ಚಾಮರಾಜನಗರ: ಜಮೀನಿನಲ್ಲಿದ್ದ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ಮಾಡುತ್ತಿದ್ದ ಜಿಂಕೆಯನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಹನೂರು ಪಟ್ಟಣದ ದೇವಾಂಗ ಪೇಟೆಯ ಹೊರವಲಯದಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ಜಿಂಕೆಯೊಂದು ದಾರಿತಪ್ಪಿ ಕಾಡಿನಿಂದ ಬಂದಿದ್ದು ಅದು ಹನೂರು ಪಟ್ಟಣದ ದೇವಾಂಗ ಪೇಟೆಯ ಹೊರವಲಯದ ಶನಿಮಹಾತ್ಮನ ದೇವಸ್ಥಾನದ ಸಮೀಪವಿರುವ ಜಮೀನಿನ ಬಾವಿಯೊಳಗೆ ಬಿದ್ದಿದೆ. ಬಾವಿಯಿಂದ ಮೇಲೆ ಹತ್ತಿ ಬರಲಾರದೆ ರಾತ್ರಿ ಪೂರ್ತಿ ಜೀವನ್ಮರಣ ಹೋರಾಟ ನಡೆಸಿದೆ.

ಬುಧವಾರ ಬೆಳ್ಳಂ ಬೆಳಗ್ಗೆ ಬಾವಿಯಲ್ಲಿದ್ದ ಜಿಂಕೆಯನ್ನು ಕಂಡ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು  ತಕ್ಷಣವೇ ಮಾಹಿತಿಯನ್ನು ಅಗ್ನಿಶಾಮಕ ದಳಕ್ಕೆ ನೀಡಿದ್ದು, ಅದರಂತೆ ಎ ಎಸ್ ಐ  ಶೇಷ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ  ಜಿಂಕೆಯನ್ನು ಹಗ್ಗದಿಂದ ಕಟ್ಟಿ ಮೇಲೆತ್ತಿದ್ದು, ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಹಗ್ಗ ಬಿಚ್ಚುತ್ತಿದ್ದಂತೆಯೇ  ಪಕ್ಕದ ಕಾಡಿಗೆ ಓಡಿ ಹೋಗಿದೆ.

ಈ ಕಾರ್ಯಾಚರಣೆಯಲ್ಲಿ   ಅಗ್ನಿಶಾಮಕ ದಳದ ಸಿಬ್ಬಂದಿ ಜಯಪ್ರಕಾಶ್, ಮುನಿಶಾಂತಾ, ಗಿರೀಶ್, ನಾಗೇಶ್, ಗೃಹರಕ್ಷಕದಳ ಸಿಬ್ಬಂದಿ, ಅರಣ್ಯ ಇಲಾಖೆಯ ಸಿಬ್ಬಂದಿ  ಭಾಗವಹಿಸಿದ್ದರು.

By admin