ಚಾಮರಾಜನಗರ: ಮೈಸೂರಿನ ಅವಧೂತ ದತ್ತಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರು ವಿಶ್ವದ ಶ್ರೇಷ್ಠ ಆಧ್ಯಾತ್ಮ ನಾಯಕರು ಹಾಗೂ ಸಂಗೀತ ಶ್ರೇಷ್ಠರು. ದತ್ತಪೀಠದ ಮೂಲಕ ಮೈಸೂರು ನಗರವನ್ನು ಮತ್ತಷ್ಟು ವಿಶ್ವಖ್ಯಾತಿಗೊಳಿಸಿದ ಮಹಾನ್ ಆಧ್ಯಾತ್ಮ ಪುರುಷರು ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ನಗರದ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ೮೩ನೇ ಜನ್ಮ ದಿನಾಚರಣೆ ಹಾಗೂ ಸಂಸ್ಕೃತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತ ೮೩ ವರ್ಷಗಳ ಹಿರಿಯ ಶ್ರೇಷ್ಠ ತಪಸ್ವಿಗಳಾದ ಸಚ್ಚಿದಾನಂದ ಸ್ವಾಮೀಜಿಯವರು ತಮ್ಮ ಅಪಾರ ಆಧ್ಯಾತ್ಮಿಕ ಬೋಧನೆ, ಸಂಗೀತ ಚಿಕಿತ್ಸೆ ಹಾಗೂ ಮಾನವೀಯ ಸೇವೆಗಳಿಗೆ ಸಮರ್ಪಸಿ ,ಮಾನವ ಕಲ್ಯಾಣವನ್ನು ನಿರಂತರವಾಗಿ ಮಾಡುತ್ತಿದ್ದಾರೆ . ದತ್ತಪೀಠವು ವಿಶ್ವದ ಒಂದು ಶ್ರೇಷ್ಠ ಆಧ್ಯಾತ್ಮ ಸಂಸ್ಥೆಯಾಗಿದೆ.

ಪ್ರಾಚೀನ ವೈದಿಕ ಸಂಪ್ರದಾಯ, ಆಚರಣೆ ,ವೇದ ,ಉಪನಿಷತ್ತು, ಮಹಾಕಾವ್ಯಗಳ, ಪುರಾಣಗಳ ಸಂರಕ್ಷಣೆ ಹಾಗೂ ಪ್ರಚಾರ ಮಾಡುವ ಮೂಲಕ ಭಾರತೀಯ ಸನಾತನ ಧರ್ಮವು ವಿಶ್ವ ಖ್ಯಾತಿಗೊಳಿಸಲು ಸಮರ್ಪಿತವಾದ ಪೀಠಗಳಲ್ಲಿ ಒಂದಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ.ತಮ್ಮ ೮೩ನೇ ವಯಸ್ಸಿನಲ್ಲೂ ವಿಶ್ವದಲ್ಲೆಡೆ ಸಂಚಾರ ಮಾಡಿ ಭಾರತದ ಆಧ್ಯಾತ್ಮ ಚಿಂತನೆಗಳನ್ನು ಬೋಧಿಸುವ ಮೂಲಕ ಭಾರತದ ಖ್ಯಾತಿಯ ಜೊತೆಗೆ ಮೈಸೂರನ್ನು ಮತ್ತಷ್ಟು ವಿಶ್ವ ಪ್ರಸಿದ್ಧಿ ಯನ್ನಾಗಿ ರೂಪಿಸಿದ್ದಾರೆ. ಮೈಸೂರಿನ ದತ್ತಪೀಠ ಸ್ವರ್ಗದಂತಿದ್ದು, ನಾದಮಂಟಪ ವಿಶ್ವದ ಸುಂದರ ಸಭಾಂಗಣವಾಗಿದೆ .ಸಂಗೀತ ಚಿಕಿತ್ಸೆ, ಸಂಗೀತ ಮತ್ತು ಮಾನವ, ಸಂಗೀತ ಮತ್ತು ಆತ್ಮ, ಸಂಗೀತ ಮತ್ತು ಮಾನವತೆ ಮೂಲಕ ಏಳು ಸಂಗೀತ ಸ್ವರಗಳ ಸ್ತಂಭಗಳ ನಿರ್ಮಾಣ ಮಾಡುವ ಮೂಲಕ ಪ್ರತಿ ಸ್ತಂಭವು ತನ್ನದೇ ಆದ ವಿಶೇಷ ಸಂಗೀತ ಸ್ವರಗಳನ್ನು ಧ್ವನಿಯಾಗಿ ಪ್ರತಿನಿಧಿಸುವಂತಹ ಸಭಾಂಗಣ ನಿರ್ಮಿಸಿರುವುದು ಮೈಸೂರಿಗೆ ಒಂದು ಕೊಡುಗೆಯಾಗಿದೆ. ದತ್ತಪೀಠವು ಧರ್ಮ ,ಸಂಗೀತ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಪುನರುಸ್ತಾನಗೊಳಿಸುವ ಜೊತೆಗೆ ಶ್ರೀ ಚಕ್ರಾಧ್ಯಾನ ಮಂದಿರ ಬೋನ್ಸಾಯ್ ಉದ್ಯಾನವನ, ಸುಖವನ ಹಾಗೂ ಅನ್ನದಾನದ ಮಹತ್ವವನ್ನು ತಿಳಿಸುತ್ತಿರುವ ಸರ್ವ ಶ್ರೇಷ್ಠ ಪೀಠವಾಗಿದೆ.
ಮಾನವನು ಸದಾಕಾಲ ಸರಳ ಜೀವನವನ್ನು ನಡೆಸಬೇಕು. ತಾಳ್ಮೆಯೇ ಶ್ರೇಷ್ಠ ತಪಸ್ಸು. ಆಡಂಬರ ಜೀವನವನ್ನು ಬಿಟ್ಟುಬಿಡಿ. ದೇವರು ಏಕೈಕ ನಿಜವಾದ ಸ್ನೇಹಿತ .ಪ್ರತಿಯೊಬ್ಬರು ಸದಾ ಸಂತೃಪ್ತರಾಗಿ ,ದೇವರನ್ನು ಸ್ಮರಿಸಿ ಎನ್ನುವ ದಿವ್ಯ ಸಂದೇಶಗಳನ್ನು ಸದಾ ಕಾಲ ಬೋಧಿಸಿ, ಭಕ್ತರನ್ನು ಸಂತೃಪ್ತಿಗೊಳಿಸಿ, ಧರ್ಮ ಕಾರ್ಯದಲ್ಲಿ ತೊಡಗಲು ಸದಾಕಾಲ ಆಶೀರ್ವದಿಸುತ್ತಿರುವ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ದೀರ್ಘಾಯುಷ್ಯಗಳಾಗಿ ,ಮಾನವ ಕಲ್ಯಾಣವನ್ನು ನಡೆಸಲಿ. ಸಮಾಜದ ಉನ್ನತಿಗೆ ದತ್ತಪೀಠ ಕೊಡುಗೆಯನ್ನು ನೀಡುತ್ತಿರುವುದು ನಮ್ಮೆಲ್ಲರ ಪುಣ್ಯವೆಂದು ಋಗ್ವೇದಿಯವರು ತಿಳಿಸಿದರು.

ಉಪನ್ಯಾಸ ಕಾರ್ಯಕ್ರಮವನ್ನು ಬ್ರಾಹ್ಮಿ ಮಹಿಳಾ ಸಂಘದ ಗೌರವ ಅಧ್ಯಕ್ಷರಾದ ಶ್ರೀಮತಿ ವತ್ಸಲಾ ರಾಜ್ ಗೋಪಾಲ್ ರವರು ಉದ್ಘಾಟಿಸಿ ಭಾರತದಲ್ಲಿ ನೂರಾರು ಮಠಗಳು ಇದ್ದು ಸದಾ ಕಾಲ ಮಹಾಪುರುಷರು ಧರ್ಮ ಬೋಧನೆಯ ಮೂಲಕ ಸತ್ಕಾರ್ಯವನ್ನು ಮಾಡುತ್ತಿದ್ದಾರೆ. ಅವರೆಲ್ಲರನ್ನು ಸ್ಮರಿಸಿ ,ಗೌರವಿಸಿ ನಮ್ಮ ಸಮಾಜವನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಲು ಜನ್ಮದಿನಗಳು ಪ್ರೇರಣೆಯನ್ನು ನೀಡುತ್ತದೆ .ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಧರ್ಮ ಶ್ರೇಷ್ಠರ ಚಿಂತನೆಗಳ ಬಗ್ಗೆ ಸದಾ ಕಾಲ ಜೈಹಿಂದ್ ಕಟ್ಟೆಯ ಮೂಲಕ ಸಾವಿರಾರು ಕಾರ್ಯಕ್ರಮಗಳನ್ನು ರೂಪಿಸಿ ಸ್ಪೂರ್ತಿ ತುಂಬುತ್ತಿರುವ ಸಂಸ್ಥೆ ಮತ್ತಷ್ಟು ಬೆಳೆಯಲಿ. ಗುರು ಶ್ರೇಷ್ಠರ, ಆಧ್ಯಾತ್ಮ ಪುರುಷರ, ತಪಸ್ವಿಗಳ ಜೀವನಗಳು ಸರ್ವರಿಗೂ ಮಾದರಿಯಾಗಲಿ ಎಂದು ತಿಳಿಸಿದರು.

ಶ್ರೀ ಲಲಿತಾ ಸಹಸ್ರ ನಾಮ ಅಭಿಯಾನ ಹಾಗೂ ಜೈ ಹಿಂದ್ ಪ್ರತಿಷ್ಠಾನದ ನಿರ್ದೇಶಕರಾದ ಶ್ರೀಮತಿ ಕುಸುಮ ಋಗ್ವೇದಿ ಯವರು ಆಧ್ಯಾತ್ಮ ಚಿಂತನೆಗಳ ಮಹತ್ವವನ್ನು ವಿವರಿಸಿದರು. ಗುರುಗಳ ಸೇವೆ ,ಗುರುಗಳ ಶ್ರೇಷ್ಠ ನುಡಿಗಳು ಹಾಗೂ ಅವರ ತಪಸ್ಸಿನ ಅನುಭವದ ಧ್ವನಿಗಳು ನಮಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಮಾಲಾ ರವಿ, ವಾಣಿಶ್ರೀ ,ವಿಜಯಲಕ್ಷ್ಮಿ, ಗಾಯತ್ರಿ ,ಪೂಜಾಶ್ರೀ ,ಶ್ರಾವ್ಯ ಎಸ್ ಋಗ್ವೇದಿ ಸಾನಿಕ ಮತ್ತಿತರು ಉಪಸ್ಥಿತರಿದ್ದರು.

Leave a Reply