ಲೇಖನ ಅಭಿವ್ಯಕ್ತಿ :-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)

ಕೆ.ಎಸ್ ನರಸಿಂಹಸ್ವಾಮಿ‌ಯವರು ಪ್ರೇಮಕವಿ‌ ಎನ್ನುವ ಭಾವದಲ್ಲಿ ಈ ವರ್ತಮಾನದ ಮುಖ್ಯ ಅಗತ್ಯತೆ ಒಂದನ್ನು ಗುರುತಿಸಿಕೊಳ್ಳಬಹುದು ಅಥವಾ ಕಳೆದುಹೋಗುತ್ತಿರುವ ಭಾವವೊಂದನ್ನು ತೋರ್ಪಡಿಸುತ್ತದೆ.ಮನುಷ್ಯನು ಈ ಪರಿಯ ಹಂತಕ್ಕೆ ಹೋಗಿದ್ದು ಅವನ ಆರಂಭವನ್ನು ಪುನಃ ಸೂಚಿಸುತ್ತಿದೆ.ಅಂದರೆ ಆರಂಭದಲ್ಲಿ ಮಾನವ ಮೃಗಜೀವಿ ಆತನಿಗೆ ಸಂಬಂಧಗಳು ಗೊತ್ತಿರಲಿಲ್ಲ,ಪ್ರೀತಿ ,ಪ್ರೇಮ ಇತ್ಯಾದಿ ಭಾವನೆಗಳು ಗೊತ್ತಿರಲಿಲ್ಲ ಒರಟು ಸ್ವಭಾವದ ದೇಹದ ಹಸಿವು ಬಾಯಾರಿಕೆಗಳಷ್ಟೇ ಆತನಿಗೆ ತಿಳಿದಿದ್ದು.ಇನ್ಯಾವುದೇ ನಾಗರಿಕತೆಯ ಉತ್ತುಂಗತೆ ಆ ಸಂಧರ್ಭದಲ್ಲಿ ಆತನಿಗೆ ತಿಳಿದಿರಲಿಲ್ಲ ಏಕೆಂದರೆ ಅದು ಆರಂಭ ;ಕಲಿಕೆಯ ಸಂಧರ್ಭ,ವಿಕಾಸದ ಮೊದಲ ಹೆಜ್ಜೆ ಆದರೆ ಈಗ ಮನುಷ್ಯಜಗತ್ತು ಬಹುದೂರ ಸಾಗಿ ಬಂದು ನಿಂತಿದೆ. ಪ್ರಕೃತಿಯೇ ನಿಬ್ಬೆರಗಾಗಿ ಮನುಷ್ಯನ ಬೆಳವಣಿಗೆಯನ್ನು ಕಾಣುತ್ತಿದೆ.

ಆ ಮಟ್ಟಕ್ಕೆ ಆತನ ಸರ್ವ ಅಭಿವೃದ್ಧಿಯೂ ಕೂಡ ವಿಕಾಸವಾಗಿದೆ.ಆದರೆ ಆರಂಭದಲ್ಲೇನೋ ಅವನು ಮೃಗತ್ವವುಳ್ಳವನು ಏನೇ ಮಾಡಿದರೂ ನಿಸರ್ಗದಿಂದ ಕ್ಷಮೆ ಇತ್ತು ಆದರೆ ಈಗ ಅವನು ವಿಕಾಸ ಜೀವಿ ಅವನ ತಪ್ಪುಗಳಿಗೆ ಶಿಕ್ಷೆಯ ಹೊರತು ಬೇರೆ ಮಾರ್ಗವಿಲ್ಲ.ಅದರ ಫಲವೇ ಮನುಷ್ಯನ ಸಾಲು ಸಾಲು ಧಾರುಣ ಅಂತ್ಯ.ಇಷ್ಟೆಲ್ಲಾ ಆಗಿದ್ದು ಏತಕ್ಕಾಗಿ ತಿಳಿದಿದೆಯೇ ! ಹೇಳುವರು ಜನರು ಸ್ವಾರ್ಥ,ಹಣದ ವ್ಯಾಮೋಹ,ಕಾಮ ಲೋಭ,ಇತ್ಯಾದಿ ಎಂದು .ಆದರೆ ಒಂದೇ ಒಂದು ಪದ ಇದನ್ನೆಲ್ಲಾ ಸರಿದೂಗಿಸುತ್ತದೆ ಅದುವೆ “ಪ್ರೇಮ”.ಮನುಷ್ಯ ಪ್ರೇಮಕ್ಕೆ ಹೊತ್ತು ಕೊಟ್ಟಷ್ಟೂ ಆತನಿಗೆ ಆಧ್ಯಾತ್ಮಿಕತೆ ಪರಿಚಯವಾಗುತ್ತದೆ ,ಸರಳ ಲೌಕಿಕ ಬದುಕು ಹತ್ತಿರವಾಗುತ್ತದೆ.ಪ್ರಕೃತಿಯ ಮೇಲಿನ ದೈವ ಭಕ್ತಿ ಹೆಚ್ಚಾಗುತ್ತದೆ.ಇದಕ್ಕಿಂತ ಅವನು ಮನುಷ್ಯನಾಗುತ್ತಾನೆ.ಪ್ರೇಮವೂ ಯಾರನ್ನೂ ಕೊಲ್ಲುವುದಿಲ್ಲ,

ಯಾರನ್ನೂ ಅಗೌರವಿಸುವುದಿಲ್ಲ,ಸಮಾನತೆಯ ತತ್ವದಡಿ ಬೆಳೆದು ಹೆಮ್ಮರವಾಗಿ ಎಲ್ಲರಿಗೂ ಆಶ್ರಯ ನೀಡುತ್ತದೆ.ಪ್ರೇಮ ಕುಟುಂಬಗಳನ್ನು ಒಗ್ಗೂಡಿಸುತ್ತದೆ ಕುಟಂಬಗಳು ಒಂದು ಊರನ್ನು.ಒಂದು ಊರು, ತಾಲ್ಲೂಕು, ಜಿಲ್ಲೆ, ರಾಜ್ಯ ,ದೇಶ,ಪ್ರಪಂಚ.ಹೀಗೆ ಒಂದಕ್ಕೊಂದು ಒಗ್ಗೂಡಿಸಿ ಐಕ್ಯತೆಯನ್ನು ಮೂಡಿಸುತ್ತದೆ.ಪ್ರೇಮ ಎನ್ನುವ ಎರಡಕ್ಷರದ್ದು ಎಲ್ಲವನ್ನೂ ಸರಿಮಾಡಿಬಿಡುತ್ತದೆ.ಯುದ್ಧಕ್ಕೆ ವಿರಾಮವೇ ಪ್ರೇಮ.ಚಿ..ಬಿ.ಆರ್ (ಮಂಜುನಾಥ ಬಿ.ಆರ್)ಇಂತಹ ಪ್ರೇಮ ಇಂದು ನಮ್ಮೊಳಗೆ ಖಂಡಿತಾ ಇಲ್ಲಾ ನನ್ನೊಳಗೂ ಪ್ರೇಮ ಮರೆಯಾಗಿದೆ ನಿಮ್ಮೊಳಗೂ ಪ್ರೇಮ ಮರೆಯಾಗಿದೆ ಪ್ರೇಮ ಈಗ ಜಗತ್ತಿನಲ್ಲಿ ಇಲ್ಲ.ಯಾವಾಗ ಪ್ರೇಮವೂ ಮರೆಯಾಗುತ್ತದೆಯೋ ಆಗಾಗೆಲ್ಲಾ ಇಂತಹ ಅಂತ್ಯಗಳು ಸಂಭವಿಸುತ್ತಲೇ ಇರುತ್ತದೆ. ಹಿಂದೆ ಬಂದಂತಹ ಮಹೋನ್ನತರೆಲ್ಲರಾ ಮುಖ್ಯ ಗುಣವೇಪ್ರೇಮಹಾಗಾಗಿಯೇ ಅವರು ಯಾವುದೋ ವರ್ಗದ ,ಜಾತಿಯ,ಧರ್ಮದ,

ಇನ್ನಿತರ ಅಸಹ್ಯ ಜಡ್ಡುಗಳನ್ನು ಜರಿದು ಸಮಾನತೆ ,ಸ್ವಾತಂತ್ರ್ಯ,ಎಲ್ಲಾ ಒಳಿತುಗಳನ್ನು ಇನ್ನೊಬ್ಬರಿಗೆ ಕೊಡಲು ಮತ್ತು ಕೊಡಿಸಲು ಮುಂದಾದದ್ದು.ಆದರೆ ಇಂದು ಆ ಪ್ರೇಮ ಮರೆಯಾಗಿರುವುದು ಪ್ರಸ್ತುತ ಘಟನೆಗಳಿಗೆಲ್ಲಾ ಕಾರಣ‌.ಈ ಭವಿಷ್ಯವನ್ನು ಅರಿತು ನವೋದಯದ ಕವಿಗಳಲ್ಲಿ ಪ್ರೇಮ ಕವಿ ಎಂದೇ ಹೆಸರಾದ ಕೆ.ಎಸ್.ನರಸಿಂಹಸ್ವಾಮಿಯವರು ಪ್ರೀತಿ,ಪ್ರೇಮ ಗಳಿಗಷ್ಟೇ ಒತ್ತು ನೀಡಿದ್ದಾರೆ.ಎಲ್ಲವೂ ದಕ್ಕುತ್ತದೆಂದು ಆ ಪ್ರೇಮಕ್ಕಾಗಿ ಬದುಕಿಬಿಟ್ಟರು ಇಂದು ಆ ಪ್ರೇಮವನ್ನು ಅವರ ಕವಿತೆಗಳಲ್ಲಿ ಜೀವಂತಿಕೆಯಾಗಿ ಉಳಿಸಿಕೊಟ್ಟರು.ಅದರಲ್ಲಿ ರಮ್ಯತೆಗಿಂತ ಅದರ ಹಿಂದಿನ ಈ ರೀತಿಯ ಜಗತ್ತಿನ ಪ್ರೇಮವನ್ನು ಗುರುತಿಸಿಕೊಳ್ಳಬೇಕಾಗಿರುವುದು ಕೂಡ ನಮ್ಮ ವಿಕಾಸತೆಯೇ ಎಲ್ಲರೂ ವಿಕಾಸದ ಮತ್ತೊಂದು ಹೆಜ್ಜೆಯನ್ನಿಡಿ ಅದು ಪ್ರೇಮದ ವಿಕಾಸವಾಗಿರಲಿ.

*ಚಿಮಬಿಆರ್ (ಮಂಜುನಾಥ ಬಿ.ಆರ್)*

*ಯುವಸಾಹಿತಿ, ಸಂಶೋಧಕ, ವಿಮರ್ಶಕ.*

*ಹೆಚ್.ಡಿ.ಕೋಟೆ ಮೈಸೂರು.*

*ದೂರವಾಣಿ ಸಂಖ್ಯೆ:-8884684726*

*Gmail I’d:-manjunathabr709@gmail.com*