ಮೈಸೂರು, -ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಅಭಿವೃದ್ಧಿ ಸಂಸ್ಥೆ ವತಿಯಿಂದ ಆಯೋ ಜಿಸಿರುವ ೧೭ ದಿನಗಳ ಪರಿಶುದ್ಧ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಸಿಲ್ಕ್ ಇಂಡಿಯ-೨೦೨೫ ಮೇಳಕ್ಕೆ ನಟಿ ರಿಷಾ ಗೌಡ ಚಾಲನೆ ನೀಡಿದರು. ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂ ವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹ ಕಾರ ಸಂಘಗಳು ೬೦ಕ್ಕೂ ಹೆಚ್ಚಿನ ಮಳಿಗೆ ಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಮೈಸೂರು ಜನತೆ ಮುಂದೆ ನಿತ್ಯ ಬೆಳಗ್ಗೆ ೧೦.೩೦ರಿಂದ

ರಾತ್ರಿ ೮.೩೦ರವರೆಗೆ ಪ್ರದರ್ಶಿಸಿ ಮಾರಾಟ ಮಾಡುವರು. ತಸ್ಸರ್ ರೇಷ್ಮೆ ಸೀರೆಗಳು, ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್ ಸೀರೆಗಳು, ಅರಿಣಿ ರೇಷ್ಮೆ ಸೀರೆಗಳು, ಧರ್ಮಾವರಂ ಸೀರೆಗಳು, ಕಾಂಚಿಪುರಂ ಸಿಲ್ಕ್, ಮದುವೆ ಸೀರೆಗಳು, ರಾ ಸಿಲ್ಕ್, ಕೋಸಾ ಸೀರೆ ಗಳು, ಕಲ್ಲೊತ್ತಾ ಗಣಪತಿ ಸೀರೆಗಳು,

ಸಿಲ್ಕ್, ಟೆಂಪಲ್ ಬಾರ್ಡಾರ್ ಉಳ್ಳ ಮುಲೆಬಾರಿ ಸಿಲ್ಕ್, ಕಲ್ಲೋತ್ತಾ ರೇಷ್ಮೆ ಸೀರೆ ಗಳು, ಬನಾರಸ್ ಮತ್ತು ಜಮ್ ದಾನಿ ರೇಷ್ಮೆ, ಶಿಫಾನ್ ಸೀರೆಗಳು, ಬುಟ್ಟಿ ಸೀರೆ ಗಳು, ಚಂದೇರಿ ಸಿಲ್ಕ್ ಮತ್ತು ಢಾಕ ಸೀರೆಗಳು, ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಲ್‌ಚೂರಿ ರೇಷ್ಮೆ, ಮಟ್ಕಾ ಸೀರೆಗಳು, ಪ್ರೀಂಟೆಡ್ ಸೀರೆಗಳು, ಪಶೀನಾ ಸೀರೆಗಳು, ಡಿಸೈನರ್ ಡ್ರೆಸ್ ಮೇಟಿರಿಯಲ್ಸ್ ಗಳು, ಸೀರೆಗಳು, ಬಾಗಲ್‌ಪುರ್ ರೇಷ್ಮೆ ಸೀರೆ ಮತ್ತು ಡ್ರೆಸ್, ಉಪ್ಪಡಾ ಮತ್ತು ಗೊಡ್ವಾಲ್ ಸೀರೆಗಳು, ಮಹೇಶ್ವರಿ ಮತ್ತು ಕೋಟಾ ಕೈ ಅಚ್ಚಿನ ಸೀರೆಗಳು ಪ್ರದರ್ಶನಗೊಳ್ಳಲಿದೆ. ಇದಲ್ಲದೆ ಕುರ್ತಾ, ಸ್ಟೋಲ್ಸ್, ಶಾಲುಗಳು, ಸಲ್‌ವಾರ್ ಕಮೀಜ್ ಮತ್ತು ಉಡುಪಿನ ಬಟ್ಟೆಗಳು, ಕುಶನ್ ಕವರ್‌ಗಳು ಮತ್ತು ಬೆಡ್ ಶೀಟ್ ಗಳನ್ನು ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಿ ಮಾರಾಟ ಮಾಡುವರು. ಈ ವಸ್ತುಗಳನ್ನು ಉತ್ಪಾದಕರೆ ನೇರವಾಗಿ ಗ್ರಾಹಕರಿಗೆ ತಲು ಪಿಸುತ್ತಿರುವುದರಿಂದ ವಸ್ತುಗಳು ನ್ಯಾಯ ಯುತ ಬೆಲೆಯಲ್ಲಿ ದೊರೆಯಲಿದೆ.