ಮೈಸೂರು, ಡಿ. ೩೧: ೨೦೨೫-೨೬ರ ಪವಿತ್ರ ಆದಿಯೋಗಿ ರಥಯಾತ್ರೆಯ ಭಾಗವಾಗಿ, ಸುಮಾರು ೧,೦೦೦ ಕಿ.ಮೀ.ಗಳ ಯಾತ್ರೆಯಲ್ಲಿರುವ ಆದಿಯೋಗಿ ರಥವು ಬುಧವಾರ ಡಿಸೆಂಬರ್ ೩೧ರಂದು ಮೈಸೂರಿಗೆ ಆಗಮಿಸಲಿದೆ. ಇಲವಾಲದ ವಿವೇಕಾನಂದ ಫಾರ್ಮ್ ಹಾಲ್‌ನಿಂದ ಬೆಳಿಗ್ಗೆ ೮ ಗಂಟೆಗೆ ಪ್ರಯಾಣ ಆರಂಭಿಸುವ ರಥವು ಹಿಂಕಲ್, ಸರಸ್ವತಿಪುರಂ, ವಿದ್ಯಾರಣ್ಯಪುರಂ ಮಾರ್ಗವಾಗಿ ಶ್ರೀ ಸುತ್ತೂರು ಮಠವನ್ನು ತಲುಪಲಿದೆ.ರಥಯಾತ್ರೆಯು ಜನವರಿ ೧ ಮತ್ತು ೨ರಂದು ಮೈಸೂರಿನ ವಿವಿಧ ಪ್ರಮುಖ ಸ್ಥಳಗಳಲ್ಲಿ ಸಾಗಲಿದ್ದು, ಫೆಬ್ರವರಿ ೧೩, ೨೦೨೬ರಂದು ಮಹಾಶಿವರಾತ್ರಿ ಪೂರ್ವಭಾವಿಯಾಗಿ ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ ಆದಿಯೋಗಿಯ ಬಳಿ ಸಮಾಪ್ತಿಗೊಳ್ಳಲಿದೆ.
