Mysuru: Students have a crucial role to play in the fight against drug abuse, and staying away from drugs should be everyone’s goal, said DCP (Law and Order) Dr. Harsha Priyamvada.

“Drug addiction is anti-social. ‘ BEDA BRO ’ should be the goal of everyone,” she said.

She was speaking after inaugurating a walkathon organised on Saturday by the Madhava Krupa Ganeshotsava Samiti of the Janajagarana Trust with the message “Say No to Drugs”, aimed at creating awareness among youngsters about the harmful effects of drugs and promoting a healthy, drug-free society.

The walkathon was flagged off near SDM College on JLB Road, where Dr. Priyamvada handed over the national flag to a student. The walkathon culminated at Maharaja Junior College on JLB Road and witnessed the participation of thousands of students.

Holding placards carrying anti-drug messages and raising slogans, the students took part in the walkathon to spread awareness among the public about the dangers of drug abuse.

“Several years ago, I too participated in such walkathons as a student. Such initiatives are very important in building a better society,” Dr. Priyamvada said.

She called upon everyone to join hands in the fight against drug abuse, describing it as a collective social responsibility.

Dr. M. R. Seetharam, founding member of the Swami Vivekananda Youth Movement and noted orthopaedic surgeon, said all forms of addiction could have a devastating impact on families.

Recalling several experiences from his service journey, Dr. Seetharam said that drug abuse and other harmful addictions not only affect individuals but also have serious consequences for their families and society as a whole.

Kamakshi Hospital Managing Director Mahesh Shenoy, Madhava Krupa Ganeshotsava Samiti chief convener  Darshan Raj, Suresh, and others were present.

ಮಾದಕ ದ್ರವ್ಯ ವ್ಯಸನ ಸಮಾಜ ವಿರೋಧಿ: ಡಿಸಿಪಿ ಡಾ. ಹರ್ಷಾ   ಪ್ರಿಯಂವದ

ಮೈಸೂರು:  ಮಾದಕ ದ್ರವ್ಯ ವಿರೋಧಿ ಹೋರಾಟದಲ್ಲಿ ವಿದ್ಯಾರ್ಥಿಗಳ ಪಾತ್ರ ಅತಿ ಮಹತ್ವದ್ದು. ಮಾದಕ ದ್ರವ್ಯ ವ್ಯಸನಿಗಳಾಗುವುದು ಸಮಾಜ ವಿರೋಧಿ. ಮಾದಕ ದ್ರವ್ಯ ಬೇಡ ಬ್ರೋ ಎಲ್ಲರ ಗುರಿಯಾಗಬೇಕು ಎಂದು ಡಿಸಿಪಿ ಡಾ. ಡಾ. ಹರ್ಷಾ   ಪ್ರಿಯಂವದ ತಿಳಿಸಿದ್ದಾರೆ.
 ಜನಜಾಗರಣ ಟ್ರಸ್ಟ್ ಆಯೋಜಿಸಿರುವ ಮಾಧವ ಕೃಪಾ ಗಣೇಶೋತ್ಸವ ಸಮಿತಿ  ಯುವಜನರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಮಾದಕ ವಸ್ತು ಮುಕ್ತ  ಆರೋಗ್ಯಕರ,  ಸಮಾಜ ನಿರ್ಮಿಸುವ ಉದ್ದೇಶದಿಂದ “ಸೇ  ನೋ ಟು  ಡ್ರಗ್ಸ್ ” (ಮಾದಕ ವಸ್ತುಗಳು ಬೇಡವೇಬೇಡ)   ಎಂಬ ಸಂದೇಶದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ  ವಾಕಥಾನ್ ಅನ್ನು ಶನಿವಾರ ಬೆಳಗ್ಗೆ  ಜೆಎಲ್‌ಬಿ ರಸ್ತೆಯ ಎಸ್‌ಡಿಎಂ ಕಾಲೇಜು ಸಮೀಪ  ವಿದ್ಯಾರ್ಥಿನಿಯೊಬ್ಬಳಿಗೆ ರಾಷ್ಟ್ರ ಧ್ವಜ ಹಸ್ತಾಂತರಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

 ಜೆಎಲ್‌ಬಿ ರಸ್ತೆಯ ಮಹಾರಾಜ ಜೂನಿಯರ್ ಕಾಲೇಜಿನಲ್ಲಿ ಮುಕ್ತಾಯಗೊಂಡ ಈ ವಾಕಥಾನ್  ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಾದಕ ದ್ರವ್ಯ ವಿರೋಧಿ ಘೋಷಣಾ ಫಲಕ ಹಿಡಿದುಕೊಂಡು ಘೋಷಣೆ ಮೊಳಗಿಸುತ್ತಾ ವಿದ್ಯಾರ್ಥಿಗಳು ವಾಕಥಾನ್ ಮೂಲಕ ಜನ ಜಾಗೃತಿ ಮೂಡಿಸಿದರು.

“ಕೆಲ ವರ್ಷಗಳ ಹಿಂದೆ ತಾವು ಕೂಡಾ ವಿದ್ಯಾರ್ಥಿನಿಯಾಗಿ ಈ ತೆರನಾದ ವಾಕಥಾನ್ ನಲ್ಲಿ ಪಾಲ್ಗೊಳ್ಳುತ್ತಿದ್ದೆವು. ಸಮಾಜದ ನಿರ್ಮಾಣದಲ್ಲಿ ಇಂತಹ ಪ್ರಯತ್ನಗಳು ಅತಿ ಮುಖ್ಯ,” ಎಂದು ಅವರು ತಿಳಿಸಿದರು.

ಮಾದಕ ದ್ರವ್ಯ ವಿರೋಧಿ ಹೋರಾಟದಲ್ಲಿ  ಎಲ್ಲರೂ ಕೈ ಜೋಡಿಸಬೇಕು. ಅದು ನಮ್ಮ ಸಾಮಾಜಿಕ ಜವಾಬ್ದಾರಿ ಎಂದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸ್ಥಾಪಕ ಸದಸ್ಯ, ಖ್ಯಾತ ಎಲುಬು ಶಸ್ತ್ರ ಚಿಕಿತ್ಸಕ ಡಾ. ಎಂ ಆರ್ ಸೀತಾರಾಮ್ ಮಾತನಾಡಿ, ಎಲ್ಲಾ ರೀತಿಯ ಮಾದಕ ವ್ಯಸನಗಳು, ವ್ಯಸನಿಗಳ ಕುಟುಂಬಕ್ಕೆ ಮಾರಕ ಎಂದರು.
ತಮ್ಮ ಸೇವಾ ಪಯಣದ ಹಲವು ಉದಾಹರಣೆಗಳನ್ನು ನೆನಪಿಸಿಕೊಂಡ ಅವರು, ಮಾದಕ ದ್ರವ್ಯ ಸೇರಿದಂತೆ ಎಲ್ಲಾ ಕೆಟ್ಟ ವ್ಯಸನಗಳು, ವ್ಯಕ್ತಿಗಳ ಜೊತೆಗೆ ಅವರ ಕುಟುಂಬ ಹಾಗು ಸಮಾಜಕ್ಕೆ ಮಾರಕ ಎಂದರು.

ಕಾಮಾಕ್ಷಿ ಆಸ್ಪತ್ರೆಯ ಎಂಡಿ ಮಹೇಶ್ ಶಣೈ, ಮಾಧವ ಕೃಪಾ ಗಣೇಶೋತ್ಸವ ಸಮಿತಿ ಮುಖ್ಯ ಸಂಚಾಲಕ ದರ್ಶನ್ ರಾಜ್, ಸುರೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply