ಮೈಸೂರು -೨೭ ಹಿಮಾಲಯ ಫೌಂಡೇಷನ್ ವತಿಯಿಂದ ಇಂದು ಸಂಜೆ ಖ್ಯಾತ ಸಂಸ್ಕೃತ ವಿದುಷಿ ಡಾ.ಕೆ.ಲೀಲಾಪ್ರಕಾಶ್ ಅವರ ೬೦ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಸಮಾಜಸೇವಕ ಡಾ. ಕೆ.ರಘುರಾಂ ವಾಜಪೇಯಿ ಮಾತನಾಡಿ, ಡಾ. ಲೀಲಾಪ್ರಕಾಶ್ ನಾಡಿನ ಹೆಮ್ಮೆಯ ಸುಪುತ್ರಿ, ತಂದೆ ಹಿರಿಯ ವಿದ್ವಾಂಸರಾದ ಡಾ. ಕೃಷ್ಣಮೂರ್ತಿ ಅವರ ಹಾದಿಯಲ್ಲಿಯೇ ನಡೆದು ಸಂಸ್ಕೃತ ವಿದ್ವತ್ ವಲಯದಲ್ಲಿ ಸಂಚಲನ ಮೂಡಿಸಿದ ಹೆಗ್ಗಳಿಕೆ ಇವರದು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಮತ್ತೊಬ್ಬ ಮುಖ್ಯ ಅತಿಥಿ ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಸಂಸ್ಕೃತದ ಮೇರು ಸದೃಶ ವಿದ್ವಾಂಸ ಕೃಷ್ಣಮೂರ್ತಿ ಅವರ

ಗ್ರಂಥರತ್ನಗಳನ್ನು.ಮಗಳಾಗಿಪುನರುಜ್ಜೀವನಗೊಳಿಸುವುದರೊಂದಿಗೆ ತಾವೂ ಸಹ ವಿದುಷಿಯಾಗಿ ಹಲವಾರು ಗ್ರಂಥ ಕುಸುಮಗಳನ್ನು ಸಾರಸ್ವತಲೋಕಕ್ಕೆ ಕೊಡುಗೆಯಾಗಿ ನೀಡಿದ ಡಾ.ಲೀಲಾಪ್ರಕಾಶ್ ಅವರ ಜೀವನ ಸಾಧನೆಯನ್ನು ಕೊಂಡಾಡಿದರು. ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಅವರು ಮಾತನಾಡಿ, ಡಾ.ಲೀಲಾಪ್ರಕಾಶ್ ಸಾಹಿತ್ಯ ಕ್ಷೇತ್ರವಲ್ಲದೆ ಪ್ರವಚನ ಮಾಡುವುದರಲ್ಲೂ ಮನೆಮಾತಾಗಿದ್ದು, ವಿದೇಶಗಳಲ್ಲೂ ತಮ್ಮ ವಿದ್ವತ್ಪೂರ್ಣ ಪ್ರವಚನ ಮಾಲಿಕೆಗಳನ್ನು ನೀಡಿ ಪ್ರವಚನ ಪಟು ಎಂಬ ಬಿರುದಿಗೆ ಪಾತ್ರರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಹಿಮಾಲಯ ಫೌಂಡೇಷನ್ ಅಧ್ಯಕ್ಷ ಎನ್. ಅನಂತ್, ಕಾರ್ಯದರ್ಶಿ ಹರ್ಷವರ್ಧನ, ಕನ್ನಡ ಜಾಗೃತಿ ಸಮಿತಿ ಸದಸ್ಯ ಅರವಿಂದ ಶರ್ಮ, ಪತ್ರಕರ್ತ ಮಹೇಶ್ ನಾಯಕ್, ಫೈಟರ್ ಸ್ಪೋರ್ಟ್ಸ್ವೇರ್ ಮಾಲೀಕ ಮಂಜುನಾಥ್ ಸಿಂಗ್, ಶ್ರೀಕಾಂತ್, ಪ್ರಕಾಶಕ ಕೇಶವಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

ಹಿಮಾಲಯ ಫೌಂಡೇಷನ್ ವತಿಯಿಂದ ಇಂದು  ಸಂಜೆ ನಡೆದ ಖ್ಯಾತ ಸಂಸ್ಕೃತ ವಿದುಷಿ ಡಾ.ಕೆ.ಲೀಲಾಪ್ರಕಾಶ್ ಅವರ ೬೦ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಚಿತ್ರದಲ್ಲಿ ಹಿಮಾಲಯ ಫೌಂಡೇಷನ್ ಅಧ್ಯಕ್ಷ ಎನ್. ಅನಂತ, ಕನ್ನಡ ಜಾಗೃತಿ ಸಮಿತಿ ಸದಸ್ಯ ಅರವಿಂದ ಶರ್ಮ, ಕಾರ್ಯದರ್ಶಿ ಹರ್ಷವರ್ಧನ, ಹಿರಿಯ ಸಮಾಜಸೇವಕ ಡಾ.ಕೆ.ರಘುರಾಂ ವಾಜಪೇಯಿ, ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ್, ಮಡ್ಡೀಕರೆ ಗೋಪಾಲ್, ಕೇಶವಪ್ರಕಾಶ್, ಪತ್ರಕರ್ತ ಮಹೇಶ್ ನಾಯಕ್ ಮುಂತಾದವರುಗಳಿದ್ದಾರೆ.

By admin