ಚಾಮರಾಜನಗರ: ಪದವಿ ಪೂರ್ವ ಶಿಕ್ಷಣ ಇಲಾಖೆ ಚಾಮರಾಜನಗರ ಜಿಲ್ಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಅಮಚವಾಡಿ ಇವರ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ೨೦೨೧ ಜರುಗಿತು.


ಪ್ರಾಸ್ತಾವಿಕವಾಗಿ ಉಪನ್ಯಾಸಕ ಸುರೇಶ್ ಎನ್ ಋಗ್ವೇದಿ ಅವರು ಮಾತನಾಡಿ ಜಿಲ್ಲೆಯ ಎಲ್ಲಾ ಕ್ರೀಡಾ ಸ್ಪರ್ಧಿಗಳು ಚಾಮರಾಜನಗರದ ಕೀರ್ತಿಯನ್ನು ಸದಾ ಪ್ರಜ್ವಲಿಸುವಂತೆ ಹಾಗೂ ರಾಜ್ಯ, ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ವಿಜಯ ಗಳಿಸಬೇಕು. ಕ್ರೀಡೆ ಒಂದು ದಿನದ ಮಟ್ಟಿಗೆ ಶ್ರಮ ಪಡುವದಲ್ಲ. ನಿರಂತರ ಅಭ್ಯಾಸ, ಸ್ಪೂರ್ತಿ, ಬದ್ಧತೆ ಮುಖ್ಯವೆಂದು ತಿಳಿಸಿದರು.


ಅಧ್ಯಕ್ಷತೆಯನ್ನು ಅಮಚ ವಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಿವಲಿಂಗಪ್ಪ ವಹಿಸಿ ಮಾತನಾಡಿ ತಾಲೂಕಿನ ೧೬ ಪದವಿ ಪೂರ್ವ ಕಾಲೇಜಿನ ಸುಮಾರು ೮೫೦ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಸ್ಪರ್ಧಿಗಳು ಸೋಲು ಗೆಲುವು ಬಗ್ಗೆ ಹೆಚ್ಚು ಗಮನ ಕೊಡದೆ, ಸದಾ ಕಾಲ ಅಭ್ಯಾಸ ಮಾಡಿ. ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬಹುದು. ಕ್ರೀಡೆಗೆ ಸರ್ಕಾರ ಹೆಚ್ಚು ಗಮನ ನೀಡುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಂಶಪಾಲರ ಸಂಘದ ಅಧ್ಯಕ್ಷರಾದ ಪ್ರಮೋದ್, ಪ್ರಾಂಶಪಾಲರಾದ ಸೋಮಣ್ಣ ಚಂದಕ ವಾಡಿಸ್ವಾಮಿ, ರಂಗಸ್ವಾಮಿ, ಹರವೆರಂಗಸ್ವಾಮಿ,,ಅಮಚ ವಾಡಿ ಕಾಲೇಜಿನ ಮೂರ್ತಿ ಆರ್. ಶಿವಸ್ವಾಮಿ, ಶ್ರೀಕಂಠ ನಾಯ್ಕ್, ಶ್ರುತಿ, ಸುನಂದಾ,ವಿವಿಧ ಕಾಲೇಜಿನ ಕ್ರೀಡಾ ವ್ಯವಸ್ಥಾಪಕರು, ಉಪನ್ಯಾಸಕರು, ತಾಲೂಕು ದೈಹಿಕ ಶಿಕ್ಷಕರು ಯಶಸ್ವಿಗೊಳಿಸಿದರು.