ಶ್ರೀಲಂಕಾದ ಭೌಗೋಳಿಕತೆ ಸರಿ ಸುಮಾರು ೬೫,೬೧೦ ಚದುರ ಕಿಲೋಮೀಟರ್ ಅಷ್ಟು ವಿಸ್ತೀರ್ಣವಾಗಿದೆ. ಶ್ರೀಲಂಕಾದ ಜನಸಂಖ್ಯೆ ೨೧೫ ಕೋಟಿ, ಇದರಲ್ಲಿ ೧.೦೬ ಕೋಟಿ ಪುರುಷರು ಹಾಗೂ ೧.೦೯ ಕೋಟಿ ಮಹಿಳೆಯರಿದ್ದಾರೆ. ಶ್ರೀಲಂಕಾದ ಆರ್ಥಿಕತೆಯು ಗಂಭೀರ ಪಾವತಿಗಳ ಸಮತೋಲನ ಸಮಸ್ಯೆಯಿಂದಾಗಿ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಶ್ರೀಲಂಕಾ ದೇಶವು ೨ ಕಾರಣದಿಂದ ಆರ್ಥಿಕ ಸಮಸ್ಯೆಗೆ ಸಿಲುಕಿತು. ಮೊದಲಿಗೆ ಕೋವಿಡ್‌ನಿಂದ ಆರ್ಥಿಕತೆಯ ಮೇಲೆ ಒತ್ತಡ ಹಾಗೂ ಎರಡನೆಯದಾಗಿ ಆಂತರಿಕ ಯುದ್ಧ. ಶ್ರೀಲಂಕಾದ ಉಆP ಗೆ ಶೇ. ೧೦ ರಷ್ಟು ಕೊಡುಗೆ ಬರುತ್ತಿದ್ದುದ್ದೇ ಪ್ರವಾಸೋದ್ಯಮದಿಂದ. ೨೦೧೯ ಕೋವಿಡ್‌ನಿಂದ ಪ್ರವಾಸೋದ್ಯಮ ಘಟಕವು ಎಲ್ಲಾ ರಾಷ್ಟ್ರಗಳಲ್ಲೂ ನೆಲೆಕಚ್ಚಿತು. ಇದರಿಂದ ಶ್ರೀಲಂಕಾಗೆ ಬರುವ ಪ್ರವಾಸಿಗರ ಪ್ರಮಾಣದಲ್ಲಿ ಇಳಿಕೆಯಾಯಿತು ಹಾಗೂ GDP ಯು ಕುಸಿಯಲು ಆರಂಭಿಸಿತು.
ಶ್ರೀಲಂಕಾದಲ್ಲಿ ನಿಧಾನವಾಗಿ ರಫ್ತು ಕುಸಿದು, ಆಮದು ಹೆಚ್ಚಾಗ ತೊಡಗಿತು. ಈ ದೇಶದ ಬಜೆಟ್‌ನ ಕೊರತೆ ಅಧಿಕವಾಗಿತ್ತು. ೨೦೦೮ರ ಜಾಗತಿಕ ಬಿಕ್ಕಟ್ಟು, ಅವರ ವಿದೇಶಿ ಮೀಸಲುಗಳನ್ನ ಬರಿದು ಮಾಡಿತು. ೨೦೦೯ರಲ್ಲಿ IIMFನಿಂದ ೨.೬ ಶತಕೋಟಿ ಡಾಲರ್ ಸಾಲವನ್ನು ಪಡೆಯಿತು. ೨೦೧೯ರಲ್ಲಿ ಹೊಸ ಸರ್ಕಾರವು ರೈತರಿಗೆ ಕಡಿಮೆ ತೆರಿಗೆ ಹಾಗೂ ವ್ಯಾಪಕ ಶ್ರೇಣಿಯ SoP ಗಳನ್ನು ಬರವಸೆ ನೀಡಿತು.
ಒಂದು ಕಡೆ ಕೋವಿಡ್ ಹಾಗೂ ಆಂತರಿಕ ಯುದ್ಧದಿಂದ ಪ್ರವಾಸಿಗರ ಪ್ರಮಾಣ ಕುಸಿತ, ಇದರಿಂದ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದ್ದ ಶ್ರೀಲಂಕಾದ ಆರ್ಥಿಕತೆ ಕಡಿಮೆಯಾಯಿತು. ಇದರ ಜೊತೆ ರಬ್ಬರ್, ಸಾಂಬಾರ್ ಪದಾರ್ಥಗಳ ಆಮದುಗಳ ರಫ್ತು ಕಡಿಮೆಯಾಯಿತು.
ಜನರ ಜೀವನ ಮಟ್ಟವನ್ನು ಸುಧಾರಿಸಲು, ಶ್ರೀಲಂಕಾ ಸರ್ಕಾರ ವೆಚ್ಚವನ್ನು ಹೆಚ್ಚು ಮಾಡುತ್ತಾ ಹೋಯಿತು. ಹಾಗಾಗಿ ೨೦೨೦-೨೧ ರಲ್ಲಿ ವಿತ್ತಿಯ ಕೊರತೆಯು ಶೇ. ೧೦ಕ್ಕೆ ಮೀರಿದೆ ಮತ್ತು SOP ಯ ಅನುಪಾತಕ್ಕೆ ಸಾಲ ಕೂಡ ೨೦೧೯ ರಲ್ಲಿ ಶೇ. ೯೪ರಷ್ಟು ಇದ್ದದ್ದು, ೨೦೨೧ ರಲ್ಲಿ ಶೇ.೧೦೯ ಕ್ಕೆ ಏರಿತು.
ಶ್ರೀಲಂಕಾ ಸರ್ಕಾರವು ಸಂಪೂರ್ಣವಾಗಿ ರಾಸಾಯನಿಕ ಗೊಬ್ಬರಗಳ ಆಮದನ್ನು ನಿಷೇದಿಸಿ, ಶೇ. ೧೦೦ ರಷ್ಟು ಸಾವಯವ ಕೃಷಿ ರಾಷ್ಟ್ರ ಮಾಡಬೇಕು ಎಂಬ ಕ್ರಮ ತೆಗೆದುಕೊಂಡಿದೆ. ಇದರಿಂದ, ಹಲವಾರು ರೈತರು ಇದಕ್ಕೆ ಸಾಧ್ಯವಾಗದ ರೀತಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಒಂದು ಕಡೆ, ಚೀನಾದಿಂದ ತೆಗೆದುಕೊಂಡಂತಹ ರಾಸಾಯನಿಕ ಗೊಬ್ಬರ ಹಾಳಾಗಿತ್ತು ಹಾಗೂ ಅದಕ್ಕು ಕೂಡ ಹಣವನ್ನು ನೀಡಲು ಆಗುವುದಿಲ್ಲ ಎಂದು ಶ್ರೀಲಂಕಾ ಸರ್ಕಾರ ಹೇಳಿತ್ತಾದರು, ಒಂದಷ್ಟು ಒತ್ತಡವನ್ನು ಏರಲಾಗಿ, ಹಾಳಾಗಿದ್ದ ರಾಸಾಯನಿಕ ಗೊಬ್ಬರಕ್ಕೆ ಶೇ. ೮೦ ರಷ್ಟು ಹಣ ಪಾವತಿ ಮಾಡಲಾಯಿತು. ರಾಸಾಯನಿಕ ಗೊಬ್ಬರ ನಿಷೇಧಿಸಿದ ಕಾರಣದಿಂದ, ಆಹಾರ ಕೊರತೆ ಉದ್ಬವಿಸಿತು, ಬೆಲೆಗಳಲ್ಲಿ ಏರಿಕೆ, ವಿದೇಶಿ ವಿನಿಮಯ ಮೀಸಲುಗಳು ಖಾಲಿಯಾಗುತ್ತಾ ಬಂದಿತು. ಹೀಗಾಗಿ ಆಹಾರದ ಹಣದುಬ್ಬರ ಶೇ. ೨೭ಕ್ಕೆ ಮತ್ತು ಹಣದುಬ್ಬರದ ಪ್ರಸ್ತುತ ಪ್ರಮಾಣವು ಶೇ. ೧೫ ರಿಂದ ಶೇ. ೧೭.೫ ಕ್ಕೆ ಹೆಚ್ಚಾಗಿದೆ. ಇದು ಲಕ್ಷಾಂತರ ಜನರನ್ನ ಬಡ ಶ್ರೀಲಂಕಾದ ಅಂಚಿಗೆ ತಳ್ಳುತ್ತದೆ.
ಇಂಥ ಆರ್ಥಿಕ ದುಸ್ತಿಯ ಸಮಯದಲ್ಲಿ ಭಾರತವು ಶ್ರೀಲಂಕಾಗೆ ಧನ ಸಹಾಯ ಮಾಡಲು ಮುಂದೆ ಬಂದಿದೆ. ೨೦೨೨ರ ಆರಂಭದಿಂದ, ಭಾರತವು ವಿಸ್ತರಿಸಿದ ಪರಿಹಾರವು ೧.೪ US billion ಡಾಲರ್. ಹಾಗೆಯೆ ಆಹಾರ, ಇಂಧನ ಸರಕುಗಳನ್ನು ಶ್ರೀಲಂಕಾಗೆ ನೀಡುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ಶ್ರೀಲಂಕಾಗೆ ಭಾರತದದಿಂದ ೭೬ ಸಾವಿರ ಟನ್ ಡೇಸೆಲ್‌ನ್ನು ನೆರವು ನೀಡಲಾಗಿದೆ. ಅಂದರೆ, ಒಟ್ಟು ಡೀಸೆಲ್‌ನ ಪೂರೈಕೆಯಲ್ಲಿ ಭಾರತವು ಶ್ರೀಲಂಕಾಗೆ ೨ ಲಕ್ಷ ೭೦ ಸಾವಿರ ಟನ್‌ಗಳಷ್ಟು ನೆರವನ್ನು ನೀಡಿದೆ. ಒಂದು ಕನ್ಸೈನ್ಮೆಂಟ್ ನಲ್ಲಿ ೩೬ ಸಾವಿರ ಒಖಿ ಪೆಟ್ರೋಲ್ ಹಾಗೂ ೪೦ ಸಾವಿರ ಒಖಿ ಡೀಸೆಲ್ ಅನ್ನು ಭಾರತವು ಶ್ರೀಲಂಕಾಗೆ ರಫ್ತು ಮಾಡಿದೆ ಎನ್ನುವ ಮಾಹಿತಿಯನ್ನ ಭಾರತದ ರಾಯಭಾರಿ ಕಛೇರಿಯು ಶ್ರೀಲಂಕಾದಲ್ಲಿ ತಿಳಿಸಿದೆ.
ವಿದೇಶಗಳೊಂದಿಗೆ ಶ್ರೀಲಂಕಾದ ವ್ಯವಹಾರ ಹೇಗಿದೆ?
ಕಳೆದ ಫೆಬ್ರುವರಿ ತಿಂಗಳಲ್ಲಿ ಶ್ರೀಲಂಕಾ ಬಳಿ ೨.೩೧ ಶತಕೋಟಿ ಅಮೆರಿಕ ಡಾಲರ್ನಷ್ಟು ವಿದೇಶಿ ಮೀಸಲು ನಿಧಿ ಇತ್ತು. ಆದರೆ ದೇಶದ ಮೇಲಿದ್ದ ಸಾಲದ ಹೊರೆಯು ೧೨.೫೫ ಶತಕೋಟಿ ಅಮೆರಿಕ ಡಾಲರ್, ಈ ಪೈಕಿ ೪ ಶತಕೋಟಿ ಡಾಲರ್ ಮೊತ್ತದ ಸಾಲವನ್ನು ಇದೇ ವರ್ಷ ತೀರಿಸಬೇಕಿದೆ. ತೀರಿಸಬೇಕಾದ ಸಾಲದ ಪೈಕಿ ೧ ಶತಕೋಟಿ ಡಾಲರ್ ಮೊತ್ತವು ಅಂತರರಾಷ್ಟ್ರೀಯ ಸಾವರಿನ್ಬಾಂಡ್ (International Sovereign Bond-ISB)) ರೂಪದಲ್ಲಿತ್ತು. ಈ ಬಾಂಡು ಜುಲೈ ತಿಂಗಳಲ್ಲಿ ಮೆಚ್ಯುರಿಟಿ ಆಗುವುದರಲ್ಲಿದ್ದ ಕಾರಣ, ತುರ್ತಾಗಿ ಹಣ ಹೊಂದಿಸಲೇಬೇಕಾದ ಅನಿವಾರ್ಯತೆಗೆ ಶ್ರೀಲಂಕಾ ಸಿಲುಕಿತು. ಸಾಲದಮೊತ್ತ ವಿಪರೀತ ಎನ್ನುವಷ್ಟು ಹೆಚ್ಚಾಗಿರುವ ಕಾರಣ ಶ್ರೀಲಂಕಾ ಸದ್ಯದ ಪರಿಸ್ಥಿತಿಯಲ್ಲಿ ಸಾಲ ತೀರಿಸಲಾರದು ಎಂದು ವಿಶ್ವ ಹಣಕಾಸು ಸಂಸ್ಥೆ ವಿಶ್ಲೇಷಿಸಿತು. ಇದರಿಂದಾಗಿ ಹೊಸದಾಗಿ ಸಾಲಹುಟ್ಟುವುದು, ವಿದೇಶಗಳಿಂದ ಆಮದು ಮಾಡಿಕೊಳ್ಳುವುದು ಶ್ರೀಲಂಕಾಕ್ಕೆ ಕಷ್ಟವಾಯಿತು.
ಶ್ರೀಲಂಕಾಕ್ಕೆ ಕ್ರಮಗಳು:
ಸಿಂಹಳ-ತಮಿಳು ಹೊಸ ವರ್ಷದ ಆರಂಭದ ಮೊದಲು (ಏಪ್ರಿಲ್ ಮಧ್ಯದಲ್ಲಿ) ನಿರೀಕ್ಷಿಸಲಾದ ಕೆಲವು ಅಗತ್ಯ ವಸ್ತುಗಳ ಕೊರತೆ ಕೊನೆಗೊಂಡ ತಕ್ಷಣ ಸರ್ಕಾರವು ದೇಶದ ಆರ್ಥಿಕ ಚೇತರಿಕೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು.
- ಪ್ರಸ್ತುತ ಬಿಕ್ಕಟ್ಟಿನಿಂದ ಕೆಟ್ಟದಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಯುದ್ಧ ಪೀಡಿತ ಉತ್ತರ ಮತ್ತು
- ಪೂರ್ವ ಪ್ರಾಂತ್ಯಗಳ ಆರ್ಥಿಕ ಅಭಿವೃದ್ಧಿಗೆ ಮಾರ್ಗಸೂಚಿಯನ್ನು ರಚಿಸಲು ಸರ್ಕಾರವು ತಮಿಳು ರಾಜಕೀಯ ನಾಯಕತ್ವದೊಂದಿಗೆ ಕೈಜೋಡಿಸಬೇಕು.
- ದೇಶೀಯ ತೆರಿಗೆ ಆದಾಯವನ್ನು ಹೆಚ್ಚಿಸುವುದು ಮತ್ತು ಸಾಲವನ್ನು ಮಿತಿಗೊಳಿಸಲು ಸರ್ಕಾರದ ವೆಚ್ಚವನ್ನು ಕುಗ್ಗಿಸುವುದು ಉತ್ತಮವಾಗಿದೆ, ವಿಶೇಷವಾಗಿ ಬಾಹ್ಯ ಮೂಲಗಳಿಂದ ಸಾರ್ವಭೌಮ ಸಾಲವನ್ನು.
- ರಿಯಾಯಿತಿಗಳು ಮತ್ತು ಸಬ್ಸಿಡಿಗಳ ಆಡಳಿತವನ್ನು ಪುನರ್ರಚಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು.

Dr.R.H.PAVITHRA
CHAIRMAN
DEPARTMENT OF ECONOMICSKARNATAKA STATE OPEN UNIVERSITYMYSORE