ಮೈಸೂರು, ಜು. 31: ಕರ್ನಾಟಕ ಸೈಕಲ್ ಪೋಲೋ ಅಸೋಸಿಯೇಷನ್ ವತಿಯಿಂದ 4ನೇ ವರ್ಷದ ಜಿಲ್ಲಾಮಟ್ಟದ ಸೈಕಲ್ ಪೋಲೋ ಪಂದ್ಯಾವಳಿಯನ್ನು ಆಗಸ್ಟ್ 2ರಂದು ಬೆಳಿಗ್ಗೆ 11 ಗಂಟೆಗೆ ಸರಸ್ವತಿಪುರಂ ಪೊಲೀಸ್ ಠಾಣೆ ಮುಂಭಾಗದ ಮಾನಸಗಂಗೋತ್ರಿಯ ಗೌತಮ್ ಹಾಸ್ಟೆಲ್ ಮೈದಾನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸೈಕಲ್ ಪೋಲೋ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಗೋಪಾಲಸ್ವಾಮಿ ಶಿಶುವಿಹಾರ್ ವಿದ್ಯಾಸಂಸ್ಥೆಗಳ ಮೈಸೂರು ಕರೆಸ್ಪಾಂಡೆಂಟ್ ಎನ್.ಆರ್. ಮಂಜುನಾಥ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುವರ್ಣ ಬೆಳಕು ಫೌಂಡೇಷನ್ (ರಿ.) ಅಧ್ಯಕ್ಷರು ಹಾಗೂ ಸಂಜೆ ಸಮಾಚಾರ ದಿನಪತ್ರಿಕೆಯ ಮೈಸೂರು ಜಿಲ್ಲಾ ವರದಿಗಾರ ಎಸ್. ಮಹೇಶ್, ವಾಣಿಜ್ಯೋದ್ಯಮಿ ರಾಮಾಂಜನೇಯ ರೆಡ್ಡಿ, ಸೆಂಟ್ರಲೈಸ್ಟ್ ಪ್ಲೇಸ್‌ಮೆಂಟ್ಸ್ ನಿರ್ದೇಶಕಿ ಶ್ರೀದೇವಿ ರೆಡ್ಡಿ, ಕರ್ನಾಟಕ ಸೈಕಲ್ ಪೋಲೋ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ಸೈಕಲ್ ಪೋಲೋ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷೆ ಡಾ. ವಿಜಯಲಕ್ಷ್ಮಿ ಎ. ಪಾಟೀಲ್ ಹಾಗೂ ಕರ್ನಾಟಕ ಸೈಕಲ್ ಪೋಲೋ ಅಸೋಸಿಯೇಷನ್ ಖಜಾಂಚಿ ಮತ್ತು ಸೈಕಲ್ ಪೋಲೋ ಫೆಡರೇಷನ್ ಆಫ್ ಇಂಡಿಯಾದ ಸಹಕಾರ್ಯದರ್ಶಿ ಗುರುರಾಜ್ ಜೋಶಿ ಭಾಗವಹಿಸಲಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳಿಂದ ಸೈಕಲ್ ಪೋಲೋ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದು, ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಸೈಕಲ್ ಪೋಲೋ ಅಸೋಸಿಯೇಷನ್ ಪ್ರಕಟಣೆಯಲ್ಲಿ ಕೋರಿದೆ.
