Film actors Ambareesh_ Jayamala_ Vajra Muni _Ji Jagadeesh campaigns for Congress candidate in a constituency in Bangalore_ 26-11-1994 Photo by DH/PV Archives


ಏಕತಂತಿ ಪಿಟೀಲು ತಯಾರಿಸಿ ಸಪ್ತಸ್ವರಗಳನ್ನು ನುಡಿಸಿ ಹೊಸ ಇತಿಹಾಸ ಬರೆದ ವಿಖ್ಯಾತ ಕಲಾವಿದ ಪದ್ಮಶ್ರೀ ಟಿ. ಪಿಟೀಲು ಚೌಡಯ್ಯನವರ ಮಗಳಮಗ ಅಮರನಾಥ್ ೨೯.೫.೧೯೫೨ರಂದು ಮೈಸೂರಿನಲ್ಲಿ ಜನಿಸಿದರು. ಚಿಕ್ಕಂದಿನಿಂದ ಒರಟು ಸ್ವಭಾವದ ಆದರೆ ಬೆಣ್ಣೆಯಂಥ ಹೃದಯವಂತ. ಬುಲೆಟ್/ಜಾವಾ/ಬೇರಾವುದೆ ಬೈಕ್ ರೈಡಿಂಗ್, ಕಾರ್ ಡ್ರೈವಿ(ರೇಸಿ)ಂಗ್ ಪಂಚಪ್ರಾಣ! ರಾಜೇಂದ್ರಸಿಂಗ್‌ಬಾಬು [ಶಂಕರ್‌ಸಿಂಗ್-ಪ್ರತಿಮಾದೇವಿ] ಫ಼್ಯಾಮಿಲಿ ಫ಼್ರಂಡ್! ಸಂಗ್ರಾಮ್‌ಸಿಂಗ್ ಹೀರೋ ಆಗಿದ್ದ ಬಂಗಾರದಕಳ್ಳ [೧೯೭೩] ಚಿತ್ರದಲ್ಲಿ ಅಂಬಿ ಮೊಟ್ಟಮೊದಲು ಪುಟ್ಟಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ ೧೯೭೨ರಲ್ಲಿ ಬಿಡುಗಡೆಯಾದ ನಾಗರಹಾವು ಫ಼ಿಲಂ ಅಮರನಾಥ್/ಅಂಬರೀಶ್ ನಟಿಸಿದ ಚೊಚ್ಚಲ ಚಿತ್ರವೆನಿಸಿತು!ಏಯ್ ಮಾತಾಡಕಿಲ್ವ ಬುಲ್‌ಬುಲ್ ಅಲಮೇಲುವನ್ನು ಚುಡಾಯಿಸಿದಮೇಲೆ ರಾಮಾಚಾರಿ ವಿರುದ್ಧ ಫ಼ೈಟ್ ಮಾಡುವಾಗ ತಲೆಕೂದಲನ್ನು ಕಚ್ಚಿಎಸೆದ ಜಲೀಲನನ್ನು ಮರೆಯುವಂತಿಲ್ಲ! ಆಗಿನ ಕಾಲದ ಚಿತ್ರಾಭಿಮಾನಿಗಳು ‘ಜೂನಿಯರ್ ಶತ್ರುಘ್ನಸಿನ್ಹ’ ಟೈಟಲ್ ನೀಡಿ ಇವರ ಪ್ರತಿಯೊಂದು ಸೀನ್/ಡೈಲಾಗ್‌ಗೆ ಶಿಳ್ಳೆ ಹೊಡೆದು ಕುಣಿದು ಅಬ್ಬರಿಸಿ ಹಬ್ಬ ಆಚರಿಸಿದ್ದರು. ಮೊದಲಿಗೆ ಜಲೀಲ್ ಪಾತ್ರಕ್ಕೆ ಫ಼ಿಕ್ಸ್ ಆಗಿದ್ದುದು ರಜನಿಕಾಂತ್! ಆದರೆ ವಿಧಿವಿಲಾಸ ಬಲ್ಲವರಾರು? ಕಡೇಘಳಿಗೆಯಲ್ಲಿ ಸ್ಟೈಲ್‌ಕಿಂಗ್ ಕೈಜಾರಿ ರೆಬೆಲ್‌ಸ್ಟಾರ್‌ಗೆ ಒಲಿದಿತ್ತು ಅದೃಷ್ಟ? ಈಸತ್ಯಘಟನೆ ಚಂದನವನ ಇತಿಹಾಸದ ಪುಟಸೇರಿತು!
ರಾಜಣ್ಣನ ವ್ರತಭಂಗ ಮಾಡಿದ ಮೈಸೂರುಜಾಣ?! :-


ಒಡಹುಟ್ಟಿದವರು ಚಿತ್ರೀಕರಣ ಸಂದರ್ಭದಲ್ಲಿ ಜೋಕ್ಸ್ ಹೇಳುವ ಮೂಲಕ ರಾಜ್ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು ಮಂಡ್ಯದಗಂಡು! ಆಗ ನಡೆದ ಘಟನೆ: ಊಟದ ಸಮಯ ಬಂತು, ಎಂದಿನಂತೆ ಅಂಬಿಯು ಪಲಾವ್ ಚಾಪ್ಸ್ ಕೈಮ ತಲೆಮಾಂಸ ಕಾಲ್‌ಸೂಪ್ ಪಾರ್ಸಲ್ ತರಿಸಿ ರಾಜ್ ಎದುರುಕುಳಿತು ಕೈಬಾಯಿ ಚಪ್ಪರಿಸಿಕೊಂಡು ಊಟ ಮಾಡುವಾಗ ಸಹಜ ವಾಗಿ ಅಣ್ಣಾವ್ರ ಬಾಯಲ್ಲಿ ನೀರೂರುವಂತೆ ಮಾಡಿದರು. ಮಾತ್‌ಮಾತಲ್ಲಿ ರಾಜಣ್ಣಂಗೂ ಮಾಂಸಾಹಾರಿ ಐಟಮ್‌ಗಳ ಊಟ ತರಿಸೇಬಿಟ್ಟರು. ವಾಸನೆ-ರುಚಿ ಬೊಂಬಾಟಾಗಿತ್ತು! ಗುರುವಾರವಾದ್ದರಿಂದ ಅಣ್ಣಾವ್ರು ಉಣ್ಣುವಂತಿಲ್ಲ-ಬಿಡುವಂತಿಲ್ಲ!ಒಲ್ಲೆ ಎಂದರೂ ಬಿಡದೆ ಏನೇನೊ ಸಮಜಾಯಿಶಿ ನೀಡಿ ಕಡೆಗೂ ಒಪ್ಪಿಸಿ ‘ಪಲಾವ್-ಚಾಪ್ಸ್ ತರಾವರಿ ಸ್ವಾದಿಷ್ಟ ಭೋಜನದಿಂದ ತೃಪ್ತಿಗೊಳಿಸಿ ಪ್ರಥಮ ಬಾರಿಗೆ ಅಣ್ಣಾವ್ರ ‘ಗುರುವಾರದ ವ್ರತಭಂಗ’ ಮಾಡಿಸಿದ ಏಕೈಕ ನಟ! ಅಲ್ಲಿಂದ ಶುರುವಾಯ್ತು ಇವರಿಬ್ಬರ ಬಾಡೂಟಬಂಧನ. ರಾಜ್ ಸಿಕ್ಕಾಗಲೆಲ್ಲ ಊಟ ಆಯ್ತಾಣ್ಣ ಎಂದುಕೇಳಿ ಆಕೂಡಲೆ ಬಾಡೂಟತರಿಸಿ ತಾವೆಖುದ್ದು ಮುತುವರ್ಜಿಯಿಂದ ಅಣ್ಣಾವ್ರಿಗೆ ತೃಪ್ತಿಕರವಾಗಿ ಬಡಿಸುತ್ತಿದ್ದ ಮಹಾಮಾನವ ಅಂಬರೀಶ್.

  ಆಹೊತ್ತಿನಿಂದ ಇವರಿಬ್ಬರದ್ದು ಬೇರೆಬೇರೆಯೇ ಸಿನಿಮಾಗಳ ಒಳಾಂಗಣ-ಹೊರಾಂಗಣ ಶೂಟಿಂಗ್ ಒಂದೇ ಊರಿನಲ್ಲಿ ಸ್ಥಳ/ಸ್ಟುಡಿಯೋದಲ್ಲಿ ಇದ್ದಾಗಲೆಲ್ಲ ಅಲ್ಲಿಗೆ ಹಾಜರ್ ಅಂಬಿ ಮತ್ತವರ ನಾನ್‌ವೆಜ್ ಊಟ! ಇಬ್ಬರೂ ನಗುನಗುತ್ತಲೆ ಬಿಸಿಬಿಸಿ ಐಟಂ ಗುಳುಂ ಮಾಡುವುದು ಸಾಮಾನ್ಯವಾಯ್ತು. ಇಂಥ ಘಟನೆಗಳನ್ನು ರಾಜ್‌ಕುಮಾರ್-ಅಂಬರೀಷ್ ಆಗಾಗ್ಗೆ ನೆನಪಿಸಿಕೊಂಡು ಖುಷಿ ಯಿಂದ ಬೇರೆಯವರೊಂದಿಗೂ ಹಂಚಿಕೊಳ್ಳುತ್ತಿದ್ದರು! ಅಂದಿನಿಂದ ಸಿನಿಮಾಜೀವನದಲ್ಲಿ ಮಾತ್ರವಲ್ಲದೆ ನಿಜಜೀವನದಲ್ಲು ರಾಜಣ್ಣನ ಬಾಯಿಂದ 'ಒಡಹುಟ್ಟಿದವನು' ಎನಿಸಿಕೊಂಡು ರಾಜಣ್ಣನ ಅಂತ್ಯಕಾಲದವರೆಗೂ ಅಚ್ಚುಮೆಚ್ಚಿನ ತಮ್ಮನಾಗಿದ್ದರು! ಯಾವಾಗಲೂ ಅಂಬರೀಷ್ ತಮ್ಮ ಮನಸ್ಸು-ಮಾತು-ಊಟ-ಜೋಕ್ಸ್-ನಗು-ಕೀಟಲೆ-ಗತ್ತು-ಬಿಂದಾಸ್‌ದಾನ-ಧಾರಾಳತೆ ಮುಂತಾದವುಗಳನ್ನು ಹಂಚಿಕೊಳ್ಳುವ ಅಭ್ಯಾಸವನ್ನು ಕೇವಲ ರಾಜ್, ವಿಷ್ಣು, ಶ್ರೀನಾಥ್, ಜೈಜಗದೀಶ್, ಶಂಕರನಾಗ್, ಮುಂತಾದ ಹೀರೋಗಳ ಜತೆಗೆ ಮಾತ್ರ ಮೀಸಲಿಟ್ಟಿರಲಿಲ್ಲ, ಎಲ್ಲಸಹನಟರೊಡನೆ, ತಾಂತ್ರಿಕವರ್ಗದವರೊಡನೆ, ಲೈಟ್‌ಬಾಯ್ಸ್ ಜತೆಗೂ ಇಟ್ಟುಕೊಂಡಿದ್ದರು ಎಂಬುದೆ ಗ್ರೇಟ್‌ನೆಸ್-ಗ್ರೇಟ್‌ನ್ಯೂಸ್! ಅಂಬಿ ಚಂದನವನದ ಏಕೈಕ ಕರ್ಣ! ಇಂತಹ ಅಜಾತಶತ್ರುಗೆ ಸರಿಸಾಟಿ ಅಂಬರೀಷ್ ಮಾತ್ರವೆ ಹೊರತು ಬೇರಾರೂ ಅಲ್ಲ!

ಹಲವಾರು ಫ಼ಿಲಂಗಳಲ್ಲಿ ನಟಿಸಿದ್ದರೂ ರಾಜೇಂದ್ರಸಿಂಗ್‌ಬಾಬು ತಯಾರಿಸಿದ ‘ಅಂತ’ ಚಿತ್ರದಿಂದ ಕಂಪ್ಲೀಟ್ ಕ್ಲಿಕ್‌ಆಗಿ ಅವರ ಸಿನಿ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಪಡೆದು ಮತ್ತೆಂದೂ ಹಿಂದಿರುಗಿ ನೋಡದಂತೆ ಮುನ್ನುಗ್ಗಿದರು! ಸೆನ್ಸಾರ್ ಬೋರ್ಡ್ ಮತ್ತು ಮಾಧ್ಯಮದ ಕೆಂಗಣ್ಣಿಗೆ ಗುರಿಯಾದ ‘ಅಂತ’ಚಿತ್ರವು ಬ್ಯಾನ್‌ಆಗುವ ಹಂತತಲುಪಿ ಕೆಲವು ದೃಶ್ಯಗಳನ್ನು ತೆಗೆದು-ಸೇರಿಸಿ ರೀ-ಸೆನ್ಸಾರ್‌ಗೆ ಗುರಿಯಾಗಿ ಕಡೆಗೂ ಬಿಡುಗಡೆಯಾಯ್ತು. ಇಡೀ ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೆ ದೊಡ್ಡ ಸುನಾಮಿ ಎಬ್ಬಿಸಿತ್ತು! ಫ಼ಿಲಂ ನೋಡಿದವರೆಲ್ಲ ಬೆರಗಾಗಿ ಬಾಯಿಮೇಲೆ ಬೆರಳಿಟ್ಟುಕೊಂಡರು! ಆಕಾಲಕ್ಕೆ ಭಾರತದ ೮ಭಾಷೆಗೆ ಮತ್ತು ವಿದೇಶದ ೫ಭಾಷೆಗೆ ಡಬ್‌ಆಗಿ-ಸಬ್‌ಟೈಟಲ್‌ಗೊಂಡು ಚಲನಚಿತ್ರ ಇತಿಹಾಸದಲ್ಲೆ ನೂತನ ದಾಖಲೆ ಸ್ಥಾಪಿಸಿತು. ಅಂದಿನಿಂದ ದೇಶದ ಏಕೈಕ ರೆಬೆಲ್‌ಸ್ಟಾರ್ ಎನಿಸಿ ಆಚಂದ್ರಾರ್ಕ ವಿಶ್ವದ ರೆಬೆಲ್‌ಸ್ಟಾರ್ ಆಗಿಯೆ ಉಳಿಯುತ್ತಾರೆ! ನ್ಯೂಡೆಲ್ಲಿ ಚಿತ್ರವು ಕನ್ನಡ ಹಿಂದಿ ತಮಿಳು ೩ಭಾಷೆಗಳಲ್ಲಿ ಹಾಗೂ ಇಂಗ್ಲಿಷ್ ಸಬ್‌ಟೈಟಲ್‌ನೊಡನೆ ಏಕಕಾಲಕ್ಕೆ ಬಿಡುಗಡೆಯಾದ ಕನ್ನಡದ ಮೊಟ್ಟಮೊದಲ ಜರ್ನಲಿಸ್ಟ್ ಸಿನಿಮ! ಈ ಫ಼ಿಲಂ ರಾಜ್ಯ/ರಾಷ್ಟ್ರ/ಅಂತರ್‌ರಾಷ್ಟ್ರಮಟ್ಟದ ಹಿರಿಮೆ-ಗರಿಮೆ ಗಳಿಸಿದ್ದು ಮಾತ್ರವಲ್ಲ ಹಲವಾರು ರಾಷ್ಟ್ರ-ಅಂತಾರಾಷ್ಟ್ರ ಫ಼ಿಲ್ಮೋತ್ಸವದಲ್ಲು ಪಾಲ್ಗೊಂಡು ಉತ್ತಮ ಚಿತ್ರವೆಂದು ಅನೇಕ ಪ್ರಶಸ್ತಿ, ಬಹುಮಾನ ಬಾಚಿಕೊಂಡಿತು! ಚಂದನವನ ಚರಿತ್ರೆಯಲ್ಲೆ ಅತಿಹೆಚ್ಚು ೩ಭಾಷೆಗಳ ೩೦೦ಸಿನಿಮಾಗಳಲ್ಲಿ ನಟಿಸಿದ ಏಕೈಕ ಕನ್ನಡಹೀರೊ! ಮೈಸೂರು ಜಾಣನಾಗಿ ಸಾಮಾಜಿಕ, ರಾಜಕೀಯ ಹಾಗೂ ಸಿನಿಮಾ ರಂಗಗಳಲ್ಲಿ ಕ್ರಾಂತಿ ಎಬ್ಬಿಸಿದ ಮಂಡ್ಯದ ಗಂಡು ಅನೇಕ ರಾಜ್ಯ/ರಾಷ್ಟ್ರ ಪ್ರಶಸ್ತಿ, ಬಹುಮಾನ, ಬಿರುದು, ಸನ್ಮಾನ ಪಡೆದ ಧೀಮಂತ ಕಲಾವಿದ!

ಅಂದಾಜು ೩೫ವರ್ಷ ರಾಜಕೀಯದಲ್ಲಿದ್ದು ಕರ್ನಾಟಕ ವಿಧಾನಸಭೆ ಸದಸ್ಯರಾಗಿ, ರಾಜ್ಯದ ಕ್ಯಾಬಿನೆಟ್ ಮಂತ್ರಿಯಾಗಿ, ಪಾರ್ಲಿಮೆಂಟ್ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇಷ್ಟಾದರೂ ಹಲವಾರು ಏಳುಬೀಳು, ಸೋಲುಗೆಲುವು ಕಂಡ ಧೀಮಂತ ಮೌಲ್ಯಾಧಾರಿತ ರಾಜಕಾರಣಿ. ಕಾವೇರಿ ನೀರು ಸಮಸ್ಯೆ ಬಗ್ಗೆ ದಿಲ್ಲಿ ಪಾರ್ಲಿಮೆಂಟಲ್ಲಿ ಧ್ವನಿ ಎತ್ತಿದ ಮಂಡ್ಯದ ಗಂಡು. ಕರ್ನಾಟಕಕ್ಕೆ ಕುಡಿಯಲು ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಯಾವ ಕಾರಣಕ್ಕು ನೀರು ಬಿಡೊಲ್ಲ ಎಂದು ವಾದಿಸಿ-ಪ್ರತಿಪಾದಿಸಿದರು. ಇದಕ್ಕೆ ಮಾನ್ಯ ಪ್ರಧಾನಿಯವರು ಸಹಕಾರ ನೀಡಲಿಲ್ಲವೆಂಬ ಒಂದೆ ಕಾರಣಕ್ಕೆ ಮಿನಿಸ್ಟರ್ ಪದವಿ ಹಾಗೂ ಎಂ.ಪಿ. ಸ್ಥಾನಕ್ಕೆ ರಾಜೀನಾಮೆ ನೀಡಿ ಜಿಲ್ಲೆಗೆ-ರಾಜ್ಯಕ್ಕೆ ನ್ಯಾಯ ಒದಗಿಸಿದರು. ಯಾವುದೆ ಆಸೆ-ಆಮಿಷಕ್ಕೆ, ಧಮ್ಕಿ-ದಾಕ್ಷಿಣ್ಯಕ್ಕೆ ಬಗ್ಗದೆ, ರೈತರ-ಕಾವೇರಿಯ ಪರವಾಗಿ ಉಗ್ರ ಹೋರಾಟ ಮಾಡಿದರು. ನಿಸ್ವಾರ್ಥದಿಂದ ಮಂಡ್ಯ ಜಿಲ್ಲೆಯ ಸರ್ವ ತೋಮುಖ ಬೆಳವಣಿಗೆಗೆ ಮುಖ್ಯ ಪಾತ್ರ ವಹಿಸಿದರು, ನಂಬರ್-೧ ರಾಜಕಾರಣಿ ಎನಿಸಿ ಮಾದರಿಯಾದರು!!


ಸಿನಿಮಾ ಮತ್ತು ರಾಜಕೀಯ ಎರಡೂ ರಂಗದಲ್ಲಿ ‘ಸೈ’ ಎನಿಸಿಕೊಂಡ ಕನ್ನಡ ಚಿತ್ರರಂಗದ ಪ್ರಪ್ರಥಮ ನಟ! ತಮ್ಮಲ್ಲಿದ್ದ ಅಧಿಕಾರ, ಪ್ರತಿಭೆ ಹಾಗೂ ದಕ್ಷತೆಗಳನ್ನು ಉತ್ತಮವಾಗಿ ಉಪಯೋಗಿಸಿಕೊಂಡು ರೈತರ, ಅಭಿಮಾನಿಗಳ ಹಾಗೂ ಕಲಾ ಸರಸ್ವತಿಯ ವರಪುತ್ರರಾಗಿ ಮೆರೆದರು! ತಾವು ಬೆಳೆಯುವುದರ ಜತೆಗೇ ಕನ್ನಡ ನಾಡು-ನುಡಿಯ ಕೀರ್ತಿ ಪತಾಕೆಯನ್ನು ದೇಶದಾದ್ಯಂತ ಪಸರಿಸಿದರು. ಪಿಟೀಲು ಚೌಡಯ್ಯನವರ ವಂಶದ ಗೌರವ-ಘನತೆಯನ್ನು ಸಹ ಹೆಚ್ಚಿಸಿದರು! ಮುಖ್ಯಮಂತ್ರಿ ಆಗುವ ಅವಕಾಶ, ಅನುಭವ ಹಾಗೂ ಸಾಧ್ಯತೆಗಳಿದ್ದರೂ ತಮ್ಮ ಪವರ್‌ನ್ನು ಎಂದೂ ದುರುಪಯೋಗ ಪಡಿಸಿಕೊಳ್ಳದ ಸಾಚಾ/ಅಪ್ಪಟ ರಾಜಕಾರಣಿ. ಸಹಾಯಕ್ಕೆ ಗೋಗರೆದ ರಾಜಕಾರಣಿಯನ್ನು ‘ಕೈ’ಬಿಡದೆ ಗೆಲ್ಲಿಸಿದರು. ಮತದಾನಕ್ಕೆ ೧ದಿನ ಮುಂಚೆ ಬಹಿಷ್ಕಾರ ಹಾಕಿದ್ದ ಹಳ್ಳಿಗಳಿಗೆ ತೆರಳಿ ರಾತ್ರೋರಾತ್ರಿ ಮತದಾರರ ಮನಸ್ಸು ಪರಿವರ್ತಿಸಿದ ದಿಟ್ಟ ರಾಜಕಾರಣಿ. ಅಂಬಿಯನ್ನು ನಂಬಿ ಅವರ ಕೈಹಿಡಿದು ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡು ಎಲ್ಲದರಲ್ಲು ಇವರಿಗಿಂತ ಜೂನಿಯರ್ ಆಗಿದ್ದ, ಎಲೆಕ್ಷನ್‌ನಲ್ಲಿ ಸೋಲು ಗ್ಯಾರೆಂಟಿ ಎಂದು ತಿಳಿದಿದ್ದ ಅಭ್ಯರ್ಥಿಯೊಬ್ಬ ಅಲವತ್ತುಕೊಂಡಾಗ ಆತನನ್ನು ಕೈಹಿಡುದು ಗೆಲ್ಲಿಸಿ ಮು.ಮಂ.ಮಾಡಿದ ಪವರ್‌ಫುಲ್ ರೆಬೆಲ್ ಪೊಲಿಟಿಶಿಯನ್ ಸೂಪರ್‌ಸ್ಟಾರ್! ದೇವರ ದಯೆಯಿಂದಲೊ ಹಿರಿಯರ ಆಶೀರ್ವಾದದಿಂದಲೊ ಮಾಡಿದ ದಾನಧರ್ಮದಿಂದಲೊ ಅನಾರೋಗ್ಯ ಪೀಡಿತರಾಗಿ ಸಾವಿನ ಮನೆಬಾಗಿಲು ತಟ್ಟಿ ಹಿಂದಿರುಗಿದ ಮಹಾಅದೃಷ್ಟವಂತ! ಎಂಥ ಸಂದರ್ಭದಲ್ಲು ಯಾರೊಡನೆಯೂ ಕಾಂಪ್ರಮೈಸ್‌ಗೆ ಒಪ್ಪದ ಧೀರ! ಕೆಟ್ಟದ್ದಕ್ಕೆ ಮಾತ್ರ ಯೋಚಿಸಬೇಕು, ಒಳ್ಳೆಯದನ್ನು ತಕ್ಷಣವೆ ಮಾಡಿಬಿಡಬೇಕು, ಬಲಗೈಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು, ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬೆಲ್ಲ ಸಲಹೆ ನೀಡುತ್ತ ಎಲ್ಲರೊಡನೆ ಸ್ನೇಹದಿಂದ ಬೆರೆತು ಪರಿಹಾಸ್ಯ ಮಾಡುತ್ತಿದ್ದರು. ಮಾನವ ಪದಕ್ಕೆ ಅನ್ವರ್ಥನಾಮವೆ-ಅಂಬರೀಷ್/ಅಮರನಾಥ್!
ಚಳಿ ಚಳಿ ತಾಳೆನು ಈ ಛಳಿಯಾ.. ಅಂಬ-ಅಂಬಿ ತಾರಾಜೋಡಿ ದಂಪತಿಯಾಗುವ ಲಕ್ಷಣಕ್ಕೆ ತೆರೆಬಿತ್ತು: ಒಂದುಕಾಲಕ್ಕೆ ಅಂಬಿಕ-ಅಂಬರೀಷ ಕೆಮಿಸ್ಟ್ರಿ ಎಷ್ಟು ಅನ್ಯೋನ್ಯವಾಗಿತ್ತು ಎಂದರೆ ಇಬ್ಬರ ಮದುವೆ ಗ್ಯಾರೆಂಟಿ ಎಂಬ (ಗಾಳಿ)ಸುದ್ಧಿ ೯೯%ರಷ್ಟು ಸತ್ಯದಮಟ್ಟ ತಲುಪಿತ್ತು? ದೈವಲೀಲೆ ಎಂಬಂತೆ ಅಂಥ (ಅವ)ಲಕ್ಷಣಕ್ಕೆ ಯಾರಿಂದಲೊ ತೆರೆಬಿದ್ದು ಎಲ್ಲವೂ ಸುಖಾಂತ್ಯ ಕಂಡಿತು! ಕಾಲಕ್ರಮೇಣ ಒಂದೊಳ್ಳೆದಿನ ಚೆಲುವೆನಟಿ ಸುಮಲತಾ ಕೈಹಿಡಿದು ಏಕೈಕ ಪುತ್ರರತ್ನ ಅಭಿಶೇಕ್‌ಗೌಡನ ತಂದೆಯಾಗಿ ಸಾರ್ಥಕ ಜೀವನ ನಡೆಸಿ ಸಿನಿಲೋಕದ ಆದರ್ಶ ತಾರಾದಂಪತಿ ಸಾಲಿನಲ್ಲಿ ಅಗ್ರಗಣ್ಯರಾದರು! ಜಗ್ಗೇಶ್ ದರ್ಶನ್ ಯಶ್ ಐಂದ್ರಿತಾರಾಯ್ ರಾಧಿಕಾಪಂಡಿತ್ ಮುಂತಾದ ಅನೇಕ ಹೊಸ ಪ್ರತಿಭಾವಂತ ನಟನಟಿಯರಿಗೆ ಗಾಡ್‌ಫ಼ಾದರ್ ಎನಿಸಿದರು. ನೊಂದುಬೆಂದು ಆಸರೆ ಕೋರಿ ಬಂದ ಕಲಾವಿದರಿಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದ ಕಲಿಯುಗದಕರ್ಣ. ಚಂದನವನದ ಆಗುಹೋಗುಗಳಲ್ಲಿ ನ್ಯಾಯ-ಪಂಚಾಯ್ತಿ-ರಾಜೀ ಮಾಡುತ್ತ ಎಂಥದೆ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿ ತೀರ್ಮಾನ ಕೊಡುತ್ತಿದ್ದ ಯಜಮಾನ. ಕನ್ನಡ ಚಿತ್ರರಂಗದ ಕಲಾವಿದರೆಲ್ಲ ಒಂದೆ ಕುಟುಂಬದವರಂತೆ ಇರಬೇಕು. ಯಾರೂ ಯಾರ ವಿರುದ್ಧವೂ ಸೆಡ್ಡು ಹೊಡೆದು ದ್ವೇಷಾಸೂಯೆ ಸಾಧಿಸಬಾರದು. ಅನಾವಶ್ಯಕವಾಗಿ ಸಣ್ಣಪುಟ್ಟದ್ದಕ್ಕೆ, ಕ್ಷುಲ್ಲಕಕಾರಣಕ್ಕೆ, ಕೋರ್‍ಟು, ಕಚೇರಿ, ಶಿಕ್ಷೆ, ದಂಡ ಮುಂತಾದವುಗಳಿಗೆ ಅವಕಾಶ ಮಾಡಿಕೊಡಬಾರದೆಂದು ಎಲ್ಲರಿಗೂ ತಿಳುವಳಿಕೆ ಸಲಹೆ ಸಹಕಾರ ನೀಡುತ್ತಿದ್ದ ಮಾರ್ಗದರ್ಶಿ. ಕನ್ನಡ ಕಲಾವಿದರ ಮನೆಯ ಒಳಗೆ-ಹೊರಗೆ ಯಾವುದೆ ಒಡಕು-ಕೆಡಕು ಹುಟ್ಟಿಕೊಳ್ಳದಂತೆ ಎಚ್ಚರಿಕೆಯಿಂದ ನೋಡಿಕೊಂಡು ಎಲ್ಲರನ್ನು ಕಾಪಾಡುತ್ತಿದ್ದ ಚಂದನವನದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ ಪರೋಪಕಾರಿ.
ಭಾರತದ ಪಾರ್ಲಿಮೆಂಟ್ ಸದಸ್ಯನಾಗಿ ಮತ್ತು ಕರ್ನಾಟಕ ರಾಜ್ಯದ ಕ್ಯಾಬಿನೆಟ್ ಸಚಿವರಾಗಿ ದಕ್ಷ ಕಾರ್ಯನಿರ್ವಹಿಸಿದ ಪ್ರಪ್ರಥಮ ಕನ್ನಡ ನಟ. ೨೭೫ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರೂ ಯಾವುದೆ ಹಗರಣವಿಲ್ಲದ ಕನ್ನಡದ ಏಕೈಕ ನಟ.ಸಹೃದಯವಂತ ನಟನ ಇನ್ನೊಂದು ದಾಖಲೆ ಎಂದರೆ ಹಿಂದಿ ಸೀರಿಯಲ್ ರಾಮಾಯಣ್‌ನ ಸೀತಾ ಪಾತ್ರಧಾರಿ ದೀಪಿಕಾ ಹಾಗೂ ಮಹಾಭಾರತ್‌ನ ದ್ರೌಪದಿ ಪಾತ್ರಧಾರಿ ರೂಪಾಗಂಗೂಲಿ ನಟಿಯರೊಡನೆ ನಟಿಸಿದ ಪ್ರಪ್ರಥಮ ನಟ! ತಮ್ಮ ಯಾವುದೇ ಒಂದು ಚಿತ್ರವು ಫ಼್ಲಾಫ಼್[ತೋಪ್]ಆಗಿ, ನಿರ್ಮಾಪಕ ಬೀದಿಗೆ ಬಂದು, ಕಣ್ಣೀರಿಡುವಾಗ ಆತನನ್ನು ಸಂತೈಸಿ ಅವನಿಗೆ ಲಾಭ ಬ(ತ)ರುವವರೆಗೂ ಒಂದೋ ಎರಡೋ ಮೂರೋ ಸಿನಿಮಾಕ್ಕೆ ಫ಼್ರೀ-ಆಫ಼್-ಕಾಸ್ಟ್ ಕಾಲ್ ಶೀಟ್ ನೀಡಿ ಪುಕ್ಕಟೆ ಅಭಿನಯಿಸುವ ಮೂಲಕ ಆ ನಿರ್ಮಾಪಕನನ್ನು ಉದ್ಧಾರ ಮಾಡುತ್ತಿದ್ದ ಚಿತ್ರರಂಗದ ಪುಣ್ಯಾತ್ಮ! ತಾನು ಮಾತ್ರ ಬೆಳೆ[ಉಳಿ]ದರೆ ನ್ಯಾಯವಲ್ಲ ತನ್ನನ್ನು ನಂಬಿರುವ, ತನ್ನೊಡನಿರುವ ಕಲಾವಿದ-ನಿರ್ಮಾಪಕ-ನಿರ್ದೇಶಕ ಎಲ್ಲರೂ ಬೆಳೆ[ಉಳಿ]ಯಬೇಕು ಎನ್ನುತ್ತಿದ್ದ ಮಹಾನುಭಾವನನ್ನು ಪ್ರತಿಯೊಬ್ಬರು ಒಪ್ಪಿ ಅಪ್ಪಿಕೊಂಡಿದ್ದರು ಎಂಬುದು ಚಿತ್ರಜಗತ್ತಿನ ೮ನೇ ಅದ್ಭುತವೆ ಸರಿ!


ನಾನು ಸಿನಿಮಾ-ರಾಜಕೀಯ ಕ್ಷೇತ್ರ ಬಿಟ್ಟರೂ, ಅವೆರಡೂ ಕ್ಷೇತ್ರ ನನ್ನನು ಬಿಡುವುದಿಲ್ಲ ಎನ್ನುತ್ತಿದ್ದರು. ಏನೇಬಂದರೂ- ಏನೇಆದರೂ ಯಾರೇನೆ ಅಂದರೂ-ಅನ್ನದಿದ್ದರೂ ತಲೆ ಕೆಡಿಸಿಕೊಳ್ಳದೆ ತಮ್ಮದೇ ಆದ ‘ವಿಲ್ ಪವರ್’ ನಿಂದ ಘರ್ಜಿಸುತ್ತಲೇ ಇದ್ದರು. ತಮ್ಮ ಉಸಿರಿನ ಕಡೇ ಘಳಿಗೆವರೆಗೂ ಅಭಿನಯಿಸಿದ ಮೇರು ಕಲಾವಿದ ಅಂಬರೀಷ್ ಉರುಫ಼್ ಹೆಚ್.ಅಮರನಾಥ್ ಅಲಿಯಾಸ್ ರೆಬೆಲ್‌ಸ್ಟಾರ್ ನಟಿಸಿದ ಕಟ್ಟ ಕಡೆಯ ಚಲನಚಿತ್ರ – ಕುರುಕ್ಷೇತ್ರ! ಈ ಸಿನಿಮಾದಲ್ಲಿ ಅವರು ಕುರು ಪಿತಾಮಹ ಕೌರವ-ಪಾಂಡವರ ಮುದ್ದಿನ ತಾತಾಚಾರ್ಯ ಭೀಷ್ಮ ಪಾತ್ರವನ್ನು ಬೊಂಬಾಟ್ ಆಗಿ ನಿರ್ವಹಿಸಿ ಪ್ರತಿಯೊಬ್ಬ್ಲರಿಂದಲೂ ಭೇಷ್ ಎನಿಸಿಕೊಂಡರು! ಇದೊಂದು ಸ್ಮರಣೀಯ ಚರಿತ್ರೆ !


ಸ್ಯಾಂಡಲ್‌ವುಡ್ ಸಾಮ್ರಾಜ್ಯದಲ್ಲಿ ಡಾ||ರಾಜ್,ಡಾ||ವಿಷ್ಣು ನಂತರ ಪ್ರಥಮಸ್ಥಾನ ಗಳಿಸಿದ್ದ ನಟವಿಕ್ರಮಾದಿತ್ಯ ಡಾ||ಅಂಬರೀಷ್! ಅನಾರೋಗ್ಯದ ಕಾರಣ ವಿಕ್ರಂ ಆಸ್ಪತ್ರೆ ಸೇರಿದ ಗಂಡುಗಲಿ ಅಂಬಿ, ಕಡೆಗೂ ಹಠಮಾರಿ ಜವರಾಯ ನೀಡಿದ ಆಹ್ವಾನಕ್ಕೆ ಒಲ್ಲೆ ಎನ್ನಲಾಗದೆ ದಿ.೨೪.೧೧.೨೦೧೮ರಂದು ತಮ್ಮ ೬೬ನೆ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ದೈವಾಧೀನರಾದರು. ರೆಬೆಲ್‌ಸ್ಟಾರ್ ಅಂಬರೀಷ್ ಬಾರದಲೋಕದ ಪಯಣದಿಂದಾಗಿ ಕರ್ನಾಟಕರಾಜ್ಯಕ್ಕೆ ಮಾತ್ರವಲ್ಲ ಇಡೀ ಭಾರತದೇಶಕ್ಕೆ ತುಂಬಲಾರದ ನಷ್ಟಕಷ್ಟ ಉಂಟಾಯಿತು! ಭಾರತೀಯ ಚಿತ್ರರಂಗದ ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ ತಾರಾ-ಜೋಡಿಯಾಗಿದ್ದು ನಂತರ ಮದುವೆಯಾಗಿ ನಿಜವಾದ ದಂಪತಿಗಳಾದ ಮೇಲೆ ಗಂಡ-ಹೆಂಡತಿ ಇಬ್ಬರೂ ಒಂದೇ [ಮಂಡ್ಯ] ಕ್ಷೇತ್ರದಿಂದ ಮತದಾರ ಪ್ರಭುಗಳಿಂದ ಚುನಾಯಿತರಾಗಿ ಪಾರ್ಲಿಮೆಂಟ್ ಮೆಂಬರ್ ಆದರು! ಮೊದಲಿಗೆ ಅಂಬರೀಷ್ ಮಂಡ್ಯ ಕ್ಷೇತ್ರದಿಂದ ಲೋಕಸಭಾ ಸದಸ್ಯ[ಎಂ.ಪಿ.]ಆಗಿ ಚುನಾಯಿತರಾಗಿದ್ದರು. ಅವರ ನಿಧನದ ನಂತರ ಅವರ ತಾರಾಜೋಡಿ ಹಾಗೂ ನೈಜಪತ್ನಿ ಶ್ರೀಮತಿ ಸುಮಲತಾ ಅಂಬರೀಷ್ ಮಂಡ್ಯ ಕ್ಷೇತ್ರದಿಂದಲೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಹಾಲಿ ಪಾರ್ಲಿಮೆಂಟ್ ಮೆಂಬರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೂಸಹ -ಆಲ್ ಇಂಡಿಯಾ ರೆಕಾರ್ಡ್!
ಅಂಬರೀಷ್ ನಟಿಸಿದ ಚಿತ್ರಗಳು

ಅಂಬರೀಷ್ ನಟಿಸಿದ ಚಿತ್ರಗಳು
ಕ್ರ.ಸಂ. ಫಿûಲಮ್ ಕ್ರ.ಸಂ. ಫಿಲಮ್


1 ನಾಗರಹಾವು/1972 35 ಪ್ರತಿಮಾ
2 ಬಂಗಾರದಕಳ್ಳ 36 ಸ್ನೇಹಸೇಡು
3 ಸೀತೆಯಲ್ಲಸಾವಿತ್ರಿ 37 ಕಿಲಾಡಿಜೋಡಿ
4 ಶ್ರೀಚಾಮುಂಡೇಶ್ವರಿಮಹಿಮೆ 38 ಪ್ರಿಯಾ/1979
5 ಶ್ರೀಮಹದೇಶ್ವರಪೂಜಾಫಲ 39 ಸೀತಾರಾಮು
6 ಶುಭಮಂಗಳ 40 ಅಮರ್‍ನಾಥ್
7 ಭಾಗ್ಯಜ್ಯೋತಿ 41 ಪಕ್ಕಾಕಳ್ಳ
8 ನಾಗಕನ್ಯೆ 42 ಪುಟಾಣಿಏಜೆಂಟ್ 1,2,3
9 ಒಂದೇರೂಪಎರಡುಗುಣ 43 ಸವತಿಯ ನೆರಳು
10 ಬಿಳೀಹೆಂಡ್ತಿ 44 ಧೈರ್ಯಲಕ್ಷ್ಮಿ/1980
11 ದೇವರಕಣ್ಣು 45 ವಜ್ರದಜಲಪಾತ
12 ಹುಡುಗಾಟದಹುಡುಗಿ 46 ಒಂದುಹೆಣ್ಣುಆರುಕಣ್ಣು
13 ಕಥಾಸಂಗಮ 47 ಸುಬ್ಬಿಸುಬ್ಬಕ್ಕಸುವ್ವಲಾಲಿ
14 ಹೊಸಿಲುಮೆಟ್ಟಿದಹೆಣ್ಣು 48 ನ್ಯಾಯನೀತಿಧರ್ಮ
15 ಬಂಗಾರದಗುಡಿ 49 ಮಿಥುನ
16 ಕನಸುನನಸು 50 ಡ್ರೈವರ್‍ಹನುಮಂತು
17 ಧನಲಕ್ಷ್ಮಿ 51 ಅಂತ/1981
18 ನಾಗರಹೊಳೆ 52 ಲೀಡರ್‍ವಿಶ್ವನಾಥ್
19 ಮಾಗಿಯಕನಸು 53 ರಂಗನಾಯಕಿ
20 ಕಾಡ್ಗಿಚ್ಚು 54 ಸ್ನೇಹಿತರಸವಾಲ್
21 ಮನಸ್ಸಿನಂತೆಮಾಂಗಲ್ಯ 55 ಮಹಾಪ್ರಚಂಡರು
22 ಮುಗ್ಧಮಾನವ 56 ಭರ್ಜರಿಬೇಟೆ
23 ಚಿನ್ನಾನಿನ್ನಮುದ್ದಾಡುವೆ 57 ಅವಳಹೆಜ್ಜೆ
24 ಶ್ರೀಮಂತನಮಗಳು 58 ಖದೀಮಕಳ್ಳರು/1982
25 ಕುಂಕುಮರಕ್ಷೆ 59 ರುದ್ರಿ
26 ಬನಶಂಕರಿ 60 ಶಂಕರ್‍ಸುಂದರ್
27 ಕುದುರೆಮುಖ 61 ಮಾವಸೊಸೆಸವಾಲ್
28 ಹಳ್ಳೀಹೈದ 62 ಪ್ರೇಮಮತ್ಸರ
29 ಹಾವಿನಹೆಜ್ಜೆ 63 ಸ್ನೇಹದಸಂಕೋಲೆ
30 ಮುಯ್ಯಿಗೆಮುಯ್ಯಿ 64 ಅಜಿತ್
31 ಸಿರಿತನಕ್ಕೆಸವಾಲ್ 65 ಟೋನಿ
32 ಬಲುಅಪರೂಪ ನಮ್‍ಜೋಡಿ 66 ಚಕ್ರವ್ಯೂಹ/1983
33 ಪಡುವಾರಳ್ಳಿ ಪಾಂಡವರು 67 ಜಗ್ಗು
34 ಅನುರಾಗಬಂಧನ 68 ತಿರುಗುಬಾಣ
69 ಆಶಾ 119 ಅಂತಿಮತೀರ್ಪು
70 ಹೊಸತೀರ್ಪು 120 ದಿಗ್ವಿಜಯ
71 ಅವಳನೆರಳು 121 ಇನ್ಸ್‍ಪೆಕ್ಟರ್ ಕ್ರಾಂತಿಕುಮಾರ್
72 ಮತ್ತೆವಸಂತ 122 ಬೇಡಿ
73 ಮನೇಲಿರಾಮಣ್ಣ ಬೀದೀಲಿಕಾಮಣ್ಣ 123 ಬಂಧಮುಕ್ತ
74 ಗೆಲುವುನನ್ನದೇ 124 ಆಪತ್ಭಾಂಧವ
75 ಹಸಿದಹೆಬ್ಬುಲಿ/1983 125 ಬ್ರಹ್ಮವಿಷ್ಣುಮಹೇಶ್ವರ
76 ಧರ್ಮಯುದ್ಧ 126 ಪ್ರಜಾಪ್ರಭುತ್ವ
77 ದೇವರಗುಡಿ 127 ನವಭಾರತ
78 ಮಸಣದಹೂವು 128 ಏಳುಸುತ್ತಿನಕೋಟೆ
79 ಗಂಡುಭೇರುಂಡ 129 ವಿಜಯಖಡ್ಗ
80 ಮೂರುಜನ್ಮ 130 ನ್ಯೂಡೆಲ್ಲಿ
81 ಗಜೇಂದ್ರ 131 ಸಾಂಗ್ಲಿಯಾನ-1
82 ನಾನೇರಾಜ 132 ರಾಮಣ್ಣಶಾಮಣ್ಣ
83 ಒಂಟಿಧ್ವನಿ 133 ತಾಯಿಗೊಬ್ಬಕರ್ಣ
84 ಗುರುಭಕ್ತಿ 134 ಅರ್ಜುನ್
85 ಸಿಡಿಲು 135 ಕಲಾಭಿಮಾನಿ
86 ಕಾಳಿಂಗಸರ್ಪ 136 ಹಾಂಕಾಂಗ್‍ನಲ್ಲಿ ಏಜೆಂಟ್‍ಅಮರ್
87 ರೌಡಿರಾಜ 137 ಜಾಕಿ
88 ಶಪಥ 138 ಗುರು
89 ಒಂದೇರಕ್ತ 139 ರಂಜಿತಾ
90 ಗೂಂಡಾಗುರು/1985 140 ಅಜಿತ್
91 ಧರ್ಮ 141 ಗಂಡಂದ್ರೆಗಂಡು
92 ಗುರುಜಗದ್ಗುರು 142 ಅವತಾರಪುರುಷ
93 ಆಹುತಿ 143 ಇಂದ್ರಜಿತ್[ಮಹಾಭಾರತ್ ದ್ರೌಪದಿ, ದೀಪಿಕಾ]
94 ಶಭಾಸ್‍ವಿಕ್ರಂ 144 ಸಂಸಾರನೌಕೆ
95 ದೇವರಮನೆ 145 ತಾಳಿಗಾಗಿ
96 ಸ್ನೇಹಸಂಬಂಧ 146 ಅಂತಿಂಥಗಂಡುನಾನಲ್ಲ
97 ಗಿರಿಬಾಲೆ 147 ನ್ಯಾಯಕ್ಕಾಗಿನಾನು
98 ಚದುರಂಗ 148 ಒಂಟಿಸಲಗ[ರಾಮಾಯಣ್ ಸೀತೆ, ರೂಪಗಂಗೂಲಿ]
99 ದೇವರೆಲ್ಲಿದ್ದಾನೆ 149 ಜೈಕರ್ನಾಟಕ
100 ಮಸಣದಹೂವು 150 ರಾಜಮಹಾರಾಜ
101 ಮಮತೆಯಮಡಿಲು 151 ಜಯಭೇರಿ
102 ಕದನ 152 ಮತ್ಸರ
103 ಕಲ್ಲರಳಿಹೂವಾಗಿ 153 ನಮ್ಮೂರಹಮ್ಮೀರ
104 ಅಮರಜ್ಯೋತಿ 154 ರಣಭೇರಿ
105 ಹಿಡಂಬಿಹಳ್ಳಿಪ್ರವೇಶ[ಗೌರವನಟ] 155 ಆಸೆಗೊಬ್ಬ ಮೀಸೆಗೊಬ್ಬ
106 ಮಧುರಬಾಂಧವ್ಯ/1986 156 ಕೆಂಪುಸೂರ್ಯ
106 ಸತ್ಕಾರ 157 ರಾಮರಾಜ್ಯದಲ್ಲಿ ರಾಕ್ಷಸರು
107 ಮೃಗಾಲಯ 158 ಕೆಂಪುಗುಲಾಬಿ
108 ಬ್ರಹ್ಮಾಸ್ತ್ರ 159 ತ್ರಿನೇತ್ರ
109 ಪ್ರೀತಿ 160 ಚಕ್ರವರ್ತಿ
110 ಮತ್ತೊಂದುಚರಿತ್ರೆ 161 ಏಕಲವ್ಯ
111 ಬೇಟೆ 162 ರಾಣಿಮಹಾರಾಣಿ
112 ವಿಶ್ವರೂಪ 163 ಉತ್ಕರ್ಷ/1990[ಗೌರವನಟ]
113 ಪ್ರೇಮಲೋಕ 164 ಅನಂತಪ್ರೇಮ
114 ಬಜಾರ್‍ಭೀಮ 165 ಹೃದಯಹಾಡಿತು
115 ಒಲವಿನಉಡುಗೊರೆ 166 ಗಗನ
116 ಪ್ರೇಮಕಾದಂಬರಿ 167 ನೀನುನಕ್ಕರೆ ಹಾಲುಸಕ್ಕರೆ
117 ಮಿಸ್ಟರ್‍ರಾಜ 168 ಗರುಡಧ್ವಜ
118 ಪೂರ್ಣಚಂದ್ರ 169 ಕಾಲಚಕ್ರ
170 ಪುಕ್ಸಟ್ಟೆಗಂಡ ಹೊಟ್ಟೆತುಂಬಉಂಡ 204 ಏಪ್ರಿಲ್¥sóÀÇಲ್
171 ಗಂಡುಸಿಡಿಗುಂಡು 205 ಪ್ರೇಮಗೀತೆ
172 ರೌಡಿ & ಎಂ.ಎಲ್.ಎ 206 ಹಬ್ಬ
173 ಅರಣ್ಯದಲ್ಲಿಅಭಿಮನ್ಯು 207 ದೇವರಮಗ
174 ಎಂಟೆದೆಯಭಂಟ 208 ಈಪ್ರೀತಿಏಕೆಭೂಮಿಮೇಲಿದೆ
175 ಮೈಸೂರುಜಾಣ 209 ವಂದೇಮಾತರಂ
176 ಸೋಲಿಲ್ಲದಸರದಾರ 210 ದಿಗ್ಗಜರು
177 ಸಪ್ತಪದಿ 211 ಶ್ರೀಮಂಜುನಾಥ
178 ಭಂಡನನ್ನಗಂಡ 212 ಪ್ರೇಮರಾಜ್ಯ
179 ಪ್ರೇಮಸಂಗಮ 213 ಮುತ್ತು
180 ಮೇಘಮಂದಾರ 214 ಅಣ್ಣಾವ್ರು
181 ಮಣ್ಣಿನದೋಣಿ 215 ಗೌಡ್ರು
182 ಮಲ್ಲಿಗೆಹೂವೆ 216 ಕರ್ಣನಸಂಪತ್ತು
183 ಸೂರ್ಯೋದಯ 217 ತಂದೆಗೆತಕ್ಕಮಗ
184 ಒಲವಿನಕಾಣಿಕೆ 218 ಪಾಂಡವರು
185 ವಸಂತಪೂರ್ಣಿಮ 219 ನಾಗರಹಾವು
186 ಮಿಡಿದಹೃದಯಗಳು 220 ಕಠಾರಿವೀರ ಸುರಸುಂದರಾಂಗಿ
187 ಹೃದಯಬಂಧನ 221 ಆನೆಪಟಾಕಿ
188 ಮುಂಜಾನೆಯಮಂಜು 222 ಅರಣ್ಯದಲ್ಲಿಅಭಿಮನ್ಯು
189 ಮುಸುಕು 223 ಬುಲ್‍ಬುಲ್
190 ಒಡಹುಟ್ಟಿದವರು[ರಾಜ್ ಜತೆ] 224 ರಣ
191 ಗೋಲ್ಡ್‍ಮೆಡಲ್ 225 ತಿಪ್ಪಾರಳ್ಳಿತರ್ಲೆಗಳು
192 ಮಂಡ್ಯದಗಂಡು 226 ವಾಯುಪುತ್ರ
193 ವಿಜಯಕಂಕಣ 227 ವೀರಪರಂಪರೆ
194 ಪೆÇ್ರ¥sóÉಸರ್ 228 ಶ್ರೀಕ್ಷೇತ್ರಆದಿಚುಂಚನಗಿರಿ
195 ಕಲ್ಯಾಣೋತ್ಸವ 229 ಡ್ರಾಮಾ
196 ಬೇಟೆಗಾರ 230 ವರದನಾಯಕ
197 ಬಾಳೊಂದುಚದುರಂಗ 231 ಅಂಬರೀಷ
198 ಕರುಳಿನಕುಡಿ 232 ಹ್ಯಾಪಿಬರ್ತಡೇ
199 ಆಪರೇಷನ್ ಅಂತ 233 ದೊಡ್ಮನೆಹುಡ್ಗ
200 ರಂಗೇನಹಳ್ಳಿಯಾಗೆ ರಂಗಾದರಂಗೇಗೌಡ 234 ರಾಜಾಸಿಂಹ
201 ಮೌನರಾಗ 235 ಅಂಬಿ ನಿಂಗ್ ವಯಸ್ಸಾಯ್ತೊ
202 ಪಾಳೇಗಾರ 236 ಕುರುಕ್ಷೇತ್ರ/2019
203 ಬಾಳಿದಮನೆ 237 ಪ್ರೊಡಕ್ಷನ್ ನಂ.1.?!

*ಕುಮಾರಕವಿ ನಟರಾಜ್ 9036976471
ಬೆಂಗಳೂರು-560072