*ಶ್ರೀ ಎಸ್.ವಿ.ಗೌಡಪ್ಪನವರ ಸಮಾಜಮುಖಿ ಅಭಿನಂದನಾ ಗ್ರಂಥ ಬಿಡುಗಡೆ ಮತ್ತು ಅವರ ಅರವತ್ತನೇ ವಿವಾಹ ವಾರ್ಷಿಕೋತ್ಸವದ ಸಮಾರಂಭ*

 

ಶ್ರೀ ಎಸ್.ವಿ ಗೌಡಪ್ಪನವರ ಸಮಾಜಮುಖಿ ಅಭಿನಂದನಾ ಗ್ರಂಥ ಬಿಡುಗಡೆ ಮತ್ತು ಅವರ ಅರವತ್ತನೇ ವಿವಾಹ ವಾರ್ಷಿಕೋತ್ಸವ ಸಮಾರಂಭವನ್ನು 6 ನೇ ತಾರೀಖು ಶುಕ್ರವಾರ ರೋಟರಿ ಮೈಸೂರು ಪಶ್ಚಿಮದ ಸಭಾಂಗಣದಲ್ಲಿ ಹಿರಿಯ ನಾಗರೀಕ ಮಂಡಳಿ ಜಯಲಕ್ಷ್ಮೀಪುರಂ ಮತ್ತು ಅಭಿಮಾನಿ ಬಳಗ ಮೈಸೂರು, ಇವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.ಪ್ರೋ.ಸಿ.ಪಿ.ಕೆ ಪ್ರಸಿದ್ಧ ಸಾಹಿತಿಗಳು ಮತ್ತು ಗಣ್ಯರು ಸೇರಿ ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಮೂಲಕ ಆನಂತರ ಕೃತಿ ಬಿಡುಗಡೆಮಾಡಿದರು. ನಂತರ ಸಮಾಜಮುಖಿ ಅಭಿನಂದನಾಕೃತಿ ಕುರಿತು ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಖ್ಯಾತ ಸಾಹಿತಿಗಳು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನು ಡಾ.ಎನ್.ಎಸ್ ರಾಮೇಗೌಡ ವಿಶ್ರಾಂತ ಕುಲಪತಿಗಳು ಶ್ರೀ ಎಸ್.ವಿ‌.ಗೌಡಪ್ಪನವರಿಗೆ ಶುಭಾಶಯ ಕೋರುತ್ತ ಅವರ ಸಾಧನೆಯನ್ನು ಹೊಗಳಿ ಇನ್ನೂ ಹಲವು ವಿಚಾರಗಳನ್ನು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಪಂಡಿತಮಾನ್ಯ ಹಲವರು ಹಾಜರಿದ್ದದ್ದು ಕಾರ್ಯಕ್ರಮದ ಮುಖ್ಯ ವಿಶೇಷವಾಗಿತ್ತು.

ವರದಿ :-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)

By admin