ಕುಸ್ತಿ ಅಖಾಡದಲ್ಲಿ ಮಿಂಚಿದ ಪೈಲ್ವಾನ್ ಲೋಕೇಶ್ ಜಯಸಿಂಹ!ಕುಸ್ತಿ ಅಖಾಡದಲ್ಲಿ ಮಿಂಚಿದ ಪೈಲ್ವಾನ್ ಲೋಕೇಶ್ ಜಯಸಿಂಹ!

ವರದಿ: ಮಹೇಶ್,ನಾಯಕ್

ಕುಸ್ತಿ ಎಂದರೆ ಕೇವಲ ದೈಹಿಕ ಶಕ್ತಿಯ ಪ್ರದರ್ಶನವಲ್ಲ. ಅದು ಶಿಸ್ತು, ಸಂಯಮ, ಪರಿಶ್ರಮ, ಗುರುಭಕ್ತಿ ಮತ್ತು ಇಚ್ಛಾಶಕ್ತಿಯ ಪ್ರತೀಕ. ಇಂತಹ ಕುಸ್ತಿ ಕಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಾಧಕರಲ್ಲಿ ಮೈಸೂರಿನ ಸುಣ್ಣದಕೇರಿಯ ಪೈಲ್ವಾನ್ ಲೋಕೇಶ್ ಜಯಸಿಂಹ ಕೂಡ ಒಬ್ಬರು. ತಂದೆಯ ಕನಸು, ಅಣ್ಣನ ಆಸರೆ ; ಕುಟುಂಬದ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ ಹಾಗೂ ತಮ್ಮ ಕಠಿಣ ಪರಿಶ್ರಮದಿಂದ ಕುಸ್ತಿ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಅವರ ಜೀವನ ಪಯಣ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ.

ತಂದೆಯೇ ಕುಸ್ತಿ ಬದುಕಿನ ಮೊದಲ ಪ್ರೇರಣೆ

ಪೈಲ್ವಾನ್ ಲೋಕೇಶ್ ಜಯಸಿಂಹ ಅವರ ಕುಸ್ತಿ ಬದುಕಿನ ಮೊದಲ ಹೆಜ್ಜೆಗೆ ತಂದೆಯೇ ಪ್ರೇರಣೆ. ತಂದೆ ನಂಜಪ್ಪ ಮತ್ತು ತಾಯಿ ಮಹದೇವಮ್ಮ ಅವರ ಪುತ್ರರಾದ ಲೋಕೇಶ್ ಜಯಸಿಂಹ ಅವರು ೧೯೮೯ ರಲ್ಲಿ, ತಮ್ಮ ೧೨ನೇ ವಯಸ್ಸಿನಲ್ಲಿಯೇ ಗರಡಿ ಮನೆಗೆ ಪಾದಾರ್ಪಣೆ ಮಾಡಿದರು. ಸುಣ್ಣದಕೇರಿಯ ಬೆಸ್ತರ ಕಾಳಣ್ಣನವರ ಗರಡಿ ಅವರ ಕುಸ್ತಿ ಬದುಕಿನ ಮೊದಲ ಸಾಧನೆಯ ಮೆಟ್ಟಿಲಾಯಿತು.

ಇವರ ಬಾಲ್ಯದ ಕಥೆಯೂ ಅಷ್ಟೇ ರೋಚಕವಾಗಿದೆ. ಮನೆಯ ಸುತ್ತಮುತ್ತ ಮನೆ ನಿರ್ಮಾಣಕ್ಕಾಗಿ ಹಾಕಿದ್ದ ಮರಳಿನ ರಾಶಿಯೇ ಇವರಿಗೆ ಆಟದ ಮೈದಾನವಾಗಿತ್ತು. ಅಲ್ಲಿಗೆ ಬರುತ್ತಿದ್ದ ಇತರ ಮಕ್ಕಳೊಂದಿಗೆ ಕುಸ್ತಿ ಮಾದರಿಯ ಆಟವಾಡುತ್ತಿದ್ದರು. ಮರಳಿನ ಮೇಲೆ ಮಕ್ಕಳೊಂದಿಗೆ ಸೆಣಸಾಡುತ್ತಾ ತಮ್ಮ ಬಲ ಮತ್ತು ಧೈರ್ಯವನ್ನು ಪ್ರದರ್ಶಿಸುತ್ತಿದ್ದರು. ಹೀಗೆ ಬಾಲ್ಯದ ಆಟವೇ ಮುಂದೆ ಕುಸ್ತಿ ಕಲಿಯುವ ಆಸಕ್ತಿಗೆ ನಾಂದಿಯಾಯಿತು.ಲೋಕೇಶ್ ಅವರ ದೇಹದಾರ್ಢ್ಯ ಮತ್ತು ಕುಸ್ತಿ ಮೇಲಿನ ಆಸಕ್ತಿಯನ್ನು ಗಮನಿಸಿದ ಸ್ಥಳೀಯರು, ಮುಂದೆ ಉತ್ತಮ ಕುಸ್ತಿಪಟುವಾಗುವ ಸಾಮರ್ಥ್ಯವಿದೆ ಎಂದು ತಂದೆಗೆ ತಿಳಿಸಿದ್ದರು. ಇದರಿಂದ ಪ್ರೇರಿತರಾದ ತಂದೆ ನಂಜಯ್ಯ ಅವರು ಮಗನನ್ನು ಗರಡಿಗೆ ಸೇರಿಸಿ ಕುಸ್ತಿ ಕಲಿಸುವ ಆಸೆಯನ್ನು ಈಡೇರಿಸಿದರು.

ಪ್ರಸಿದ್ಧ ಪೈಲ್ವಾನರ ನಡುವೆ ಕುಸ್ತಿ ಅಭ್ಯಾಸ

ಅಂದಿನ ದಿನಗಳಲ್ಲಿ ಸುಣ್ಣದಕೇರಿಯ ಗರಡಿಯಲ್ಲಿ ಅನೇಕ ಪ್ರಸಿದ್ಧ ಪೈಲ್ವಾನರು ಅಭ್ಯಾಸ ಮಾಡುತ್ತಿದ್ದರು. ಟೈಗರ್ ಬಾಲಾಜಿ, ಶಂಕರ್ ಚಕ್ರವರ್ತಿ, ಕೆಂಪೇಗೌಡ, ಕೇಶವರಾಜ್ ಸೇರಿದಂತೆ ಹಲವು ಕುಸ್ತಿಪಟುಗಳ ನಡುವೆ ಲೋಕೇಶ್ ಅವರ ಕುಸ್ತಿ ಅಭ್ಯಾಸ ಆರಂಭವಾಯಿತು.ಶ್ರೀರಂಗಣ್ಣ ಮತ್ತು ಪೈಲ್ವಾನ್ ಕಲ್ಲಪ್ಪನವರು ಅವರ ಆರಂಭಿಕ ಗುರುಗಳಾಗಿ ಮಾರ್ಗದರ್ಶನ ನೀಡಿದರು. ನಂತರ ಮಂಜಪ್ಪನವರು ಟೂರ್ನಮೆಂಟ್ ಕುಸ್ತಿಯ ಮಹತ್ವವನ್ನು ತಿಳಿಸಿ, ಚಾಮುಂಡಿ ವಿಹಾರ್ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಿ ಸ್ಪರ್ಧಾತ್ಮಕ ಕುಸ್ತಿ ಅಭ್ಯಾಸಕ್ಕೆ ಪ್ರೋತ್ಸಾಹ ನೀಡಿದರು.

೩೨ ಕೆ.ಜಿ.ಯಿಂದ ಆರಂಭವಾಗಿ ರಾಜ್ಯಮಟ್ಟದ ಸಾಧನೆ

ಕುಸ್ತಿ ಕ್ಷೇತ್ರಕ್ಕೆ ಕಾಲಿಟ್ಟಾಗ ಲೋಕೇಶ್ ಅವರ ದೇಹದ ತೂಕ ಕೇವಲ ೩೨ ಕೆ.ಜಿ. ಇತ್ತು. ಆದರೆ ದೈಹಿಕ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಅವರಲ್ಲಿದ್ದ ಆಸಕ್ತಿ ಮತ್ತು ಪರಿಶ್ರಮವೇ ಸಾಧನೆಗೆ ಬುನಾದಿಯಾಯಿತು.

೩೨ ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದ ಅವರು, ನಂತರ ೩೮, ೪೦, ೪೨, ೪೮, ೫೨, ೫೫, ೬೨, ೬೮, ೭೪, ೮೪ ಹಾಗೂ ೯೭ ಕೆ.ಜಿ. ಸೇರಿದಂತೆ ವಿವಿಧ ತೂಕದ ವಿಭಾಗಗಳಲ್ಲಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳನ್ನು ಗಳಿಸಿದರು.
ಒಟ್ಟು ಎಂಟು ಬಾರಿ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ವಿಶೇಷವಾಗಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ೮೫ ಕೆ.ಜಿ. ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಖ್ಯಾತ ಕುಸ್ತಿಪಟುವೊಬ್ಬರ ವಿರುದ್ಧ ಸೆಣಸಾಡಿ ಜಯಗಳಿಸಿದ್ದು, ತಮ್ಮ ಕುಸ್ತಿ ಜೀವನದ ಸ್ಮರಣೀಯ ಸಾಧನೆಗಳಲ್ಲಿ ಒಂದಾಗಿದೆ.
ಇದಲ್ಲದೆ ಮೈಸೂರು ಅರ್ಜುನ, ಮೈಸೂರು ಕಂಠೀರವ, ಮೈಸೂರು ಹುಲಿ, ಶ್ರೀಕೃಷ್ಣದೇವರಾಯ, ಸೇರಿದಂತೆ ಹಲವು ಬಿರುದು ಮತ್ತು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಡತನದ ನಡುವೆಯೂ ಬೆನ್ನಿಗೆ ನಿಂತ ಕುಟುಂಬ

ಕುಸ್ತಿ ಪಯಣದಲ್ಲಿ ಲೋಕೇಶ್ ಎದುರಿಸಿದ ಪ್ರಮುಖ ಸವಾಲುಗಳಲ್ಲಿ ಆರ್ಥಿಕ ಪರಿಸ್ಥಿತಿಯೂ ಒಂದು. ದೇಹದಾರ್ಢ್ಯ ಕಡಿಮೆ ಇದೆ, ಎತ್ತರ ಸಾಲದು, ಕುಸ್ತಿಯಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಕೆಲವರು ಟೀಕಿಸುತ್ತಿದ್ದರು. ಆದರೆ ಈ ಮಾತುಗಳಿಗೆ ಕುಗ್ಗದೆ ತಮ್ಮ ಗುರಿಯತ್ತ ಮುನ್ನಡೆದರು.ಕುಸ್ತಿಪಟುವಾಗಲು ಉತ್ತಮ ಆಹಾರ ಪದ್ಧತಿ ಅತ್ಯಂತ ಮುಖ್ಯ. ಕುಟುಂಬದಲ್ಲಿ ಅಕ್ಕ-ತಂಗಿಯರು ಹಾಗೂ ಒಬ್ಬ ಅಣ್ಣನಿದ್ದರೂ ತಂದೆ ನಂಜಯ್ಯ ಅವರು ತಮ್ಮ ಮಗನ ಕುಸ್ತಿ ಸಾಧನೆಗಾಗಿ ವಿಶೇಷ ಆಹಾರ ವ್ಯವಸ್ಥೆ ಮಾಡುತ್ತಿದ್ದರು. ತಾಯಿ ಮಹದೇವಮ್ಮ ಮತ್ತು ಸಹೋದರಿಯರೂ ಆಹಾರ ತಯಾರಿಕೆಯಿಂದ ಹಿಡಿದು ಪ್ರತಿಯೊಂದು ಹಂತದಲ್ಲೂ ಬೆಂಬಲವಾಗಿ ನಿಂತರು.

ಅಣ್ಣನೂ ಕುಸ್ತಿಪಟುವಾಗಿದ್ದು, ತಮ್ಮನ ಸಾಧನೆಗೆ ಪ್ರೋತ್ಸಾಹ ನೀಡುತ್ತಿದ್ದರು. ಕುಟುಂಬದ ಈ ಪ್ರೀತಿ ಮತ್ತು ತ್ಯಾಗವೇ ಲೋಕೇಶ್ ಅವರ ಸಾಧನೆಗೆ ದೊಡ್ಡ ಶಕ್ತಿಯಾಯಿತು.

ಗುರುಗಳ ಮಾರ್ಗದರ್ಶನವೇ ಸಾಧನೆಯ ಮೆಟ್ಟಿಲು

ಶ್ರೀರಂಗಣ್ಣ, ಪೈಲ್ವಾನ್ ಕಲ್ಲಪ್ಪ ಮತ್ತು ಮಂಜಪ್ಪನವರು ಲೋಕೇಶ್ ಅವರ ಕುಸ್ತಿ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೇವಲ ಕುಸ್ತಿ ತಂತ್ರಗಳನ್ನಷ್ಟೇ ಅಲ್ಲದೆ ಶಿಸ್ತು, ಸಂಯಮ, ಗುರುಗಳಿಗೆ ಗೌರವ, ಉತ್ತಮ ನಡವಳಿಕೆ ಮತ್ತು ಕಠಿಣ ಅಭ್ಯಾಸದ ಮಹತ್ವವನ್ನು ಕಲಿಸಿಕೊಟ್ಟಿದ್ದಾರೆ. ಕುಸ್ತಿ ಕಲೆಯಲ್ಲಿ ಯಶಸ್ಸು ಗಳಿಸಲು ದೈಹಿಕ ಬಲದ ಜೊತೆಗೆ ಮಾನಸಿಕ ದೃಢತೆ ಮತ್ತು ನಿರಂತರ ಅಭ್ಯಾಸವೂ ಅಗತ್ಯ ಎಂಬುದನ್ನು ಗುರುಗಳು ಮನದಟ್ಟು ಮಾಡಿಕೊಟ್ಟಿದ್ದರು.

ಸಾಧನೆಗೆ ತಕ್ಕ ಪ್ರೋತ್ಸಾಹ ಸಿಗಲಿಲ್ಲ ಎಂಬ ನೋವು

೩೨ ಕೆ.ಜಿ.ಯಿಂದ ಹಿಡಿದು ೯೭ ಕೆ.ಜಿ.ವರೆಗಿನ ವಿವಿಧ ವಿಭಾಗಗಳಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿ, ಎಂಟು ಬಾರಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದರೂ ಸರ್ಕಾರದಿಂದ ನಿರೀಕ್ಷಿತ ಸೌಲಭ್ಯಗಳು ಮತ್ತು ಪ್ರೋತ್ಸಾಹ ದೊರೆತಿಲ್ಲ ಎಂಬ ನೋವು ಲೋಕೇಶ್ ಅವರಲ್ಲಿದೆ.
ಕುಸ್ತಿ ಕಲಿಯಲು ಇಂದು ಅನೇಕ ಯುವಕರು ಆಸಕ್ತಿಯಿಂದ ಗರಡಿಗಳಿಗೆ ಬರುತ್ತಿದ್ದಾರೆ. ಆದರೆ ಅವರಿಗೆ ಅಗತ್ಯವಾದ ಕುಸ್ತಿ ಸಾಮಗ್ರಿಗಳು, ತರಬೇತಿ ಸೌಲಭ್ಯಗಳು ಮತ್ತು ತರಬೇತುದಾರರಿಗೆ ಗೌರವಧನ ನೀಡುವ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದರಿಂದ ಕುಸ್ತಿ ಕ್ಷೇತ್ರವನ್ನು ಮುಂದುವರಿಸುವುದು ಕಷ್ಟವಾಗುತ್ತಿದೆ.ಸರ್ಕಾರ ಈ ಬಗ್ಗೆ ಗಮನಹರಿಸಿ ಹಿರಿಯ ಪೈಲ್ವಾನರಿಗೆ ಸೂಕ್ತ ಗೌರವಧನ ಮತ್ತು ಯುವ ಕುಸ್ತಿಪಟುಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಅವರ ಒತ್ತಾಯ.

ಕಂಠೀರವ ಪ್ರಶಸ್ತಿ ಗೆಲ್ಲಬೇಕೆಂಬ ಕನಸು ನನಸಾಗಲಿಲ್ಲ!

ತಮ್ಮ ಕುಸ್ತಿ ಜೀವನದಲ್ಲಿ ಅನೇಕ ಪ್ರಶಸ್ತಿ ಮತ್ತು ಪದಕಗಳನ್ನು ಗೆದ್ದಿದ್ದರೂ, ದಸರಾ ಕ್ರೀಡಾಕೂಟದಲ್ಲಿ ಕಂಠೀರವ ಪ್ರಶಸ್ತಿ ಗೆಲ್ಲಬೇಕೆಂಬ ತಮ್ಮ ಬಹುದಿನಗಳ ಆಸೆ ಈಡೇರಲಿಲ್ಲ ಎಂಬ ಬೇಸರ ಅವರಿಗಿದೆ.ಆದರೆ ಆ ಕನಸನ್ನು ಅಲ್ಲಿಗೇ ನಿಲ್ಲಿಸದೆ, ತಮ್ಮಿಂದ ಸಾಧ್ಯವಾಗದ ಸಾಧನೆಯನ್ನು ಮುಂದಿನ ಪೀಳಿಗೆಯ ಯುವ ಕುಸ್ತಿಪಟುಗಳ ಮೂಲಕ ನನಸಾಗಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ. ಇದುವರೆಗೆ ನೂರಾರು ಯುವಕರಿಗೆ ಕುಸ್ತಿ ತರಬೇತಿ ಮತ್ತು ಮಾರ್ಗದರ್ಶನ ನೀಡಿರುವ ಅವರು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಪ್ರತಿಭಾವಂತ ಕುಸ್ತಿಪಟುಗಳನ್ನು ರೂಪಿಸುವ ಗುರಿ ಹೊಂದಿದ್ದಾರೆ.

ಯುವಜನತೆಗೆ ಲೋಕೇಶ್ ನೀಡುವ ಸಂದೇಶ

ಕುಸ್ತಿ ಬಗ್ಗೆ ಸಂಪೂರ್ಣ ಅರಿವಿಲ್ಲದ ಕೆಲವರು ಮಕ್ಕಳ ದೇಹದ ಎತ್ತರ, ತೂಕ ಮತ್ತು ದೈಹಿಕ ರಚನೆಯನ್ನು ನೋಡಿ ಅವರು ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸುತ್ತಾರೆ. ಆದರೆ ಇಂತಹ ಅಭಿಪ್ರಾಯಗಳಿಗೆ ಕಿವಿಗೊಡಬಾರದು ಎಂಬುದು ಲೋಕೇಶ್ ಅವರ ಕಿವಿಮಾತು.”ಸಾಧನೆಗೆ ಎತ್ತರ, ದಪ್ಪ ಅಥವಾ ದೇಹದ ಗಾತ್ರ ಅಡ್ಡಿಯಾಗುವುದಿಲ್ಲ. ನಮ್ಮಲ್ಲಿ ಕಠಿಣ ಪರಿಶ್ರಮ, ಆಸಕ್ತಿ, ಇಚ್ಛಾಶಕ್ತಿ ಮತ್ತು ನಾನು ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಇರಬೇಕು. ನಿರಂತರ ಅಭ್ಯಾಸ ಮತ್ತು ಶಿಸ್ತಿನಿಂದ ಯಾವುದೇ ಗುರಿಯನ್ನು ತಲುಪಬಹುದು” ಎಂಬುದು ಯುವಜನತೆಗೆ ಅವರ ಸಂದೇಶ.

ಕುಸ್ತಿ ಕ್ಷೇತ್ರಕ್ಕೆ ಖಾಸಗಿ ಸಂಸ್ಥೆಗಳು ಹಾಗೂ ದಾನಿಗಳು ಪ್ರೋತ್ಸಾಹ ನೀಡಿದರೆ ಇನ್ನಷ್ಟು ಪ್ರತಿಭಾವಂತ ಕುಸ್ತಿಪಟುಗಳನ್ನು ರೂಪಿಸಲು ಸಾಧ್ಯವಿದೆ. ಸರ್ಕಾರವೂ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿದರೆ ಕರ್ನಾಟಕದ ಯುವಕರು ರಾಷ್ಟ್ರಮಟ್ಟ ಮಾತ್ರವಲ್ಲದೆ ಒಲಿಂಪಿಕ್ ಮಟ್ಟದಲ್ಲಿಯೂ ದೇಶಕ್ಕೆ ಕೀರ್ತಿ ತರಬಲ್ಲರು ಎಂಬ ವಿಶ್ವಾಸ ಅವರದು.

ಸಾಧನೆಯ ಹಾದಿಯಲ್ಲಿ ತಾವು ಕಂಡ ಕನಸನ್ನು ಸಂಪೂರ್ಣವಾಗಿ ನನಸಾಗಿಸಿಕೊಳ್ಳಲು ಸಾಧ್ಯವಾಗದಿದ್ದರೂ, ತಮ್ಮ ಅನುಭವ ಮತ್ತು ಮಾರ್ಗದರ್ಶನದ ಮೂಲಕ ನೂರಾರು ಯುವಕರ ಕನಸುಗಳಿಗೆ ಬಲ ತುಂಬುತ್ತಿರುವ ಪೈಲ್ವಾನ್ ಲೋಕೇಶ್ ಜಯಸಿಂಹ ಅವರ ಕುಸ್ತಿ ಪಯಣ ನಿಜಕ್ಕೂ ಶ್ಲಾಘನೀಯ.

A Father’s Sacrifice and a Brother’s Support Behind His Wrestling Journey: Wrestler Lokesh Jayasimha, Now a Mentor to Hundreds of Young Aspirants

Report: Mahesh Nayak

Wrestling is not merely a display of physical strength; it is a sport that represents discipline, patience, perseverance, dedication to one’s coach, and determination. Among those who have made a remarkable mark in this traditional sport is Lokesh Jayasimha, a wrestler from Sunnadakeri in Mysuru. Through his father’s dream, his elder brother’s support, encouragement from his family, guidance from his coaches, and his own relentless hard work, he has achieved several milestones in wrestling. Today, his journey stands as an inspiration to the younger generation.

His Father Was His First Inspiration

Lokesh Jayasimha’s journey in wrestling began with the inspiration and encouragement of his father. Born to Nanjappa and Mahadevamma, Lokesh entered a traditional wrestling training centre, known as a Garadi Mane, in 1989 at the young age of 12. The Besteru Kalanna Garadi in Sunnadakeri became the foundation of his wrestling career.

His childhood story is equally interesting. The heaps of sand piled up around his house for construction work became his playground. He would wrestle playfully with other children who gathered there, displaying his strength and courage on the sand.

What began as a childhood game gradually developed into a deep passion for wrestling. Observing Lokesh’s physique and interest in the sport, local residents recognised his potential and suggested to his father that he could become a good wrestler in the future. Encouraged by their words, his father Nanjappa fulfilled his son’s wish by enrolling him in a traditional wrestling centre.

Training Alongside Renowned Wrestlers

During those days, the Sunnadakeri Garadi was home to several renowned wrestlers. Lokesh began his training among experienced wrestlers such as Tiger Balaji, Shankar Chakravarthy, Kempegowda, and Keshavaraj.

Sriranganna and Pailwan Kallappa were his first mentors, guiding him through the fundamentals of wrestling. Later, Manjappa introduced him to the importance of tournament wrestling and encouraged him to visit the Chamundi Vihar Stadium, where he could receive training in competitive wrestling.

From 32 kg to State-Level Achievements

When Lokesh first entered the wrestling arena, he weighed just 32 kg. However, his passion, determination, and hard work proved far more important than his physical limitations.

He secured first place in the 32 kg category and went on to achieve first-place victories in various state-level competitions across several weight categories, including 38 kg, 40 kg, 42 kg, 48 kg, 52 kg, 55 kg, 62 kg, 68 kg, 74 kg, 84 kg, and 97 kg.

He has also represented himself in national-level wrestling competitions eight times, showcasing his talent on a larger platform.

One of the most memorable moments of his wrestling career was his victory in the 85 kg category at a state-level wrestling competition held in Bengaluru, where he defeated a renowned wrestler who had earned recognition at the national level.

In recognition of his achievements, Lokesh has earned several prestigious titles and honours, including Mysuru Arjuna, Mysuru Kanteerava, Mysuru Tiger, and Sri Krishnadevaraya.

Family Support Despite Financial Challenges

Financial difficulties were among the major challenges Lokesh faced during his wrestling journey. Some people criticised him, saying that he lacked the required physique and height and would not be able to achieve much in wrestling. However, he refused to be discouraged by such comments and continued working towards his goal.

A proper nutritional diet is essential for every wrestler. Despite having a financially challenging family background, his father, Nanjappa, made special arrangements to provide him with nutritious food to support his wrestling career.

His mother, Mahadevamma, and sisters also stood firmly by his side, supporting him in every possible way, from preparing food to encouraging him throughout his journey.

His elder brother, who was also a wrestler, played an important role in motivating him and supporting his ambitions. The sacrifices, affection, and encouragement of his family became the greatest source of strength behind Lokesh’s achievements.

Coaches Who Shaped His Wrestling Career

Sriranganna, Pailwan Kallappa, and Manjappa played significant roles in shaping Lokesh’s wrestling career.

Their guidance went beyond teaching wrestling techniques. They instilled in him the importance of discipline, patience, respect for coaches, good conduct, and consistent practice.

They taught him that success in wrestling requires not only physical strength but also mental toughness, dedication, and continuous improvement.

Disappointment Over the Lack of Recognition and Support

Despite achieving success in various state-level weight categories, ranging from 32 kg to 97 kg, and representing himself in national-level competitions eight times, Lokesh feels that he has not received the expected support and facilities from the government.

Today, many youngsters are showing interest in learning traditional wrestling and joining Garadis. However, the availability of essential wrestling equipment, proper training facilities, and adequate honorariums for coaches remains insufficient.

These shortcomings make it increasingly difficult to sustain and develop the traditional wrestling culture.

Lokesh urges the government to take appropriate steps to provide financial support and recognition to senior wrestlers, along with essential facilities for young and aspiring wrestlers.

The Unfulfilled Dream of Winning the Kanteerava Award

Although Lokesh has won several awards and medals throughout his wrestling career, one of his long-standing dreams remained unfulfilled: winning the prestigious Kanteerava Award at the Dasara Sports Festival.

He continues to feel disappointed that he could not achieve this milestone. However, rather than giving up on that dream, he now hopes to fulfil it through the next generation of young wrestlers.

Having trained and guided hundreds of youngsters so far, Lokesh is determined to identify and nurture more talented wrestlers in the coming years.

Lokesh’s Message to the Younger Generation

According to Lokesh, some people who lack a proper understanding of wrestling judge children based on their height, weight, and physical appearance, often concluding that they cannot achieve success in the sport.

He advises young aspirants not to pay attention to such discouraging opinions.

“Height, weight, and body structure should never become obstacles to achievement. What matters is hard work, passion, determination, and the confidence that I can achieve my goal. With continuous practice and discipline, anyone can reach their desired destination,” is his message to the younger generation.

He also believes that private organisations and philanthropists can play an important role in supporting traditional wrestling and nurturing more talented wrestlers.

If the government provides adequate facilities and encouragement, young wrestlers from Karnataka can bring pride to the country not only at the national level but also on the international stage, including the Olympics.

Building the Dreams of the Next Generation

Although Lokesh Jayasimha could not fulfil every dream he envisioned during his wrestling career, he has found a greater purpose in guiding and inspiring others.

Through his experience, dedication, and commitment to the sport, he has become a mentor to hundreds of young wrestling aspirants.

His journey, which began with his father’s dream, was strengthened by his elder brother’s support, shaped by his coaches’ guidance, and sustained by his own determination, is a remarkable example of perseverance and family sacrifice.

Today, Pailwan Lokesh Jayasimha is not just a wrestler who has achieved several milestones but also a mentor who is helping hundreds of youngsters discover their potential and pursue their dreams.

His contribution to preserving traditional wrestling and shaping the future of young wrestlers is truly commendable.

Leave a Reply