ಚಾಮರಾಜನಗರ:ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಜಲ ಸಂಜೀವಿನಿ ಯೋಜನೆ ಅನುಷ್ಠಾನಕ್ಕಾಗಿ ಕ್ರಿಯಾಯೋಜನೆ ತಯಾರಿಸಲಾಗುತ್ತಿದ್ದು, ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರ ಬಹುಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.
ಚಾಮರಾಜನಗರ ತಾಲ್ಲೂಕಿನ ಶಿವಪುರ ಗ್ರಾಮಪಂಚಾಯತ್ ವ್ಯಾಪ್ತಿಯ ಯಡಪುರ ಗ್ರಾಮದ ಸುತ್ತುಕಟ್ಟೆ ಅಭಿವೃದ್ದಿ ಅಮೃತ ಸರೋವರ ಕಾಮಗಾರಿ ಸ್ಥಳದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಶುಕ್ರವಾರ(ಡಿ.೨೩)ದಂದು ಹಮ್ಮಿಕೊಳ್ಳಲಾಗಿದ್ದ ‘ಜಲಸಂಜೀವಿನಿ-ರೈತರೊಂದಿಗೆ ಸಂವಾದ’ (ನಮ್ಮ ನಡಿಗೆ ಅನ್ನದಾತನ ಕಡೆಗೆ) ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತರ ಸುಸ್ಥಿರ ಬದುಕಿಗೆ ಪೂರಕವಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೈತರು ಯೋಜನೆಯ ಸದ್ಭಳಕೆ ಮಾಡಿಕೊಳ್ಳಬೇಕು. ಜಲಸಂಜೀವಿನಿ ಕ್ರಿಯಾಯೋಜನೆ ತನ್ನದೇ ಆದ ವೈಶಿ?ತೆ ಹೊಂದಿದ್ದು, ಜಿಯೋ ಸ್ಪೇಷಿಯಲ್ ತಂತ್ರಜ್ಞಾನದ ನೆರವಿನೊಂದಿಗೆ ಕ್ರಿಯಾಯೋಜನೆ ಸಿದ್ದಪಡಿಸಲಾಗುತಿದ್ದು, ಕ್ಲಾರ್ಟ್ ಆಪ್ ಮೂಲಕ ಸ್ಥಳಗಳನ್ನು ಗುರುತಿಸಿ ಭೌಗೋಳಿಕ ಸನ್ನಿವೇಶಗಳನ್ನು ಅರಿತು ಯೋಜನೆ ರೂಪಿಸಲಾಗುತ್ತದೆ ಎಂದರು.
ಕೆರೆಗಳ ಸಂರಕ್ಷಣೆಯ ಉದ್ದೇಶದಿಂದ ಅಮೃತ ಸರೋವರ ಶೀರ್ಷಿಕೆಯಡಿ ೭೫ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲಾಗುತ್ತಿದೆ. ಪ್ರಸ್ತುತ ಬದಲಾಗುತ್ತಿರುವ ಹವಾಮಾನದ ವೈಪರೀತ್ಯಗಳಿಗೆ ಪರಿಹಾರ ಸೂಚಿಸುವ ಸಲುವಾಗಿ ಅಂತರ್ಜಲ ಸಂರಕ್ಷಣೆ ಆಧಾರಿತ ಕಾಮಗಾರಿಗಳ ಅನು?ನ ಪ್ರಮುಖವಾಗಿದ್ದು, ವೈಜ್ಞಾನಿಕವಾಗಿ ಕ್ರಿಯಾಯೋಜನೆ ರೂಪಿಸಿ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ ಜಲಸಂಜೀವಿನಿ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಿಗೆ ಭರಿಸುವ ಒಟ್ಟು ವೆಚ್ಚದ ಕನಿ? ಶೇ. ೬೫ರ? ವೆಚ್ಚವನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಆಧಾರಿತ ಕಾಮಗಾರಿಗಳ ಅನು?ನಕ್ಕೆ ಭರಿಸಬೇಕೆಂಬ ನಿಯಮವಿದ್ದು, ಈ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ವೈಜ್ಞಾನಿಕವಾಗಿ ಕ್ರಿಯಾಯೋಜನೆಯನ್ನು ರೂಪಿಸುವುದು ಬಹುಮುಖ್ಯವಾಗುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಜಲಾನಯನ ಪ್ರದೇಶಗಳನ್ನು ಗುರುತಿಸಿ ದಿಬ್ಬದಿಂದ ಕಣಿವೆ (ಖiಜge ಣo ಗಿಚಿಟಟeಥಿ) ತತ್ವದಡಿ ನಿರ್ದಿ? ಪ್ರದೇಶವನ್ನು ಮೇಲುಸ್ತರ, ಮಧ್ಯಸ್ತರ ಹಾಗೂ ಕೆಳಸ್ತರ ಎಂಬುದಾಗಿ ವಿಂಗಡಿಸಿ, ಹಂತ ಹಂತವಾಗಿ ಮೂರು ವ?ಗಳ ಅವಧಿಯಲ್ಲಿ ಸಂಪೂರ್ಣವಾಗಿ ಆ ಪ್ರದೇಶವನ್ನು ಉಪಚರಿಸಿ ಹರಿಯುವ ನೀರನ್ನು ತೆವಳುವಂತೆ, ತೆವಳುವ ನೀರನ್ನು ನಿಲ್ಲುವಂತೆ, ನಿಂತ ನೀರನ್ನು ಇಂಗುವಂತೆ ಮಾಡುವ ಸಲುವಾಗಿ ವಿವಿಧ ಹಂತಗಳಲ್ಲಿ ಸೂಕ್ತ ಕಾಮಗಾರಿಗಳನ್ನು ಅನು?ನಗೊಳಿಸುವುದು ಜಲಸಂಜೀವಿನಿ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಣ್ಣಿನ ಸವಕಳಿ ಉಂಟಾಗುವ ಪ್ರದೇಶಗಳು, ಜಲಮೂಲಗಳು, ಭೂಮಿಯ ಮೇಲ್ಪದರದ ರಚನೆ, ಹಳ್ಳ ದಿಬ್ಬದ ಪ್ರದೇಶ ಹೀಗೆ ಹಲವಾರು ಮಾಹಿತಿಯನ್ನು ಏSಖಂಅ ಹಾಗೂ ಏಉIS ತಂತ್ರಜ್ಞಾನದ ಮೂಲಕ ಪಡೆದು ಗ್ರಾಮ ಪಂಚಾಯತಿಯ ಸಂಪೂರ್ಣ ನಕ್ಷೆ ತಯಾರಿಸಿ, ನಂತರ ಜಿ.ಐ.ಎಸ್ ತಂತ್ರಾಂಶದಲ್ಲಿ ಆರೋಹಿಸುವುದರೊಂದಿಗೆ ಒಂಭತ್ತು ಹಂತಗಳಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಂಡು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಈ ಕ್ರಿಯಾಯೋಜನೆಯನ್ನು ರೂಪಿಸಲಾಗುತ್ತದೆ ಎಂದರು.
ಕ್ರಿಯಾಯೋಜನೆಯು ವಿನೂತನ ಕಾರ್ಯಕ್ರಮವಾಗಿದ್ದು, ವೈಜ್ಞಾನಿಕ ಯೋಜನೆಯೊಂದಿಗೆ ಗೋಮಾಳ ಅಭಿವೃದ್ದಿ, ವಿಪತ್ತು ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಹಾಗೂ ಸುಸ್ಥಿರ ಜೀವನೋಪಾಯದ ಗುರಿಯನ್ನು ಹೊಂದಿದೆ. ಜಲಸಂರಕ್ಷಣೆಯೊಂದಿಗೆ ಜನರ ಜೀವನ ಮಟ್ಟವನ್ನು ಸುಧಾರಿಸಿ ಸ್ವಾವಲಂಬನೆಗೆ ಆದ್ಯತೆ ನೀಡುವ ಹಲವು ಕಾಮಗಾರಿಗಳ ಅನು?ನಕ್ಕೆ ಪೂರಕವಾಗಿ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ರೈತರ ಸುಸ್ಥಿರ ಬದುಕಿಗೆ ನೆರವು ನೀಡುವ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕಾಮಗಾರಿಗಳ ಅನು?ನಕ್ಕೆ ಆದ್ಯತೆ ನೀಡಲಾಗಿದ್ದು, ತೋಟಗಾರಿಕೆ ರೇ? ಹಾಗೂ ಕೃಷಿ ಇಲಾಖೆ ಸಹಯೋಗದೊಂದಿಗೆ ರೈತರು ನೆರವು ಪಡೆಯಬಹುದಾಗಿದೆ. ಜಲಮೂಲಗಳನ್ನು ಸಂರಕ್ಷಿಸಿ ಅಭಿವೃದ್ದಿಪಡಿಸುವ ಮಹತ್ತರ ಜವಾಬ್ದಾರಿಯ ನಡುವೆ ಜಲಸಂಜೀವಿನಿ ಹಾಗೂ ಅಮೃತ ಸರೋವರ ಕಾರ್ಯಕ್ರಮಗಳು ಪ್ರಾಮುಖ್ಯತೆ ಪಡೆದಿವೆ ಜಿ.ಪಂ. ಸಿಇ.ಒ ಗಾಯತ್ರಿ ಅವರು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಪೂರ್ಣಿಮಾ, ಸಹಾಯಕ ನಿರ್ದೇಶಕರಾದ (ಗ್ರಾಉ), ಪ್ರಕಾಶ್‌ಕುಮಾರ್, ಶಿವಪುರ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ರೈತ ಮುಖಂಡರುಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಇದ್ದರು.