ಕರಾಟೆಕಿಂಗ್ ಶಂಕರ್ನಾಗ್

ಉತ್ತರಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಜನಿಸಿದ ಬ್ಯಾಂಕ್ ಉದ್ಯೋಗಿಯಾದ ಈತ ನಾಯಕನಾಗಿ ನಟಿಸಿದ್ದ ಪ್ರಪ್ರಥಮ ಸಿನಿಮಾಒಂದಾನೊಂದು ಕಾಲದಲ್ಲಿಚಿತ್ರವು ರಾಷ್ಟ್ರಪ್ರಶಸ್ತಿ ಗಳಿಸಿತು. ಭಾರತದಲ್ಲೆ ಮೊಟ್ಟಮೊದಲ ಬಾರಿಗೆಕಂಟ್ರಿ ಕ್ಲಬ್ಸ್ಥಾಪಿಸಿದ ಪ್ರಪ್ರಥಮ ಸಿನಿಮಾ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕನ್ನಡನಾಡಿನ ರಾಜಧಾನಿಯಲ್ಲಿ ಸಂಕೇತ್ ಎಲೆಕ್ಟ್ರಾನಿಕ್ಸ್, ಸೌಂಡ್ ರೆಕಾರ್ಡಿಂಗ್ ಸಿನಿಮಾ ಸ್ಟುಡಿಯೋ ಸ್ಥಾಪಿಸಿದ ಪ್ರಪ್ರಥಮ ಕನ್ನಡ ಕಲಾವಿದ! ಇದರಿಂದಾಗಿ ಕನ್ನಡ ಸಿನಿಮಾ ನಿರ್ಮಾಣ ತಂಡವು ಪರ ರಾಜ್ಯ/ಪರ ದೇಶಕ್ಕೆ ಅಲೆದಾಡುವ ಅಥವಾ ಗೋಗರೆಯುವ ಪರಿ[ದು]ಸ್ಥಿತಿಗೆ ಫ಼ುಲ್ಸ್ಟಾಪ್ ಇಟ್ಟ ದಿಟ್ಟ ನಟ!  ’ಕರಾಟೆ ಕಿಂಗ್ಬಿರುದು ಗಳಿಸಿ ೬೪ ವಿದ್ಯೆಯನ್ನು ಸುಲಲಿತವಾಗಿ, ವೇಗವಾಗಿ, ಕಾರ್ಯಗತಗೊಳಿಸೊ ವಿಶೇಷ ಕಲೆ ಬಲ್ಲ ಕನ್ನಡ ಚಿತ್ರರಂಗದ ಪ್ರಪ್ರಥಮ ಸಕಲ ಕಲಾ ವಲ್ಲಭ. ಪ್ರತಿದಿನ ಕೇವಲ / ಗಂಟೆ ನಿದ್ರೆ/ವಿಶ್ರಾಂತಿ ಪಡೆದು, ಮಿಕ್ಕ ಅವಧಿಯಲ್ಲಿ ಒಂದಲ್ಲೊಂದು ರೀತಿಯಲ್ಲಿ ಸಾಮಾಜಿಕ, ರಾಜಕೀಯ ಹಾಗು ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಉತ್ತಮ ಚಿಂತಕರಾಗಿದ್ದ ಬಲು ಅಪರೂಪದ ಅನರ್ಘ್ಯ ರತ್ನ. ತಿಂಡಿಊಟಡ್ರೈವಿಂಗ್ಡೈರೆಕ್ಷನ್ರೈಟಿಂಗ್ ಮಾಡುವಾಗಲೂ ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ, ಕಾರ್ಮಿಕರ ಬಗ್ಗೆ, ಮಕ್ಕಳುಮಹಿಳೆಯರ ಬಗ್ಗೆ, ಬಡತನದ ಬಗ್ಗೆ ಹಾಗೂ ರಾಜ್ಯದ ಮತ್ತು ದೇಶದ ಸರ್ವತೋಮುಖ ಬೆಳವಣಿಗೆ ಬಗ್ಗೆ ಗಂಭೀರವಾಗಿ ತಲೆ ಕೆಡಿಸಿಕೊಂಡಿದ್ದ ಕನ್ನಡದ ಕಂಪ್ಲೀಟ್ಕಲಾವಿದ!

ಕನ್ನಡದ ಕಲೆಸಾಹಿತ್ಯಸಿನಿಮಾನಾಟಕ, ಕರ್ನಾಟಕ ಸಂಗೀತನೃತ್ಯ, ಭಾರತದ ಸಂಸ್ಕೃತಿಪರಂಪರೆನಾಗರಿಕತೆ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ವೀರ ಕನ್ನಡಿಗ, ಧೀರ ದೇಶಭಕ್ತ! ಪ್ರತಿಯೊಂದು ಕಲೆಗಳ ಬಗ್ಗೆ, ಪ್ರತಿಯೊಬ್ಬ ಕಲಾವಿದರ ಬಗ್ಗೆ ಕಾಳಜಿ ವಹಿಸುತ್ತಿದ್ದ ಪ್ರಾಮಾಣಿಕ ಮಾನವ. ಸದಾ ಒಂದಿಲ್ಲೊಂದು ರೀತಿಯಲ್ಲಿ [ಅಷ್ಟಾವಧಾನಿಶತಾವಧಾನಿಯನ್ನೂ ಮೀರಿಸುವಂಥ ಅಧ್ಬುತ] ಕ್ರಿಯಾಶೀಲ ವ್ಯಕ್ತಿಶಕ್ತಿ. ಸುಂದರ ಹಾಗೂ ಸುಭದ್ರ ಕರ್ನಾಟಕ(ಭಾರತ)ವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಬಗ್ಗೆ, ಕನ್ನಡ ಚಿತ್ರರಂಗವನ್ನು ಶ್ರೇಷ್ಠ ಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ ಹಗಲುರಾತ್ರಿ ಎನ್ನದೆ ಕಾಣುತ್ತಿದ್ದ ತಮ್ಮ ಕನಸನ್ನು ನನಸು ಮಾಡಲು ಪಣತೊಟ್ಟು ಎಲ್ಲಾ ಕ್ಷೇತ್ರದಲ್ಲು ಮುನ್ನುಗ್ಗುತ್ತಿದ್ದ  ಏಕೈಕ ನಟ!

ಉತ್ತಮವಾದ್ದನ್ನು ಪ್ರೋತ್ಸಾಹಿಸಿ, ಉತ್ತಮವಲ್ಲದ್ದನ್ನು ತೆಗಳದೇ ತಮ್ಮ ಕೈಲಾದಮಟ್ಟಿಗೆ ಸಹಾಯಸಹಕಾರಮಾರ್ಗದರ್ಶನ ನೀಡುತ್ತಿದ್ದ ಸ್ಪಟಿಕ ಗುಣದ ಅಪ್ಪಟ ಮನುಷ್ಯ! ನಿಜ ಜೀವನ ಮತ್ತು ವೃತ್ತಿ ಜೀವನ ಎರಡರಲ್ಲೂ ರಸಿಕತೆ, ಶಿಸ್ತು, ಸಂಯಮ ಹಾಗೂ ಅಚ್ಚುಕಟ್ಟುತನ ಅಳವಡಿಸಿಕೊಂಡಿದ್ದ ಪರ್ಫ಼ೆಕ್ಟ್ ಜೆಂಟಲ್ಮನ್! ಕನ್ನಡ(ಚಿತ್ರ)ವನ್ನು, ಕನ್ನಡಿಗರ(ಚಿತ್ರಾಭಿಮಾನಿಗಳ)ನ್ನು ಪ್ರೀತಿಸಿ ಗೌರವಿಸುತ್ತಿದ್ದರು. ಬೆಂಗಳೂರು ನಗರಕ್ಕೆ;- ಸಿಗ್ನಲ್ ಫ಼್ರೀ, ಅಂಡರ್ ಪಾಸ್, ಫ಼್ಲೈ ಓವರ್, ರಿಂಗ್ ರೋಡ್, ಮೆಟ್ರೊ ರೈಲ್, ರೋಪ್ ವೇ, ಮುಂತಾದ ಆಧುನಿಕ ನಾಗರಿಕ ಸೌಲಭ್ಯದ ಬಗ್ಗೆ ೧೯೮೭ ರಲ್ಲೆ ಯೋಜನೆ ರೂಪಿಸಿ ಕರ್ನಾಟಕದ ಅಂದಿನ ಮಾನ್ಯ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆಯವರಿಗೆ ಸಲ್ಲಿಸಿ ಶಹಬಾಶ್ ಗಿರಿ ಪಡೆದಿದ್ದ (ದಿ ಮೆಚೂರ್ಡ್ ಆರ್ಟಿಸ್ಟ್) ಬುದ್ಧಿವಂತ ()ಲೆಗಾರ! ’ಮಿಂಚಿನಓಟಮತ್ತುಆಕ್ಸಿಡೆಂಟ್ಚಿತ್ರಗಳೂ ಸಹ ರಾಷ್ಟ್ರ ಪ್ರಶಸ್ತಿ ಪಡೆಯುವುದರ ಜತೆಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಡಬ್/ಸಬ್ಟೈಟಲ್ ಆಗಿ ದೇಶವಿದೇಶಗಳಲ್ಲಿ ಪ್ರದರ್ಶನಗೊಂಡು ಮೂಲಕ ಕನ್ನಡಕ್ಕೆ, ಕನ್ನಡಿಗರಿಗೆ ಉನ್ನತ ಸ್ಥಾನಮಾನ ತಂದುಕೊಟ್ಟವು ಎಲ್ಲದರ ಪ್ರಮುಖ ಪಾತ್ರಧಾರಿ/ರೂವಾರಿ ಶಂಕರ್ನಾಗ್ ! ’ಮಾಲ್ಗುಡಿ ಡೇಸ್ಧಾರಾವಾಹಿ ಭಾರತ ಸರ್ಕಾರದ ಡಿ.ಡಿ. ಟಿ.ವಿ.ಚಾನಲ್ನಲ್ಲಿ [ಇಂಗ್ಲಿಷ್ ಮತ್ತು ಹಲವು ಭಾರತೀಯ ಭಾಷೆಗಳಲ್ಲಿ] ದೂರದರ್ಶನ ಪ್ರಸಾರಗೊಂಡು ಹತ್ತಾರು ರಾಷ್ಟ್ರೀಯಅಂತರ್ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಿತು! ಅನೇಕ ಹೊಸ ಕಲಾವಿದರನ್ನು ತಮ್ಮ ಸಂಸ್ಥೆಯ ಚಲನಚಿತ್ರ/ನಾಟಕಗಳ ಮೂಲಕ ಬೆಳಕಿಗೆ ತಂದು ಅವರ ಜೀವನದ ಭಾಗ್ಯದ ಬಾಗಿಲನ್ನು ತೆರೆದ ಕನ್ನಡ ನಟ. ಭಾರತದ ದಕ್ಷ .ಪಿ.ಎಸ್. ಅಧಿಕಾರಿ ಸಾಂಗ್ಲಿಯಾನ ಬಗ್ಗೆ ಸರಣಿ ಚಿತ್ರಗಳು ತೆರೆ ಕಾಣಲು ಕಾರಣಕರ್ತನಾದ ಚಿಂತಕ!

ಡಾ||ರಾಜ್ಕುಮಾರ್ಅಪೂರ್ವ ಸಂಗಮಚಿತ್ರದಲ್ಲಿ ನಟಿಸಿಒಂದು ಮುತ್ತಿನ ಕಥೆಚಿತ್ರವನ್ನು ನಿರ್ದೇಶಿಸಿದರು. ಮೂಲಕ ಕನ್ನಡ ಕಂಠೀರವನಿಂದಪ್ರೀತಿ, ವಿಶ್ವಾಸ, ಶಹಬ್ಬಾಸ್ಗಿರಿ ಪಡೆದರು. ಅವರು ೩೪ ನೇ ವಯಸ್ಸಿಗೆ ೯೧ ಚಿತ್ರಗಳಲ್ಲಿ ನಟಿಸಿ ನೂತನ ದಾಖಲೆ ನಿರ್ಮಿಸಿದರು ಸಾಧನೆ ಸೇರಿದಂತೆ ಕನ್ನಡ ಸಮಾಜದ ಇನ್ನಿತರ ರಂಗಗಳಲ್ಲಿ ಮಾಡಿದ ಅನೇಕ ಸಾಧನೆಯನ್ನು ಶ್ರೀಸಾಮಾನ್ಯ ಮನುಷ್ಯರು ೧೦೦ ವರ್ಷದ ಅವಧಿಯಲ್ಲೂ ಸಾಧಿಸಲು ಅಸಾಧ್ಯ?! ಇವರ ಬಗ್ಗೆ ಪ್ರೌಢಪ್ರಬಂಧ ಸೇರಿದಂತೆ ಒಂದೆರಡು ಪುಸ್ತಕವನ್ನೇ ಬರೆಯಬಹುದು! ತಮ್ಮ ಡೇರ್ & ಡ್ಯಾಶಿಂಗ್ ಪ್ರವೃತ್ತಿಯಿಂದ ಕನ್ನಡಿಗರ ತನುಮನ ಗೆದ್ದಿದ್ದರು. ವೃತ್ತಿಪರ ಮಿತ್ರರ ಕೆಂಗಣ್ಣಿಗೆ ಗುರಿಯಾಗಿ, ಸಹೋದ್ಯೋಗಿಗಳ ಅಸೂಯೆಗೂ ಪಾತ್ರರಾಗಿದ್ದರು. ಹಾಗಾಗಿ ಶತ್ರುಮಿತ್ರರ ಸಂಖ್ಯೆ ಸರಿಸಮನಾಗಿತ್ತು? ತತ್ಪರಿಣಾಮವಾಗಿ ಕೇವಲ ೩೫ನೇ [ಚಿಕ್ಕ]ವಯಸ್ಸಿನಲ್ಲೆ ದಿ.೩೦..೧೯೯೦ ರಂದು ನಡೆದ ವಾಹನ ಅಪಘಾತದ ಮೂಲಕ ಅಕಾಲ ಮೃತ್ಯುವಿಗೆ [ಶತ್ರುವಿನ ಷಡ್ಯಂತ್ರಕ್ಕೆ] ಬಲಿಯಾದರು? ಇಂಥ ಮಾಣಿಕ್ಯ ಕಳೆದುಕೊಂಡ ಕನ್ನಡರಾಜ್ಯ ಬಡವಾಯ್ತು, ಕನ್ನಡ ಚಲನಚಿತ್ರರಂಗಭೂಮಿ ಕ್ಷೇತ್ರಗಳಿಗೆ ಅಪಾರ ನಷ್ಟ ಉಂಟಾಯ್ತು. ಇಂಥ ಮಹಾನಕ್ಷತ್ರದ ಪತ್ನಿ ಅರುಂಧತಿನಾಗ್, ಖ್ಯಾತ ನಟಿ ಹಾಗೂಸಂಕೇತ್ಮತ್ತುರಂಗಶಂಕರಸಂಸ್ಥೆಗಳ ಒಡತಿಇವರ ಪುತ್ರಿ ಕಾವ್ಯ.

ಶಂಕರನಾಗ್ ನಟಿಸಿದ ಫ಼ಿಲಂಸ್

1 ಒಂದಾನೊಂದು ಕಾಲದಲ್ಲಿ/1978 49 ಅಪೂರ್ವ ಸಂಗಮ
2 ಮಧುಚಂದ್ರ 50 ತಾಯಿಯ ಕನಸು
3 ಸೀತಾರಾಮು 51 ಆಕ್ಸಿಡೆಂಟ್
4 ಐ ಲವ್ ಯು 52 ನಾನಿನ್ನಪ್ರೀತಿಸುವೆ
5 ಮೂಗನಸೇಡು 53 ಪವಿತ್ರಪಾಪಿ
6 ಹದ್ದಿನಕಣ್ಣು 54 ಕಿಲಾಡಿಅಳಿಯ
7 ಪ್ರೀತಿಮಾಡು ತಮಾಷೆನೋಡು 55 ವಜ್ರಮುಷ್ಠಿ
8 ಒಂದು ಹೆಣ್ಣು ಆರು ಕಣ್ಣು 56 ರಸ್ತೆರಾಜ
9 ರುಸ್ತುಂಜೋಡಿ 57 ಅಂತಿಮಘಟ್ಟ
10 ಜನ್ಮಜನ್ಮದಅನುಬಂಧ 58 ದಿಗ್ವಿಜಯ
11 ತಾಯಿಯಮಡಿಲಲ್ಲಿ 59 ಈಬಂಧ ಅನುಬಂಧ
12 ಕುಲಪುತ್ರ 60 ಲಾರಿಡ್ರೈವರ್
13 ಮಹಾಪ್ರಚಂಡರು 61 ಹುಲಿಹೆಬ್ಬುಲಿ
14 ಕರಿನಾಗ 62 ತಾಯಿಯೇ ನನ್ನದೇವರು
15 ಮಿಂಚಿನಓಟ 63 ಅಗ್ನಿಪರೀಕ್ಷೆ
16 ಹಣಬಲವೋ ಜನಬಲವೋ 64 ಸಂಸಾರದಗುಟ್ಟು
17 ಮುನಿಯನ ಮಾದರಿ 65 ತಾಯಿ
18 ಜೀವಕ್ಕೆಜೀವ 66 ಸಾಂಗ್ಲಿಯಾನ[ಭಾಗ-1]
19 ಗೀತಾ 67 ಧರ್ಮಾತ್ಮ
20 ದೇವರಆಟ 68 ಮಿಥಿಲೆಯ ಸೀತೆಯರು
21 ಭರ್ಜರಿಬೇಟೆ 69 ಅಂತಿಂಥ ಗಂಡು ನಾನಲ್ಲ
22 ಬೆಂಕಿಚೆಂಡು 70 ತರ್ಕ
23 ನ್ಯಾಯಎಲ್ಲಿದೆ? 71 ನವಭಾರತ
24 ಕಾರ್ಮಿಕ ಕಳ್ಳನಲ್ಲ 72 ಶಕ್ತಿ
25 ಧರ್ಮ ದಾರಿತಪ್ಪಿತು 73 ಇದುಸಾಧ್ಯ
26 ಆಟೋರಾಜ 74 ಸಿ.ಬಿ.ಐ.ಶಂಕರ್
27 ಅರ್ಚನಾ 75 ರಾಜಸಿಂಹ
28 ನೋಡಿಸ್ವಾಮಿ ನಾವಿರೋದುಹೀಗೆ 76 ಆಟ ಬೊಂಬಾಟ
29 ಚಂಡಿ ಚಾಮುಂಡಿ 77 ಭಲೇಚತುರ
30 ನಗಬೇಕಮ್ಮ ನಗಬೇಕು 78 ಹೊಸಜೀವನ
31 ಗೆದ್ದಮಗ 79 ಮಹೇಶ್ವರ
32 ನ್ಯಾಯಗೆದ್ದಿತು 80 ನಿಗೂಢರಹಸ್ಯ
33 ಗಂಡಭೇರುಂಡ 81 ಪುಂಡರಗಂಡ
34 ಕೆರಳಿದಹೆಣ್ಣು 82 ರಾಮರಾಜ್ಯದಲ್ಲಿ ರಾಕ್ಷಸರು
35 ಸ್ವರ್ಗದಲ್ಲಿ ಮದುವೆ 83 ಎಸ್.ಪಿ.ಸಾಂಗ್ಲಿಯಾನ[ಭಾಗ-2]
36 ಆಕ್ರೋಶ 84 ಜಯಭೇರಿ
37 ರಕ್ತತಿಲಕ 85 ನರಸಿಂಹ
38 ಬೆಂಕಿಬಿರುಗಾಳಿ 86 ತ್ರಿನೇತ್ರ
39 ತಾಳಿಯಭಾಗ್ಯ 87 ಆವೇಶ
40 ಕಾಳಿಂಗಸರ್ಪ 88 ನಕ್ಕಳಾ ರಾಜಕುಮಾರಿ
41 ಆಶಾಕಿರಣ 89 ನಾಗಿಣಿ
42 ಇಂದಿನಭಾರತ 90 ಪುಂಡಪ್ರಚಂಡ
43 ಬೆದರುಬೊಂಬೆ 91 ಸುಂದರಕಾಂಡ
44 ಮಾನವದಾನವ 92 ಪ್ರಾಣಸ್ನೇಹಿತ
45 ಪರಮೇಶಿ ಪ್ರೇಮ ಪ್ರಸಂಗ 93 ಹಳ್ಳಿಯ ಸುರಾಸುರರು
46 ಶಪಥ 94 ಪ್ರೀತಿಮಾಡೋ ಹುಡುಗರಿಗೆಲ್ಲ
47 ಪವಿತ್ರಪ್ರೇಮ 95 ಬಲಿದಾನ! [ರಿಲೀಸ್ ಆಗಲಿಲ್ಲ?]
48 ಮಕ್ಕಳಿರಲವ್ವ ಮನೆತುಂಬ ಪೂರ್ಣ ಮಾಹಿತಿಗಾಗಿ ಕನ್ನಡ ಫಿûಲಂ ಡೈರೆಕ್ಟರಿ ಓದಿರಿ

ಕುಮಾರಕವಿ ಬಿ.ಎನ್. ನಟರಾಜ್
9036976471
ಬೆಂಗಳೂರು 560072