ಕನ್ನಡ ರಾಜ್ಯೋತ್ಸವದ ಅಂಗವಾಗಿ 20 ವರ್ಷದಿಂದ 3854 ಸರ್ಕಾರಿ ಶಾಲೆಗಳಿಗೆ ಶಿಕ್ಷಕರು ಬರೆಯುವ ಕಪ್ಪು ಹಲಗೆ (ಬೋರ್ಡ್) ಗೆ ಸೈಕಲ್ ನಲ್ಲಿ ತೆರಳಿ ಉಚಿತವಾಗಿ ಬಣ್ಣ ಹಚ್ಚಿದ ಅಕ್ಷರ ಪ್ರೇಮಿ ರಂಗಸ್ವಾಮಿ ರವರಿಗೆ ಅಗ್ರಹಾರ ವೃತ್ತದಲ್ಲಿ ಪಾತಿ ಫೌಂಡೇಷನ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು
ವಿಶೇಷವಾಗಿ ರಂಗಸ್ವಾಮಿಯವರ ಸೈಕಲ್ ಪ್ರೀತಿ ಶಾಲೆಗಳ ಬ್ಲ್ಯಾಕ್ ಬೋರ್ಡ್ ಗಳಿಗೆ ಉಚಿತವಾಗಿ ಬಣ್ಣ ಬಳಿಯುವ ಕಾಯಕದಲ್ಲಿ ತೊಡಗಿರುವ ರಂಗಸ್ವಾಮಿ ಅವರು ಸೈಕಲ್ ಪ್ರೇಮಿಗಳು ಸೈಕಲ್ ಮೂಲಕವೇ ರಾಜ್ಯದ ಹಲವು ಜಿಲ್ಲೆಗಳಿಗೆ ತೆರಳಿ ಸೇವೆ ಮಾಡುತ್ತಿರುವುದು ವಿಶೇಷ .ಬಿಳಿಯ ಉಡುಪು ಹಳೆಯ ಸೈಕಲ್. ಸೈಕಲ್ ನಲ್ಲಿ ಅಳವಡಿಸಿರುವ ಚಿಕ್ಕ ಬೋರ್ಡ್ನಲ್ಲಿ ವಿದ್ಯೆ ಕಡಮೆ ಇದ್ದರೂ ಪರವಾಗಿಲ್ಲ ನಮ್ಮ ನಡತೆ ಶುದ್ಧವಾಗಿರಬೇಕು ಎಂಬ ಸಾಲುಗಳನ್ನು ಬರೆದು ಗಮನ ಸೆಳೆದಿದ್ದಾರೆ
ಸನ್ಮಾನಿಸಿ ಮಾತನಾಡಿದ
ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ಸರ್ಕಾರ ಇಂತಹ ಕನ್ನಡ ಅಭಿಮಾನಿಗಳನ್ನು ಗುರ್ತಿಸಿ ಮುಂದಿನ ವರ್ಷವಾದರೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕು,
ಇಂತಹ ಎಲೆಮರೆಕಾಯಿಯಾಗಿ ಕೆಲಸ ಮಾಡುತ್ತಿರುವ ಸರ್ಕಾರವೇ ಗುರುತಿಸಿ ಪ್ರಶಸ್ತಿ ನೀಡಬೇಕು
ಅರ್ಜಿ ಆಹ್ವಾನಿಸುವ ಔಚಿತ್ಯವೇನು?
ಅಷ್ಟಕ್ಕೂ ಸಾವಿರಾರು ಅರ್ಜಿಗಳನ್ನು ಸ್ವೀಕರಿಸಿ, ಪರಿಶೀಲಿಸಿ ನಂತರ ಬಹುತೇಕ ಅರ್ಜಿಗಳನ್ನು ತಿರಸ್ಕಾರ ಮಾಡುವಂಥದ್ದು ಶ್ರಮ ಮತ್ತು ಅನಗತ್ಯ ಹೊರೆಯಲ್ಲವೇ? ಎಲೆಮರೆ ಕಾಯಿಯಂತೆ ನಾಡಿಗೆ ಸೇವೆ ಸಲ್ಲಿಸಿದವರನ್ನು ಗುರುತಿಸಲು ಸಾಧ್ಯ
ವಾಗಿರುವುದಾದರೆ, ಇನ್ನು ಮುಂದೆ ಅರ್ಜಿ ಸ್ವೀಕರಿಸದೇ ಸಾಧಕರನ್ನು ಗುರುತಿಸುವುದು ಹೆಚ್ಚು ಪ್ರಯೋಜಕ. ಇದರಿಂದ ಸಾಧಕರು ಮತ್ತು ಆಯ್ಕೆ ಸಮಿತಿ ಬಗ್ಗೆ ಸಾರ್ವಜನಿಕ ಪ್ರಶಂಸೆ ದೊರೆಯುತ್ತದೆ ಜೊತೆಗೆ ಪ್ರಶಸ್ತಿಯ ಮೌಲ್ಯ ಕೂಡ ಹೆಚ್ಚಾಗುತ್ತದೆ.
ಆಯ್ಕೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಅನಿವಾರ್ಯವನ್ನು ಸರಿದೂಗಿಸಲು, ನೇರ ಅರ್ಜಿ ಸಲ್ಲಿಸುವ ಬದಲಾಗಿ ಅರ್ಹ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಸಾಧಕರ ಕ್ಷೇತ್ರದ ಬಗ್ಗೆ ಪರಿಚಯವಿರುವ ಯಾವುದೇ ನಾಗರಿಕರು ‘ನಾಮಿನೇಟ್’ ಮಾಡುವುದು ಒಳ್ಳೆಯದು. ಮಿಗಿಲಾಗಿ, ಸಾಧಕರ ಸಾಧನೆಗಳ ಪರಿಚಯವನ್ನು ಪುಸ್ತಕ ಅಥವಾ ಕನ್ನಡ ದಿನಪತ್ರಿಕೆಗಳಲ್ಲಿ ವಿಶೇಷ ಸಂಚಿಕೆ ರೂಪದಲ್ಲಿ ತರುವ ಆಲೋಚನೆಯನ್ನೂ ಮಾಡಬೇಕೆಂದು ಹೇಳಿದರು
ಸನ್ಮಾನ ಸ್ವೀಕರಿಸಿ ಮಾತನಾಡಿದ ರಂಗಸ್ವಾಮಿ ನಮ್ಮಿಂದ ದೊಡ್ಡ ಸೇವೆ ಮಾಡುವುದು ಸಾಧ್ಯವಿಲ್ಲ ಆದರೆ ನನ್ನ ದೇಶಕ್ಕೆ ಸಣ್ಣದಾದ ಅಳಿಲು ಸೇವೆ ಸಮರ್ಪಿಸಲು ಸಾಧ್ಯವಿದೆ ಅದನ್ನು ನಾನು ಮಾಡುತ್ತಿದ್ದೇನೆ ಎಲ್ಲರಿಂದಲೂ ಸೇವೆ ಮಾಡಲು ಸಾಧ್ಯವಿದ್ದು ಮನಸ್ಸಿಟ್ಟು ಮಾಡಬೇಕಷ್ಟೆ ,ನಾನು ಓದಿದ್ದು ಒಂಟಿಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಸುಕಾಗದ್ದ ಬೋರ್ಡ್ ಗೆ ಇದ್ದಿಲು ಹಾಗೂ ತುಂಬೆ ಸೊಪ್ಪನ್ನು ಅರೆದು ಅದಕ್ಕೆ ಹಚ್ಚುವ ಕೆಲಸವನ್ನು ಮೇಷ್ಟ್ರು ನನಗೆ ವಹಿಸುತ್ತಿದ್ದರು .ಇದರಿಂದ ಪ್ರೇರಿಪಿತನಾದ ನಾನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಕೆಲಸ ಮಾಡುತ್ತಾ ಬಂದಿದ್ದೇನೆ ಇದು ನನಗೆ ತೃಪ್ತಿ ಕೊಡುತ್ತದೆ ಇದನ್ನು ಕೂಡ ಸಮಾಜಸೇವೆ ಎಂಬ ಭಾವನೆ ನನಗಿದೆ ಮುಂದಿನ ದಿನಗಳಲ್ಲೂ ಸಹ ಇದು ಮುಂದುವರಿಸಿಕೊಂಡು ಬರುತ್ತೇನೆ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ,ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷರಾದ ಎಂ ಡಿ ಪಾರ್ಥಸಾರಥಿ ,ಜೀವಧಾರ ರಕ್ತನಿಧಿ ಕೇಂದ್ರ ನಿರ್ದೇಶಕ ಗಿರೀಶ್ ,ಹರೀಶ್ ನಾಯ್ಡು, ದೀಪಕ್, ಜೋಗಿ ಸುನೀಲ್,ಮಹದೇವು ,ರಾಜೇಶ ,ಕುಮಾರ್ ಆರಾಧ್ಯ ,ಡಿ ಕೆ ನಾಗಭೂಷಣ್ ,ಹಾಗೂ ಇನ್ನಿತರರು ಹಾಜರಿದ್ದರು