ಮೈಸೂರು, ಡಿ.೭: ಭಾರತದ ಪ್ರಮುಖ ಎಥ್ನಿಕ್ ವೇರ್ ರೀಟೈಲರ್ ವರಮಹಾಲಕ್ಷ್ಮಿ ಸಿಲ್ಕ್ಸ್ ತನ್ನ ೭೫ನೇ ಶೋರೂಮ್ ಅನ್ನು ಮೈಸೂರಿನ ಗೋಕುಲಂ ರಸ್ತೆಯಲ್ಲಿ ಉದ್ಘಾಟಿಸಿದೆ.ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಮ್ಮ ಅಮೃತ ಹಸ್ತದಿಂದ ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಮಳಿಗೆಯನ್ನು ಲೋಕಾರ್ಪಣೆ ಮಾಡಿದರು.
ಪ್ರೀಮಿಯಂ ರೇಷ್ಮೆ ಸಂಗ್ರಹ:ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಕಡಿಮೆ ಬೆಲೆಯಲ್ಲಿಯೇ ಪ್ರೀಮಿಯಂ-ಗುಣಮಟ್ಟದ ರೇಷ್ಮೆ ಸೀರೆಗಳನ್ನು ಒದಗಿಸುವುದಕ್ಕೆ ಪ್ರಸಿದ್ಧ.ಮಳಿಗೆಯಲ್ಲಿ ಕಾಂಚೀಪುರಂ, ಬನಾರಸಿ, ಪಟೋಲಾ, ಕೋಟಾ, ಪೈಠಾನಿ, ಆರ್ಗನ್ಜಾ, ಕುಪ್ಪಡಂ, ಇಕ್ಕತ್,ಬಂಧನಿ ಸೇರಿದಂತೆ ವಿವಿಧ ಸಂಗ್ರಹಗಳು ಲಭ್ಯ.
ಉದ್ಘಾಟನಾ ಸಮಾರಂಭದಲ್ಲಿ ಸಾಯಿ ಸಿಲ್ಕ್ಸ್ ಕಲಾಮಂದಿರ್ ಲಿಮಿಟೆಡ್ ನಿರ್ದೇಶಕ ದುರ್ಗಾರಾವ್ ಚಲವಾದಿ ಮಾತನಾಡಿ,
“೭೫ನೇ ಶೋರೂಮ್ನೊಂದಿಗೆ ವರಮಹಾಲಕ್ಷ್ಮಿ ಸಿಲ್ಕ್ಸ್ ಪರಂಪರೆಯನ್ನು ಮೈಸೂರಿಗೆ ತರಲು ನಾವು ಸಂತೋಷ. ಉತ್ತಮ ಬೆಲೆ, ಪ್ರೀಮಿಯಂ ಗುಣಮಟ್ಟ ಮತ್ತು ವಿಶಾಲ ಆಯ್ಕೆಯನ್ನು ಸ್ಪರ್ಧಾತ್ಮಕ ಬೆಲೆಗೆ ನೀಡುವುದು ನಮ್ಮ ಬದ್ಧತೆ,” ಎಂದು ತಿಳಿಸಿದರು.
