ಮೈಸೂರು ಮಾ,೨೭-ಮಲ್ಪೆಯಲ್ಲಿ ಕಳೆದ ಶನಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಶ್ರೀ ಪ್ರಮೋದ್ ಮಧ್ವರಾಜರವರು ಪ್ರಚೋದನಕಾರಿ ಭಾಷಣ ಮಾಡಿದ್ದರೆಂದು ಆರೋಪಿಸಿ ಉಡುಪಿ ಜಿಲ್ಲಾ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ. ಮೀನುಗಾರರ ಅನ್ನಕ್ಕೆ ಕೈ ಹಾಕಿದ ಕಳ್ಳರನ್ನು ಹಿಡಿದು ಕೊಟ್ಟಂತಹ ಮೀನುಗಾರ ಮಹಿಳೆಯರ ಮೇಲೆ ಕೇಸು ಹಾಕಿ ಬಂಧಿಸಿರುವ ಮೀನುಗಾರ ಮಹಿಳೆಯರ ಪರ ನಡೆದ ಸಮಾಲೋಚನಾ ಸಭೆಯಲ್ಲಿ ನ್ಯಾಯಸಮ್ಮತ ತೀರ್ಮಾನಕ್ಕೆ ಆಗ್ರಹಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಫ್‌ಐಆರ್ ದಾಖಲಿಸಿರುವ ಕ್ರಮವನ್ನು ಹಾಗೂ ಈ ರೀತಿಯ ಸಂವಿಧಾನ ವಿರೋಧಿ ನಡೆಯನ್ನು ಮೈಸೂರು ಜಿಲ್ಲಾ ಗಂಗಾಮತಸ್ಥರ ತೀವ್ರವಾಗಿ ಖಂಡಿಸುತ್ತದೆ.
ಮೀನುಗಾರರ ಅನ್ನಕ್ಕೆ ಕೈ ಹಾಕಿದ ಕಳ್ಳರ ಮೇಲೆ ಕೇಸು ದಾಖಲೆ ಮಾಡದೇ ಕಳ್ಳರನ್ನು ಹಿಡಿದು ಕೊಟ್ಟಂತಹ ಮೀನುಗಾರ ಮಹಿಳೆಯರ ಮೇಲೆ ಕೇಸು ದಾಖಲೆ ಮಾಡಿದ್ದೂ ಎಷ್ಟು ಸರಿ? ಎಂದು ಕೇಳಿದನ್ನು ಪ್ರಚೋದನೆ ಮಾಡಿದರು ಎಂಬ ಹಿನ್ನೆಲೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಿರುವುದು ತೀರಾ ಹಾಸ್ಯಾಸ್ಪದವೆನಿಸಿದೆ.ಈ ಪ್ರಕರಣ ಕೇವಲ ಸಾಮಾನ್ಯ ಮೀನುಗಾರ ಮಹಿಳೆಯರ ವಿರುದ್ಧ ಕೇಸು ಧಾಖಲಿಸಿದಲ್ಲದೆ ಅದನ್ನು ಪ್ರಶ್ನಿಸಿದ ಮೀನುಗಾರರ ರಾಜ್ಯ ಮಟ್ಟದ ನಾಯಕನ ಮೇಲೆ ಕೇಸು ಧಾಖಲಿಸಿದ್ದು ಸಮಸ್ತ ಸಮುದಾಯವನ್ನು ಹತ್ತಿಕ್ಕುವ ಕಾರ್ಯವಾದಂತಾಗಿದೆ.
ಹಾಗಾಗಿ ನಮ್ಮ ಹಕ್ಕುಗಳು ಮತ್ತು ನಮ್ಮ ನಾಯಕರ ಸಮಗ್ರತೆಯನ್ನು ರಕ್ಷಿಸಲು ನಾವು ಮುಂದಿನ ದಿನಗಳಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ಪ್ರಕರಣದಲ್ಲಿ ನಮ್ಮ ಸಮಾಜದ ಮೇರು ವ್ಯಕ್ತಿತ್ವ ಹೊಂದಿರುವ ಶ್ರೀ ಪ್ರಮೋದ್ ಮಧ್ವರಾಜ ರವರ ಮೇಲೆ ಹಾಕಿರುವ ಕೇಸನ್ನು ವಾಪಸ್ಸು ತೆಗೆದು ಕೊಳ್ಳುವಂತೆ ಉಡುಪಿ ಜಿಲ್ಲಾ ಪೊಲೀಸರಿಗೆ ನಿಮ್ಮ ಮುಖಾಂತರ ನಮ್ಮ ಜಿಲ್ಲೆಯ ಸಮಸ್ತ ಮೀನುಗಾರ ಸಮಾಜವು ಅಗ್ರಹಿಸುತ್ತದೆ.ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕರ್ನಾಟಕ ರಾಜ್ಯದಂತ ಸಮಸ್ತ ರಾಜ್ಯದ ಎಲ್ಲ ಮೀನುಗರಾರು ಸೇರಿ ಮಾಡಬೇಕಾಡದೀತು ಎಂದು ತಿಳಿಸಿದರು ಚಿತ್ರದಲ್ಲಿ, ದಾಸಪ್ಪ, ಗೋಪಣ್ಣ,ದಾಸಪ್ಪ, ನಾಗೇಂದ್ರ, ಹಾಗೂ ಸುವರ್ಣ ಬೆಳಕು ಫೌಂಡೇಷನ್’ ಸಂಸ್ಥಾಪಕರು ಮಹೇಶ್ ಡಿ.ಸಿ ಮನವಿ ಪತ್ರ ನೀಡಿದರು.