೧೯೬೦ರ ದಶಕದಲ್ಲಿ ತಮಿಳುನಾಡಿನಿಂದ ಕನ್ನಡನಾಡಿಗೆ ಆಗಮಿಸಿದ ಎನ್.ವೀರಾಸ್ವಾಮಿಯವರು ಬೆಂಗಳೂರಿನ ಗಾಂಧಿನಗರದ ಗಂಗರಾಜ್ರವರ ಸಹಾಯ ಮತ್ತು ಗೆಳೆತನ ಸಂಪಾದಿಸುವುದರ ಜತೆಗೆ ಹಗಲಿರುಳು ಶ್ರಮ ಮತ್ತು ಕನ್ನಡಿಗರ ಸಹಕಾರ ಮತ್ತು ಧಾರಾಳ ತನದಿಂದ ಈಶ್ವರಿಹಂಚಿಕೆ ಸಂಸ್ಥೆಯನ್ನು ಸ್ಥಾಪಿಸಿದರು. ಇಂಥ ಮಹಾನ್ ಉದ್ಯಮಿಯ ಪುತ್ರ ವಿ.ರವಿಚಂದ್ರನ್! ಚಂದನವನದಲ್ಲಿ ನವನವೀನ ಪ್ರೀತಿಪ್ರಣಯ ಚಿತ್ರಗಳಿಗೆ ಮೂಲ ಕಾರಣನಾದ ಪ್ರೇಮ ಗಾರುಡಿಗ. ಈಚೆಲುವ ಚೆನ್ನಿಗನ ಪ್ರತಿಯೊಂದು ಚಿತ್ರದಲ್ಲು ವಿಶಿಷ್ಟವಾದ ಚಿತ್ರಕಥೆ ತಾಂತ್ರಿಕತೆ ಸಂಗೀತ ಸಾಹಿತ್ಯ ಇದ್ದೇ ಇರುತ್ತದೆ. ಒಂದಾದರೂ ಹೊಸತನ ನೀಡುವುದರ ಜತೆಗೆ ಬಿಗ್ ಬಜೆಟ್ ಫ಼ಿಲಂ ತಯಾರಿಸುವಂಥ ಕ್ರೇಜ಼ಿಸ್ಟಾರ್ ಎನಿಸಿಕೊಂಡರು! ಸ್ಯಾಂಡಲ್ವುಡ್ನಲ್ಲಿ ಮೊಟ್ಟಮೊದಲು ಸಾವಿರಾರು ಮಕ್ಕಳೊಡನೆ ಚಿತ್ರೀಕರಣ ನಡೆಸಿದ ’ಶಾಂತಿಕ್ರಾಂತಿ’ ೭೦ಎಂ.ಎಂ. ಮಕ್ಕಳ ಚಿತ್ರದ ನಿರ್ಮಾಪಕ! ರವಿಚಂದ್ರನ್ ಪ್ರಾರಂಭದ ಫ಼ಿಲಂಸ್ಗೆ ಇವರಿಗೆ ಕಂಠದಾನ ಮಾಡಿದ್ದು ನಟ ಶ್ರೀನಿವಾಸಪ್ರಭು! ಗಾಂಧಿನಗರದಲ್ಲಿ ’ರೀಮೇಕ್ರಾಜ’ ಎಂದು ಬ್ರಾಂಡ್ಆದ ಪ್ರಪ್ರಥಮ ನಟ-ನಿರ್ಮಾಪಕ-ನಿರ್ದೇಶಕ? ೧೯೮೦ರ ದಶಕದಲ್ಲಿ ಹಿಂದಿ ತೆಲುಗು ತಮಿಳು ಸಿನಿಮಾಗಳಿಗೆ ಸರಿಸಾಟಿ ಆಗುವಂತೆ ಕನ್ನಡಚಿತ್ರ ನಿರ್ಮಿಸಿ ನ್ಯೂಟ್ರೆಂಡ್ ಆರಂಭಿಸಿದ ಧೀರ. ಮಾಡ್ರನ್ ಟೆಕ್ನಿಕ್ ಅಳವಡಿಸಿದ ಬಿಂದಾಸ್ಬಾಯ್! ಪ್ರಥಮ ಬಾರಿಗೆ ಬಾಲಿವುಡ್ ನಟಿಯರಾದ ಅರುಣಾಇರಾನಿ, ಜೂಹಿಚಾವ್ಲ, ಶಿಲ್ಪಾಶೆಟ್ಟಿ ಮುಂತಾದವರು ಕನ್ನಡ ಚಿತ್ರಗಳಲ್ಲಿ ನಟಿಸಲು ಕಾರಣಪುರುಷರಾದರು. ಆದರೆ, ಹಳ್ಳಿಮೇಷ್ಟ್ರು ಚಿತ್ರದಲ್ಲಿ ನಟಿಸಿದ್ದ ಬಿಂದಿಯಾ ರವಿಚಂದ್ರನ್ ಅಸಭ್ಯವಾಗಿ ವರ್ತಿಸಿದರು ಎಂಬ ಸುಳ್ಳುಆರೋಪದ ಹಗರಣ ಹಬ್ಬಿಸಿದರೂ ರವಿಮಾಮಗೆ ಜಯ ದೊರಕಿದಾಗ, ಆ ನಟಿ ಬಾಲಿವುಡ್ಗೆ ಪರಾರಿ?!
ರವಿಚಂದ್ರನ್ಗೆ ಮಿತ್ರರೂ [ಹಿತ]ಶತ್ರುಗಳೂ ಸಮಾನ ಪ್ರಮಾಣದಲ್ಲಿದ್ದಾರೆ. ಏಳುಬೀಳು ಕಷ್ಟನಷ್ಟ ಟೀಕೆಟಿಪ್ಪಣಿ ಎಲ್ಲವನ್ನು ಸಮನಾಗಿ ಕಂಡುಂಡ ಆಲ್ರೌಂಡರ್! ನಟ-ನಿರ್ಮಾಪಕ-ನಿರ್ದೇಶಕ-ಸಾಹಿತಿ-ಸಂಗೀತನಿರ್ದೇಶಕ-ಗಾಯಕ ಮುಂತಾದ ಮಲ್ಟಿಟ್ಯಾಲೆಂಟ್ನ ರವಿಗೆ ರವಿಚಂದ್ರನೇ ಸಾಟಿ! ಪ್ರೇಮಲೋಕ ಏಷ್ಯಾದಲ್ಲೆ ದೊಡ್ಡದಾದ ಕಪಾಲಿ ಟಾಕೀಸಲ್ಲಿ ೧ವರ್ಷ ಪ್ರದರ್ಶನಗೊಂಡ ಮತ್ತು ಜೂಹಿಚಾವ್ಲ ನಟಿಸಿದ ಚೊಚ್ಚಲ ಫ಼ಿಲಂ. ’ದಶಾವತಾರ’ ’ಕಣ್ತೆರೆದುನೋಡು’ ’ಶ್ರೀಕೃಷ್ಣದೇವರಾಯ’ ’ಭೂಕೈಲಾಸ’ ಮುಂತಾದ ಸಿನಿಮಾಗಳ ನಂತರ ಅತಿಹೆಚ್ಚು ಚಿತ್ರಗೀತೆಯುಳ್ಳ ’ಪ್ರೇಮಲೋಕ’ ಫಿಲಂ ಹಲವಾರು ಹೊಸ ದಾಖಲೆಗಳನ್ನು ಸೃಷ್ಟಿಸಿತು! ರಣಧೀರನ ಬಗ್ಗೆ ಇನ್ನಷ್ಟು ಬರೆಯಲು ಸರಕಿದ್ದರೂ ಸಧ್ಯಕ್ಕೆ ಇಷ್ಟರಲ್ಲೆ ತೃಪ್ತಿಪಡೋಣ? ಎಷ್ಟೇಎತ್ತರಕ್ಕೆ ಬೆಳೆಯಲಿ ದುರಹಂಕಾರ ಇಲ್ಲದಂತೆ ಅವರ ಜೀವನದ ಹಿಂದಿನ ದಿನಗಳನ್ನು ನೆನಪಿಸಿ ಕೊಳ್ಳಬೇಕು. ಯಾರೇಆಗಲಿ ಕನ್ನಡ ಮತ್ತು ಕನ್ನಡಿಗರನ್ನು ಎಂದೂ ಮರೆಯಬಾರದು. ತಮ್ಮ ಸಂಸ್ಥೆಯಲ್ಲಿ ಅನ್ಯ[ತಮಿಳು] ಭಾಷಿಗರಿಗೆ ಹೆಚ್ಚು ಅವಕಾಶ ನೀಡಿದರೂ ಕನ್ನಡತನ ಕನ್ನಡಜನ ಎರಡನ್ನು ಎಂದಿಗೂ ಮರೆಯದ ಕನ್ನಡಪ್ರೇಮಿ ರವಿಮಾಮ?!