ಮೈಸೂರು, ಡಿಸೆಂಬರ್ 22:- ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ -2021 ಕಾರ್ಯಕ್ರಮವನ್ನು ಡಿಸೆಂಬರ್ 24ರಂದು ಮಧ್ಯಾಹ್ನ 12 ಗಂಟೆಗೆ ಬಂಡಿಪಾಳ್ಯ ಎ.ಪಿ.ಎಂ.ಸಿ.ಯಲ್ಲಿರುವ ವರ್ತಕರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಗ್ರಾಹಕರ ಆಯೋಗ ಅಧ್ಯಕ್ಷರಾದ ಬಿ.ನಾರಾಯಣಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿಗಳಾದ ಡಾ. ಬಗಾದಿ ಗೌತಮ್ ಅವರು ಅಧ್ಯಕ್ಷತೆ ವಹಿಸುವರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವರಾಜ ಭೂತೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಎ.ಎಂ. ಯೋಗೀಶ್, ಜಿಲ್ಲಾ ಗ್ರಾಹಕರ ಆಯೋಗದ ಸದಸ್ಯರಾದ ಎಂ.ಕೆ. ಲಲಿತ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪಿ. ಡಾ.ದೀಪು ಅವರು ಗ್ರಾಹಕರ ಹಕ್ಕು ಮತ್ತು ಜವಾಬ್ದಾರಿ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮೈಸೂರು ತಾಲ್ಲೂಕು ತಹಸೀಲ್ದಾರ್ ಕೆ.ಆರ್.ರಕ್ಷಿತ್, ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಾಯಕ ನಿರ್ದೇಶಕರು ಆರ್. ರಾಜು, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಸಮನ್ವಯ ಅಧಿಕಾರಿ ಡಾ. ಹೆಚ್.ಎಸ್. ನಾಗರತ್ನ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರಾದ ಸರಳಾ ನಾಯರ್, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹರಗಳ ಇಲಾಖೆ ಜಂಟಿ ನಿರ್ದೇಶಕರು ಕುಮುದ ಶರತ್ ಅವರು ಉಪಸ್ಥಿತರಿರುತ್ತಾರೆ.
ಗ್ರಾಹಕರ ಹಕ್ಕು, ಕರ್ತವ್ಯ, ಶಿಕ್ಷಣ, ಜಾಗೃತಿ, ಸೇವೆಗಳ ಕುರಿತು ವಿದ್ಯಾರ್ಥಿಗಳು, ಸಾರ್ವಜನಿಕರು, ವರ್ತಕರಿಗೆ ಮಾಹಿತಿ ನೀಡಲು ಗ್ರಾಹಕ ಜಾಗೃತಿ ವಸ್ತು ಪ್ರದರ್ಶನ ಏರ್ಪಡಿಸಿದ್ದು,
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (ವಿಷಯ: ಆಹಾರ ಕಲಬೆರಕೆ-ಸಾಮಾನ್ಯ ವಿಷಯಗಳು), ಕೃಷಿ ಇಲಾಖೆ (ವಿಷಯ: ಬಿತ್ತನೆ ಬೀಜ/ ರಸಗೊಬ್ಬರ) ತೋಟಗಾರಿಕೆ ಇಲಾಖೆ (ತೋಟಗಾರಿಕೆ ವಿಷಯಗಳು), ಕಾನೂನು ಮಾಪನ ಶಾಸ್ತ್ರ ಇಲಾಖೆ (ತೂಕ ಮತ್ತು ಅಳತೆ ವಿಷಯಗಳು), ಐಓಸಿ-ಪೆಟ್ರೋಲ್ ವಿಭಾಗ ಮತ್ತು ಎಲ್.ಪಿ.ಜಿ ವಿಭಾಗ, ಹೆಚ್.ಪಿ.ಸಿ-ಪೆಟ್ರೋಲ್ ವಿಭಾಗ ಮತ್ತು ಎಲ್.ಪಿ.ಜಿ ವಿಭಾಗ, ಬಿ.ಪಿ.ಸಿ.-ಪೆಟ್ರೋಲ್ ವಿಭಾಗ ಮತ್ತು ಎಲ್.ಪಿ.ಜಿ ವಿಭಾಗಗಳು (ಪಟ್ರೋಲಿಯಂ ವಿಷಯಗಳು ಎಲ್.ಪಿ.ಜಿ. ವಿಷಯಗಳು), ಮೈಸೂರು ಹಾಲು ಒಕ್ಕೂಟ ಮಹಾಮಂಡಳಿ (ಹಾಲು ಮತ್ತು ಹಾಲಿನ ಉತ್ಪನ್ನಗಳ ಕಲಬೆರಕೆಯ ಬಗ್ಗೆ) ಕುರಿತು ವಸ್ತು ಪ್ರದರ್ಶನದಲ್ಲಿ ಈ ಎಲ್ಲಾ ಸರ್ಕಾರಿ ಇಲಾಖೆಗಳು ಮತ್ತು ಸಂಘ-ಸಂಸ್ಥೆಗಳು ಭಾಗವಹಿಸಲಿವೆ.