ಮೈಸೂರು: ಭಾರತದ ಹೆಮ್ಮೆಯ ಯುವ ಚೆಸ್ ಆಟಗಾರ ಹಾಗೂ ವಿಶ್ವ ಚಾಂಪಿಯನ್ ಡಿ. ಗುಕೇಶ್ ಅವರು ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಮತ್ತೊಮ್ಮೆ ವಿಜಯಶಾಲಿಯಾಗಿ ದೇಶದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿಯಲಿ ಎಂಬ ಆಶಯದೊಂದಿಗೆ ಮೈಸೂರಿನಲ್ಲಿ ವಿಶೇಷ ಅಭಿನಂದನಾ ಹಾಗೂ ಶುಭಹಾರೈಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸುವರ್ಣ ಬೆಳಕು ಫೌಂಡೇಶನ್ ಹಾಗೂ ಪಾಂಚಜನ್ಯ ಚಾರಿಟೇಬಲ್ ಟ್ರಸ್ಟ್ (ರಿ.), ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಶ್ರೀ ರಾಘವೇಂದ್ರ ಮಠದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಡಿ. ಗುಕೇಶ್ ಅವರ ಭಾವಚಿತ್ರವಿರುವ ಪೋಸ್ಟರ್ ಪ್ರದರ್ಶಿಸಿ, ಅವರ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಚೆಸ್ ಆಟಗಾರ ಹಾಗೂ ಚೆಸ್ ಕ್ಷೇತ್ರದ ಸಾಧಕರಾದ ವೈ.ಜಿ. ವಿಜಯೇಂದ್ರ ಅವರು, ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಉಜ್ಬೇಕಿಸ್ತಾನದ ಪ್ರಬಲ ಆಟಗಾರ ಜಾವೊಖಿರ್ ಸಿಂದರೋವ್ ಅವರನ್ನು ಎದುರಿಸಲಿರುವ ಭಾರತದ ಯುವ ಪ್ರತಿಭೆ ಡಿ. ಗುಕೇಶ್ ಅವರಿಗೆ ಮೈಸೂರಿನ ಕ್ರೀಡಾಭಿಮಾನಿಗಳು, ಚೆಸ್ ಆಟಗಾರರು ಹಾಗೂ ಸಾರ್ವಜನಿಕರ ಪರವಾಗಿ ಸಾಮೂಹಿಕವಾಗಿ ಶುಭಹಾರೈಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ತಮಿಳುನಾಡಿನವರಾದ ಡಿ. ಗುಕೇಶ್ ಅವರು ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರ ಸಾಧನೆಯಿಂದ ಪ್ರೇರಣೆ ಪಡೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಯುವ ಪ್ರತಿಭೆಯಾಗಿದ್ದಾರೆ. ಅವರ ಸಾಧನೆ ದೇಶದ ಯುವ ಚೆಸ್ ಆಟಗಾರರಿಗೆ ಹೊಸ ಸ್ಫೂರ್ತಿ ಹಾಗೂ ಆತ್ಮವಿಶ್ವಾಸ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ “ಇತ್ತೀಚಿನ ದಿನಗಳಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ. ಕ್ರಿಕೆಟ್ ಮಾತ್ರವಲ್ಲದೆ ಚೆಸ್ ಸೇರಿದಂತೆ ಎಲ್ಲ ಕ್ರೀಡೆಗಳಲ್ಲೂ ಭಾರತೀಯ ಕ್ರೀಡಾಪಟುಗಳು ಭಾಗವಹಿಸಿ ದೇಶಕ್ಕೆ ಪ್ರಶಸ್ತಿ ಹಾಗೂ ಗೌರವ ತರುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿಯೂ ಭಾರತ ಎಲ್ಲ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಗಳಿಸಬೇಕು ಎಂಬುದು ನಮ್ಮ ಆಶಯ.
ಕ್ರೀಡಾಪಟುಗಳಿಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ, ಪ್ರೋತ್ಸಾಹಧನ ಹಾಗೂ ಅಗತ್ಯ ಸೌಲಭ್ಯಗಳು ದೊರೆಯಬೇಕು. ನಮ್ಮಂತಹ ಸಂಘ-ಸಂಸ್ಥೆಗಳು ಕೂಡ ಪ್ರತಿಭಾವಂತ ಕ್ರೀಡಾಪಟುಗಳಿಗೆ ಬೆಂಬಲ ಮತ್ತು ಸಹಕಾರ ನೀಡಿದಾಗ ಇನ್ನಷ್ಟು ಯುವ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ. ಅವರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಲು ನೆರವಾಗುತ್ತಾರೆ.”
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಯೋಗ ಸಾಧಕರು, ಚಿನ್ನದ ಪದಕ ವಿಜೇತರು ಹಾಗೂ ಹಿರಿಯ ಯೋಗಾಚಾರ್ಯರಾದ ಯೋಗಪ್ರಕಾಶ್ ಮತ್ತು ಅಂತಾರಾಷ್ಟ್ರೀಯ ಚದುರಂಗ ಆಟಗಾರರು, ಕರ್ನಾಟಕದ ಮಾಜಿ ಚೆಸ್ ಚಾಂಪಿಯನ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಜಯೇಂದ್ರ, ಸುವರ್ಣ ಬೆಳಕು ಪೌಂಡೇಷನ್ ಅಧ್ಯಕ್ಷ ಮಹೇಶ್, ಎಸ್ ಕಿಶೋರ್ ಉಪಸ್ಥಿತರಿದ್ದರು.
Mass Prayer and Good Wishes for D. Gukesh’s Victory in Mysuru
Mysuru: A special felicitation and collective prayer programme was organised in Mysuru, wishing India’s young chess sensation and World Champion D. Gukesh continued success in the ongoing World Chess Championship and hoping that he would once again bring glory to the nation on the global stage.
The programme was jointly organised by Suvarna Belaku Foundation and Panchajanya Charitable Trust (Regd.), Mysuru, at Sri Raghavendra Mutt on Narayana Shastri Road, Mysuru. On the occasion, a poster featuring D. Gukesh was displayed, and special prayers were offered for his victory.
Speaking on the occasion, international chess player and chess enthusiast Y.G. Vijayendra said that the programme was organised to convey the collective wishes and blessings of Mysuru’s sports enthusiasts, chess players and the general public to India’s young talent D. Gukesh, who was set to face formidable Uzbekistani player Javokhir Sindarov in the World Chess Championship.
He observed that D. Gukesh, hailing from Tamil Nadu, is an exceptional young talent who drew inspiration from chess legend Viswanathan Anand and has carved a distinct identity for himself on the international chess stage. His achievements, he said, would inspire young chess players across the country and instil confidence in the next generation.
The programme was attended by internationally renowned yoga practitioner, gold medallist and senior yoga exponent Sri Yogaprakash, along with international chess player, former Karnataka chess champion and District Rajyotsava Award recipient Sri Vijayendra Kishore.
The gathering collectively extended its best wishes to D. Gukesh, expressing hope that he would emerge victorious and bring further laurels to India.
DGukesh #Gukesh #WorldChessChampionship #ChessChampion #IndianChess #ChessIndia #Mysuru #Mysore #MysuruNews #SuvarnaBelakuFoundation #PanchajanyaCharitableTrust #ChessPlayers #TeamIndia #ProudIndian #SupportGukesh #BestWishesGukesh #IndiaProud #ChessLegends #YoungChampion #MysuruEvents
