ಮೈಸೂರು 05. ಕರೋನ ಮಹಾಮಾರಿಯ ಹೆಸರಿನಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ತಡೆಯಲು ಮಾಧ್ಯಮ ರಂಗದವರು ಸಹಕರಿಸಬೇಕಾಗಿ ವಿನಂತಿಸುತ್ತ ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ಮನವಿ.
ಕರೋನ ಮಹಾಮಾರಿ ಎರಡನೆ ಅಲೆಯ ಸಂಕಷ್ಟದ ಕಾರಣದಿಂದಾಗಿ ಸಾರ್ವಜನಿಕರು ಅಪಾರ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಸಾಮಾನ್ಯ ಜನತೆಯು ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲದಂತೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಘಟನೆಗಳು ಪ್ರತೀ ದಿನ ಹೆಚ್ಚಾಗುತ್ತಿದೆ.
ಜೊತೆಗೆ ಆಮ್ಲಜನಕ ಸಮಸ್ಯೆಯಿಂದ ಸಾಯುತ್ತಿರುವರ ಶ್ರೀ ಸಾಮಾನ್ಯರ ಕುಂದು ಕೊರತೆಯ ಸುದ್ದಿಗೆ ಪ್ರತಿದಿನ ಸಂಸ್ಥೆಯು ಮಧ್ಯ ರಾತ್ರಿಯಲ್ಲಿಯೂ ಸಹ ಕಿವಿ ನೀಡುವಂತೆ ಆಗಿದೆ. ಇದಕ್ಕೆ ಕಾರಣ ಜಿಲ್ಲಾಡಳಿತದ ಮತ್ತು ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ವೈಫಲ್ಯ ಎಂದೇ ಹೇಳಬಹುದು.
ಆದ ಕಾರಣ ನಮ್ಮ ಸುವರ್ಣ ಬೆಳಕು ಫೌಂಡೇಶನ್ ಒಂದು ಸಲಹೆಯನ್ನು ಇಡೀ ಮಾಧ್ಯಮ ಮತ್ತು ಪತ್ರಿಕಾರಂಗಕ್ಕೆ ಹೇಳಲಿಚ್ಛಿಸುವುದೇನೆಂದರೆ ದಿನವಿಡಿ ಟಿವಿ( ದೃಶ್ಯ ಮಾಧ್ಯಮ)ಗಳಲ್ಲಿ ಕರೋನಾ ಸೋಂಕಿತಕ್ಕೆ ಒಳಗಾದವರ ಮಾಹಿತಿಯನ್ನು ಕರೋನಾ ಸೋಂಕಿನಿಂದ ಸತ್ತವರ ಮಾಹಿತಿಯನ್ನು ತಿಳಿಸುವುದರ ಜೊತೆಗೆ ಕರೋನಾ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಪಟ್ಟಿ, ಆಸ್ಪತ್ರೆಗಳಲ್ಲಿನ ಉಳಿಕೆ ಹಾಸಿಗೆಗಳು ಹಾಗೂ ಆಕ್ಸಿಜನ್,ವೆಂಟಿಲೇಟರ್ ಗಳ ಮಾಹಿತಿಯನ್ನು ಅನುಕ್ಷಣ ವರದಿ ಮಾಡಿ ವಸ್ತುನಿಷ್ಠ ಮಾಹಿತಿಯನ್ನು ಪ್ರಕಟಿಸುವುದರಿಂದ ಮನೆಯಲ್ಲಿಯೇ ಕುಳಿತ ಸಾರ್ವಜನಿಕರು ಉತ್ತಮ ಮಾಹಿತಿಯನ್ನು ಪಡೆದುಕೊಳ್ಳುವಂತಾಗುತ್ತದೆ ಹಾಗೂ ಸೂಕ್ತ ಸಮಯಕ್ಕೆ ಸೋಂಕಿತ ರೋಗಿಯು ಆಸ್ಪತ್ರೆಗೆ ದಾಖಲಾಗಬಹುದು ಇದರಿಂದ ಪ್ರತಿದಿನ ಸೋಂಕಿನಿಂದ ಸಾಯುತ್ತಿರುವವರ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗುತ್ತದೆ.
ದಿನಪತ್ರಿಕೆಗಳಲ್ಲಿ ಒಂದು ವಿಭಾಗ ಕಾಲಮ್ಮನ್ನು ಆಸ್ಪತ್ರೆಯ ಹಾಸಿಗೆಗಳ ವಿವರಗಳನ್ನು ಅದರ ಲಭ್ಯತೆಗಳನ್ನು ಜನಸಾಮಾನ್ಯರಿಗೆ ತಿಳಿಸಲು ಮೀಸಲಿಟ್ಟು ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಹೇಗೆ ಚುನಾವಣೆಯ ಫಲಿತಾಂಶವನ್ನು ಬೆಳಗ್ಗಿನಿಂದ ರಾತ್ರಿಯವರೆಗೂ ನೀಡುತ್ತಾರೆಯೋ ಹಾಗೆಯೇ ಈ ಆರೋಗ್ಯದ ತುರ್ತು ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ಸೌಲಭ್ಯ ಮಾಹಿತಿಯನ್ನು ತಿಳಿಸಲು ಇಡೀ ಮಾಧ್ಯಮ ಲೋಕ ಸಹಕರಿಸಿದರೆ ನಿಜವಾಗಿಯೂ ಉತ್ತಮ ಬದಲಾವಣೆಯ ಜೊತೆಗೆ ಕರೋನ ಸಂಕಷ್ಟದ ನಿವಾರಣೆಯಲ್ಲಿ ಮಾಧ್ಯಮ ಲೋಕದ ಪಾತ್ರವು ಅಪಾರವಾಗುತ್ತದೆ ಎಂದು ತಿಳಿಸಲು ಇಚ್ಚಿಸುತ್ತೇವೆ.
ಈ ಸಣ್ಣ ಆಲೋಚನೆ ನಿಜವಾಗಿಯೂ ಅಧಿಕಾರಿವರ್ಗದವರ ಆಸ್ಪತ್ರೆಹಾಸಿಗೆಯಲ್ಲಿನ ಭ್ರಷ್ಟಾಚಾರವನ್ನು ಮತ್ತು ಆಡಳಿತದ ವೈಫಲ್ಯವನ್ನು ಸರಿದೂಗಿಸಲು ಜನರ ಪ್ರಾಣ ರಕ್ಷಣೆ ಮಾಡಲು ನಮ್ಮೆಲ್ಲರ ಮಾನವೀಯತೆಯ ದೃಷ್ಟಿ ಈಗ ಸಾಗಬೇಕಿದೆ ಎಂದು ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷರಾದ ಮಹೇಶ್ ನಾಯಕ್ , ಕಾರ್ಯದರ್ಶಿ ಮಂಜುನಾಥ್ ಬಿಆರ್, ರಾಮಚಂದ್ರ ಇವರುಗಳ ಸಮ್ಮುಖದಲ್ಲಿ ಯುವ ಚಿಂತಕ ಪುರುಷೋತ್ತಮ್ ಅಗ್ನಿ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದರು.