ಮೈಸೂರು: 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗಾಸನ ಕ್ರೀಡೆಯನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ ಜುಲೈ 5ರಂದು ನಗರದಲ್ಲಿ ರಾಜ್ಯಮಟ್ಟದ ಶಾಲಾ-ಕಾಲೇಜು ಯೋಗಾಸನ ಚಾಂಪಿಯನ್‌ಶಿಪ್ ಹಾಗೂ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಜಿಕೆ ವಿನ್ಯಾಸ ಯೋಗ ಕೇಂದ್ರ, ಶ್ರೀ ಕೃಷ್ಣ ಯೋಗಾಸ್, ಮೈಸೂರು ವಿವೇಕಾನಂದ ಯೋಗಾಸ್ ಹಾಗೂ ಯೋಗ ಸ್ಪೋರ್ಟ್ಸ್ ಫೌಂಡೇಶನ್‌ನ ಸಂಯುಕ್ತ ಆಶ್ರಯದಲ್ಲಿ ನಗರದ ಮಹಾರಾಜ ಮೈದಾನದ ಸಮೀಪ ಇರುವ ಮೈಸೂರು ವಿಶ್ವವಿದ್ಯಾಲಯದ ಯೋಗ ಭವನದಲ್ಲಿ ಬೆಳಿಗ್ಗೆಯಿಂದ ಸ್ಪರ್ಧೆಗಳು ನಡೆಯಲಿವೆ.

ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ 10 ವರ್ಷಕ್ಕಿಂತ ಕಡಿಮೆ, 11–14, 15–20, 21–25, 26–35, 36–45, 46–55 ಹಾಗೂ 56 ವರ್ಷ ಮೇಲ್ಪಟ್ಟ ವಿಭಾಗಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ ₹2,000, ದ್ವಿತೀಯ ಬಹುಮಾನವಾಗಿ ₹1,500 ಹಾಗೂ ತೃತೀಯ ಬಹುಮಾನವಾಗಿ ₹1,000 ನಗದು ಸೇರಿದಂತೆ ಪ್ರಶಸ್ತಿ ಪತ್ರ ಮತ್ತು ಆಕರ್ಷಕ ಬಹುಮಾನಗಳನ್ನು ಪ್ರದಾನ ಮಾಡಲಾಗುವುದು. ಅಲ್ಲದೆ, ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ವಿಭಾಗದಲ್ಲಿ ಆಯ್ಕೆಯಾಗುವ ನಾಲ್ವರು ವಿಜೇತರಿಗೆ ತಲಾ ₹4,000 ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.

ರಾಜ್ಯಮಟ್ಟದ ಶಾಲಾ-ಕಾಲೇಜು ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ 1–2, 3–4, 5–6, 7–8, 9–10ನೇ ತರಗತಿ, ಪಿಯುಸಿ ಹಾಗೂ ಪದವಿ ವಿಭಾಗಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿದ್ದು, ಪ್ರತಿ ವಿಭಾಗದಲ್ಲಿ ಮೊದಲ ಆರು ಸ್ಥಾನಗಳ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವುದು.

ಯೋಗವು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯವನ್ನು ವೃದ್ಧಿಸುವ ಸಮಗ್ರ ಜೀವನ ಪದ್ಧತಿಯಾಗಿದ್ದು, ಮಕ್ಕಳಲ್ಲಿ ಮತ್ತು ಯುವಜನರಲ್ಲಿ ಯೋಗಾಸನ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸುವ ಜೊತೆಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧಕರನ್ನು ರೂಪಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ರಾಷ್ಟ್ರಮಟ್ಟದ ಮುಕ್ತ ವಿಭಾಗಕ್ಕೆ ₹500 ಹಾಗೂ ರಾಜ್ಯಮಟ್ಟದ ಶಾಲಾ-ಕಾಲೇಜು ವಿಭಾಗಕ್ಕೆ ₹350 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಯೋಗಾಸಕ್ತರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸಂಘಟಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9620004686 ಹಾಗೂ 9538462968 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

State-Level School & College Yogasana Championship – 2026 🏆

The State-Level School & College Yogasana Championship and National Open Yogasana Competition will be held on 5 July 2026 at the Yoga Bhavana, University of Mysore, Mysuru.

The championship aims to promote Yogasana as a competitive sport and encourage students and yoga enthusiasts to showcase their talent. Participants from various age groups and educational institutions across the state and the country are expected to compete.

📍 Venue: Yoga Bhavana, University of Mysore, Near Maharaja’s Grounds, Mysuru
📅 Date: 5 July 2026

Join us in celebrating the spirit of yoga, discipline, and excellence.

#Yogasana #YogaChampionship2026 #InternationalDayOfYoga #Mysuru #YogaSports #SchoolChampionship #CollegeChampionship #NationalOpen #YogaForAll #Karnataka #FitIndia #Sports #Youth #Wellness #YogaCompetition

Leave a Reply