ಚಾಮರಾಜನಗರ: ರಾಮಸಮುದ್ರ ಮಂಟೇಸ್ವಾಮಿ ಆಡಿಯೋ ವತಿಯಿಂದ ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗ ಕಾಪಾಡು ಮಾದೇಶ್ವರ ಸಿಡಿಬಿಡುಗಡೆ ಸಮಾರಂಭ ಗುರುವಾರ ಸಂಜೆ ನಡೆಯಿತು.
ಸಿಡಿಬಿಡುಗಡೆ ಮಾಡಿದ ನಗರದಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಲೆಮಹದೇಶ್ವರ ಸಂತರು ನಡೆದಾಡಿ, ಅವರ ಮಹಿಮೆಯನ್ನು ಅನಾವರಣಗೊಳಿಸಿದ್ದಾರೆ.
ಸಂತರು, ಶರಣರು ಶರಣಪರಂಪರೆಗೆ ಅಪಾರಕೊಡುಗೆ ನೀಡಿದ್ದಾರೆ. ಅವರು ಯಾವ ಕಾರ್ಯಮಾಡಿದರೂ, ಒಳ್ಳೆಯದೇ ಆಗುತ್ತಿತ್ತು. ಪಶುಪಕ್ಷಿ ಪ್ರಾಣಿಗಳು, ಪ್ರಕೃತಿ ದೈವನಿರ್ಮಿತ, ಇವುಗಳ ಸಂರಕ್ಷಣೆ ನಮ್ಮೆಲ್ಲದರಾಗಬೇಕು,
ನೊಂದವರಿಗೆ ಸಹಾಯಹಸ್ತ ಚಾಚುವುದೇ ಮಾನವೀಯತೆ, ಸಂತರು, ಶರಣರು ನಾಡಿಗೆ ನೀಡಿದ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದು ತಿಳಿಸಿದರು.
ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು ಮಾತನಾಡಿ, ಜಿಲ್ಲೆಯಲ್ಲಿ ಶೇ ೫೨ರಷ್ಟು ಅರಣ್ಯಪ್ರದೇಶವಿದ್ದು, ಅಪಾರ ಸಸ್ಯಸಿರಿ ಹೊಂದಿದೆ. ಮಲೆಮಹದೇಶ್ವರಬೆಟ್ಟ, ಹಿಮವದ್ ಗೋಪಾಲಸ್ವಾಮಿ, ಬಿಳಿಗಿರಿರಂಗನಾಥನ ನೆಲೆವೀಡಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಜಿಲ್ಲೆ ಜಾನಪದದ ಕಲೆಯ ತವರೂರಾಗಿದೆ. ವರನಟ ಡಾ.ರಾಜ್‌ಕುಮಾರ್. ಸುಂದರಕೃಷ್ಣ ಅರಸ್ ಅವರು ಜಿಲ್ಲೆಯವರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿನ ಜಾನಪದ ಕಲಾವಿದರ ಪ್ರತಿಭಾ ಅನಾವರಣ ಸಂಬಂಧ ಜಿಲ್ಲೆಯಲ್ಲಿ ಜಾನಪದ ವಿವಿನಿಲಯದ ಸ್ಥಾಪನೆ ಅಗತ್ಯವಿದ್ದು, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ ಎಂದರು.
ಕಾವೇರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಚಾಮರಾಜನಗರ ಜಿಲ್ಲೆ ಒಳಪಟ್ಟಿದ್ದು, ಚಿಕ್ಕಹೊಳೆ, ಸುವರ್ಣಾವತಿ ಜಲಾಶಯ ವ್ಯಾಪ್ತಿಯ ಪ್ರದೇಶದ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದರು.
ಸೇವಾದಳ ಜಿಲ್ಲಾಧ್ಯಕ್ಷ ವೆಂಕಟನಾಗಪ್ಪಶೆಟ್ಟಿ, ಲಯನ್ ಸಂಸ್ಥೆ ಅಧ್ಯಕ್ಷ ವೃಷಬೇಂದ್ರಪ್ಪ, ರೋಟರಿ ಕಾರ್ಯದರ್ಶಿ ಚಂದ್ರಶೇಖರ್, ಪೊಲೀಸ್ ಆರಕ್ಷಕ ನಿರೀಕ್ಷಕ ಆನಂದ್, ಸಂಗೀತ ನಿರ್ದೇಶಕ ವೇಣುಗೋಪಾಲ್, ತಮಟೆಶಿವು, ನಿತಿನ್ ರಾಜರಾಂಶಾಸ್ತ್ರಿ, ನಗರಸಭೆ ಸದಸ್ಯೆ ಚಿನ್ನಮ್ಮ, ಆಡಿಯೋ ನಿರ್ಮಾಪಕ ರಾಮಸಮುದ್ರ ರಾಜಪ್ಪ, ಕಲಾವಿದರಾದ ಲತಾ, ಬಸವರಾಜು, ಶ್ಯಾಂ,ಸಿದ್ದರಾಜು. ರಮೇಶ್, ಬಾಬು ಹಾಜರಿದ್ದರು.
