
ಮೈಸೂರು ಫೆಬ್ರವರಿ 10 :- ನಂಜನಗೂಡು ನಗರ ಸಭೆಯ ವ್ಯಾಪ್ತಿಯಲ್ಲಿ ವಾಸವಾಗಿರುವ ವಿವಿಧ ಸಮುದಾಯದ ಬಡವರಿಗೆ ವೃತ್ತಿ/ಕಸುಬು ಅಭಿವೃದ್ಧಿ ಪಡಿಸಿಕೊಳ್ಳಲು 2021-22ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿ ನಿಗಧಿಯಾಗಿರುವಂತೆ ನಗರಸಭಾ ಸಾಮಾನ್ಯ ನಿಧಿಯ ಅಡಿಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹೊಲಿಗೆ ತರಬೇತಿ ಪಡೆದವರಿಗೆ ಹೊಲಿಗೆ ಯಂತ್ರ ವಿತರಿಸುವುದು, ವಿಶ್ವಕರ್ಮ ಸಮುದಾಯದವರಿಗೆ ಟೂಲ್‌ಕಿಟ್ ವಿತರಿಸುವುದು, ಮಡಿವಾಳ ಸಮುದಾಯದವರಿಗೆ ಐರನ್‌ಬಾಕ್ಸ್ ವಿತರಿಸುವುದು, ನಯನಜ ಕ್ಷತ್ರಿಯರಿಗೆ ಕ್ಷೌರ ವೃತ್ತಿ ನಡೆಸಲು ಟೂಲ್‌ಕಿಟ್ ವಿತರಿಸಲಾಗುವುದು.

ಅರ್ಜಿದಾರರು ಕಡ್ಡಾಯವಾಗಿ ನಂಜನಗೂಡು ಪಟ್ಟಣದ ಖಾಯಂ ನಿವಾಸಿಗಳಾಗಿರಬೇಕು, ಅರ್ಜಿ ಜೊತೆಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಚಾಲ್ತಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ತರಬೇತಿ ಪ್ರಮಾಣ ಪತ್ರ, ಇತ್ತೀಚಿನ 3 ಭಾವಚಿತ್ರ ಲಗತ್ತಿಸಬೇಕು (ಕುಟುಂಬದ ವಾರ್ಚಿಕ ಆದಾಯ 3 ಲಕ್ಷದೊಳಗಿರಬೇಕು.), ವೃತ್ತಿ ಮಾಡುತ್ತಿರುವ ಬಗ್ಗೆ (ಫಲಾನುಭವಿ ಸಹಿತ) ಭಾವಚಿತ್ರ ಲಗತ್ತಿಸಬೇಕು, ಕಡ್ಡಾಯವಾಗಿ ಹೊಲಿಗೆ ತರಬೇತಿ ಪಡೆದಿರಬೇಕಾಗಿದ್ದು ತರಬೇತಿ ಪ್ರಮಾಣ ಪತ್ರವನ್ನು ಲಗತ್ತಿಸಬೇಕು, ತರಬೇತಿ ಪಡೆದಿದ್ದರೆ ಪ್ರಮಾಣ ಪತ್ರ ಲಗತ್ತಿಸಬೇಕು.
ಪಟ್ಟಣದ ಖಾಯಂ ನಿವಾಸಿಗಳು 2022ರ ಫೆಬ್ರವರಿ 21ರಂದು ಸಂಜೆ 4.30 ಗಂಟೆಯೊಳಗಾಗಿ ಪೂರಕ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ನಗಸಭಾ ಕಾರ್ಯಾಲಯಕ್ಕೆ ಸಲ್ಲಿಸಬೇಕು.
ಫಲಾನುಭವಿಗಳನ್ನು ಆಯ್ಕೆ ಮಾಡುವ ಅಥವಾ ಮಾಡದಿರುವ ಅಥವಾ ಮಾರ್ಪಡಿಸುವ ಹಕ್ಕನ್ನು ನಗರಸಭೆ ಕಾಯ್ದಿರಿಸಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿಯನ್ನು ಸಂಪರ್ಕಿಸಬಹುದು ಎಂದು ನಂಜನಗೂಡು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.