
ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ “ರಾಷ್ಟ್ರೀಯ ಯುವರತ್ನ” ಪ್ರಶಸ್ತಿಗೆ ಸಾಮಾಜಿಕ ಜಾಲತಾಣ ತಜ್ಞ ರಾಜೇಶ್ ನಾಯಕ ಜಿ ಆರ್ ಅವರನ್ನು ಆಯ್ಕೆ ಮಾಡಲಾಗಿದೆ.ಫೆಬ್ರವರಿ 13 ರಂದು ಮೈಸೂರಿನ ದಕ್ಷ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆಯ ನಿರ್ದೇಶಕರಾದ ಡಾ|| ಗುಣವಂತ ಮಂಜು ಅವರು ತಿಳಿಸಿದ್ದಾರೆ.
ಶ್ರೀಯುತ ಜಿ ಆರ್ ರಾಜೇಶ್ ನಾಯಕ ಇವರು ಸಾಮಾಜಿಕ ಜಾಲತಾಣ ತಜ್ಞರಾಗಿದ್ದು 4000 ಕ್ಕೂ ಹೆಚ್ಚು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಸಂಘಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಶ್ರೀ ಬದರಿ ದಿವ್ಯ ಭೂಷಣ್ ಮತ್ತು ಡಾ ಅಂಜನ ಭೂಷಣ್ ರವರ ಭೂಷಣ್ ಪ್ರದರ್ಶಕ ಕಲೆಗಳು ಮತ್ತು ದೃಶ್ಯಪ್ರಸ್ತುತಿ ಕೇಂದ್ರ ರೂಪಿಸಿದ ನೃತ್ಯ ಬಲೆಯೊಂದು “ಶ್ರೀ ರಾಮಾನುಜ ಧನುರ್ ದಾಸ ವೈಭವಂ” ನೃತ್ಯ ರೂಪದಲ್ಲಿ ಶ್ರೀ ರಾಮಾನುಜರ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದು. ಈ ನೃತ್ಯ ರೂಪಕವು ದೇಶದ ನಾನಾ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಪ್ರಸ್ತುತಗೊಂಡಿದೆ.

ಹಾಗೂ ತಿರುಪತಿಯ ನಾದ ನಿರಜನಂ ವೇದಿಕೆಯಲ್ಲಿ ಟಿಟಿಡಿ ಚಾನಲ್ ಮುಖಾಂತರ 170 ದೇಶಗಳಲ್ಲಿ ನೇರ ಪ್ರಸಾರಗೊಂಡಿದೆ. ಹಾಗೂ ಮಹಿಳಾ ಸಬಲೀಕರಣ ಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾದೇ ಪುಸ್ತಕ ಸಂಗ್ರಹ ಮಂದಿರ ಮುಖಾಂತರವಾಗಿ ಹಲವಾರು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಕನ್ನಡ ನಾಡು ನುಡಿ ಜಲ ಭಾಷೆ ಸಾಹಿತ್ಯ ಸಂಸ್ಕೃತಿ ಪರಂಪರೆಗೆ ಶ್ರಮಿಸಿದ ಸೇವೆಯನ್ನು ಸಾಮಾಜಿಕ ಸೇವೆಯೆಂದು ಪರಿಗಣಿಸಿ ಪ್ರತಿಷ್ಟಿತ “ಬಸವರತ್ನ ರಾಷ್ಟ್ರ ಪ್ರಶಸ್ತಿ”, “ಸೇವಾ ಭೂಷಣ ರಾಜ್ಯ ಪ್ರಶಸ್ತಿ”, ” ಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ ” ಹಾಗೂ “ವಿಶ್ವ ಮಾನವ ಪ್ರಶಸ್ತಿ”, “ಕನ್ನಡ ವಿಕಾಸ ರತ್ನ ಪ್ರಶಸ್ತಿಯು ಇವರಿಗೆ ಲಭಿಸಿದೆ.