ಅಗ್ರಪೂಜಿತ, ಆದಿಪೂಜಿತ, ಪ್ರಥಮಪೂಜಿತ, ಸಕಲಕಲಾವಲ್ಲಭ, ಸುಗುಣವಂತ, ನಿರ್ವಿಘ್ನಕಾರಕ, ಅಖಿಲ ವರಪ್ರದಾಯಕ, ಸಂಕಷ್ಟಹರ, ಮುಂತಾದ ಕೋಟಿ ಕೋಟಿ ಹೆಸರಿನಿಂದ ಸ್ತುತಿಸಲ್ಪಡುವ ಭೂಲೋಕದ ಭಗವಂತ ಗಣೇಶ.  ಪ್ರತಿವರ್ಷ ಭಾದ್ರಪದ ಮಾಸ ಅಮಾವಾಸ್ಯೆ ನಂತರದ ೩ನೇ ದಿನ ಗೌರಮ್ಮನ ಪಾದಾರ್ಪಣೆ, ೪ನೇ ದಿನ ಗಣೇಶಾಗಮನ.  ಅಪರೂಪಕ್ಕೆ, ತಾಯಿ-ಮಗ ಇಬ್ಬರೂ ಒಟ್ಟಾಗೆ ಧರೆಗಿಳಿವ ಸಂದರ್ಭವುಂಟು! ಅಂದು ಇಂದು ಮುಂದು ಎಂದೆಂದೂ ೨೧ ಲೋಕದಲ್ಲಿ ದೇವ ಮಾನವ ದಾನವ ಮೊದಲ್ಗೊಂಡು ಪ್ರಪಂಚದಾದ್ಯಂತ ಪ್ರತಿಯೊಬ್ಬ[ಧರ್ಮೀಯ]ರು ಆರಾಧಿಸುವ ಏಕೈಕ ದೈವ! ಅನಾದಿ ಕಾಲದಿಂದ ಜಗತ್ತಿನಾದ್ಯಂತ ಯಾವುದೇ ದೇವರ ಪ್ರತಿ ದೇವಸ್ಥಾನದಲ್ಲೂ ಪ್ರಥಮ ಪೂಜಿತನ ದೇವಾಲಯ/ವಿಗ್ರಹಮೂರ್ತಿ ಇದ್ದೇ ಇರುತ್ತದೆ. ಕಾರಣ; ನಾರದ ಮುನಿ ಏರ್ಪಡಿಸಿದ್ದ ಪ್ರಪಂಚ ಪರ್ಯಟನೆ ಸ್ಫರ್ಧೆಯಲ್ಲಿ ಬಾಲಗಣೇಶ ತೋರಿದ ಮಾತಾ ಪಿತೃ ಭಕ್ತಿಯ ಪ್ರತಿಫ಼ಲವಾಗಿ ಪಾರ್ವತಿ ಪರಮೇಶ್ವರ ಹಾಗೂ ಸುಬ್ರಮಣ್ಯ ನೀಡಿದ ಸಿದ್ಧಿ, ಬುದ್ಧಿ, ವಿದ್ಯೆ, ಶಕ್ತಿ, ಎಲ್ಲಾ ಮಿಶ್ರಣದ ವರಪ್ರಸಾದ! ವಿದ್ಯಾಗಣಪತಿಯು ವಿಶ್ವದ ಪ್ರಪ್ರಥಮ ಶೀಘ್ರಲಿಪಿಗಾರನಾಗಿ ೨೪೦೦೦ ಶ್ಲೋಕಗಳ ವಾಲ್ಮೀಕಿರಾಮಾಯಣ ಮತ್ತು ೨೯೦೦೦ ಶ್ಲೋಕಗಳ ಯೋಗವಸಿಷ್ಟ ತತ್ವಶಾಸ್ತ್ರ ಕೃತಿಗಳನ್ನು ಬರೆದುಕೊಡುತ್ತಾನೆ.  ಆರಂಭಕ್ಕೆ ಮುನ್ನ ಗಣೇಶ-ವಾಲ್ಮೀಕಿ ನಡುವೆ ಪರಸ್ಪರ ಒಪ್ಪಂದಕ್ಕೆ ಬರುತ್ತಾರೆ:- ಇಬ್ಬರಲ್ಲಿ ಯಾರು ಮೊದಲು ‘ಹೇಳುವುದನ್ನು/ಬರೆಯುವುದನ್ನು’ ನಿಲ್ಲಿಸುವರೊ ಅವರು ಪರಾಜಿತರೆಂದು.  ಆದರೆ ಯಾರೊಬ್ಬರೂ ಸೋಲದ ಕಾರಣ ಉಕ್ತಲೇಖನ ಕಾರ್ಯ ನಿರ್ವಿಘ್ನವಾಗಿ ಮುಕ್ತಾಯವಾಗುತ್ತದೆ!  ದ್ವಾಪರಯುಗದಲ್ಲಿ ಮಹರ್ಷಿ ವೇದವ್ಯಾಸರ ‘ಮಹಾಭಾರತ’ ಕೃತಿಯ ಲಿಪಿಗಾರನೂ ಶ್ರೀವಿದ್ಯಾಗಣಪತಿಯೆ ಹೌದು!

Wear Your Religious Fervour on Your Sleeve: 10 Trendy Ganesh Chaturthi  T-Shirts You'll Be

 ಭಕ್ತಾದಿಗಳು ಅವರವರ ಯೋಗ್ಯತೆ ಯಥಾಶಕ್ತಿ ಅನುಸಾರ, ೧,೩,೫,೭,೯, ದಿನ ಅಥವ ತಿಂಗಳ ಪೂರ್ತಿ ಅವಧಿಗೆ ಮಣ್ಣಿನ ಗಣೇಶ ತಂದು ಭವ್ಯ ಮಂಟಪದಲ್ಲಿ ಕೂರಿಸಿ ದಿವ್ಯ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಿ ದಿನವೂ ಮಹಾ ಮಂಗಳಾರತಿ ಪ್ರಸಾದ ವಿನಿಯೋಗದ ಪೂಜೆ ಕೈಗೊಳ್ಳುವರು. ಆಧ್ಯಾತ್ಮ ನೆಲೆಗಟ್ಟಿನ ಅಡಿಯಲ್ಲಿ ವೈಭವದಿಂದ ‘ಗಣೇಶೋತ್ಸವ’ ಆಚರಿಸುವಾಗ ಸಾಮಾಜಿಕ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು, ಕಾನೂನು-ಸುವ್ಯವಸ್ಥೆಗೆ ಚ್ಯುತಿಬಾರದಂತೆ, ಅನ್ಯಧರ್ಮೀಯರಿಗೆ ನೋವುಂಟಾಗದಂತೆ, ಪ್ರಕೃತಿ ಪರಿಸರಕ್ಕೆ ನಷ್ಟವಾಗದಂತೆ, ಶುಚಿತ್ವ ಕಾಪಾಡಿಕೊಂಡು ಆರೋಗ್ಯಕ್ಕೆ ಧಕ್ಕೆಯಾಗದಂತೆ, ನೆರೆಹೊರೆ ಸುಖ ಶಾಂತಿ ನಿದ್ರೆ ಭಂಗವಾಗದಂತೆ, ಮಕ್ಕಳು ಮಹಿಳೆ ರೋಗಿ ವೃದ್ಧರಿಗೆ ಊನವಾಗದಂತೆ, ಸಾರ್ವಜನಿಕ ಸಭೆ ಸಮಾರಂಭಕ್ಕೆ ಅಡ್ಡಿಪಡಿಸದೆ, ಅರೆ/ಸರ್ಕಾರಿ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗದಂತೆ, ನೋಡಿಕೊಳ್ಳಬೇಕು.  ಸಭ್ಯತೆ ಮೀರದ ಅಶ್ಲೀಲ-ಅಸಹ್ಯ [ಪ್ರ]ದರ್ಶನ ಇಲ್ಲದ ಸಾಂಸ್ಕೃತಿಕ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಬಹಳ ಎಚ್ಚರಿಕೆಯಿಂದ ಆಯೋಜಿಸಿ ‘ಭೇಷ್’ ಎನಿಸಿ ಕೊಳ್ಳಬೇಕು! ಈ ಮಾಸದಲ್ಲಿ ಜರುಗುವ ಎರಡು ಪ್ರಮುಖ ವಿಶೇಷ ಸಂದರ್ಭಗಳು:- ಗಣೇಶನ ಪ್ರಾಣಪ್ರತಿಷ್ಟೆಯ ದಿನ ಮತ್ತು ವಿಸರ್ಜನಾ ಮೆರವಣಿಗೆ ದಿನದಲ್ಲಿ ಪರಾಕಾಷ್ಟೆ ಮುಟ್ಟುವ ಡೋಲು ತಮ್ಮಟೆ ವಾದ್ಯ ಪಟಾಕಿಗಳ ಭರ್ಜರಿ ಶಬ್ಧ ಅಣ್ಣ[ಮಾರ]ಮ್ಮನ ಟಪ್ಪಾಂಗುಚ್ಚಿ ಕುಣಿತ ನಯನಮನೋಹರ, ಭಜನೆ ಕೀರ್ತನೆಯಂತೂ ಅದ್ಭುತ ಅಮೋಘ ಅಪೂರ್ವ ಚಿರಸ್ಮರಣೀಯ!

9 Ganesha pictures ideas | ganesha pictures, ganesh wallpaper, ganpati  bappa wallpapers

    ಮುಗ್ಧಮನದ ಚಿನ್ನಾರಿಚಿಣ್ಣರ ಗಣೇಶಬಂದ, ಕಾಯಿಕಡಬುತಿಂದ, ತಥಾಸ್ತುಅಂದ, ಚಿಕ್ಕಕೆರೆಯಲ್ಲಿಬಿದ್ದ, ದೊಡ್ಡಕೆರೆಯಲ್ಲಿಎದ್ದ ಜನಪ್ರಿಯ ಹಾಡು, ಶ್ರೀಪುರಂದರದಾಸರ ಶ್ರೀಗಣನಾಥ  ಸಿಂಧೂರವರ್ಣ ಕರುಣಸಾಗರ  ಕರಿವದನ  ಲಂಬೋದರ ಲಕುಮಿಕರ… ಗಜವದನ ಬೇಡುವೆ ಗೌರೀತನಯ…ಕೀರ್ತನೆಗಳು; ಗಣಪತಿ ಬಾಪ್ಪ ಮೌರ್ಯ.. ಓಂ ಗಣ್‌ಗಣಪತಯೇ ನಮೋನಮಃ… ಹಿಂದಿಭಜನೆಗಳ ಜತೆಗೇ ಮುತ್ತುಸ್ವಾಮಿದೀಕ್ಷಿತರ ‘ವಾತಾಪಿಗಣಪತಿಂ ಭಜೇಹಂ’ ಮತ್ತು ಮೈಸೂರು ವಾಸುದೇವಾಚಾರ್ಯರ ಪ್ರಣಮಾಮ್ಯಹಂ ಗೌರೀಸುತಂ..ಸಂಸ್ಕೃತ ಕೀರ್ತನೆಗಳನ್ನು ಹಾಗೂ ವೇದೋಪನಿಷತ್‌ನ ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್‌ಭುಜಂ.. ದೈವಶ್ಲೋಕವನ್ನು ಎಂದೂ ಯಾರೂ ಮರೆಯುವಂತಿಲ್ಲ! ಜತೆಗೇ ಅಣ್ಣಮಾಚಾರ್ಯ ಚಿ.ಉದಯಶಂಕರ್ ಆರ್‌ಎನ್.ಜಯಗೋಪಾಲ್ ಹಂಸಲೇಖ ಹಾಗೂ ಲಕ್ಷಾಂತರ ನಾ(ಕಾ)ಡು ಹ(ದಿ)ಳ್ಳಿಯ ಭಕ್ತರು ನೂರಾರು ಭಾಷೆಗಳಲ್ಲಿ ರಚಿಸಿದ ಕೋಟ್ಯಾಂತರ ಭಕ್ತಿಗೀತೆ, ಜಾನಪದಗೀತೆ, ಭಾವಗೀತೆ, ಚಿತ್ರಗೀತೆ, ಲಾವಣಿಗಳು ಕರ್ಣಾನಂದಕರ! ಬಣ್ಣಬಣ್ಣದ ನೃತ್ಯ, ತರಾವರಿ ಕುಣಿತ ನಯನಮನೋಹರ! ಹರಿಕಥೆ ನಾಟಕ ಸಂಗೀತಕಛೇರಿ ಭರತನಾಟ್ಯ ಮುಂತಾದ ಅನೇಕ ಕಾರ್ಯಕ್ರಮಗಳು ಆಪ್ಯಾಯಮಾನ. ಭಕ್ತಿಪಂಥ ಆನಂದಲೋಕಕ್ಕೆ ಕರೆದೊಯ್ದಾಗ ಹರ್ಷಮಯ ಹೊಸಪ್ರಪಂಚ ಅನುಭವಿಸುವ ಸುವರ್ಣಾವಕಾಶ!

ವಿಘ್ನೇಶ್ವರನಿಗೆ ಪ್ರಥಮಪೂಜೆ ಮಾಡದೇ ಕಷ್ಟ ನಷ್ಟ ಶಿಕ್ಷೆ ಅನುಭವಿಸಿದ ದೇವ ದಾನವ ಮಾನವರ ಉದಾಹರಣೆ

ದೇವಲೋಕದಲ್ಲಿ:- ಬ್ರಹ್ಮನು ತನ್ನದೊಂದು ಮುಖವನ್ನು ಕಳೆದುಕೊಂಡನುಶಿವನು ಬ್ರಹ್ಮ ಕಪಾಲ ಹಿಡಿದು ಭಿಕ್ಷೆ ಬೇಡಿದನು. ವಿಷ್ಣುವು ಶರಭನಿಂದ ಸೋಲು ಅನುಭವಿಸಿದನು. ನಾರದನು ತುಂಬುರು ಮುನಿಯಿಂದ ಪರಾಜಿತನಾದನು. ದೇವೇಂದ್ರನು ದಾಸಿಯಿಂದ ಛೀಮಾರಿ ಹಾಕಿಸಿಕೊಂಡನು. ಜಯ ವಿಜಯ ದ್ವಾರಪಾಲಕರು ಸಪ್ತ ಮಹರ್ಷಿಗಳ ಶಾಪಕ್ಕೆ ಗುರಿಯಾದರು.

ಕೃತ/ಸತ್ಯಯುಗದಲ್ಲಿ:- ಮಹಾವಿಷ್ಣುವು ಮತ್ಸ್ಯ, ಕೂರ್ಮ, ವರಾಹ, ನರಸಿಂಹ ೪ ಬಾರಿ ಅವತಾರ ತಾಳಿದನು.  ಹಿರಣ್ಯಾಕ್ಷ ಹಿರಣ್ಯಕಶ್ಯಪ ಸೋದರರು ಅನೇಕ ಯುದ್ಧಗಳನ್ನು ಜಯಿಸಿದ್ದರೂ ಪ್ರಥಮಪೂಜೆ ಸಲ್ಲಿಸಲು ಮರೆತ ದಿನದಂದೇ ಹತರಾದರು. ಸೂರ್ಯದೇವ ಶನಿಯ ವಕ್ರದೃಷ್ಟಿಗೆ ಬಿದ್ದು ಕಳಾಹೀನತೆ ಹೊಂದಿದನು. ಪತಿನಿಂದನೆ ಕಾರಣ ದಾಕ್ಷಾಯಣಿ ಅಗ್ನಿಪ್ರವೇಶ, ದಕ್ಷನ ಯಜ್ಞ ವಿಘ್ನ, ವಿಫಲ.

ತ್ರೇತಾಯುಗದಲ್ಲಿ:- ಸತ್ಯಹರಿಶ್ಚಂದ್ರ, ಸಾಮ್ರಾಜ್ಯ ಬಂಧು-ಬಳಗ ಕಳೆದುಕೊಂಡು ಸತಿ, ಸುತ, ಸ್ವಯಂ ತಾನೂ ಮಾರಿಕೊಂಡು ಸ್ಮಶಾನ ಕಾಯ್ದನು.  ರಘುರಾಮ, ೧೪ ವರ್ಷ ವನವಾಸಕ್ಕೆ ತೆರಳಿ ಸೀತೆ ಅಪಹರಣದ ವಿರಹದಿಂದ ನೊಂದು ಬಳಲಿದನು,  ಮರೆಯಲ್ಲಿ ವಾಲಿಯನ್ನು ಕೊಂದ ಮೋಸಗಾರನೆಂಬ ಕೆಟ್ಟಹೆಸರು ಪಡೆದನು, ಲಕ್ಷ್ಮಣನೂ ಪ್ರಜ್ಞೆ ಕಳೆದುಕೊಂಡನು, ತಮ್ಮ ತಪ್ಪಿನ ಅರಿವಾಗಿ ಪ್ರಾಯಶ್ಚಿತ ಮಾಡಿಕೊಳ್ಳಲು ರಾಮ-ಲಕ್ಷ್ಮಣರು ೨೧ ಬಾರಿ ಗಣಪನನ್ನು ಪೂಜಿಸುವರು.  ಅದರ ಫ಼ಲವಾಗಿ ಹನುಮಂತ ಸುಗ್ರೀವನ ಆಸರೆ ವಾನರಸೇನೆ ಸಹಾಯ ದೊರಕಿ ಸೇತುವೆ ನಿರ್ಮಾಣ ಲಂಕಾದಹನ ಸೀತಾ-ರಾಮರ ಪುನರ್ಮಿಲನ ಆಗುತ್ತದೆ.  ಪ್ರಥಮಪೂಜೆ ಮರೆತ ರಾವಣನು ಶಿವನ ಆತ್ಮಲಿಂಗ ನೀಡಿದಾಗ ಅದನ್ನು ಧರೆಗಿರಿಸಿ ಗೋಕರ್ಣವನ್ನು ಭೂಕೈಲಾಸ ಮಾಡಿದ್ದೇ ಮಹಾಗಣಪತಿ. ಪ್ರಥಮಪೂಜೆ ಮರೆತ ದಶಕಂಠ ಕೋದಂಡರಾಮನಿಂದ ಹತನಾದನು.

ದ್ವಾಪರಯುಗದಲ್ಲಿ:- ನಳಮಹಾರಾಜನು ಶನೈಶ್ಚರನ ಅವಕೃಪೆಗೆ ಬಲಿಯಾಗಿ ಸರ್ವಸ್ವವನ್ನು ಕಳೆದುಕೊಂಡು ನರಕಯಾತನೆ ಅನುಭವಿಸಿದನು. ಸುಧರ್ಮಿಕ ಮಹಾರಾಜ ಸಾಮ್ರಾಜ್ಯ ಕಳೆದುಕೊಂಡನು, ಅವನ ಪುತ್ರ ಚಂದ್ರಹಾಸ ಅನಾಥನಾದನು.  ಪಾಂಡವರು ವನ[ಅಜ್ಞಾತ]ವಾಸ, ಅನುಭವಿಸಿದರು. ಸುಯೋಧನನು ಯುದ್ಧವನ್ನು ಸೋತು ಸಾವನ್ನಪ್ಪಿದನು. ಶ್ರೀಕೃಷ್ಣನು ವಿನಾಯಕಚೌತಿಯ ಚಂದ್ರ ದರ್ಶನದಿಂದ ಶಮಂತಕಮಣಿಯ ಕಳ್ಳನೆಂಬ ನಿಂದನೆಗೆ ಗುರಿಯಾದನು!

Ganesh Ji HD Wallpapers - Top Free Ganesh Ji HD Backgrounds -  WallpaperAccess

ಕಲಿಯುಗದಲ್ಲಿ:- ಮಹಾವಿಷ್ಣು ಭೃಗುಮುನಿಯ ಶಾಪಕ್ಕೆ ಗುರಿಯಾಗಿ ಶ್ರೀನಿವಾಸನ ಅವತಾರವೆತ್ತಿ ಕಷ್ಟ ಕಾರ್ಪಣ್ಯ ಎದುರಿಸಿ! ಕುಬೇರನಿಗೆ ಸಾಲಗಾರನಾದನು. ಅಜೇಯಅಶೋಕ, ಇಮ್ಮಡಿಪುಲಿಕೇಶಿ, ಶ್ರೀಕೃಷ್ಣದೇವರಾಯ ಮುಂತಾದ ಅನೇಕ ಚಕ್ರವರ್ತಿಗಳು ಅವನತಿ ಹೊಂದಿದರು. ಇಷ್ಟಾದರೂ, ಅಂದಿನ ತ್ರಿ-ಆಚಾರ್ಯರು ವಚನಕಾರರು ದಾಸವರೇಣ್ಯರು ಪವಾಡಪುರುಷರು ಸರ್ವಜ್ಞರು ರಾಜ ಮಹಾರಾಜರು ಮೊದಲ್ಗೊಂಡು; ಇಂದಿನ ಮಠ ಪೀಠಾಧಿಪತಿಗಳು ರಾಜಕಾರಣಿಗಳು [ವಿ]ಜ್ಞಾನಿಗಳು ಸೇರಿದಂತೆ ಪ್ರತಿಯೊಬ್ಬರೂ ಪ್ರಥಮ ಪೂಜಿತ ವಿಶ್ವಮೂರ್ತಿ ಆರಾಧಿಸುವ ಮೂಲಕ ನಿರ್ವಿಘ್ನವಾಗಿ ತಮ್ಮ ಕಾರ್ಯಗಳನ್ನು ಮುಗಿಸಿ ಕೀರ್ತಿ ಹಣ ಯಶಸ್ಸು ಆನಂದ ನೆಮ್ಮದಿ ತೃಪ್ತಿ ಪಡೆಯುತ್ತಾರೆ!

ಬೆನಕ ಬೆನಕ ಏಕದಂತ…..೨೧ನಮಸ್ಕಾರಗಳುಏಕೆ೨೧ರ ಮಹತ್ವ ಏನು?:-

 ೨೧ ಲೋಕಗಳಲ್ಲಿ ಮತ್ತು ಯುಗಗಳಲ್ಲಿ ಅಸ್ತಿತ್ವದಲ್ಲಿರುವ ಅಯೋನಿಜ, ಅಜಾತಶತ್ರು, ಅಮರಶಕ್ತಿ, ನಿರಂಕುಶಪ್ರಭು, ದೇವಾಧಿದೇವ, ಶೀಘ್ರವರ ಪ್ರದಾಯಕ, ಕ್ರಿಯಾಶೀಲ ದೈವ, ೨೧ ಬಾರಿ ಶನಿಯ[ವಕ್ರ]ದೃಷ್ಟಿಗೆ ಸಿಲುಕದ ಏಕೈಕ ನಾಯಕ, ನಮ್ಮ ವಿನಾಯಕಕೈಲಾಸ, ವೈಕುಂಠ, ಸತ್ಯಲೋಕ, ಮುಂತಾದ ೧೩ ಲೋಕದೊಡನೆ ಅಷ್ಟ ದಿಕ್ಪಾಲಕರ ಲೋಕ ಸೇರಿ ಒಟ್ಟು ೨೧ ಲೋಕ ಇವೆ. ೨೧ನೇಶೂನ್ಯಲೋಕ ದಾಟಿದರೆ ಶ್ರೀವಿಘ್ನೇಶ್ವರ ಸ್ವಾಮಿಯ ೨೨ನೇಸ್ವಾನಂದಲೋಕ ಕಾಣಿಸುತ್ತದೆ ಲೋಕದ ಏಕಮೇವ ಅದ್ವಿತೀಯ ಚಕ್ರವರ್ತಿ ಸ್ವಾನಂದೇಶ[ವಿನಾಯಕ] ನಿವಾಸದ ಸು[]ರಮನೆ ಹೆಸರುಆನಂದ ಭವನ‘! ಇಲ್ಲಿನ ರಾಜಧಾನಿಗೆ ೨೧ಮುಖ್ಯದ್ವಾರಗಳಿದ್ದು, ಅರಮನೆಯ ಕೋಟೆಗಿರುವ ೨೧ಹೆಬ್ಬಾಗಿಲುಗಳ ೨೧ಹೆಸರು:-ಶ್ರೀಮುಖ, ಸುಮುಖ, ಅಥರ್ವ, ಪ್ರಣವ, ಬೆನಕ, ವಿಶ್ವಮೂರ್ತಿ, ವಿಶಿಷ್ಟಕೀರ್ತಿ, ಅಧಿಪತಿ, ಗಣಪತಿ, ಗಣೇಶ, ಲಂಬೋದರ, ಗೌರೀವರ, ವಿಘ್ನೇಶ್ವರ, ಗಣೇಶ್ವರ, ಅಜರಾಮರ, ಅತಿರಥ, ಅಖುರಥ, ಅಮಿತ, ಅಚ್ಯುತ, ಅನಂತ, ಅಗಣಿತಸಹಸ್ರನಾಮ ಜಪಿಸುವಾಗ ಕೇಳಿಬರುವ ಇನ್ನೊಂದು ಹೆಸರೇಸ್ವಾನಂದೇಶ‘! ನಾಮಧೇಯವು ಬಲುಅಪರೂಪದ ಸ್ಮರಣೆಯಾಗಿದೆ! ವಿಘ್ನಹರ್ತ ವಾಸಿಸುವ ಸ್ವಾನಂದ ಲೋಕವು ೫ಸಾವಿರ ಯೋಜನೆಯಷ್ಟು ವಿಸ್ತಾರವುಳ್ಳ ನವರತ್ನ ಖಚಿತ ಸುವರ್ಣ ಧರಣಿಪಂಚಮುಖಿ ಗಣಪತಿಯು ೨೧ ಕೋಟಿ ಸೂರ್ಯನ ತೇಜಸ್ಸು ಹೊಂದಿ ಸಮಷ್ಟಿ ವೃಷ್ಟಿರೂಪನಾಗಿ ಸಕಲ ಭೋಗ ವೈಭೋಗದ ಸಾಮ್ರಾಟನಾಗಿ ಆಳ್ವಿಕೆ ನಡೆಸುತ್ತಿದ್ದಾನೆ. ರವಿ ಚಂದ್ರ ನಕ್ಷತ್ರ ಅಷ್ಟದಿಕ್ಪಾಲಕರು ಇಲ್ಲದ ಲೋಕದಲ್ಲಿ ಶೇ.೧೦೦% ಪುಣ್ಯಜೀವಿ ಇರುವರುಇವರ ಸ್ವಯಂ ಪ್ರಭೆಯಿಂದಲೆ ಇಲ್ಲಿನ ದಶದಿಕ್ಕುಗಳು ಪ್ರಕಾಶಮಾನವಾಗಿ ಬೆಳಗುತ್ತಿರುತ್ತವೆ! ಪ್ರತಿಯೊಬ್ಬ ಪ್ರಜೆಯೂ ಸುಖ ಶಾಂತಿ ನೆಮ್ಮದಿ ಸುಭಿಕ್ಷತೆಯಿಂದ ಇದ್ದು, ಪ್ರತಿದಿನವೂ ೨೧ ಬಾರಿ ಗಣೇಶನ ಭಜನೆ ಪೂಜೆ ಮಾಡಿಕೊಂಡು ಚಿರಂಜೀವಿಯಾಗಿ ಬದುಕುತ್ತಿರುವರು!

              ಇಪ್ಪತ್ತೊಂದು ನಿತ್ಯಸತ್ಯ ಸಾರ್ಥಕಗಳು:-

[೧]ತಾಯಿಸೃಷ್ಟಿಅಯೋನಿಜ.[೨]ಸ್ವಾನಂದೇಶ[೩]ಗೂಳೂರುಗಣಪ[೪]ಬಸವನಗುಡಿಬೆನಕ[೫]ಮೂಶಿಕವಾಹನ[೬]ಕಡಲೆಕಾಳುಗಣಪತಿ[೭]ಹಾಸ್ಯರಸದಅಧಿಪತಿ[೮]ಭಾದ್ರಪದಶುಕ್ಲದಚೌತಿ[೯]ಸಂಕಷ್ಟಹರವ್ರತಪೂಜಿತ[೧೦]ಬ್ರಹ್ಮಚರ್ಯದಸಂಸಾರಿ[೧೧]ಕಾಶಿಯದುಂಢಿರಾಜ [೧೨]ಶೋಣಭದ್ರಾಶಿಲೆಪೂಜಾಪ್ರತೀಕ[೧೩]ಯೋಗಶಾಸ್ತ್ರದಚಕ್ರಸ್ಥಾನಿಕ[೧೪]ಗಣೇಶಪುರಾಣ-ಮುದ್ಗಲಪುರಾಣ[೧೫]ಅಷ್ಟವಿನಾಯಕಕ್ಷೇತ್ರ [೧೬]ತಾರಕಾಸುರಸಂಹಾರಮುನ್ನಮುರುಗನ್‌ಪೂಜಿತ[೧೭]ತ್ರಿಪುರಾಸುರಸಂಹಾರಸಂದರ್ಭಭೈರವೇಶ್ವರನಿಗೆ(ಸಹಸ್ರನಾಮ)ಉಪದೇಶ [೧೮]ಇಂಡೊನೇಷ್ಯರೂಪಾಯಿನೋಟಲ್ಲಿಗಣೇಶಚಿತ್ರ[೧೯]ಗಜವದನ..ಹೇರಂಬಾ..[೨೦]ತ್ರಿಮೂರ್ತಿಗಳೆರಚಿಸಿದ ಅಜಂ ನಿರ್ವಿಕಲ್ಪಂ ಸ್ತೋತ್ರ ಹಾಗೂ [೨೧]ಗಜಾನನಂ ಭೂತಗಣಾದಿ ಸೇವಿತಂ.. ಸ್ತುತಿ ಸೇರಿದಂತೆ ಒಟ್ಟು ೮ ಕೋಟಿಗೂ ಹೆಚ್ಚು ಗೀತೆಗಳನ್ನು ೧೦೮ ಭಾಷೆಗಳಲ್ಲಿ ಸ್ತುತಿಸಲ್ಪಡುವ ಏಕೈಕ ದೈವ!

      ದೃಷ್ಟಾಂತದಿಂದ ನಾವು ತಿಳಿಯಬೇಕಾದ್ದು; ಗಣೇಶನಿಗೆ ಗರಿಕೆಹುಲ್ಲು ನೀಡಿ ಭಕ್ತಿಯಿಂದ ಭಜಿಸಿ ನಿಸ್ವಾರ್ಥದಿಂದ ಪೂಜಿಸಿ ೨೧ ನಮಸ್ಕಾರ ಹಾಕಿದರೆ ಸಾಕು ಆರೋಗ್ಯ ಆಹಾರ ಆನಂದ ದೊರಕುವುದು, ಸುಖ ಶಾಂತಿ ನೆಮ್ಮದಿ ಸಿಗುವುದು ಅಕಾಲ [ದುರ್]ಮರಣ ತಪ್ಪಿ ಸಕಾಲದ ಅಂತ್ಯ ಕಾಣಬಹುದುಗಣೇಶೋತ್ಸವ ಭಕ್ತರಲ್ಲಿ ಕಳಕಳಿಯ ಮನವಿ: ದಯವಿಟ್ಟು ಘನಸರ್ಕಾರದ [ಅಧಿ]ಸೂಚನೆ ಪ್ರಕಾರ ಕೊರೊನಾ ತಡೆಗಟ್ಟಲು ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ? ನೀವೂ ಬದುಕಿರಿ, ಅನ್ಯರನ್ನೂ ಬದುಕಲು ಬಿಡಿ!

                     

ಕುಮಾರಕವಿ ಬಿ.ಎನ್.ನಟರಾಜ್ [೯೦೩೬೯೭೬೪೭೧]

   ನಾಗರಬಾವಿ, ಬೆಂಗಳೂರು-೫೬೦೦೭೨