ಹುಟ್ಟು ಆಕಸ್ಮಿಕ ಸಾವು ಖಚಿತ ಇವೆರಡರ ನಡುವಣದ ಜೀವನವೆ ವರವರದಾನ ಜೀವನವನ್ನು ಸಾರ್ಥಕವಾಗಿ ಸಾಗಿಸುವುದೆ ಜೀವನಕಲೆಜೀವನಕಲೆಯ ಬಗ್ಗೆ ಋಷಿಮುನಿಗಳ ಕಾಲದಿಂದ ಮಹಾತ್ಮಕಲಾವಿದರ ಕಾಲದವರೆಗೂ ಅಸಂಖ್ಯಾತ ಪ್ರವಚನಲೇಖನಚಿತ್ರಣ ನೀಡುವುದರ ಮೂಲಕ ಸಾತ್ವಿಕಆಹಾರ ಮತ್ತು ತಾತ್ವಿಕವಿಚಾರ ಸರ್ವಶ್ರೇಷ್ಠ ಎಂಬುದನ್ನು ಪ್ರತಿಪಾದಿಸುತ್ತ ನಿರೂಪಿಸಿದ್ದಾರೆ. ನಾವೀಗ ಇದನ್ನುಬೆಳೆಸಿ ಉಳಿಸಿಕೊಳ್ಳಬೇಕಾದ್ದು ಆದ್ಯಕರ್ತವ್ಯ. ಆಗಮಾತ್ರ ಪ್ರಕೃತಿಮಾನವ ನಡುವಣ ಅವಿನಾಭಾವ ಸಂಬಂಧ ವೃದ್ಧಿಸಲು ಸಾಧ್ಯಇಲ್ಲವಾದರೆ ಅಕಾಲಿಕ ಜನನಮೃತ್ಯುಕಷ್ಟನಷ್ಟ ಮುಂತಾದ ಪ್ರಾಕೃತಿಕ ವಿಕೋಪಗಳು ರುದ್ರನರ್ತನ ಮಾಡುತ್ತವೆ ಸೃಷ್ಟಿವೈಚಿತ್ರಗಳು ಧರೆಯ[ನಮ್ಮ]ನ್ನು ಆಳುತ್ತವೆ!    ಹಿಂದೂಮುಸ್ಲಿಂಕ್ರೈಸ್ತಪಾರಸಿಸಿಖ್ಜೈನಬುದ್ಧ; ಧರ್ಮಗ್ರಂಥಗಳಲ್ಲಿ ಮಾನವನ ಜೀವನಕಲೆಯನ್ನು ಉಧಹರಿಸುವಾಗ ದುಷ್ಟಶಿಕ್ಷಕಶಿಷ್ಟರಕ್ಷಕ ಮೂಲಭೂತ ಪ್ರವಾದಆಗಿದೆ. ಒಳಿತುಕೆಡಕುಗಳ ಬಗ್ಗೆ ಅನೇಕ ರೀತಿ ಬದುಕಿನ ಅವಲಂಬನೆಅನುಭವಗಳನ್ನು ಹಂಚಿಕೊಳ್ಳುತ್ತ ಜೀವನ ಸಾಗಿಸಲಾಗುತ್ತದೆ. ಇಂಥ ತಾತ್ವಿಕ ವಿಚಾರವಂತಿಕೆಗೆ ಸಾತ್ವಿಕ ಆಹಾರವೂ ಪ್ರಮುಖ ಪಾತ್ರ ವಹಿಸುತ್ತದೆ ಬುನಾದಿಯ ಮೇಲೆ ಮಾತ್ರವೆ ಇವತ್ತಿಗೂ ರಾಮಾಯಣ ಮಹಾಭಾರತ ಭಗವದ್ಗೀತೆ ಖುರಾನ್ ಬೈಬಲ್ ಮುಂತಾದ ಪವಿತ್ರಗ್ರಂಥಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಸಾತ್ವಿಕತೆತಾತ್ವಿಕತೆ ಇವುಗಳನ್ನು ಸರಳವಾಗಿ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡುವಂತಹ ಸಾಕಷ್ಟು ಉಲ್ಲೇಖಗಳು ಉದ್ಗ್ರಂಥಗಳಲ್ಲಿವೆ. ಇದನ್ನು ಪ್ರಪಂಚದ ಪ್ರತಿಯೊಬ್ಬ ಮನುಷ್ಯರೂ ಒಪ್ಪಿಕೊಳ್ಳುತ್ತಾರೆ.

        ೧೦ನೇ ಶತಮಾನದಿಂದ ೧೫ನೇ ಶತಮಾನದವರೆಗೆ ಶಂಕರ-ರಾಮಾನುಜ-ಮಧ್ವಆಚಾರ್ಯತ್ರಯರೂ, ಗುರುರಾಯರು-ಕನಕ-ಪುರಂದರ-ಕಬೀರ-ಸರ್ವಜ್ಞ-ತಿರುವಳ್ಳುವರ್ ಮಹನೀಯರಿಂದ ಮಾನವಜೀವನ ಪಾವನವಾಗುವ ಪವಾಡಸದೃಶಗಳೂ ಜೀವನಾದರ್ಶಗಳೂ ಶ್ರೇಷ್ಠನಿದರ್ಶನಗಳಾಗಿವೆ. ೧೯ನೆಶತಮಾನದಿಂದ ಇತ್ತೀಚಿನವರೆಗೆ ಸಾಗಿಬಂದ ಮಹಾಪುರುಷರಲ್ಲಿ ರಾಮಕೃಷ್ಣಪರಮಹಂಸ ಸ್ವಾಮಿವಿವೇಕಾನಂದ ಮಹಾತ್ಮಗಾಂಧೀಜಿ ಅರವಿಂದ-ರವಿಶಂಕರ್‌ಗುರುಜಿ ಪುರುಷೋತ್ತಮರೆಂದು ಉಧಹರಿಸಬಹುದು.ಇವರ ಉಪನ್ಯಾಸ ಜೀವನಶೈಲಿ ಸಮಾಜಸೇವೆ ನಿಸ್ವಾರ್ಥ ಬದುಕು ಎಲ್ಲರಿಗೂ ಎಂದಿಗೂ ಮಾದರಿ ಮತ್ತು ಅನುಕರಣೀಯ. ಬಡವ-ಬಲ್ಲಿದ ಪಂಡಿತ-ಪಾಮರ ಪ್ರತಿಯೊಬ್ಬರೂ ಇದನ್ನು ಜ್ವಲಂತ ಉದಾಹರಣೆಯೆಂದು ಪರಿಗಣಿಸಿ ಅಳವಡಿಸಿಕೊಳ್ಳಬಹುದು. ಆಗಮಾತ್ರ ಸಾರ್ಥಕ ಜೀವನಕಲೆ ಅರ್ಥೈಸಿಕೊಂಡು ನಾವೂ ಬದುಕಿ ಇತರರನ್ನೂ ಬದುಕಲು ಅನುವು ಮಾಡಿಕೊಟ್ಟು ಅರ್ಹಮಾನವನಾಗಿ ದೈಹಿಕಾಂತ್ಯದ ನಂತರವೂ ಸಾಮಾಜಿಕವಾಗಿ ಬದುಕಿರಬಹುದು?!

ಪರಿಪೂರ್ಣ ವ್ಯಕ್ತಿಯ ಭೌತಿಕ ಭಾಷಿಕ ಹಾಗೂ ಬೌದ್ಧಿಕ ಚಟುವಟಿಕೆಗಳ ನಿಷ್ಠುರತೆ ಮತ್ತು ಪ್ರಾಮಾಣಿಕತೆ ಅವ(ಳನ್ನು)ನನ್ನು ಪವಿತ್ರ ಹಾದಿಗೆ ಕೊಂಡೊಯ್ಯುತ್ತದೆತತ್ತವಾರ್ತಾಸೂತ್ರ.೨೩

ನಮ್ಮ ನಡೆನುಡಿಗಳನ್ನು ಸರಿದಾರಿಯಲ್ಲಿ ಸಾಗಿಸಿ ಎಲ್ಲರಿಗು ಲೇಸನ್ನು ಬಗೆಯಲು ಇಂಥದೊಂದು ನಾಣ್ಣುಡಿ ಸಾಕಲ್ಲವೇಡೊಂಕುಬಾಲದ ನಾಯಕರಾಗಲು ಸ್ಪರ್ಧೆಗಿಳಿಯುತ್ತಿರುವ ಇಂದಿನ ಸಂದರ್ಭದಲ್ಲಿ ನಾಯಿಬಾಲಕ್ಕೆ ದಬ್ಬೆಕಟ್ಟಲು ಹೋಗಬಾರದುಬದಲಿಗೆ ನಾಯಕರ ಡೊಂಕನ್ನು ತಿದ್ದುವ ಕಾಯಕ ಕೈಗೊಂಡು ಸನ್ನಡತೆ ಸಂಪಾದಿಸಬೇಕು.  ’ನಾಯಿಜಾತಿಆಗದೆಜಾತಿನಾಯಿಆಗಬೇಕು. ಮಾನವಸಹಜ ಕೋಪತಾಪ ದ್ವೇಷಅಸೂಯೆ ಬೆಳೆಸಿಕೊಳ್ಳಬಾರದು. ಹಂದಿಯಿಂದ ದಡ್ಡಬುದ್ದಿ ಕಲಿಯುವ ಬದಲು ನಂದಿಯಿಂದ ದೊಡ್ಡಬುದ್ಧಿ ಕಲಿಯಬೇಕು. ದೊರೆತದ್ದನ್ನು ಮರೆಮಾಚಿ ಕೊಂಡೊಯ್ದು ಎಲ್ಲವನ್ನು ತಾನೇಭುಜಿಸುವ ಬೆಕ್ಕಿನಂತಾಗುವ ಬದಲು ಬಳಗವನ್ನು ಕೂಗಿಕರೆದು ಸಿಕ್ಕಿದ್ದನ್ನು ಹಂಚಿತಿನ್ನುವ ಕಾಗೆಬುದ್ದಿಯನ್ನು ಅಳವಡಿಸಿಕೊಳ್ಳಬೇಕು.

ಸತ್ಯವನ್ನು ನುಡಿಯಬೇಕು ಮತ್ತು ಅದನ್ನು ಆಹ್ಲಾದಕರವಾಗಿ ಹೇಳಬೇಕುಪರಂತು ನುಡಿಯುವುದೆಲ್ಲ ಸತ್ಯದಂತಿರುವ ಅಸತ್ಯವಾಗಬಾರದು ಮತ್ತು ಸಂತೊಷಕ್ಕಾಗಿ ಅಸತ್ಯವನ್ನು ಹೇಳಬಾರದು, ಮನವೊಲಿಸಲೋಸುಗ ಅನೃತ ನುಡಿಯಬಾರದು

 –ಮನುತತ್ವ .೧೩೮

ಪ್ರಾಮಾಣಿಕತನವು ಸುಳ್ಳು ಹೇಳದಿರುವುದಕ್ಕಿಂತಲೂ ಮಿಗಿಲುಪ್ರಾಮಾಣಿಕತೆ ಎಂದರೆ: ಸತ್ಯವನ್ನು ಹೇಳುವುದೂ, ಸತ್ಯವನ್ನು ಬಾಳುವುದೂ ಹಾಗೂ ಸತ್ಯವನ್ನು ಪ್ರೀತಿಸುವುದೂ ಎಂದರ್ಥ

 – ಜೇಮ್ಸ್ .ಫ಼ಾಸ್ಟ್

ಸತ್ಯವನ್ನು ಹೇಗೆ ಅಸತ್ಯವು ಗೆಲ್ಲಲಾರದೊ ಹಾಗೇ ಅಸತ್ಯದಿಂದ ಶಾಶ್ವತಸುಖವು ಸಿಗಲಾರದು, ಸುಖಕ್ಕಾಗಿಯಾಗಲಿ ಅಥವ ದುಃಖಕ್ಕಾಗಿಯಾಗಲಿ ಅಸತ್ಯವನ್ನು ಹೇಳಲೇಬಾರದು ಎಂಬುದಿದರ ತಾತ್ಪರ್ಯಸತ್ಯಾಸತ್ಯದ ಅರಿವಿನ ಬಗ್ಗೆ ಅಥವಾ ಸತ್ಯದ ಮಹತ್ವ ಫಲಿತಾಂಶ ಕುರಿತು ಚಕ್ರವರ್ತಿ ಸತ್ಯಹರಿಶ್ಚಂದ್ರನ ಚರಿತ್ರೆಗಿಂತಲೂ ಮನುವಿನ ತತ್ವ ಹಿರಿದಾದುದೇನಲ್ಲ! ಆದರೆ ಸತ್ಯದ ಬಗ್ಗೆ ಶಾಸ್ತ್ರಜ್ಞ ಮನುವಿಗೆ ಇದ್ದ ಸಾಮಾಜಿಕ ಕಳಕಳಿಯನ್ನು ಅಸತ್ಯವೆಂದು ಪ್ರಶ್ನಿಸುವ ಧೈರ್ಯ ಯಾರಿಗಿದೆ?

ಲಂಚ ನೀಡುತ್ತಿರುವ ಪ್ರಜೆಗಳು ಲಂಚವನ್ನು ನೀಡದೇ ಭ್ರಷ್ಟಾಚಾರದ ವಿರುದ್ಧ ಸೆಟೆದು ನಿಂತರೆ, ಯಾವ ಭ್ರಷ್ಟನು ತಾನೇ ಲಂಚ ತೆಗೆದುಕೊಳ್ಳುತ್ತಾನೆ. ಆದ್ದರಿಂದ ನಾವು/ಸರ್ಕಾರವು ಮೊಟ್ಟಮೊದಲಿಗೆ ಲಂಚ ನೀಡುವವರನ್ನು ಶಿಕ್ಷೆಗೆ ಗುರಿಪಡಿಸಬೇಕಾಗಿದೆರವಿಶಂಕರ್ಗುರೂಜಿ

ಮೇಲ್ಕಂಡ ಅನುಭವಾಮೃತ ಅನರ್ಘ್ಯರತ್ನಗಳು ನೂರಕ್ಕೆನೂರು ಸತ್ಯವೆಂಬುದನ್ನುಲಂಚಾವತಾರಭ್ರಷ್ಟಾಚಾರವಿಡಂಬನಾತ್ಮಕ ನಾಟಕಗಳ ಮೂಲಕ ಸಮಾಜಕ್ಕೆ ನೆನಪಿಸುತ್ತಾರೆ ಖ್ಯಾತ ನಾಟಕ ಕರ್ತೃನಿರ್ಮಾತೃ –  ದಿ||ಮಾಸ್ಟರ್ಹಿರಣ್ಣಯ್ಯ

ಪ್ರಪಂಚದಾದ್ಯಂತ ದಾರಿದೀಪಕರಾದಿಯಾಗಿ ಭ್ರಷ್ಟಲಂಚಕೋರರೂ ಪ್ರಜ್ಞಾವಂತನಾಗರಿಕನೂ ಒಪ್ಪುವಂಥ ಸತ್ಯನುಡಿಗಳಿವುಅಂದುಇಂದುಮುಂದು ಸಮಾಜದ ಎಲ್ಲ ಒಳಿತನ್ನು ನುಂಗುತ್ತಾ ಬಡತನ ಅಪರಾಧ ಇತ್ಯಾದಿ ಕೆಡುಕುಗಳನ್ನು ಕಕ್ಕುತ್ತಿರುವ ಕಾಳಸರ್ಪವೆಲಂಚ’. ಇಂಥ ಹಾಲಾಹಲ ಸಮುದ್ರದಲ್ಲಿ ಈಜಲಾರದೆ ಬದುಕುಳಿವ ಅಮಾಯಕರು ವಿರಳವಿದ್ಯಾವಂತರು ಬುದ್ಧಿವಂತರು ಪವಾಡಪುರುಷರು ಎನ್ನುತ್ತ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ವಿದೇಶೀಬೆನ್ನಿಹಿನ್ರಂಥವರ ಜತೆಗೆ ಸ್ವದೇಶೀ ಸ್ವಯಂಘೋಷಿತ ಅಧ್ಯಕ್ಷ, ಸಂಚಾಲಕ, ಯತಿ, ಮುನಿ, ಮಠಪೀಠಾಧಿಪತಿ, ಚಿಂತಕ, ವಿಚಾರವಾದಿ ಮುಂತಾದವರು ಸಹ ಜಾತಿಗೊಂದರಂತೆ ಖಾತೆತೆಗೆದು ಎಲ್ಲೆಂದರಲ್ಲಿ ಸೆಡ್ಡುಹೊಡೆದು ತಮ್ಮದೆ ಗೊಡ್ಡು ಸಂಪ್ರದಾಯದ ನಿಸ್ಸಾರ ವೇದಾಂತಗಳನ್ನು ಸಮಾಜಕ್ಕೆ ಕಂಟಕಪ್ರಾಯವಾಗಿ ಹರಡುತ್ತಿದ್ದಾರೆ. ಇದರ ಬದಲಿಗೆ ಕ್ರಾಂತಿಯೋಗಿ ಬಸವಣ್ಣನವರ ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ…., ಸರ್ವಜ್ಞನ ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು…, ಪಂಪಮಹಾಕವಿಯ ಮನುಷ್ಯಜಾತಿ ತಾನೊಂದೆವಲಂ ಹಾಗೂ ರಾಷ್ಟ್ರಕವಿ ಕುವೆಂಪುರವರ ಮನುಜಮತ ವಿಶ್ವಪಥ ಸಿದ್ಧಾಂತಗಳನ್ನು ಅಕ್ಷರಶಃ ಅಳವಡಿಸಿಕೊಂಡು ಪ್ರಾಮಾಣಿಕ ಜೀವನ ಸಾಗಿಸುತ್ತ ಅಪರೂಪದ ಮಾನವ ಜನ್ಮವನ್ನು ಸಾರ್ಥಕ ಗೊಳಿಸುವುದು ಲೇಸಲ್ಲವೆ? ಅನೇಕ ಮಹನೀಯರುಪವಾಡಪುರುಷರು ಆದಿಯಾಗಿ ಪುರುಷೋತ್ತಮರೆಲ್ಲರೂ ಜಗಜ್ಜಾಹೀರುಪಡಿಸಿದ್ದು ಹೀಗಿದೆ: ಮಾನವನ ಜಾತಿಯು ಅವನ ಉದ್ಯೋಗದಿಂದ ನಿರ್ಧರಿಸಬಹುದೆ ಹೊರತು ಹುಟ್ಟಿನಿಂದಲ್ಲಇಲ್ಲಿ ಪ್ರತಿಪಾದಿಸುವ ಮತ್ತೊಂದು ಪ್ರಮುಖಾಂಶ : ಪ್ರತಿಯೊಬ್ಬ ಮಾನವನ ಉದ್ಧಾರವು ಅವನ ನಡೆನುಡಿಉದ್ಯೋಗ ಮತ್ತು ಜ್ಞಾನವಿಜ್ಞಾನದ ಮೇಲೆ ಅವಲಂಬಿಸಿರುತ್ತದೆ. ಜಾತಿ ಮತ ಹಣ ಅಧಿಕಾರ ಅಂತಸ್ತು ಪವಾಡ ಹಾಗೂ ಢೋಂಗಿತನ ಗಳಿಂದಲ್ಲ!

ಮುಗಿಲಗಲ ಜಗದುದ್ದ ಸತ್ಯಸಂದತೆಗೆ ಅನವರತ ಮಾನ್ಯತೆ ಇರುತ್ತದೆ. ಐರೋಪ್ಯ ರಾಷ್ಟ್ರಗಳಾಗಲಿ ಪಾಶ್ಚಿಮಾತ್ಯ ರಾಷ್ಟ್ರಗಳಾಗಲಿ ಸತ್ಯವನ್ನು ಸತ್ಯವೆಂದೇ ನಾಮಕರಣ ಮಾಡಬೇಕು ವಾದಿಸಬೇಕು ಪ್ರತಿಪಾದಿಸಬೇಕು ಬದುಕಬೇಕು ಸಾಧಿಸಬೇಕು ಅದರೊಡನೆಯೇ ಅಂತ್ಯವಾಗಬೇಕುಸತ್ಯವನ್ನು ಬೇರೇನೂ ಮಾಡಲು/ಹೆಸರಿಸಲು ಅಸಾಧ್ಯಆದ್ದರಿಂದ ಅಜ್ಞಾನಿಯಾಗಲಿವಿಜ್ಞಾನಿಯಾಗಲಿ ರಾಜನಾಗಲಿರಾಜಕಾರಣಿಯಾಗಲಿ, ಶ್ರೀಮಂತನಾಗಲಿಕಡುಬಡವನಾಗಲಿ, ಬಾಲ್ಯದಲ್ಲಾಗಲಿವೃದ್ಧಾಪ್ಯದಲ್ಲಾಗಲಿ, ಮಹಿಳೆಯಾಗಲಿಪುರುಷನಾಗಲಿ, ಎಲ್ಲರೂ ಸತ್ಯಗರ್ಭದೊಳಗೆ ಜನಿಸಿಬದುಕಿಸಾಯಬೇಕು. ಸತ್ಯದೊಡನೆ ಅವಿಚ್ಚಿನ್ನ ಅವಿನಾಭಾವ ಸಂಬಂಧ/ಒಡನಾಟ ಇಟ್ಟುಕೊಳ್ಳದೆ ದೂರಸರಿದು ಜಯಸಾಧಿಸಿದವರು ಇಲ್ಲವೇಇಲ್ಲಸಾಮಾಜಿಕವಾಗಿ ರಾಜಕೀಯವಾಗಿ ಆಧ್ಯಾತ್ಮಿಕವಾಗಿಸೈಎನಿಸಿಕೊಂಡವರಂತು ಯಾರೂಇಲ್ಲ.   

ಒಟ್ಟಾರೆ ದೆವ್ವದೇವ, ದಾನವಮಾನವ, ಶಿಷ್ಟದುಷ್ಟ, ಯುಕ್ತಕುಯುಕ್ತ, ಪತಿತೆಪತಿವ್ರತೆ ಯಾರೇ ಆಗಿರಲಿ ಸತ್ಯವನ್ನು ಸರ್ವನಾಶ ಪಡಿಸಲಾಗದು. ಅನಿವಾರ್ಯವಾಗಿ ಸತ್ಯಕ್ಕೆ ಶರಣಾಗಿ ಮರಣ ಹೊಂದುವುದು ಲೇಸೆಂಬ ನಿತ್ಯಸತ್ಯದ ಜೀವಜೀವನ ಸಾಧಿಸಬೇಕಾದರೆ ಪ್ರತಿಯೊಬ್ಬರು ಹುಟ್ಟಿದಂದಿನಿಂದ ಸಾಯುವವರೆಗೆ ಅನುದಿನವು ಸತ್ವಯುತ ಆಹಾರ ಮತ್ತು ತತ್ವಯುತ ವಿಚಾರ ನೀತಿ/ಸಿದ್ಧಾಂತ ಪಾಲಿಸುವುದು ಶ್ರೇಷ್ಠಪ್ರತಿದಿನ ಸಾಧ್ಯವಾಗದಿದ್ದರೆ ಕನಿಷ್ಠ ವಾರಕ್ಕೊಮ್ಮೆ ಪಾಲಿಸಿದಾಗ ಸನ್ನಡತೆ ಸದ್ಬುದ್ಧಿ ಸತ್ಸಂಗ ಪ್ರಾಪ್ತಿ ಖಂಡಿತಜತೆಗೆ ಬಾಲ್ಯ ಯೌವ್ವನ ವೃದ್ಧಾಪ್ಯ ಮರಣ ಧರ್ಮಕರ್ಮಗಳು ಅಕಾಲದ ಅಂತ್ಯಕ್ಕೆ ಬಲಿಯಾಗದೆ ಸಕಾಲದಲ್ಲಿ ಮುಕ್ತಿ ಪಡೆಯುತ್ತವೆ. ಪ್ರಕೃತಿಪುರುಷರ ಸಹಜ ಕ್ರಿಯೆಗಳು ಕ್ರಮವಾಗಿ ಜರುಗಿ ಸಕಲ ಜೀವರಾಶಿಗೆ ಆನಂದಆರೋಗ್ಯ, ಸಮೃದ್ಧಿಅಭಿವೃದ್ಧಿ, ಪ್ರತಿಫ಼ಲಿಸುತ್ತದೆನಮ್ಮಕುಟುಂಬ ನಮ್ಮಸಮಾಜ ಹಾಗೂ ನಮ್ಮಪ್ರಪಂಚ ಎಂಬ ಅಭಿಮಾನ ಹುಟ್ಟುತ್ತದೆಭುವನಬಾನು ಅನವರತ ಶಾಂತಿನೆಮ್ಮದಿಯಿಂದ ಧೀರ್ಘಾವಧಿ ಅಸ್ತಿತ್ವದಲ್ಲಿರುತ್ತದೆ.

ಸಾತ್ವಿಕ ಆಹಾರಮೇವ ಆರೋಗ್ಯತೇ! ತಾತ್ವಿಕ ವಿಚಾರಮೇವ ಅರ್ಹತೇ!!

ಕುಮಾರಕವಿ ಬಿ.ಎನ್.ನಟರಾಜ್

ಬೆಂಗಳೂರು[೯೦೩೬೯೭೬೪೭೧]