ಮೈಸೂರು: ಬೆಂಗಳೂರಿನ ವಂಡರ್ ಲಾನಲ್ಲಿ ಇದೀಗ ಬಾಹ್ಯಾಕಾಶ ಯಾನದ ಅನುಭವ ನೀಡುವ ಇಮ್ಮರ್ಸಿವ್ ಸ್ಪೇಸ್ ಥಿಯೇಟರ್ ಆಧಾರಿತ ಮನೋರಂಜನಾ ವ್ಯವಸ್ಥೆ ಮಾಡಲಾಗಿದೆ. ಇದು ವಿಶ್ವ ದರ್ಜೆಯದ್ದಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು, ನಗರದ ನಾಗರಿಕರು ಈ ವಿಶಿಷ್ಟ ಅನುಭವ ಪಡೆಯಬಹುದಾಗಿದೆ ಎಂದು ವಂಡರ್ ಲಾ ಸ್ಥಳೀಯ ಮುಖ್ಯಸ್ಥ ರುದ್ರೇಶ್ ತಿಳಿಸಿದರು. ಇಂದು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಹ್ಯಕಾಶ ಯಾನದ ಅನುಭವಕ್ಕಾಗಿ ಇಟಲಿಯಿಂದ ಹೈಡ್ರಾಲಿಕ್ ಲಿಫ್ಟ್ ಆಸನ ವ್ಯವಸ್ಥೆ ಮಾಡಿದ್ದು, ಬಾಹ್ಯಾಕಾಶ ಯಾನದ ಕುಳಿತವರನ್ನು ೪೦ ಅಡಿ ಎತ್ತರಕ್ಕೆ ಕೊಂಡೊಯ್ಯುತ್ತದೆ. ಜತೆಗೆ ಹೈಟೆಕ್ ಲೇಸರ್ ಪ್ರೊಜೆಕ್ಷನ್‌ಗಳಿವೆ. ಶಕ್ತಿಯುತ ಧ್ವನಿ ವ್ಯವಸ್ಥೆ ಇಲ್ಲಿನ ವೈಶಿಷ್ಟ್ಯ.. ೨೩ ಮೀಟರ್ ಎತ್ತರದ ಛಾವಣಿಯೊಂದಿಗೆ ಗುಮ್ಮಟ ಇದಕ್ಕಾಗಿ ನಿರ್ಮಿಸಿದ್ದು, ಈ ರೀತಿಯ ಮೈಸೂರು ವ್ಯವಸ್ಥೆ ಇಡೀ ದೇಶದಲ್ಲಿಯೇ ಮೊದಲಿನದಾಗಿದೆ. ಈ ವಿಷನ್ ಇಂಟರ್ ಸ್ಟೆಲ್ಲಾರ್ ಭೇಟಿ ನೀಡುವವರಿಗೆ ಅಪೂರ್ವ ಅನುಭವ ನೀಡುತ್ತದೆ. ಇನ್ನು, ನಗರದ ಗ್ರಾಮಾಂತರ ಬಸ್ ನಿಲ್ದಾಣ ಬಳಿಯ ಮಹಾರಾಜ ಕಾಂಪ್ಲೆಕ್ಸ್‌ನಲ್ಲಿ ವಂಡರ್ ಲಾ ಕಚೇರಿಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವವರು ಇಲ್ಲಿ ರಿಯಾಯಿತಿ ದರದ ಪಾಸ್ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸುರೇಶ್ ಬಾಬು, ಮೊ: 98453 53746 ನ್ನು ಸಂಪರ್ಕಿಸಬಹುದಾಗಿದೆ ಎಂದು ಕೋರಿದರು. ವಂಡರ್‌ಲಾದ ಅಧಿಕಾರಿಗಳಾದ ಫ್ರಾನ್ಸಿಸ್, ಸುರೇಶ್ ಬಾಬು ಹಾಜರಿದ್ದರು.