ಮೈಸೂರು: ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ, ಮೈಸೂರು ಘಟಕದ ವತಿಯಿಂದ ಡಿಸೆಂಬರ್ 10ರಿಂದ ಐದು ದಿನಗಳ ಕಾಲ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ‘ಮೈ ಬಿಲ್ಡ್ ಎಕ್ಸ್‌ಪೋ’ ಅಂಗವಾಗಿ ಡಿಸೆಂಬರ್ 13ರಂದು ಹವ್ಯಾಸಿ ಗಾಯಕರಿಗೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ.

30 ವರ್ಷ ಮೇಲ್ಪಟ್ಟ ಆಸಕ್ತ ಹವ್ಯಾಸಿ ಗಾಯಕರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರಿಗೆ ನವೆಂಬರ್ 30ರಂದು ಬೆಳಿಗ್ಗೆ 10.30ಕ್ಕೆ ಅಕ್ಕಮಹಾದೇವಿ ರಸ್ತೆ (ಸ್ಟರ್ಲಿಂಗ್ ಥಿಯೇಟರ್ ರಸ್ತೆ)ಯಲ್ಲಿರುವ ಎಂ.ಬಿ.ಸಿ.ಟಿ. ಸಭಾಂಗಣದಲ್ಲಿ ತೀರ್ಪುಗಾರರ ಉಪಸ್ಥಿತಿಯಲ್ಲಿ ಆಡಿಷನ್ ನಡೆಸಲಾಗುತ್ತದೆ.

ಆಸಕ್ತರು ತಮ್ಮ ಹೆಸರು, ದೂರವಾಣಿ ಸಂಖ್ಯೆ ಹಾಗೂ ವಯಸ್ಸಿನ ವಿವರಗಳನ್ನು ನೀಡಿ ನವೆಂಬರ್ 28ರೊಳಗೆ ನೋಂದಾಯಿಸಿಕೊಳ್ಳಬೇಕು. ಮೊದಲ 30 ಸ್ಪರ್ಧಿಗಳಿಗೆ ಮಾತ್ರ ಅವಕಾಶವಿರುತ್ತದೆ.

ಸ್ಪರ್ಧೆಯಲ್ಲಿ ಕನ್ನಡ ಹಾಡುಗಳಿಗೆ ಮಾತ್ರ ಅವಕಾಶವಿದ್ದು, ಚಲನಚಿತ್ರ ಗೀತೆಗಳು ಅಥವಾ ಭಾವಗೀತೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸ್ಪರ್ಧಿಗಳು ತಮ್ಮದೇ ಆದ ಶ್ರುತಿ ಪೆಟ್ಟಿಗೆ ಅಥವಾ ಕರೋಕೆ ಟ್ರ್ಯಾಕ್ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ಆಯೋಜಕರು ತಿಳಿಸಿದ್ದಾರೆ.

Singing Competition for Amateur Singers at My Build Expo

Mysuru: The Mysuru Centre of the Builders Association of India (BAI) is organising a singing competition for amateur singers on December 13 as part of the five-day ‘My Build Expo’, scheduled to be held from December 10 at Maharaja’s College Grounds in the city.

Amateur singers aged above 30 years are eligible to participate in the competition. Attractive prizes will be awarded to the winners.

An audition will be conducted in the presence of judges on November 30 at 10.30 a.m. at the MBCT Hall on Akkamahadevi Road (Sterling Theatre Road), Mysuru.

Interested participants must register by November 28 by providing their name, contact number and age. Only the first 30 applicants will be allowed to participate.

Only Kannada songs are permitted. Participants can choose either Kannada film songs or light music (Bhavageethe). Contestants must make their own arrangements for a shruti box or karaoke track, the organisers have stated.

For registration and further details, contact:

  • 7348817373
  • 9480733202

ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ:
7348817373, 9480733202

Leave a Reply