
ಮೈಸೂರು,ಫೆ.೨:- ದೇಶದ ಕಾನೂನನ್ನು ವಿರೋಧಿಸುವವರಿಗೆ ಪೊಲೀಸ್ ಎಂದರೆ ಭಯವಿರಬೇಕು. ಕಾನೂನನ್ನು ಉಲ್ಲಂಘಿಸುವವರನ್ನು ಪೊಲೀಸರು ಶಿಕ್ಷಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಇಂದು ನೆಡೆದ ಕರ್ನಾಟಕ ಪೊಲೀಸ್ ಅಕಾಡೆಮಿಯ ಕವಾಯತು ಮೈದಾನದಲ್ಲಿ ಅಕಾಡೆಮಿಯ ೪೫ನೇ ತಂಡದ ಪ್ರೊಬೇಷನರಿ ಪೊಲೀಸ್ ಉಪನಿರೀಕ್ಷಕರು (ಸಿವಿಲ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ, ಬಹುಮಾನ ವಿತರಿಸಿ ಮಾತನಾಡಿದರು.
ರಾಜ್ಯದ ಸುಮಾರು ಒಂದು ಲಕ್ಷ ಜನ ಪೊಲೀಸ್ ಪೋರ್ಸ್ ನಲ್ಲಿ ತರಬೇತಿ ಪಡೆದು ಸೇರಿಕೊಳ್ಳುತ್ತಿದ್ದೀರಿ, ಹೊಸ ಗೃಹ ರಕ್ಷ ಇಲಾಖೆಗೆ ಸೇರ್ಪಡೆಯಾಗುತ್ತಿರುವುದು ಗೃಹಸಚಿವನಾಗಿ ನಾನು ಹೆಮ್ಮೆ ಪಡುತ್ತಿದ್ದೇನೆ. ನಮ್ಮ ರಾಷ್ಟ್ರಧ್ವಜ ಮತ್ತು ಪೊಲೀಸ್ ಧ್ವಜ ಎರಡೂ ಕೂಡ ಅತ್ಯಂತ ಸಮೀಪದಲ್ಲಿ ಪ್ರತಿಯೊಬ್ಬರ ಎದುರುಗಡೆ ಹಾದು ಹೋಯಿತು. ಆ ಎರಡೂ ಧ್ವಜಗಳು ಕೇವಲ ಬಟ್ಟೆಯ ಚೂರಲ್ಲ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಯಾರೆಲ್ಲ ಹೋರಾಟ ಮಾಡಿದರು. ಯಾರೆಲ್ಲ ಪ್ರಾಣ ತ್ಯಾಗ ಮಾಡಿದರು, ಮನೆಮಠಗಳನ್ನು ಕಳೆದುಕೊಂಡು ಅವರ ತ್ಯಾಗದಿಂದ ನಾವು ಗಳಿಸಿದ ಸ್ವಾತಂತ್ರ್ಯದ ಪವಿತ್ರ ಧ್ವಜ ಅದು. ಆ ಧ್ವಜದಲ್ಲಿ ದೇಶದ ಮಣ್ಣಿನ ಒಂದೊಂದು ಕಣವೂ ಕೂಡ ಪವಿತ್ರ ಎಂಬ ಭಾವನೆ ಅಡಗಿದೆ ಎಂದರು.

ತ್ಯಾಗದ ಒಂದು ಸಂದೇಶ ಅಡಗಿದೆ. ಇದರ ಹಿನ್ನಲೆಯಲ್ಲಿ ನಾವೆಲ್ಲ ರಾಷ್ಟ್ರಕಟ್ಟಲು ಬದುಕಬೇಕಾಗಿದೆ. ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡಿದಂತಹವರು ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಬದುಕನ್ನು ನೀಡಿ ಮಡಿದರು. ನಾವು ರಾಷ್ಟ್ರ ಕಟ್ಟಲು ಬದುಕಬೇಕಾಗಿದೆ. ರಕ್ಷಣಾ ಸಿಬ್ಬಂದಿ ಎಂದಾಕ್ಷಣ ಕಣ್ಣಿಗೆ ಬರುವಂಥದ್ದು ನಮ್ಮ ದೇಶದ ಗಡಿ ಕಾಯುವ ಸೈನ್ಯ. ಆದರೆ ಸುಮಾರು ೧೩೩ ಕೋಟಿ ಜನಸಂಖ್ಯೆ ಇರುವ ಈ ದೇಶದ ಆಂತರಿಕ ಭದ್ರತೆಯನ್ನು ಕಾಪಾಡಬೇಕಾದ, ಸಾರ್ವಜನಿಕರ ಮಾನ, ಪ್ರಾಣ ಸ್ವತ್ತನ್ನು ಕಾಪಾಡಬೇಕಾದಂತಹ, ಈ ಕಾಯಿದೆ ಕಾನೂನುಗಳಿಂದ ಸಮಾಜಘಾತುಕರನ್ನು ಸರಿದಾರಿಗೆ ತರತಕ್ಕಂತಹ ಬಹಳ ಮಹತ್ತರವಾದ ಹೊಣೆಗಾರಿಕೆಯನ್ನು ಪಾತ್ರ ವಹಿಸಲಿದೆ ಪೊಲೀಸ್, ಗಡಿಕಾಯುವ ಸೈನಿಕರು ಎಷ್ಟು ಕಷ್ಟಪಡುತ್ತಾರೋ ಪ್ರತಿನಿತ್ಯ ೨೪*೭ಜನರ ರಕ್ಷಣೆಗಾಗಿ ಕಣ್ಣಾವಲಾಗಿ ನಿಲ್ಲುವಂಥದ್ದು, ತಮ್ಮನ್ನು ತಾವು ಒಮ್ಮೊಮ್ಮೆ ಆಹುತಿ ನೀಡುವ ವ್ಯಕ್ತಿಗಳು ನಮ್ಮ ಆಂತರಿಕ ಭದ್ರತೆಯ ಪೊಲೀಸ್ ಸಿಬ್ಬಂದಿ, ಹಾಗಾಗಿ ನಿಮ್ಮ ಹೊಣೆಗಾರಿಕೆ ಎಷ್ಟು ಎಂಬುದನ್ನು ವಿವರಿಸಬೇಕಾಗಿಲ್ಲ.
ತರಬೇತಿಯಲ್ಲಿ ಅನೇಕ ಸಂಗತಿ ನೀವು ಕಲಿತಿದ್ದೀರಿ, ಸೈಬರ್, ಶಸ್ತ್ರಗಳ ಬಳಕೆ ಸೇರಿದಂತೆ ಅನೇಕ ಸಂಗತಿ ಯನ್ನು ಕಲಿತಿದ್ದೀರಿ, ನೆನಪಿಡಬೇಕಾದದ್ದು, ಸೈನ್ಯಕ್ಕಿಂತ ನೀವು ಬದಲು ಹೇಗೆ ಎಂಬುದು, ಸೈನಿಕ ರಿಗೆ ಎದುರುಗಡೆ ಶತ್ರು ಕಾಣಿಸುತ್ತಾರೆ. ಪೊಲೀಸರ ಎದುರಿಗೆ ಹಾಗಿಲ್ಲ. ಪೊಲೀಸರು ಈ ದೇಶದ ಜನರನ್ನು ಕೊಲ್ಲಲು ಇರೋದಲ್ಲ, ದೇಶದಲ್ಲಿ ತಪ್ಪು ಹಾದಿ ತುಳಿದವರನ್ನು ಸರಿದಾರಿಗೆ ತರುವಲ್ಲಿ ಶ್ರಮ ಪಡುತಿದ್ದಾರೆ, ಈ ದೇಶದ ಕಾನೂನನ್ನು ಯಾರು ಗೌರವಿಸುತ್ತಾರೋ ಅವರನ್ನು ಗೌರವಿಸುವ ಕೆಲಸವಾಗಬೇಕು, ಸೈನಿಕರಷ್ಟು ಕಠಿಣವಾಗಿ ಪೊಲೀಸ್ ಇರಬೇಕಾಗಿಲ್ಲ, ಮನುಷ್ಯತ್ವ ಇರಬೇಕಾಗುತ್ತದೆ, ಕಾನೂನಿನನ್ನು ವಿರೋಧಿಸುವವರಿಗೆ ಪೊಲೀಸ್ ಎಂದರೆ ಭಯವಿರಬೇಕು ಎಂದು ತಿಳಿಸಿದರು.