Month: April 2022

ಭೋಗಾದಿ ಶಾಖೆ ಕ್ರೆಡಿಟ್ ಆಕ್ಸಿಸ್ ಗ್ರಾಮೀಣಕೂಟ ವತಿಯಿಂದ  ಪೋಲಿಸ್ ಠಾಣೆಗಳಿಗೆ ಉಚಿತವಾಗಿ ಬ್ಯಾರಿಕೇಡ್ ವಿತರಣೆ

ಮೈಸೂರು-20 ಮೈಸೂರು ಗ್ರಾಮಾಂತರ ಭೋಗಾದಿ ಶಾಖೆ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ,ಕೂಟ ವತಿಯಿಂದ ಮೈಸೂರಿನ ಪೋಲಿಸ್ ಠಾಣೆಗಳಿಗೆ ಉಚಿತವಾಗಿ ಬ್ಯಾರಿಕೇಡ್ ನೀಡಲಾಯಿತು.ಮೈಸೂರಿನ ಸರಸ್ವತಿ ಪುರಂ ಪೋಲಿಸ್ ಠಾಣೆಗೆ ನಾಲ್ಕು ಬ್ಯಾರಿಕೇಡ್ ಹಾಗೂ ಜಯಲಕ್ಷ್ಮಿಪುರಂ ಪೋಲಿಸ್ ಠಾಣೆಗೆ ೪ ಬ್ಯಾರೀಕೇಡ್ ನೀಡಿದರು.ಚಿತ್ರದಲ್ಲಿ ವೃತ್ತಿ ನೀರಕ್ಷಕರು…

ವಿಶೇಷಚೇತನರ ಆರೋಗ್ಯ ತಪಾಸಣೆ ಸಾಧನ ಸಲಕರಣೆ ಶಿಬಿರ ಆಯೋಜನೆಗೆ ಪೂರ್ವ ಸಿದ್ದತೆ ಕೈಗೊಳ್ಳಿ : ಶ್ರೀನಿವಾಸಪ್ರಸಾದ್

ಚಾಮರಾಜನಗರ:ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಸಹಯೋಗದೊಂದಿಗೆ ವಿಶೇಷಚೇತನರ ಆರೋಗ್ಯ ತಪಾಸಣೆ ಹಾಗೂ ಸಾಧನ ಸಲಕರಣೆ ವಿತರಿಸುವ ಕಾರ್ಯಕ್ರಮ ಆಯೋಜನೆಗೆ ಪೂರ್ವ ಸಿದ್ದತೆ ಕೈಗೊಳ್ಳುವಂತೆ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು…

ಆರೋಗ್ಯ ಮೇಳ ಸದುಪಯೋಗಕ್ಕೆ ಲೋಕಸಭಾ ಸದಸ್ಯ ವಿ. ಶ್ರೀನಿವಾಸ ಪ್ರಸಾದ್ ಸಲಹೆ

ಚಾಮರಾಜನಗರ: ಸರ್ಕಾರ ಜನರ ಆರೋಗ್ಯದ ಕಾಳಜಿಯಿಂದ ಆರೋಗ್ಯ ಮೇಳ ಆಯೋಜಿಸುತ್ತಿದ್ದು ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು.ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ…

ಮುತ್ತಿಗೆ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ

ಚಾಮರಾಜನಗರ: ತಾಲ್ಲೂಕಿನ ಮುತ್ತಿಗೆ ಗ್ರಾಮದಲ್ಲಿ ಗ್ರಾಮದ ಬಿ.ಆರ್. ಅಂಬೇಡ್ಕರ್ ಯುವಕಸಂಘದಿಂದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೧ ನೇ ಜಯಂತಿ ಅಂಗವಾಗಿ ವಿಜೃಂಭಣೆಯ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಯಿತು.ಗ್ರಾಮದ ಅಂಬೇಡ್ಕರ್ ಸಮುದಾಯಭವನದ ಆವರಣದಲ್ಲಿ ಯುಕಸಂಘದ ಪದಾಧಿಕಾರಿಗಳು ಕೇಕ್ ಕತ್ತರಿಸುವ ಮೂಲಕ ಬಾಬಾಸಾಹೇಬ್ ಅವರ…

ಅಸಂಘಟಿತ ವಲಯ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರಿಗೆ ಸನ್ಮಾನ

ಚಾಮರಾಜನಗರ: ಅಸಂಘಟಿತ ವಲಯ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಸಿ.ಬಿ.ನಾಗರಾಜು, ಆರೋಗ್ಯ ರಕ್ಷ ಸಮಿತಿ ಸದಸ್ಯೆ ದಾಕ್ಷಾಯಿಣಿ ಅವರನ್ನು ನಗರದ ಮೇಗಲಉಪ್ಪಾರ ಬಡಾವಣೆ ನಿವಾಸಿಗಳು ಸನ್ಮಾನಿಸಿದರು.ಇದೇವೇಳೆ ಬಡಾವಣೆ ನಿವಾಸಿ ಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿನ ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸುವ ಮೂಲಕ ಅವರ…

ಪ್ರಾಮಾಣಿಕವಾಗಿ ದುಡಿಯುವಂತೆ ಕರೆ ಜೆಡಿಎಸ್ ಯುವ ಮುಖಂಡ :ವಿದ್ಯಾಶಂಕರ್

ಮೈಸೂರು : ಪಿರಿಯಾಪಟ್ಟಣ ತಾಲ್ಲೂಕಿನ ಸುರಗಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಾಮಾನ್ಯ ಕ್ಷೇತ್ರದ ನಿರ್ದೇಶಕರ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಪ್ರಕಾಶ್ ಎಸ್ ಎ, ರಾಜೇಶ್ ಎಸ್ ಕೆ, ಶ್ರೀನಿವಾಸ್…

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ: ಮತದಾನ

ಚಾಮರಾಜನಗರ: ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ವರ್ತಕರ ಕ್ಷೇತ್ರದಿಂದ ಸ್ಪರ್ಧಿಸಿರುವ ವೆಂಕಟರಾವ್ ಭಾನುವಾರ ಮತದಾನ ಮಾಡಿದರು.ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ಸಂಬಂಧ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ಬರುವ…

ಶಾಂತಿ, ಪ್ರೀತಿಯಿಂದ ಸುಜ್ಞಾನದೆಡೆಗೆ ಕರೆದೊಯ್ಯುವುದೇ ಅಹಿಂಸಾ ಮಾರ್ಗ : ಎಂ. ರಾಮಚಂದ್ರ

ಚಾಮರಾಜನಗರ: ಮಾನವ ಜೀವಿಯನ್ನು ಶಾಂತಿ, ಸಹನೆ, ಪ್ರೀತಿಯಿಂದ ಅಜ್ಞಾನದಿಂದ ಸುಜ್ಞಾನದೆಡೆಗೆ ಕರೆದೊಯ್ಯುವುದೇ ಭಗನಾನ್ ಮಹಾವೀರರ ಅಹಿಂಸಾ ಮಾರ್ಗವಾಗಿದೆ ಎಂದು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಅಭಿಪ್ರಾಯಪಟ್ಟರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ…

ಕಸಾಪ ಜಿಲ್ಲಾ ಕಚೇರಿಯಲ್ಲಿ ಅಂಬೇಡ್ಕರ್ ದಿನಾಚರಣೆ

ಚಾಮರಾಜನಗರ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಸಂವಿಧಾನಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ೧೩೧ ನೇ ಜನ್ಮ ದಿನವನ್ನು ಆಚರಿಸಲಾಯಿತು.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಪರಿಹಾರ ಸಮಿತಿ…

ಮೇ ನಲ್ಲಿ “ಚಂದ್ರಲೇಖ ರಿಟರ್ನ್ಸ

ಓಂಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಅಭಿ ನಾಯಕ. ಭೂಮಿಕಾ ನಾಯಕಿ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ನಿರ್ದೇಶನದ ” ಚಂದ್ರಲೇಖ ರಿಟರ್ನ್ಸ್” ಚಿತ್ರ ಮೇ 25 ರಂದು ಆರಂಭವಾಗಲಿದೆ. ಇದು…

ಸರ್ಕಾರಿ ವಾಹನ ಸೌಲಭ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಮೊದಲು ಬಳಕೆಯಾಗಲಿ

ದುಬಾರಿಯಾಗುತ್ತಿರುವ ಪೆಟ್ರೋಲ್ ದರದ ಹಿಂದಿನ ಮರ್ಮ ಖಾಸಗಿತನದ ಲಾಭವಿರಬಹುದು. ಯಾರಿಗೆ ಗೊತ್ತು ಯಾರು ಯಾರೊಡನೆ ಎಲ್ಲಿ ಹೇಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು. ಇದರಿಂದಾಗಿ ಇದೀಗ ಭಾರತ ವ್ಯಕ್ತಿಖಾಸಗಿ ಮತ್ತು ಹಲವು ಖಾಸಗಿ ಸಂಸ್ಥೆಗಳ ಒಡೆತನದ ಗಿರಿಗಿಟ್ಟಲೆಗೆ ನಿಧಾನಗತಿಯಲ್ಲಿ ಒಳಪಡುತ್ತಿದೆ ಎನ್ನುವ ಸತ್ಯ…

ಕ್ಲಾಪ್-11ಉದಯ್ಕುಮಾರ್

ದಿ. 5.3.1933 ರಂದು ಧರ್ಮಪುರಿಬಳಿ ಜನಿಸಿದ ಬೊಮ್ಮಸಂದ್ರ ಶ್ರೀನಿವಾಸಯ್ಯ ಸೂರ್ಯನಾರಾಯಣಶಾಸ್ತ್ರಿ ೧೯೫೬ರಲ್ಲಿ ಬೆಳ್ಳಿತೆರೆಕಂಡ ಭಾಗ್ಯೋದಯ ಕನ್ನಡ ಫ಼ಿಲಂ ಮೂಲಕ ಸಿನಿಮಾಲೋಕಕ್ಕೆ ಪಾದಾರ್ಪಣೆ. ನಾಯಕನಟನಾಗಿ ಎಂಟ್ರಿಕೊಟ್ಟು ಐವತ್ತರವತ್ತು ಚಿತ್ರದಲ್ಲಿ ಉತ್ತಮವಾಗಿ ನಟಿಸಿದರೂ ದುರದೃಷ್ಟವಶಾತ್ ಖಳನಾಯಕನಾಗಿ ಅಭಿನಯಿಸಲು ಅಂಟಿಕೊಂಡ ಮಹಾನ್ ಕಲಾವಿದ! ಕನ್ನಡ ಚಿತ್ರರಂಗದ…

ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು : ಒಂದು ನೋಟ

ಶ್ರೀಲಂಕಾದ ಭೌಗೋಳಿಕತೆ ಸರಿ ಸುಮಾರು ೬೫,೬೧೦ ಚದುರ ಕಿಲೋಮೀಟರ್ ಅಷ್ಟು ವಿಸ್ತೀರ್ಣವಾಗಿದೆ. ಶ್ರೀಲಂಕಾದ ಜನಸಂಖ್ಯೆ ೨೧೫ ಕೋಟಿ, ಇದರಲ್ಲಿ ೧.೦೬ ಕೋಟಿ ಪುರುಷರು ಹಾಗೂ ೧.೦೯ ಕೋಟಿ ಮಹಿಳೆಯರಿದ್ದಾರೆ. ಶ್ರೀಲಂಕಾದ ಆರ್ಥಿಕತೆಯು ಗಂಭೀರ ಪಾವತಿಗಳ ಸಮತೋಲನ ಸಮಸ್ಯೆಯಿಂದಾಗಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಶ್ರೀಲಂಕಾ…

ಎಪಿಎಂಸಿ ಚುನಾವಣೆಯಲ್ಲಿ ರೈತ ವಿರೋಧಿ ಬಿಜೆಪಿ ಬೆಂಬಿತರನ್ನು ಸೋಲಿಸಿ: ಲಕ್ಕೂರು ಆರ್.ಗಿರೀಶ್

ಗುಂಡ್ಲುಪೇಟೆ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಕೃಷಿ ಕಾಯ್ದೆಗಳನ್ನು ತಿದ್ದುಪಡಿಗೆ ಮುಂದಾಗಿತ್ತು. ಇದರಿಂದ ರೈತರ ದಂಡೆದ್ದು ವರ್ಷಗಟ್ಟಲೆ ಪ್ರತಿಭಟನೆ ನಡೆಸಿ ಕಾಯ್ದೆ ಹಿಂಪಡೆಯುವಂತೆ ಮಾಡಿದ್ದಾರೆ. ಇಷ್ಟೆಲ್ಲ ರೈತ ವಿರೋಧಿ ಧೋರಣೆ ಅನುಸರಿಸಿರುವ ಬಿಜೆಪಿ ಇದೀಗ ಎಪಿಎಂಸಿ ಚುನಾವಣೆ ಎದುರಿಸುತ್ತಿರುವುದನ್ನು ಜನರು…

ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕಿನ ವತಿಯಿಂದ ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ

ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕಿನ ವತಿಯಿಂದ ಡಾ|| ಬಿ.ಆರ್. ಅಂಬೇಡ್ಕರ್ ಅವರ 131ನೇ ಆಚರಿಸಲಾಯಿತು. ಮಾಜಿ ಅಧ್ಯಕ್ಷರಾದ ಕೆ.ಉಮಾಶಂಕರ್, ಉಪಾಧ್ಯಕ್ಷರಾದ ಜೆ. ಯೋಗೇಶ್, ನಿರ್ದೇಶಕರುಗಳಾದ ಹೆಚ್. ಹರೀಶ್ ಕುಮಾರ್, ಎಸ್.ಸೋಮಣ್ಣ, ಎ. ಮಂಚಪ್ಪ, ಎಂ. ರಾಮಕೃಷ್ಣ, ಸಿ.ರೇವಣ್ಣ, ಆರ್. ರವಿಕುಮಾರ್ ಹಾಗು…