ನಗರದ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಸಕ್ತ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 100ಕ್ಕೂ ಹೆಚ್ಚು ಅಂಕಗಳಿಸಿದ
ವಿದ್ಯಾರ್ಥಿಗಳಿಗೆ ಪುರಸ್ಕರಿಸುವ ಮೂಲಕ ಅವರಲ್ಲಿ ಕನ್ನಡ ಮಾತೃ ಭಾಷಾಭಿಮಾನ ಬೆಳೆಸಲು ಕೆ ಎಮ್ ಪಿ ಕೆ ಟ್ರಸ್ಟ್ ಮುಂದಾಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡ ಭಾಷೆ ಉಳಿವಿಗೆ ಸಂಘಟಿತ ಪ್ರಯತ್ನ ಅಗತ್ಯವಾಗಿದೆ ಮಾತೃ ಭಾಷೆ ಬೆಳವಣಿಗೆಗೆ ಶ್ರಮಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ, ಇಂದಿನ ಹೊಸ ಪೀಳಿಗೆಯಲ್ಲಿ ಕನ್ನಡ ಭಾಷೆ ಅಭಿಮಾನ ಕಿಚ್ಚು ಹಚ್ಚುವ ಮತ್ತು ಸಾಧನೆಯ ಹೊಸ ಕನಸು ಬಿತ್ತುವ ಪ್ರಾಮಾಣಿಕ ಕಾರ್ಯ ಕೆ ಎಂ ಪಿ ಕೆ ಟ್ರಸ್ಟ್ ಮಾಡುತ್ತಿದ್ದು ಶ್ಲಾಘನೀಯ ಎಂದು ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು
ಮಕ್ಕಳಿಗೆ ಸನ್ಮಾನಿಸಿ ಮಾತನಾಡಿದವರು ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರಜ್ಞೆ ಜಾಗೃತಿ ಗಳಿಸುವ ಅಗತ್ಯವಿದೆ,
ಕನ್ನಡ ಕರ್ನಾಟಕದ ಜನರು ಬದುಕಿನ ಭಾಷೆ, ಜನ ಭಾಷೆ ಅಷ್ಟೇ ಅಲ್ಲ ಜನಸಾಮಾನ್ಯರ ಭಾಷೆ, ಇಂತಹ ಹಿನ್ನೆಲೆಯ ಕನ್ನಡ ನಾಡಿನಲ್ಲಿ ಪ್ರತಿ ವಿದ್ಯಾರ್ಥಿಯು ಕನ್ನಡ ಪ್ರಜ್ಞೆಯನ್ನ ಬೆಳೆಸಿಕೊಳ್ಳಬೇಕು, ಅದು ಮುಂದೆ ಕನ್ನಡತನ ಬೆಳೆಯಲು ಆಗುತ್ತದೆ ಎಂದು ಅವರು ಹೇಳಿದರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಮಾತನಾಡಿ ವಿದ್ಯಾರ್ಥಿ ಹಂತದಲ್ಲಿಯೇ ಕನ್ನಡ ಪ್ರೀತಿ ಜಾಗೃತಿಗೊಳಿಸುವ ಕೆಲಸ ಆಗಬೇಕಿದೆ, ಇದಕ್ಕಾಗಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗಿತ್ತಿರುವುದು ಶ್ಲಾಘನಯ ಎಂದರು
2025ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರಕ್ಕೂ ಹೆಚ್ಚು ಕನ್ನಡದಲ್ಲಿ ಅಂಕ ಪಡೆದ ರಾಹುಲ್ ಗಾಂಧಿ, ಅಭಯ್, ಲಹರಿ ಜಿ ಆರ್, ರಾಜೇಶ್, ಪ್ರವೀಣ್, ಶಾಂಭವಿ, ಸ್ಪಂದನ, ಐಶ್ವರ್ಯ, ಗೌತಮ್, ಕಿರಣ್ ಕುಮಾರ್, ನಾಗರಾಜು
ರವರಿಗೆ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು
ಶಾಸಕರಾದ ಟಿ ಎಸ್ ಶ್ರೀವತ್ಸ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ ವಾಜಪೇಯಿ, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುತ್ತಣ್ಣ, ಮಾಜಿ ನಗರಪಾಲಿಕ ಸದಸ್ಯರಾದ ಬಿವಿ. ಮಂಜುನಾಥ್, ಕೆಪಿಸಿಸಿ ಸದಸ್ಯರಾದ ನಜರಬಾದ್ ನಟರಾಜ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಜಿ ರಾಘವೇಂದ್ರ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಸಮಾಜ ಸೇವಕರಾದ ಖುಷಿ ವಿನು, ರವಿಚಂದ್ರ, ಸುಚೇಂದ್ರ,ಶ್ರೀಕಾಂತ್ ಕಶ್ಯಪ್,
ಮಹಾನ್ ಶ್ರೇಯಸ್, ಚಕ್ರಪಾಣಿ, ಹಾಗೂ ಇನ್ನಿತರರು ಉಪಸ್ಥಿತರಿದ್ದರು