ಸುದ್ದಿ

ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ…
ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ…
ನಾಲ್ವಡಿ ಪ್ರಶಸ್ತಿ: ಕನ್ನಡ ಹೋರಾಟಗಾರರ ಕಡೆಗಣನೆ; ಸಹಾಯ ನಿರ್ದೇಶಕರ ಅಮಾನತಿಗೆ ತೇಜಸ್ವಿ ಆಗ್ರಹ
ನಾಲ್ವಡಿ ಪ್ರಶಸ್ತಿ: ಕನ್ನಡ ಹೋರಾಟಗಾರರ ಕಡೆಗಣನೆ; ಸಹಾಯ ನಿರ್ದೇಶಕರ ಅಮಾನತಿಗೆ ತೇಜಸ್ವಿ ಆಗ್ರಹ
ಸುಣ್ಣದಕೇರಿ 50 ನೇ ವಾರ್ಡ್‌ನಲ್ಲಿ ಪಾರಂಪರಿಕ ದೀಪಗಳು ಒಂದು ದಿನವೂ ಬೆಳಗಲಿಲ್ಲ…!ಮೈಸೂರು ಪಾಲಿಕೆಯ ನಿರರ್ಥಕ ಯೋಜನೆಗೆ ಒಂದು ಸಾಕ್ಷಿ: ಲಕ್ಷಾಂತರ ರುಪಾಯಿ ಪೋಲು
ಸುಣ್ಣದಕೇರಿ 50 ನೇ ವಾರ್ಡ್‌ನಲ್ಲಿ ಪಾರಂಪರಿಕ ದೀಪಗಳು ಒಂದು ದಿನವೂ ಬೆಳಗಲಿಲ್ಲ…!ಮೈಸೂರು ಪಾಲಿಕೆಯ ನಿರರ್ಥಕ ಯೋಜನೆಗೆ ಒಂದು ಸಾಕ್ಷಿ: ಲಕ್ಷಾಂತರ ರುಪಾಯಿ ಪೋಲು
ಆಮ್ ಆದ್ಮಿ, ಪಕ್ಷ ಬಲಪಡಿಸಲು ಸದಸ್ಯತ್ವ ಮಾಡಿಸಿ : 50 ನೇ ವಾರ್ಡ್ ಯುವ ಮುಖಂಡ ಹೇಮಂತ್ ಕುಮಾರ್
ಆಮ್ ಆದ್ಮಿ, ಪಕ್ಷ ಬಲಪಡಿಸಲು ಸದಸ್ಯತ್ವ ಮಾಡಿಸಿ : 50 ನೇ ವಾರ್ಡ್ ಯುವ ಮುಖಂಡ ಹೇಮಂತ್ ಕುಮಾರ್
ದಸರಾ ದೀಪಾಲಂಕಾರವು ಕೆಲುವು ರಸ್ತೆ ಹಾಗೂ ಸರ್ಕಲ್‌ಗಳಿಗೆ ಮಾತ್ರ ಅಳವಡಿಸಿ:ಆಮ್ ಆದ್ಮಿ ಪಾರ್ಟಿ ಯುವ ಮುಖಂಡ ಹೇಮಂತ್ ಕುಮಾರ್ ಒತ್ತಾಯ
ದಸರಾ ದೀಪಾಲಂಕಾರವು ಕೆಲುವು ರಸ್ತೆ ಹಾಗೂ ಸರ್ಕಲ್‌ಗಳಿಗೆ ಮಾತ್ರ ಅಳವಡಿಸಿ:ಆಮ್ ಆದ್ಮಿ ಪಾರ್ಟಿ ಯುವ ಮುಖಂಡ ಹೇಮಂತ್ ಕುಮಾರ್ ಒತ್ತಾಯ
ತನ್ನ ದುರಾಡಳಿತದಿಂದ ಕೇವಲ 10 ತಿಂಗಳುಗಳಲ್ಲಿ ಕರ್ನಾಟಕವನ್ನು ಹಾಳುಗೆಡುವಿದ ಕಾಂಗ್ರೆಸ್
ತನ್ನ ದುರಾಡಳಿತದಿಂದ ಕೇವಲ 10 ತಿಂಗಳುಗಳಲ್ಲಿ ಕರ್ನಾಟಕವನ್ನು ಹಾಳುಗೆಡುವಿದ ಕಾಂಗ್ರೆಸ್
ಎಲ್ಲಾ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕರ್ನಾಟಕದ ಜನತೆ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಲಿದ್ದಾರೆ.
ಎಲ್ಲಾ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕರ್ನಾಟಕದ ಜನತೆ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಲಿದ್ದಾರೆ.
ಯಾವುದಾದರೂ ರಾಜಕೀಯ ಪಕ್ಷ SC,ST,OBC ಮೀಸಲಾತಿಯನ್ನು ಲೂಟಿ ಮಾಡಿದ್ದರೆ, ಅದು ಕಾಂಗ್ರೆಸ್ ಪಕ್ಷ ಮಾತ್ರ: ಅಮಿತ್ ಶಾ
ಯಾವುದಾದರೂ ರಾಜಕೀಯ ಪಕ್ಷ SC,ST,OBC ಮೀಸಲಾತಿಯನ್ನು ಲೂಟಿ ಮಾಡಿದ್ದರೆ, ಅದು ಕಾಂಗ್ರೆಸ್ ಪಕ್ಷ ಮಾತ್ರ: ಅಮಿತ್ ಶಾ
50 ನೇ ವಾರ್ಡ್ ಸುಣ್ಣದಕೇರಿ ಮಾದರಿವಾರ್ಡ್ ಮಾಡುವ ಬಯಕೆ ಮಹೇಶ್ ರವರ ಗೆಳೆಯರ ಬಳಗ
50 ನೇ ವಾರ್ಡ್ ಸುಣ್ಣದಕೇರಿ ಮಾದರಿವಾರ್ಡ್ ಮಾಡುವ ಬಯಕೆ ಮಹೇಶ್ ರವರ ಗೆಳೆಯರ ಬಳಗ
ಕಣ್ಮನ ಸೆಳೆಯುವ ಯೋಗ ಭಂಗಿ
ಕಣ್ಮನ ಸೆಳೆಯುವ ಯೋಗ ಭಂಗಿ
ಪ್ರಧಾನಿ ಮೋದಿಯವರ 3ನೇ ಅವಧಿಯಲ್ಲಿ ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ: ಅಮಿತ್ ಶಾ
ಪ್ರಧಾನಿ ಮೋದಿಯವರ 3ನೇ ಅವಧಿಯಲ್ಲಿ ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ: ಅಮಿತ್ ಶಾ
ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಉಜ್ಜಯಿನಿಯ ಬಾಬಾ ಮಹಾಕಾಲ್ ಮಂದಿರಕ್ಕೆ ಭೇಟಿ
ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಉಜ್ಜಯಿನಿಯ ಬಾಬಾ ಮಹಾಕಾಲ್ ಮಂದಿರಕ್ಕೆ ಭೇಟಿ
ಬೆಳೆ ಸಮೀಕ್ಷೆ ತಿದ್ದುಪಡಿ, ಆಕ್ಷೇಪಣೆಗೆ ಅವಕಾಶ : ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ವೈ. ಪ್ರಸಾದ್.,
ಬೆಳೆ ಸಮೀಕ್ಷೆ ತಿದ್ದುಪಡಿ, ಆಕ್ಷೇಪಣೆಗೆ ಅವಕಾಶ : ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ವೈ. ಪ್ರಸಾದ್.,
ಮುಂದಿನ 2 ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗುವುದ: ಅಮಿತ್ ಶಾ ಪ್ರತಿಜ್ಞೆ
ಮುಂದಿನ 2 ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗುವುದ: ಅಮಿತ್ ಶಾ ಪ್ರತಿಜ್ಞೆ
ಭಯೋತ್ಪಾದನೆಯ ಪರಿಸರ ವ್ಯವಸ್ಥೆಯನ್ನು ನಾಶಪಡಿಸಿ ಅದನ್ನು ಬೇರುಸಹಿತ ಕಿತ್ತೊಗೆಯಬೇಕು – ಅಮಿತ್ ಶಾ
ಭಯೋತ್ಪಾದನೆಯ ಪರಿಸರ ವ್ಯವಸ್ಥೆಯನ್ನು ನಾಶಪಡಿಸಿ ಅದನ್ನು ಬೇರುಸಹಿತ ಕಿತ್ತೊಗೆಯಬೇಕು – ಅಮಿತ್ ಶಾ

ಮೈಸೂರು

ಉಲ್ಬಣಿಸುತ್ತಿದೆ ಯುಜಿಡಿ ಸಮಸ್ಯೆ: 50 ನೇ ವಾರ್ಡ್ ನಿವಾಸಿಗಳ ಆಕ್ರೋಶ
ಉಲ್ಬಣಿಸುತ್ತಿದೆ ಯುಜಿಡಿ ಸಮಸ್ಯೆ: 50 ನೇ ವಾರ್ಡ್ ನಿವಾಸಿಗಳ ಆಕ್ರೋಶ

ಮೈಸೂರು : ಸುಣ್ಣದಕೇರಿ ೫೦ನೇ ವಾರ್ಡ್ ಒಳಚರಂಡಿ ವ್ಯವಸ್ಥೆ ಪ್ರತಿನಿತ್ಯ ನಗರದ ಒಂದಿಲ್ಲೊಂದು ಭಾಗದಲ್ಲಿ ಸಮಸ್ಯೆಯನ್ನು ಸೃಷ್ಟಿಸಿ ಸಾರ್ವಜನಿಕರ ಪಾಲಿಗೆ ನಗರಜೀವನವನ್ನು ನರಕಪ್ರಾಯವಾಗಿಸುತ್ತಿದೆ.ನಗರದ ಪ್ರಮುಖ ರಸ್ತೆಯಲ್ಲಿ ಸುಣ್ಣದಕೇರಿ 5ನೇ ಕ್ರಾಸ್, 10ನೇ ಕ್ರಾಸ್, 8ನೇ ಕ್ರಾಸ್ ಸಿದ್ದಪ್ಪಾಜಿ ದೇವಾಲಯದ ಬಳಿ ಯುಜಿಡಿ ಮ್ಯಾನ್‌ಹೋಲ್‌ನಿಂದ ಇದ್ದಕ್ಕಿದ್ದಂತೆ ಒಳಚರಂಡಿ ಕೊಳಕು ಹೊರಬರಲಾರಂಭಿಸಿತು. ಆ ಪ್ರದೇಶವೆಲ್ಲ ಸಹಿಸಲಸಾಧ್ಯವಾದ ದುರ್ನಾತದಿಂದ ತುಂಬಿಹೋಗಿತ್ತು. ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಸ್ತೆಯಲ್ಲಿ ಉಂಟಾದ ಈ ದಿಢೀರ್ ಸಮಸ್ಯೆಯಿಂದ ಉಸಿರಾಡುವುದೇ ಕಷ್ಟವೆನಿಸುವಂತಾಗಿತ್ತು. ರಸ್ತೆಯ ಮೇಲೆ ಹರಿದ ಕೊಳಕು ನೀರು ವಾಹನಗಳ ಓಡಾಟದಿಂದ ಇಡೀ ರಸ್ತೆಯೆಲ್ಲ ಹರಡಿದ್ದಲ್ಲದೇ, ವಾಹನಗಳಿಗೂ ಮೆತ್ತಿಕೊಂಡು ದುರ್ನಾತದಿಂದ ಸಾರ್ವಜನಿಕರು ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ.

ವಾಟ್ಸಪ್ ಮೊರೆ: ಸಮಸ್ಯೆಯ ಬಗ್ಗೆ ತಕ್ಷ ಣವೇ ಸಾರ್ವಜನಿಕರು ಮೈಸೂರು ನಗರ ಪಾಲಿಕೆ ಆಯುಕ್ತ ಶೇಖ್ ಆಸೀಫ್ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿಸುವ ಪ್ರಯತ್ನ ಮಾಡಿದರಾದರೂ ಆಯುಕ್ತರು ಕರೆ ಸ್ವೀಕರಿಸಲಿಲ್ಲ. ಮಾಧ್ಯಮದವರ ಗಮನ ಸೆಳೆದ ಸಾರ್ವಜನಿಕರೊಬ್ಬರು ಕೊನೆಗೆ ನಗರ ಪಾಲಿಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಚಿತ್ರಣಗಳು ಕಳುಹಿಸಿದ್ದು ಯಾವುದೇ ಪ್ರಯೋಜನ ಹಾಗಿಲ್ಲ ಅಧಿಕಾರಿಗಳು ಯುಜಿಡಿ ಸಮಸ್ಯೆ ಪರಿಹಾರಕ್ಕೆ ಮೀನಮೇಷ ಎಣಿಸುತ್ತಿದ್ದಾರೆ.೫೦ನೇ ವಾರ್ಡ್ ನಲ್ಲಿ ಇದಕ್ಕೆ ಶಾಶ್ವತ ಪರಿಹಾರ ನೀಡುವಂತೆ ಸ್ಥಳೀಯರು ತಮ್ಮ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.

ಹೇಮಂತ್ ಕುಮಾರ್
೫೦ ನೇ ವಾರ್ಡ್ ನಿವಾಸಿ
‘ಯುಜಿಡಿ ಅವ್ಯವಸ್ಥೆಯಿಂದ ಇಡೀ ಬಡಾವಣೆ ಕೊಳೆಗೇರಿಯಂತಾಗಿದೆ. ಮ್ಯಾನ್‌ಹೋಲ್‌ಗಳಿಂದ ಕೊಳಚೆ ನೀರು ಹಾಗೂ ಮಲಮೂತ್ರ ರಸ್ತೆಗೆ ಹರಿಯುತ್ತಿದ್ದು, ಬಡಾವಣೆಯಲ್ಲಿ ದುರ್ನಾತ ಹೆಚ್ಚಿದೆ. ರಸ್ತೆಗಳಲ್ಲಿ ಓಡಾಡಲು ಸ್ಥಳೀಯರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿದೆ’

ಮಹೇಶ್ ನಾಯಕ್
೫೦ ನೇ ವಾರ್ಡ್ ನಿವಾಸಿ
ಸುವರ್ಣ ಬೆಳಕು ಫೌಂಡೇಷನ್’ ಅಧ್ಯಕ್ಷರು

ಯುಜಿಡಿ ಸಮಸ್ಯೆ ಎಲ್ಲಿ ಯಾವ ಭಾಗದಲ್ಲಿ ಹೆಚ್ಚು ಹೆಚ್ಚು ಆಗುತ್ತಿದೆ. ಅಲ್ಲಿನ ಸ್ಥಳಕ್ಕೆ ಸಂಬಂಧ ಪಟ್ಟ ಇಂಜಿನಿಯರ್’ ಗಳು
ಬಂದು ಪರೀಶೀಲನೆ ಮಾಡಿ ಅದಕ್ಕೆ ಸೂಕ್ತ ಪರಿಹಾರ ನೀಡಿ ಕಂಡುಕೊಳ್ಳಬಹುದು. ಅದರೆ ಇಂಜಿನಿಯರ್’ ಗಳು ಸಂಬಂಧ ಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಳ್ಳತ್ತಿಲ್ಲ.ಈಗ ಇನ್ನೂ ಮಳೆಗಾಲ ಪ್ರಾರಂಭ ಗೊಳ್ಳುತ್ತಿದೆ. ಅದಷ್ಟು ಬೇಗ ಪರಿಹಾರ ಕಂಡು ಕೊಂಡರೆ ಒಳ್ಳೆಯದು.

ಮೈಸೂರಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಿಲ್ಕ್ ಇಂಡಿಯಾ ಮೇಳಕ್ಕೆ ಚಾಲನೆ
ಮೈಸೂರಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಿಲ್ಕ್ ಇಂಡಿಯಾ ಮೇಳಕ್ಕೆ ಚಾಲನೆ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಎಸ್ ರಂಗನಾಥ ಆಯ್ಕೆ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಎಸ್ ರಂಗನಾಥ ಆಯ್ಕೆ
ಸುಣ್ಣದಕೇರಿ 50 ನೇ ವಾರ್ಡ್‌ನಲ್ಲಿ ಪಾರಂಪರಿಕ ದೀಪಗಳು ಒಂದು ದಿನವೂ ಬೆಳಗಲಿಲ್ಲ…!ಮೈಸೂರು ಪಾಲಿಕೆಯ ನಿರರ್ಥಕ ಯೋಜನೆಗೆ ಒಂದು ಸಾಕ್ಷಿ: ಲಕ್ಷಾಂತರ ರುಪಾಯಿ ಪೋಲು
ಸುಣ್ಣದಕೇರಿ 50 ನೇ ವಾರ್ಡ್‌ನಲ್ಲಿ ಪಾರಂಪರಿಕ ದೀಪಗಳು ಒಂದು ದಿನವೂ ಬೆಳಗಲಿಲ್ಲ…!ಮೈಸೂರು ಪಾಲಿಕೆಯ ನಿರರ್ಥಕ ಯೋಜನೆಗೆ ಒಂದು ಸಾಕ್ಷಿ: ಲಕ್ಷಾಂತರ ರುಪಾಯಿ ಪೋಲು

ರಾಜ್ಯ

ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ…
ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ…

ಮೈಸೂರು : ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ. ವಿದ್ಯಾರ್ಥಿ ದೆಸೆಯಲ್ಲಿಯೇ ಪಠ್ಯೇತರ ಚಟುವಟಿಕೆಗೆ ಒತ್ತು ನೀಡಿ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅಥ್ಲೆಟಿಕ್ ನಲ್ಲಿ ಸಾಧನೆ ಮಾಡುತ್ತಾ ಇದಾದ ನಂತರ ಬಾಕ್ಸಿಂಗ್ ನತ್ತ ಗಮನಹರಿಸಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಸಲುವಾಗಿ ಕಠಿಣ ಪರಿಶ್ರಮ ಪಡುತ್ತಿರುವ ಭರವಸೆಯ ಕ್ರೀಡಾ ವಿದ್ಯಾರ್ಥಿನಿ ಮೈಸೂರಿನ ಮಹಾರಾಜ ಕಾಲೇಜಿನ ಸಿ.ಹೆಚ್.ಸ್ಪೂರ್ತಿ..ನಿಜಹೇಳಬೇಕೆಂದರೆ ಕ್ರೀಡೆ ಎನ್ನುವುದು ಒಂದು ದಿನದಲ್ಲಿ ಮುಗಿದು ಹೋಗುವುದಲ್ಲ. ಇದು ನಿರಂತರ ಪ್ರಕ್ರಿಯೆ… ಇದಕ್ಕಾಗಿ ಪ್ರತಿದಿನವೂ ಕಠಿಣ ತರಬೇತಿಯೊಂದಿಗೆ ಅಭ್ಯಾಸ ಮಾಡುತ್ತಲೇ ಇರಬೇಕಾಗುತ್ತದೆ. ಹೀಗಾಗಿ ಇದೊಂದು ತಪಸ್ಸು ಎಂದರೆ ತಪ್ಪಾಗಲಾರದು. ಕ್ರೀಡೆಯನ್ನು ಅದರಲ್ಲೂ ಅಥ್ಲೆಟಿಕ್ ನ್ನು ಆಯ್ಕೆ ಮಾಡಿಕೊಂಡು ಸಾಧನೆ ಮಾಡುವುದು ಸುಲಭದ ಕೆಲಸವಲ್ಲ. ಜತೆಗೆ ಅದರಲ್ಲಿ ಅವಕಾಶ ಗಿಟ್ಟಿಸಿಕೊಂಡು ಮುನ್ನಡೆಯುವುದು ಸವಾಲ್ ಆಗಿದೆ.

ಸಾಮಾನ್ಯವಾಗಿ ಬಾಲ್ಯದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕ್ರೀಡಾ ಬದುಕು ಓಟದಿಂದಲೇ ಆರಂಭವಾಗುತ್ತದೆ. ಆ ನಂತರ ಅದು ಮಗ್ಗಲು ಬದಲಿಸಿ ತಮಗೆ ಇಷ್ಟವಾಗಿದ್ದನ್ನು ಆಯ್ಕೆ ಮಾಡುವ ಹಂತಕ್ಕೆ ಹೋಗುತ್ತದೆ. ಆದರೆ ಪ್ರತಿಯೊಬ್ಬ ಕ್ರೀಡಾಪಟು ಓಟವನ್ನು ಬದಿಗಿಟ್ಟು ಮುನ್ನಡೆಯುವುದು ಕಷ್ಟ. ಓಡುತ್ತಲೇ ಕ್ರೀಡಾ ಬದುಕಿನ ಓಟವನ್ನು ಮುನ್ನಡೆಸುವುದು ಅನಿವಾರ್ಯವಾಗುತ್ತದೆ. ಇವತ್ತು ವಿದ್ಯಾರ್ಥಿನಿ ಸ್ಪೂರ್ತಿ ಅವರ ಕ್ರೀಡಾ ಬದುಕಿನ ಪುಟಗಳನ್ನು ತಿರುವಿ ಹಾಕಿದರೆ ಅವರು ಮಾಡಿರುವ ಸಾಧನೆ ಮತ್ತು ಮುಂದೆಯೂ ಸಾಧಿಸಿಬೇಕೆನ್ನುವ ಛಲ ಎದ್ದು ಕಾಣಿಸುತ್ತದೆ.

ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಚಿಕ್ಕೋನಹಳ್ಳಿ ಗ್ರಾಮದ ನಿವಾಸಿ ಹನುಮೇಗೌಡ, ಮತ್ತು ನಳಿನಾ ದಂಪತಿ ಪುತ್ರಿಯಾದ ಸ್ಪೂರ್ತಿ ಹಾಸನದ ಕುಂದೂರು ಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮಾಡಿದ್ದು, ಈ ವೇಳೆಯಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಬಂದಿತ್ತು. ಶಾಲಾ ದಿನಗಳಲ್ಲಿ ಕಬಡ್ಡಿ, ಖೋ ಖೋ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಭಾಗವಹಿಸಿದ್ದರೂ ಅಥ್ಲೆಟಿಕ್ ನತ್ತ ಹೆಚ್ಚಿನ ಒಲವನ್ನು ಹೊಂದಿದ್ದರು. ಈ ವೇಳೆ ಅಥ್ಲೆಟಿಕ್ ನ ೪೦೦ ಮತ್ತು ೨೦೦ ಮೀಟರ್ ನಲ್ಲಿ ಭಾಗವಹಿಸಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆದದ್ದು ಇವರ ಕ್ರೀಡಾ ಸಾಧನೆಗೆ ಬರೆದ ಮುನ್ನುಡಿಯಾಗಿದೆ.

ಪ್ರೌಢಶಾಲಾ ಶಿಕ್ಷಣದ ನಂತರ ಪಿಯುಸಿಯನ್ನು ಹಾಸನ ಗೋಲ್ಡನ್ ಪಿಯು ಕಾಲೇಜಿನಲ್ಲಿ ಓದಿದ್ದು, ಆ ನಂತರ ಪದವಿ ಶಿಕ್ಷಣವನ್ನು ಪಡೆಯುವ ಸಲುವಾಗಿ ಮೈಸೂರಿನ ಮಹಾರಾಜ ಕಾಲೇಜಿಗೆ ಬಿಕಾಂಗೆ ನಂತರ ಟಿ.ಟಿ.ಎಲ್ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಸೇರ್ಪಡೆಗೊಂಡರು. ಇಲ್ಲಿಂದ ಇವರ ಕ್ರೀಡಾ ಬದುಕಿನ ಮತ್ತೊಂದು ಮಜಲು ಆರಂಭವಾಯಿತು. ಜತೆಗೆ ಇವರಿಗೆ ತಾನು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಲು ಸಾಧ್ಯವಾಯಿತು. ಮೊದಲಿನಿಂದಲೂ ಅಥ್ಲೆಟಿಕ್ ನಲ್ಲಿ ಸಾಧನೆ ಮಾಡಿಕೊಂಡು ಬಂದಿದ್ದರಿಂದ ಮೈಸೂರು ವಿಶ್ವವಿದ್ಯಾಲಯದ ಅಂತರ-ಕಾಲೇಜು ಚಾಂಪಿಯನ್‌ಶಿಪ್ ೨೦೨೩ರಲ್ಲಿ ಭಾಗವಹಿಸಿ ೪೦೦ ಮೀ ಮತ್ತು ೮೦೦ ಮೀ ಸ್ಪರ್ಧೆಗಳಲ್ಲಿ
ಅಥ್ಲೇಟಿಕ್ ತರಬೇತುದಾರರು ಪುನೀತ್ ಮಾರ್ಗದರ್ಶನದಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವಲ್ಲಿ ಸಿ.ಹೆಚ್.ಸ್ಪೂರ್ತಿ ಯಶಸ್ವಿಯಾದರು

ಆದರೆ ಸುಮಾರು ೯ ವರ್ಷಗಳ ಕಾಲ ಅಥ್ಲೆಟಿಕ್ ನಲ್ಲಿದ್ದರೂ ರಾಷ್ಟ್ರಮಟ್ಟದಲ್ಲಿ ನಿರೀಕ್ಷೆ ಮಾಡಿದಷ್ಟು ಸಾಧನೆ ಮಾಡುವುದು ಸಾಧ್ಯವಾಗಲಿಲ್ಲ. ಹೀಗಾಗಿ ಇದರಲ್ಲಿ ಮುಂದುವರೆದರೆ ರಾಷ್ಟ್ರಮಟ್ಟದ ಕ್ರೀಡಾಪಟುವಾಗುವುದು ಕಷ್ಟ ಎನ್ನುವುದು ಅರಿವಿಗೆ ಬಂದಿತ್ತು. ಇದರಾಚೆಗೆ ಬೇರೆ ಏನಾದರೂ ಮಾಡಲೇ ಬೇಕೆಂಬ ತುಡಿತವೂ ಅವರಲ್ಲಿತ್ತು. ಅದೇ ವೇಳೆಗೆ ಬಾಕ್ಸಿಂಗ್ ಅವರನ್ನು ಸೆಳೆದಿತ್ತು. ಮುಂದಿನ ಕ್ರೀಡಾ ಜೀವನವನ್ನು ಮುಂದುವರೆಸುವುದಾದರೆ ಅದರ ಮೂಲಕವೇ ಎಂಬ ತೀರ್ಮಾನಕ್ಕೆ ಬಂದು ಬಿಟ್ಟರು.

ಅಥ್ಲೆಟಿಕ್ ನಿಂದ ಕಿಕ್ ಬಾಕ್ಸಿಂಗ್ ಮತ್ತು ಬಾಕ್ಸಿಂಗ್ ಕಡೆಗೆ ಹೆಚ್ಚಿನ ಗಮನಹರಿಸಿದ ಅವರು ಅದಕ್ಕೆ ಬೇಕಾದ ತರಬೇತಿಯನ್ನು ಪಡೆದುಕೊಂಡರು. ಜತೆಗೆ ಕಠಿಣ ಪರಿಶ್ರಮಪಟ್ಟರು. ಅವರ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ೨೦೨೩ರಲ್ಲಿ ನಡೆದ ಕರ್ನಾಟಕ ರಾಜ್ಯ ಮುವಾಯ್ ಥಾಯ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನದ ಪದಕವನ್ನು ತಂದುಕೊಟ್ಟಿತು. ಜತೆಗೆ ಬಾಕ್ಸಿಂಗ್ ನ ಸುಗಮ ಹಾದಿಗೆ ಬಾಗಿಲು ತೆರೆದು ಸ್ವಾಗತ ನೀಡಿತು.

ಕಿಕ್ ಬಾಕ್ಸಿಂಗ್ ಮತ್ತು ಬಾಕ್ಸಿಂಗ್ ಅವರ ಕ್ರೀಡಾ ಬದುಕಿಗೆ ಹೊಸದೊಂದು ಆಯಾಮ ನೀಡಿತು. ಈ ಕ್ಷೇತ್ರದಲ್ಲಿ ಕಷ್ಟಪಟ್ಟು ಸಾಧನೆ ಮಾಡಿದರೆ ರಾಜ್ಯ, ರಾಷ್ಟ್ರ ಮಾತ್ರವಲ್ಲದೆ, ಅಂತರ್ರಾಷ್ಟ್ರೀಯ ಮಟ್ಟದಲ್ಲಿಯೂ ಗಮನಸೆಳೆಯ ಬಹುದು ಎಂಬ ವಿಶ್ವಾಸ ಮೂಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಕಠಿಣ ತರಬೇತಿ ಪಡೆಯುವುದರೊಂದಿಗೆ ನಿರಂತರ ಅಭ್ಯಾಸ ಮಾಡುತ್ತಿರುವ ಸ್ಪೂರ್ತಿ ಹಲವು ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಅದರಲ್ಲೂ ಹಲವು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಹೆಣ್ಮಕ್ಕಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನರಾಗಿದ್ದಾರೆ. ಕಿಕ್ ಬಾಕ್ಸಿಂಗ್ ಮತ್ತು ಬಾಕ್ಸಿಂಗ್ ನಲ್ಲಿ ಇವರ ಸಾಧನೆಗಳೇನು ಎಂಬುದನ್ನು ನೋಡಿದ್ದೇ ಆದರೆ ೨೦೨೩ ರಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನದ ಪದಕ, ೨೦೨೪ರಲ್ಲಿ ನಡೆದ ಸ್ವಾಮಿ ವಿವೇಕಾನಂದ ಸುಭಾರ್ತಿ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಅಂತರ-ವಿಶ್ವವಿದ್ಯಾಲಯ ಕಿಕ್‌ಬಾಕ್ಸಿಂಗ್ ಚಾಂಪಿಯನ್‌ಶಿಪ್ ಭಾಗವಹಿಸಿದರು. ನಲ್ಲಿ ಚಿನ್ನದ ಪದಕ, ೨೦೨೫ರಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಕಂಚಿನ ಪದಕ, ೨೦೨೩ ರಲ್ಲಿ ಆಂಧ್ರ ಪ್ರದೇಶದ ಆಂಧ್ರ ವಿಶ್ವವಿದ್ಯಾಲಯದಲ್ಲಿ ನಡೆದ ಖೇಲೋ ಇಂಡಿಯಾ ಮಹಿಳಾ ಕಿಕ್ ಬಾಕ್ಸಿಂಗ್ ಲೀಗ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಚಿನ್ನದ ಹುಡುಗಿಯಾಗಿದ್ದಾರೆ.

ಇನ್ನು ಬಾಕ್ಸಿಂಗ್ ನಲ್ಲಿ ಇವರ ಸಾಧನೆ ಹೀಗಿದೆ.. ೨೦೨೩ರಲ್ಲಿ ನಡೆದ ದಸರಾ ಸಿಎಂ ಕಪ್ ನಲ್ಲಿ ಚಿನ್ನದ ಪದಕ, ತಮಿಳುನಾಡಿನಲ್ಲಿ ೨೦೨೪ರಲ್ಲಿ ನಡೆದ ಅಖಿಲ ಭಾರತ ಮುಕ್ತ ರಾಷ್ಟ್ರೀಯ ವಿಶುಯಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನದ ಪದಕ ಮತ್ತು ಅತ್ಯುತ್ತಮ ಬಾಕ್ಸರ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಅಂತರ-ವಿಶ್ವವಿದ್ಯಾಲಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನ ದಕ್ಷಿಣ ವಲಯದಲ್ಲಿ ೫ ನೇ ಸ್ಥಾನ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಎಲೈಟ್ ಮಹಿಳಾ ಹವ್ಯಾಸಿ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಬೆಳ್ಳಿ ಪದಕ, ೨೦೨೪ರಲ್ಲಿ ಪಂಜಾಬ್‌ನ ಗುರು ಕಾಶಿ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಅಂತರ-ವಿಶ್ವವಿದ್ಯಾಲಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಿದ್ದಾರೆ. ಬಾಕ್ಸಿಂಗ್ ನಲ್ಲಿ ಮುಂದಿನ ದಿನಗಳಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂದು ಪಣತೊಟ್ಟಿರುವ ಸ್ಪೂರ್ತಿ ಅದಕ್ಕಾಗಿ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.ಸರ್ಕಾರ ಸೇರಿದಂತೆ ಸಂಘ, ಸಂಸ್ಥೆಗಳು ಇವರ ಕ್ರೀಡಾಸಾಧನೆಯನ್ನು ಪರಿಗಣಿಸಿ, ಪ್ರೋತ್ಸಾಹಿಸಿದ್ದೇ ಆದರೆ ಮುಂದಿನ ಅವರ ಸಾಧನೆಗೆ ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೆ ರಾಜ್ಯಕ್ಕೊಬ್ಬ ಉತ್ತಮ ಮಹಿಳಾ ಬಾಕ್ಸರ್ ನ್ನು ತಯಾರು ಮಾಡಲು ಸಾಧ್ಯವಾಗಲಿದೆ.ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಕಿಕ್ ಬಾಕ್ಸಿಂಗ್, ಜಶ್ವಂತ್, ರವರ ಮಾರ್ಗದರ್ಶನದಲ್ಲಿ ಇವರು ತರಬೇತಿ ಪಡೆಯುತ್ತಿದ್ದಾರೆ. ಆ ಬಗ್ಗೆ ಸಂಬಂಧಿಸಿದವರು ಗಮನಹರಿಸಲಿ ಎನ್ನುವುದೇ ನಮ್ಮ ಆಶಯವಾಗಿದೆ.