ಚಾಮರಾಜನಗರ: ಆದಿಚುಂಚನಗಿರಿ ಕ್ಷೇತ್ರದ ಹಿರಿಯ ಲಿಂಗೈಕ್ಯ ಶ್ರೀ ಬಾಲಗಂಗಾಧರನಾಥಸ್ವಾಮೀಜಿ ಅವರ ೭೮ ನೇ ಹುಟ್ಟುಹಬ್ಬವನ್ನು ನಗರದಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಆಚರಿಸಲಾಯಿತು.
ನಗರದ ಚಾಮರಾಜೇಶ್ವರಸ್ವಾಮಿ ದೇವಾಲಯದ ಉದ್ಯಾನದ ಬಳಿ ಬಾಲಗಂಗಾಧರನಾಥಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ, ಬಾಲಗಂಗಾಧರನಾಥ ಶ್ರೀಗಳು ತಮ್ಮ ಆಡಳಿತಾವಧಿಯಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರ ಸೇರಿದಂತೆ ಪರಿಸರ ಉಳಿವಿಗೆ ಸಾವಿರಾರು ಗಿಡನೆಟ್ಟು, ಹಸಿರು ಕ್ರಾಂತಿ ಮಾಡಿದ್ದಾರೆ. ಇಂದು ಶ್ರೀಮಠ ಅಭಿವೃದ್ದಿಯತ್ತ ಸಾಗುತ್ತಿರುವುದು ಶ್ರೀಗಳ ಮುಂದಾಲೋಚನೆಗೆ ಸಾಕ್ಷಿಯಾಗಿದೆ ಎಂದರು.
ಅಖಿಲಕರ್ನಾಟಕ ಕನ್ನಡಮಹಾಸಭೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಗೌರವಾಧ್ಯಕ್ಷ ಶಾ.ಮುರಳಿ, ಮಹೇಶ್‌ಗೌಡ, ಚಾ.ವೆಂ.ರಾಜಗೋಪಾಲ್,ಕದಂಬ ಅಬರೀಶ್, ನಿಜಧ್ವನಿಗೋವಿಂದರಾಜು, ನಗರಸಭೆ ಮಾಜಿಅಧ್ಯಕ್ಷ ಮಹದೇವನಾಯಕ, ಪಣ್ಯದಹುಂಡಿರಾಜು. ಗು ಪುರುಷೋತ್ತಮ್ ಚಾ.ರ.ಕುಮಾರ್, ಬಸವರಾಜು ಲೋಕನಾಥ್, ಚನ್ನಂಜಯ್ಯ, ರೈತಮುಖಂಡ ಚಿಕ್ಕಮೋಳೆ ಸಿದ್ದಶೆಟ್ಟಿ ಹಾಜರಿದ್ದರು.
