗಳನ್ನು ಬೆಂಬಲಿಸಲು ಅಗತ್ಯವಾದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಮೂಲಕ, ಜಾಗತಿಕ ಉದ್ಯಮಗಳು ಕೌಶಲ್ಯಪೂರ್ಣ ಪ್ರತಿಭೆಯನ್ನು ಹೊಂದಲು, ನಾವೀನ್ಯತೆ-ನೇತೃತ್ವದ ತಂಡಗಳನ್ನು ನಿರ್ಮಿಸಲು ಮತ್ತು ಮೈಸೂರಿನಲ್ಲಿ ಸುಸ್ಥಿರವಾಗಿ ಬೆಳೆಯಲು ವೇದಿಕೆಯನ್ನು ಸೃಷ್ಟಿಸುವ ಮೂಲಕ ಗೋಪಾಲನ್ ಎಂಟರ್ಪ್ರೈಸಸ್ ಈ ರೂಪಾಂತರಕ್ಕೆ ಕೊಡುಗೆ ನೀಡುತ್ತಿದೆ.
ಕಂಪನಿಯು ಕೂರ್ಗಳ್ಳಿಯಲ್ಲಿ, ಮೈಸೂರಿನ ಅತಿದೊಡ್ಡ ಯೋಜಿತ ಬಹು-ಬಾಡಿಗೆ ತಂತ್ರಜ್ಞಾನ ಉದ್ಯಾನವನವಾದ ಗೋಪಾಲನ್ ಇ-ಪಾರ್ಕ್ ಅನ್ನು 28 ಎಕರೆ ಐಟಿ/ಐಟಿಇಎಸ್ ಕ್ಯಾಂಪಸ್ ಆಗಿ ಅಭಿವೃದ್ಧಿಪಡಿಸುತ್ತಿದೆ, ಇದು ಐದು ಕಚೇರಿ ಕಟ್ಟಡಗಳಲ್ಲಿ 4 ಮಿಲಿಯನ್ ಚದರ ಅಡಿಗಿಂತ ಹೆಚ್ಚು ಯೋಜಿತ ನಿರ್ಮಿತ ಪ್ರದೇಶವನ್ನು ಹೊಂದಿದೆ.
ಮೈಸೂರು ನಗರದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಇನ್ಫೋಸಿಸ್, ವಿಪ್ರೋ, ಎಲ್ಟಿಐಮೈಂಡ್ಟ್ರೀ, ಆರಿಸ್ಗ್ಲೋಬಲ್ ಮತ್ತು ಬಯೋಕ್ಲಿನಿಕಾ ಮುಂತಾದ ಕಂಪನಿಗಳ ಮೂಲಕ ಸ್ಥಾಪಿತವಾಗಿರುವ ತಾಂತ್ರಿಕ ಪರಿಸರ ವ್ಯವಸ್ಥೆಗೆ ಪೂರಕವೆಂಬಂತೆ ಈ ಅಭಿವೃದ್ಧಿ ಆಗುತ್ತಿದೆ. ಈ ಕಾರ್ಪೊರೇಟ್ ಉಪಸ್ಥಿತಿಯ ಜೊತೆಗೆ ತಂತ್ರಜ್ಞಾನ, ಬ್ಯಾಂಕಿಂಗ್, ಟೆಲಿಕಾಂ ಸಾಫ್ಟ್ವೇರ್, ಲೈಫ್ಸೈನ್ಸ್ ಮತ್ತು ಆರೋಗ್ಯ ಸೇವೆಗಳನ್ನು ಒಳಗೊಂಡು ಬೆಳೆಯುತ್ತಿರುವ ಐಟಿ/ಐಟಿಇಎಸ್ ಪರಿಸರ ವ್ಯವಸ್ಥೆಯೂ ಇದೆ.
ಕರ್ನಾಟಕದ 2026–27ರ ಬಜೆಟ್, ಮೈಸೂರನ್ನು ರಾಜ್ಯದ ಎರಡನೇ ಐಟಿ ನಗರವೆಂದು ಗುರುತಿಸುವುದರೊಂದಿಗೆ, ತಂತ್ರಜ್ಞಾನ ವ್ಯವಹಾರಗಳನ್ನು ಆಕರ್ಷಿಸುವುದರ ಹೊರತಾಗಿ ಅವುಗಳನ್ನು ಸ್ಥಾಪಿಸಲು, ವಿಸ್ತರಿಸಲು ಮತ್ತು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುವ ಮೂಲಸೌಕರ್ಯವನ್ನು ರಚಿಸುವ ಅವಕಾಶಗಳನ್ನು ಸೃಷ್ಟಿಸುವೆಡೆ ಬದಲಾಗುತ್ತಿದೆ.
ಮುಂದಿನ ತಂತ್ರಜ್ಞಾನ ಅವಕಾಶಗಳು ಸಂವರ್ಧನೆ ಕೇಂದ್ರಿತವಾಗಿವೆ.
ತಂತ್ರಜ್ಞಾನ ಕಂಪನಿಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿಗಳು), ಸ್ಥಳದ ನಿರ್ಧಾರಗಳನ್ನು ಮಾಡುವಾಗ ಕೇವಲ ವೆಚ್ಚ ಅಥವಾ ಸ್ಥಾಪಿತ ಕೇಂದ್ರಗಳ ಸಾಮೀಪ್ಯವನ್ನು ಪರಿಗಣಿಸುವುದಿಲ್ಲ. ಪ್ರತಿಭೆ, ಸಂಪರ್ಕ, ನಿರ್ವಹಣಾ ವೆಚ್ಚಗಳು, ಜೀವನದ ಗುಣಮಟ್ಟ ಮತ್ತು ಅಳೆಯಬಹುದಾದ ಗ್ರೇಡ್-ಎ ಕಾರ್ಯಕ್ಷೇತ್ರದ ಪ್ರವೇಶವು ವಿಸ್ತರಣಾ ನಿರ್ಧಾರಗಳಿಗೆ ನಿರ್ಣಾಯಕವಾಗುತ್ತಿದೆ.
ಈ ಅವಶ್ಯಕತೆಗೆ ಅನುಗುಣವಾಗಿ ಗೋಪಾಲನ್ ಇ-ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಐದು ಕಚೇರಿ ಬ್ಲಾಕ್ಗಳು, ದೊಡ್ಡ ಫ್ಲೋರ್ ಪ್ಲೇಟ್ಗಳು ಮತ್ತು ಮೀಸಲಾದ ಕೆಫೆಟೇರಿಯಾ ಮತ್ತು ಮೂಲಸೌಕರ್ಯಗಳ ಬ್ಲಾಕ್ನೊಂದಿಗೆ, ಸಂವರ್ಧಿಸಬಹುದಾದ ವಾಣಿಜ್ಯ ಮೂಲಸೌಕರ್ಯವನ್ನು ಬಯಸುವ ಉದ್ಯಮಗಳಿಗೆ ಕ್ಯಾಂಪಸ್ ನೇತೃತ್ವದ ವಾತಾವರಣವನ್ನು ಸೃಷ್ಟಿಸುತ್ತದೆ.
ಗೋಪಾಲನ್ ಎಂಟರ್ಪ್ರೈಸಸ್ನ ವಾಣಿಜ್ಯ ವ್ಯವಹಾರದ ಉಪಾಧ್ಯಕ್ಷರಾದ ಚಂದ್ರಶೇಖರ್ ಜಿವಿ ಮಾತನಾಡುತ್ತಾ: “ಮೈಸೂರಿನಲ್ಲಿ ನಾವು ಶೂನ್ಯದಿಂದ ಪ್ರಾರಂಭಿಸುತ್ತಿಲ್ಲ. ಈಗಾಗಲೇ ತಂತ್ರಜ್ಞಾನ ಪರಿಸರ ವ್ಯವಸ್ಥೆ, ಕಾರ್ಪೊರೇಟ್ ಉಪಸ್ಥಿತಿ ಮತ್ತು ಪ್ರತಿಭೆ ಇಲ್ಲಿವೆ. ನಗರಕ್ಕೆ ಈಗ ಬೇಕಾಗಿರುವುದು ಅದರ ಮಹತ್ವಾಕಾಂಕ್ಷೆಯನ್ನು ಪೂರೈಸುವ ಮತ್ತು ವ್ಯವಹಾರಗಳು ಸಂವರ್ಧಿಸಲು ಅನುವು ಮಾಡಿಕೊಡುವ ಮೂಲಸೌಕರ್ಯ. ಇವೆರೆಡರ ನಡುವಿನ ಅಂತರವನ್ನು ಕಡಿಮೆ ಮಾಡಲೆಂದೆ ಗೋಪಾಲನ್ ಇ-ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದ” ಎಂದರು.
ಮೈಸೂರನ್ನು ಮೀರಿ ವಿಸ್ತರಿಸುವ ಪ್ರತಿಭೆಗಳ ಪಡೆ
ಮೈಸೂರಿನ ಮಹತ್ವ ಅದರ ಪ್ರತಿಭಾ ಸಂಗ್ರಹವನ್ನು ಮೀರಿ ವಿಸ್ತರಿಸಿದೆ. ಬೆಂಗಳೂರು,ಸಂಪೂರ್ಣ ಕರ್ನಾಟಕ, ತಮಿಳುನಾಡು ಮತ್ತು ಕೇರಳದೊಂದಿಗೆ ಇದು ಹೊಂದಿರುವ ಸಂಪರ್ಕವು ತಂತ್ರಜ್ಞಾನ ಕಂಪನಿಗಳಿಗೆ ವಿಶಾಲವಾದ ಪ್ರಾದೇಶಿಕ ಪ್ರತಿಭೆಯ ಸಾಮರ್ಥ್ಯವನ್ನು ಒದಗಿಸುತ್ತದೆ. ಕಂಪನಿಗಳು ಮತ್ತು ಜಿಸಿಸಿಗಳಿಗೆ, ಇದು ಕರ್ನಾಟಕ, ತಮಿಳುನಾಡು ಮತ್ತು ಕೇರಳದಾದ್ಯಂತ ವಿತರಿಸಿದ ತಂಡಗಳನ್ನು ನಿರ್ಮಿಸಲು ಅವಕಾಶವನ್ನು ಸೃಷ್ಟಿಸುವುದರ ಜೊತೆಗೆ, ಉದ್ಯೋಗಿಗಳಿಗೆ ಹೆಚ್ಚುತ್ತಿರುವ ಬೆಂಗಳೂರಿನ ದಟ್ಟ ನಗರ ಪರಿಸರ ವ್ಯವಸ್ಥೆಗೆ ಪರ್ಯಾಯವನ್ನು ಒದಗಿಸುತ್ತದೆ.
ಟೆಕ್ ಕಂಪನಿಗಳು, ತಂತ್ರಜ್ಞಾನ ಕಾರ್ಯಾಚರಣೆಗಳು, ಎಂಜಿನಿಯರಿಂಗ್ ಮತ್ತು ಆರ್ & ಡಿ, ಡಿಜಿಟಲ್ ಸೇವೆಗಳು ಮತ್ತು ವಿಶೇಷ ಕಾರ್ಯಗಳಿಗಾಗಿ ಬಹು-ನಗರ ಕಾರ್ಯಾಚರಣಾ ಮಾದರಿಗಳನ್ನು ಅನ್ವೇಷಿಸುತ್ತಾ, ವಿಭಿನ್ನ ಸ್ಥಳಗಳನ್ನು ಬಳಸುತ್ತಿರುವುದರಿಂದ ಇದು ವಿಶೇಷವಾಗಿ ಪ್ರಸ್ತುತವಾಗಬಹುದು.
ಬೆಂಗಳೂರು + ಮೈಸೂರು: ಒಂದಕ್ಕೊಂದು ಪೂರಕ, ಪರ್ಯಾಯವಲ್ಲ
ಮೈಸೂರಿನ ಅವಕಾಶವು ಬೆಂಗಳೂರಿಗೆ ಮಾರಕವಲ್ಲ, ಬದಲಾಗಿ ಅದಕ್ಕೆ ಪೂರಕವಾಗಿದೆ ಎಂದು ಗೋಪಾಲನ್ ನಂಬುತ್ತದೆ. ಬೆಂಗಳೂರು ಕರ್ನಾಟಕದ ಜಾಗತಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆಗೆ ಆಧಾರ ಸ್ಥಂಭವಾಗಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಬಹುದು, ಆದರೆ ಮೈಸೂರು ತಮ್ಮ ಕಾರ್ಯಾಚರಣಾ ಹೆಜ್ಜೆಗುರುತನ್ನು ವೈವಿಧ್ಯಗೊಳಿಸಲು ಬಯಸುವ ಕಂಪನಿಗಳಿಗೆ ಹೆಚ್ಚುವರಿ ಸಾಮರ್ಥ್ಯ, ಪ್ರತಿಭೆ ಮತ್ತು ಮೂಲಸೌಕರ್ಯವನ್ನು ಒದಗಿಸಬಹುದು.
ಬೆಂಗಳೂರಿನಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಕಂಪನಿಗಳಿಗೆ, ಮೈಸೂರು ಸಂಪರ್ಕಿತ ತಂತ್ರಜ್ಞಾನ ಕಾರಿಡಾರ್ ಆಗಿ ಉಳಿದುಕೊಂಡು ಎರಡನೇ ಕಾರ್ಯಾಚರಣಾ ಮತ್ತು ಪ್ರತಿಭಾ ಕೇಂದ್ರವಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ನೀಡುತ್ತದೆ.
“ಕರ್ನಾಟಕದ ತಂತ್ರಜ್ಞಾನ ಆರ್ಥಿಕತೆಯ ಭವಿಷ್ಯವು ಬೆಂಗಳೂರು vs ಮೈಸೂರು ಆಗಬೇಕೆಂದಿಲ್ಲ. ಅದು ಬೆಂಗಳೂರು ಮತ್ತು ಮೈಸೂರು ಆಗಿರಬಹುದು – ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುವ ಎರಡು ಸಂಪರ್ಕಿತ ಪರಿಸರ ವ್ಯವಸ್ಥೆಗಳು. ಮೈಸೂರಿಗೆ ಈಗಾಗಲೇ ಅಡಿಪಾಯವಿದೆ. ಆ ಅಡಿಪಾಯದ ಮೇಲೆ ಬೆಳೆಯಲು ಅನುವು ಮಾಡಿಕೊಡುವ ಮೂಲಸೌಕರ್ಯವನ್ನು ನಿರ್ಮಿಸುವ ಅವಕಾಶ ಈಗ ಒದಗಿ ಬಂದಿದೆ, ”ಎಂದು ಗೋಪಾಲನ್ ಎಂಟರ್ಪ್ರೈಸಸ್ನ ನಿರ್ದೇಶಕ ಶ್ರೀ ಪ್ರಭಾಕರ್ ಚೆರಿಯತ್ ಹೇಳಿದರು.
