ವರದಿ :ಮಹೇಶ್ ನಾಯಕ್
ಮೈಸೂರು: ಮೈಸೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಅನೇಕ ಪ್ರತಿಭಾವಂತ ಯೋಗ ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದರೂ, ಅವರಿಗೆ ನಿರಂತರ ತರಬೇತಿ, ತಾಂತ್ರಿಕ ಮಾರ್ಗದರ್ಶನ ಹಾಗೂ ಸ್ಪರ್ಧಾತ್ಮಕ ಅವಕಾಶಗಳ ಕೊರತೆ ಕಂಡುಬರುತ್ತಿದೆ. ಈ ಹಿನ್ನೆಲೆ ಕ್ರೀಡಾ ಯುವ ಸಬಲೀಕರಣ ಮತ್ತು ಇಲಾಖೆ ವತಿಯಿಂದ ಕ್ರೀಡಾ ವಸತಿ ನಿಲಯಗಳಲ್ಲಿ ಯೋಗ ತರಬೇತಿ ಆರಂಭಿಸಿ, ಅರ್ಹ ಯೋಗ ತರಬೇತುದಾರರನ್ನು ಇಲ್ಲದೆ ಆಸಕ್ತ ಯೋಗ ಪಟುಗಳು ಖಾಸಾಗಿವಲಯದಲ್ಲಿ ಕಲಿತುಕೊಂಡು ಯೋಗದಲ್ಲಿ ಸಾಧನೆ ಮಾಡುತ್ತಿದ್ದು. ರಾಜ್ಯಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಯೋಗಸಾನ ಸ್ಪರ್ಧೇಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಳ್ಳುತಿದ್ದು. ಗ್ರಾಮಾಂತರ ಹಾಗೂ ನಗರ ಭಾಗದಲ್ಲಿ ಇನ್ನೂ ಸಾಕಷ್ಟು ಯೋಗಪಟುಗಳು ತಯಾರುಗುತ್ತಿದ್ದು ಅವರಿಗೆ ಇನ್ನೂ ಹೆಚ್ಚಿನ ಸೂಕ್ತ ಮಾರ್ಗದರ್ಶನ ಅವಶ್ಯಕತೆ ಇರುವುದರಿಂದ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವ ಚಲ ಹೊಂದಿರುವ ಯೋಗಪಟುಗಳು ಕರ್ನಾಟಕ ಸರ್ಕಾರ ಹಾಗೂ ಕ್ರೀಡಾ ಯುವಸಬಲೀಕರಣ ಸಹಯೋಗದಲ್ಲಿ ನುರಿತ ಹಾಗೂ ಪದವಿ ಪಡೆದ ಯೋಗ ಶಿಕ್ಷಕರನ್ನು ನೇಮಿಸಿಕೊಂಡಾಗ ಮಾತ್ರ ಗ್ರಾಮೀಣ, ಹಾಗೂ ನಗರದಲ್ಲಿ ಇನ್ನು ಹೆಚ್ಚು ಯೋಗ ಪಟುಗಳು ತಯಾರುಗುತ್ತಾರೆ.
ಆತಿಥೇಯ ಭಾರತ ಐತಿಹಾಸಿಕ ಸಾಧನೆ ಮಾಡಿ ಒಟ್ಟು ೧೧೪ ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.ಐದು ದಿನಗಳ ಕಾಲ ನಡೆದ ಈ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತ ೧೦೨ ಚಿನ್ನದ ಪದಕಗಳನ್ನು ಸೇರಿ ಒಟ್ಟು ೧೧೪ ಪದಕಗಳನ್ನು ತನ್ನದಾಗಿಸಿಕೊಂಡು ಯೋಗಾಸನ ಕ್ರೀಡೆಯಲ್ಲಿ ಭಾರತ ಮೇಲುಗೈ ಸಾಧಿಸಿದೆ. ಈಗ ವಿಶ್ವ ಮಟ್ಟದಲ್ಲಿ ಯೋಗದಲ್ಲಿ ವಿಶ್ವ ಯೋಗಸಾಸನ ಚಾಂಪಿಯನ್‌ಶಿಪ್ ೨೦೨೬ ಅಗ್ರಸ್ಥಾನದಲ್ಲಿದೆ ಹಾಗೂ ಏಷ್ಯನ್ ಗೇಮ್ಸ್‌ನಂತಹ ಕ್ರೀಡಾಕೂಟಗಳಲ್ಲಿ ಯೋಗ ಕ್ರೀಡೆಯಲ್ಲಿ ಭಾರತವು ಅತ್ಯಧಿಕ ಪದಕಗಳನ್ನು ಗೆದ್ದು ಸಾಧನೆ ಮಾಡಿದೆ.ಇದರಿಂದ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಹಾಗೂ ವ್ಯವಸ್ಥಿತ ತರಬೇತಿ ದೊರೆಯುವ ಜೊತೆಗೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಾಧನೆ ಮಾಡಲು ಅವಕಾಶ ಸಿಗಲಿz. ಯೋಗವನ್ನು ಕೇವಲ ಆರೋಗ್ಯ ಚಟುವಟಿಕೆಯಾಗಿಯೇ ಅಲ್ಲದೆ ಕ್ರೀಡಾ ಕ್ಷೇತ್ರದಲ್ಲಿಯೂ ಮತ್ತಷ್ಟು ಬಲಪಡಿಸುವ ಅಗತ್ಯವಿದ್ದು, ಈ ಕ್ರಮದಿಂದ “ಯೋಗ ನಗರಿ ಮೈಸೂರು” ಎಂಬ ಹೆಗ್ಗಳಿಕೆಗೆ ಇನ್ನಷ್ಟು ಅರ್ಥಪೂರ್ಣತೆ ದೊರೆಯಲಿದೆ.
SportsYoga #Yogasana #Mysuru #YogaCompetition #Fitness
ಇತ್ತೀಚಿನ ದಿನಗಳಲ್ಲಿ ಮೈಸೂರಿನಲ್ಲಿ ಯೋಗ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಯೋಗ ಕ್ರೀಡೆಯ ಬಗ್ಗೆ ಯುವಜನರಲ್ಲಿ ಆಸಕ್ತಿ ವೃದ್ಧಿಯಾಗುತ್ತಿದೆ. ಕ್ರೀಡಾ ವಸತಿ ನಿಲಯಗಳಲ್ಲಿ ಯೋಗ ತರಬೇತಿಯನ್ನು ಆರಂಭಿಸಿ ಸೂಕ್ತ ಮಾರ್ಗದರ್ಶನ ಹಾಗೂ ಸೌಲಭ್ಯಗಳನ್ನು ಒದಗಿಸಿದರೆ ರಾಷ್ಟ್ರ ಮಟ್ಟದ ಯೋಗ ಕ್ರೀಡಾಪಟುಗಳನ್ನು ರೂಪಿಸಲು ಸಾಧ್ಯವಾಗಲಿದೆ. ಯೋಗ ಪರಂಪರೆಯನ್ನು ಹೊಂದಿರುವ ಮೈಸೂರಿನಲ್ಲಿ ಈ ಯೋಜನೆ ಜಾರಿಗೊಂಡರೆ ರಾಜ್ಯದ ಯೋಗ ಪ್ರತಿಭೆಗಳಿಗೆ ಉತ್ತಮ ವೇದಿಕೆ ದೊರೆಯಲಿದೆ.”
→ ಮಂಜುನಾಥ್ ಬಿ.ಆರ್.

ಮೈಸೂರು ಜಿಲ್ಲೆಯ ಚಾಮುಂಡಿ ವಿಹಾರ ಕ್ರೀಡಾ ವಸತಿ ನಿಲಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯೋಗಾಸನ ತರಬೇತಿಯನ್ನು ಆರಂಭಿಸಿದರೆ, ಯೋಗಾಸನ ಕ್ರೀಡಾಪಟುಗಳಿಗೆ ವೈಜ್ಞಾನಿಕ ಹಾಗೂ ಪ್ರಚಲಿತ ಸ್ಪರ್ಧಾ ನಿಯಮಗಳ ಆಧಾರದ ಮೇಲೆ ಗುಣಮಟ್ಟದ ತರಬೇತಿ ನೀಡಲು ಸಾಧ್ಯವಾಗುತ್ತದೆ ಎಂದು ಕರ್ನಾಟಕದ ಮೊದಲ ಎನ್‌ಐಎಸ್ ಯೋಗ ತರಬೇತಿದಾರರಾದ ಕಿಶೋರ್ ಎಂ.ಆರ್. ತಿಳಿಸಿದ್ದಾರೆ.ಯೋಗಾಸನ ಕ್ರೀಡೆಯ ಬೆಳವಣಿಗೆಗೆ ತರಬೇತಿ ವ್ಯವಸ್ಥೆ ಅತ್ಯಂತ ಅಗತ್ಯವಾಗಿದ್ದು, ವ್ಯವಸ್ಥಿತ ತರಬೇತಿ ಮೂಲಕ ಹೆಚ್ಚು ಪ್ರತಿಭಾವಂತ ಯೋಗ ಪಟುಗಳನ್ನು ರೂಪಿಸಲು ಸಾಧ್ಯವಾಗಲಿದೆ. ಜೊತೆಗೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕ ಸಾಮರ್ಥ್ಯ ಹೊಂದಿದ ಕ್ರೀಡಾಪಟುಗಳನ್ನು ಬೆಳೆಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಿಶೋರ್ ಎಂ.ಆರ್.
ಕರ್ನಾಟಕದ ಮೊದಲ ಎನ್‌ಐಎಸ್ ಯೋಗ ತರಬೇತಿದಾರರು
ಮೈಸೂರು ಜಿಲ್ಲೆ
