ಮೈಸೂರು, ಜೂನ್ 17: ರಾಜರ್ಷಿ ಹಾಗೂ ಕಲಾಪೋಷಕರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142ನೇ ಜಯಂತಿ ಅಂಗವಾಗಿ ಜನ ಚೈತನ್ಯ ಫೌಂಡೇಷನ್ (ರಿ.) ವತಿಯಿಂದ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಸಹಯೋಗದಲ್ಲಿ “ಮರೆಯೋದುಂಟೆ ಮೈಸೂರು ದೊರೆಯ…” ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವು ಜೂನ್ 25ರಂದು ಸಂಜೆ 4.30ಕ್ಕೆ ನಗರದ ಕಿರುರಂಗಮಂದಿರ, ಕಲಾಮಂದಿರ ಆವರಣ, ಹುಣಸೂರು ರಸ್ತೆಯಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಆರ್. ಲಕ್ಷ್ಮಣ್ ಅವರು ಸಾರಥ್ಯ ವಹಿಸಲಿದ್ದು, ಭಾವಗೀತೆ ಮತ್ತು ಭಕ್ತಿಗೀತೆಗಳ ಗಾಯನದ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಲಾ ಪ್ರೋತ್ಸಾಹ ಹಾಗೂ ಸಾಂಸ್ಕೃತಿಕ ಕೊಡುಗೆಯನ್ನು ಸ್ಮರಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಇ.ಆರ್. ಜಿಂದಯ್, ಪುಷ್ಪಲತಾ, ಕವಿತಾ ಕಾಮತ್, ಜಾಯ್ ವೈಶಾಖ್, ಡಾ. ಶ್ರೀಲತಾ, ಆರ್. ಲಕ್ಷ್ಮಣ್, ವಿಜಯ್ ಆನಂದ್, ಬಸವರಾಜು ಎಸ್., ಮೀರಾಶಂಭು ಹಾಗೂ ರೇಖಾ ಗೌತಮ್ ಅವರು ಗಾಯಕರಾಗಿ ಭಾಗವಹಿಸಲಿದ್ದಾರೆ.
ಇದೇ ವೇಳೆ ರವಿಶಂಕರ್ ಟಿ.ಎನ್. (ಕೀಬೋರ್ಡ್), ವಿ. ಹೆಬ್ಬಾಡಿ ಮಹದೇವ (ತಬಲಾ), ಬಾಬಿ (ಗಿಟಾರ್), ಪ್ರದೀಪ್ (ರಿದಂ ಪ್ಯಾಡ್) ಹಾಗೂ ಸುಶೀಮ್ ಸಂಘಸೇನ (ಡ್ರಮ್ಸ್) ಅವರು ವಾದ್ಯ ಸಹಕಾರ ನೀಡಲಿದ್ದಾರೆ.
ಕಾರ್ಯಕ್ರಮದ ಆಯೋಜಕರಾಗಿ ಶ್ರೀಮತಿ ಸಿ. ಸಬಿತ, ಟಿ. ಚೇತನ್, ಶ್ರೀನಿವಾಸ್, ಜಿ. ಪೀಟರ್ ಹಾಗೂ ಡಿ.ಎಲ್. ವಿಕಾಸ್ ಕಾರ್ಯನಿರ್ವಹಿಸುತ್ತಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜನ ಚೈತನ್ಯ ಫೌಂಡೇಷನ್ (ರಿ.) ಅಧ್ಯಕ್ಷರು ಹಾಗೂ ವಕೀಲರಾದ ಆರ್. ಲಕ್ಷ್ಮಣ್ ಮನವಿ ಮಾಡಿದ್ದಾರೆ.
ಪ್ರವೇಶ ಉಚಿತ.
ಸಂಪರ್ಕ: 9243506024
