ಮೈಸೂರು, ಫೆ.೩- ಒಲಂಪಿಯ ಚಿತ್ರಮಂದಿರದ ಹಿಂಭಾಗದಲ್ಲಿರುವ ಮಹೇಶ ಎಂಬುವವರ ಬಟ್ಟೆಯಂಗಡಿಯಿದ್ದು ಹಲವಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು ಇತ್ತೀಚಿಗೆ ದೇವರಾಜ ಮೊಹಲ್ಲಾ ಹೆಚ್.ಆರ್. ರಸ್ತೆಯಲ್ಲಿ ಅಂಗಡಿಗಳಲ್ಲಿ ಹಾಗೂ ಗೋಡೌನ್‌ಗಳಲ್ಲಿ ಬಟ್ಟೆಗಳು ಹಾಗೂ ನಗದು ಹಣ ದೋಚುತ್ತಿದ್ದು ಕಳ್ಳತನ

ಪ್ರಕರಣಗಳು ಹೆಚ್ಚಾಗುತ್ತಿದ್ದು.ಭಯದ ಆತಂಕದಲ್ಲಿರುವ ಮಾಲೀಕರು.ಜ.೧೮ ರಂದು ಬೆಳಗಿನ ಜಾವಾ ೩.೫೦ ರಂದು ಬಂದ ಮುಸುಕಿನದಾರಿಗಳು ಗೋಡೌನ್ ಬಾಗಿಲು ಕಬ್ಬಿಣ್ಣದ ಸಲಾಕೆಯಿಂದ ಮೀಟಿರುವ ಕಳ್ಳರು ೮ ಸಾವಿರ ರೂ. ನಗದು, ೬ ರಿಂದ ೭ ಮೂಟೆ ಬಟ್ಟೆ ಆಟೋದಲ್ಲಿ ಬಂದು ಸಾಗಿಸಿ ಕಳವು ಮಾಡಿದ್ದಾರೆ ಎಂದು ದೇವರಾಜ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.