ಬೆಟ್ಟದಪುರ: ಸಾಮಾನ್ಯವಾಗಿ ಜನರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪ್ರಗತಿಪರ ಯುವ ರೈತ ತನ್ನ ಮನೆಯಲ್ಲಿ ಜನಿಸಿದ ಹಸುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ವಿಭಿನ್ನವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮನುಗನಹಳ್ಳಿ ಗ್ರಾಮದ ಯುವ ರೈತ ಹಾಗೂ ಗೋಮಾತೆ ಪ್ರೇಮಿ ಅರುಣ್ ಕುಮಾರ್ ಅವರು ತಮ್ಮ ಮನೆಯಲ್ಲಿ ಜನಿಸಿದ ಒಂದು ವರ್ಷದ ಹಸುವನ್ನು ಉತ್ತಮವಾಗಿ ಪೋಷಣೆ ಮಾಡಿ, ಅದರ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಮೊದಲಿಗೆ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಹಸುವನ್ನು ಮೆರವಣಿಗೆಯಲ್ಲಿ ಕರೆದೊಯ್ದು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಬಳಿಕ ಕೇಕ್ ಕತ್ತರಿಸಿ ಹಸುವಿನ ಹುಟ್ಟುಹಬ್ಬವನ್ನು ಆಚರಿಸಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ರೈತ ಅರುಣ್ ಕುಮಾರ್, ಕಳೆದ ಹತ್ತು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಪ್ರಸ್ತುತ ಎಂಟು ಹಸುಗಳನ್ನು ಸಾಕುತ್ತಿದ್ದೇನೆ. ಪ್ರತಿದಿನ 80ರಿಂದ 100 ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮಾರಾಟ ಮಾಡುತ್ತಿದ್ದೇನೆ. ಇದರಿಂದ ಪ್ರತಿ ತಿಂಗಳು ಸುಮಾರು ಒಂದು ಲಕ್ಷ ರೂಪಾಯಿ ಆದಾಯ ಬರುತ್ತಿದೆ. ನಮ್ಮ ಮನೆಯಲ್ಲಿ ಜನಿಸಿದ ಹಸುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ತಿಳಿಸಿದರು.
ಪುಟ್ಟಣ್ಣ ಕಣಗಾಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತು ಮಾತನಾಡಿ, ಮನುಗನಹಳ್ಳಿ ಗ್ರಾಮದ ಯುವ ರೈತ ಅರುಣ್ ಕುಮಾರ್ ಕಳೆದ ಹತ್ತು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಕೊಟ್ಟಿಗೆ ನಿರ್ವಹಣೆ, ಮೇವು ಸಂಗ್ರಹಣೆ ಹಾಗೂ ವೈಜ್ಞಾನಿಕ ರೀತಿಯಲ್ಲಿ ಹಸುಗಳ ಸಾಕಾಣಿಕೆ ಮಾಡುತ್ತಾ ಪ್ರತಿದಿನ 80ರಿಂದ 100 ಲೀಟರ್ ಹಾಲು ಉತ್ಪಾದಿಸುತ್ತಿದ್ದಾರೆ. ಇದರಿಂದ ವರ್ಷಕ್ಕೆ ಸುಮಾರು 12ರಿಂದ 13 ಲಕ್ಷ ರೂಪಾಯಿ ವಹಿವಾಟು ನಡೆಯುತ್ತಿದ್ದು, ಖರ್ಚು ಕಳೆದು ಸುಮಾರು 7 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಎಂದರು.

ಹಸುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ ಯುವ ರೈತ
ಇಂದಿನ ದಿನಗಳಲ್ಲಿ ಉದ್ಯೋಗಾವಕಾಶಗಳಿಲ್ಲವೆಂದು ಹೇಳಿ ಅನೇಕ ಯುವಕರು ಕೆಲಸ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ ಅರುಣ್ ಕುಮಾರ್ ಅವರಂತಹ ಯುವಕರು ಹೈನುಗಾರಿಕೆಯನ್ನು ಸ್ವಾವಲಂಬನೆಯ ಮಾರ್ಗವನ್ನಾಗಿ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಯುವ ರೈತ ತನ್ನ ಮನೆಯಲ್ಲಿ ಜನಿಸಿದ ಹಸುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನ ವೆಂಕಟೇಶ್, ಅರುಣ್ ಕುಮಾರ್ ಅವರ ತಂದೆ ಪುಟ್ಟಸ್ವಾಮಿಗೌಡ, ಗ್ರಾಮದ ಯುವ ಮುಖಂಡರಾದ ಜಗದೀಶ್ ಗೌಡ, ಸರತ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Young Farmer Celebrates Cow’s First Birthday by Cutting a Cake
Bettadapura: While people generally celebrate their birthdays in grand style, a progressive young farmer has drawn attention by celebrating the first birthday of a cow born at his home by cutting a cake.
Arun Kumar, a young farmer and devoted lover of cows from Manuganahalli village in Periyapatna taluk of Mysuru district, lovingly raised the calf for a year and celebrated its first birthday with great enthusiasm.
The celebrations began with special prayers at the village’s Anjaneya Swamy Temple. Later, the cow was taken out in a procession, accompanied by bursting firecrackers and distribution of sweets among villagers. The highlight of the event was cutting a birthday cake to mark the cow’s first birthday. The unique celebration won the appreciation of villagers.
Speaking on the occasion, Arun Kumar said that he had been involved in dairy farming for the past ten years and currently owned eight cows. He produces around 80 to 100 litres of milk every day and sells it to the Milk Producers’ Cooperative Society. He earns approximately Rs. 1 lakh per month from dairy farming. He expressed happiness over celebrating the first birthday of a cow born at his home.
Hanumanthu, former president of Puttanna Kanagal Gram Panchayat, said that Arun Kumar had been successfully engaged in dairy farming for the past decade. By maintaining a clean and well-organised cattle shed, storing adequate fodder and following scientific methods of cattle rearing, he produces 80 to 100 litres of milk daily.
He further stated that the dairy business generates an annual turnover of approximately Rs. 12 lakh to Rs. 13 lakh, with a net income of around Rs. 7 lakh after expenses.
He appreciated Arun Kumar, saying that while many young people migrate to cities in search of employment opportunities, farmers like him have demonstrated that dairy farming can be a path towards self-reliance and financial stability. He also praised the farmer for celebrating the first birthday of a cow born at his home.
Village elder Venkatesh, Arun Kumar’s father Puttaswamy Gowda, young village leaders Jagadeesh Gowda and Sarath, along with several other villagers, were present during the celebration.
